Moreವಿಂಗಡಿಸದ

ಏರ್ ಇಂಡಿಯಾ ಎಕ್ಸ್‌ಪ್ರೆಸ್ ಅಗ್ಗದ ದರದಲ್ಲಿ ಟಿಕೆಟ್ ನೀಡಲಿದೆ; ಆದರೆ ಷರತ್ತುಗಳು ಅನ್ವಯ

ಏರ್ ಇಂಡಿಯಾ ಎಕ್ಸ್‌ಪ್ರೆಸ್ (Air India Express) ‘ಎಕ್ಸ್‌ಪ್ರೆಸ್ ಲೈಟ್’ (Xpress Lite) ದರಗಳನ್ನು ಪ್ರಯಾಣಿಕರಿಗಾಗಿ ಪರಿಚಯಿಸುತ್ತಿದೆ. ಈ ದರಗಳನ್ನು ಚೆಕ್-ಇನ್ ಬ್ಯಾಗೇಜ್ (check-in baggage) ಇಲ್ಲದೆ ಪ್ರಯಾಣಿಸುವ ಪ್ರಯಾಣಿಕರಿಗಾಗಿ ಆರಂಭಿಸಲಾಗಿದೆ.

ಪ್ರಯಾಣಿಕರು ಈ ಹೊಸ ಸೇವೆಯ ಪ್ರಯೋಜನವನ್ನು ಏರ್‌ಲೈನ್‌ನ ಮೊಬೈಲ್ ಅಪ್ಲಿಕೇಶನ್ ಮತ್ತು ಅಧಿಕೃತ ವೆಬ್‌ಸೈಟ್ ಮೂಲಕ ಬಳಸಿಕೊಳ್ಳಬಹುದು.

ಪ್ರಯಾಣಿಕರು ಈಗ 3 ಕೆಜಿ ಲಗೇಜ್ ಗಳನ್ನು ಮುಂಚಿತವಾಗಿ ಕಾಯ್ದಿರಿಸಬಹುದಾಗಿದೆ. ಮತ್ತು ಪ್ರಯಾಣಿಕರು ಹೆಚ್ಚುವರಿ ಲಗೇಜನ್ನು ಕಾಯ್ದಿರಿಸಬೇಕಾದರೆ “ಚೆಕ್-ಇನ್ ಬ್ಯಾಗೇಜ್” ಮಿತಿಗಳನ್ನು ಸಹ ಪೂರ್ವ-ಬುಕಿಂಗ್ ಮಾಡಬಹುದು.

ಎಕ್ಸ್‌ಪ್ರೆಸ್ ಚೆಕ್-ಇನ್ ಪ್ರಯಾಣಿಕರು ಕೌಂಟರ್‌ಗಳು ಮತ್ತು ಬ್ಯಾಗೇಜ್ ಬೆಲ್ಟ್‌ಗಳಲ್ಲಿ ಸರತಿಯಲ್ಲಿ ನಿಲ್ಲುವುದನ್ನು ತಪ್ಪಿಸಲು ಅನುವು ಮಾಡಿಕೊಡಲಾಗಿದೆ.

+15 ಕೆಜಿ ಮತ್ತು +20 ಕೆಜಿ ಚೆಕ್-ಇನ್ ಬ್ಯಾಗೇಜ್ ಭತ್ಯೆಗಳಿಗೆ ರಿಯಾಯಿತಿಯ ದರದಲ್ಲಿ ಪೂರ್ವ-ಬುಕಿಂಗ್ (pre-booking) ಮಾಡಿದ ಬೆಲೆಗಳ ಜೊತೆಗೆ ಪೂರಕ +3 ಕೆಜಿ ಕ್ಯಾಬಿನ್ ಬ್ಯಾಗೇಜ್ ಭತ್ಯೆಯೂ (cabin baggage allowance) ಸಹ ಸಿಗಲಿದೆ.

Xpress Lite ದರಗಳಲ್ಲಿ ಬುಕಿಂಗ್ ಮಾಡುವ ಪ್ರಯಾಣಿಕರಿಗೆ ಹೆಚ್ಚಿನ ನಮ್ಯತೆ ಮತ್ತು ಅನುಕೂಲತೆ ಸಿಗಲಿದೆ ಎಂದು ಕಂಪನಿ ಹೇಳಿದೆ.

Xpress Lite ದರಗಳ ಪ್ರಯೋಜನ ಏನು?

ಪ್ರಯಾಣಿಕರು ಹೆಚ್ಚುವರಿ 3 ಕೆಜಿ ಕ್ಯಾಬಿನ್ ಬ್ಯಾಗೇಜ್ ಅನ್ನು ಮುಂಗಡವಾಗಿ ಕಾಯ್ದಿರಿಸುವ ಆಯ್ಕೆಯನ್ನು ಹೊಂದಿರುತ್ತಾರೆ.

ನಂತರ ಚೆಕ್-ಇನ್ ಬ್ಯಾಗೇಜ್ ಅಗತ್ಯವಿದ್ದರೆ, ಅವರು ರಿಯಾಯಿತಿ ದರದಲ್ಲಿ ಹೆಚ್ಚುವರಿ ‘ಚೆಕ್-ಇನ್ ಬ್ಯಾಗೇಜ್’ ಭತ್ಯೆಗಳನ್ನು ಮುಂಚಿತವಾಗಿ ಬುಕ್ ಮಾಡಬಹುದು.

ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿರುವ ಏರ್‌ಲೈನ್‌ನ ಕೌಂಟರ್‌ಗಳಲ್ಲಿಯೂ ಸಹ ಚೆಕ್-ಇನ್ ಬ್ಯಾಗೇಜ್ ಸೇವೆಗಳನ್ನು ಖರೀದಿಸಬಹುದು.

ಎಕ್ಸ್‌ಪ್ರೆಸ್ ಲೈಟ್ ದರಗಳ ಕುರಿತು ಮಾತನಾಡಿದ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ಮುಖ್ಯ ವಾಣಿಜ್ಯ ಅಧಿಕಾರಿ ಅಂಕುರ್ ಗಾರ್ಗ್ (Ankur Garg) ಅವರು “ ಎಕ್ಸ್‌ಪ್ರೆಸ್ ಲೈಟ್ ದರಗಳ ಬಿಡುಗಡೆಯು ಭಾರತದಲ್ಲಿ ಹಾರಲು ಹೊಸ ಮಾರ್ಗವಾಗಿದೆ ಎಂದು ಭಾವಿಸುತ್ತೇನೆ.

ಅಂತರರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳು ಸೇರಿದಂತೆ ಪ್ರಪಂಚದಾದ್ಯಂತದ ಪ್ರಯಾಣಿಕರಲ್ಲಿ ಈಗಾಗಲೇ ಜನಪ್ರಿಯವಾಗಿರುವ ಈ ಪ್ರಸ್ತಾಪವನ್ನು ಭಾರತದಲ್ಲಿಯೂ ವಿಸ್ತರಿಸಲಾಗುತ್ತಿದೆ” ಎಂದರು.

“ಈ ಉಪಕ್ರಮವು ಭಾರತೀಯ ಪ್ರಯಾಣಿಕರಿಗೆ ಉತ್ತಮ ದರ್ಜೆಯ ಕೊಡುಗೆಯಾಗಲಿದೆ. ಹಾಗೂ ಯಾವುದೇ ತೊಂದರೆಗಳಿಲ್ಲದೇ ಪ್ರಯಾಣಿಸಲು ಅನುವು ಮಾಡಿಕೊಡುತ್ತದೆ.

‘ಫ್ಲೈ ಆಸ್ ಯು ಆರ್’ (Fly As You Are) ಎಂಬ ನಮ್ಮ ಬ್ರ್ಯಾಂಡ್ ನೀತಿಯನ್ನು ಇದು ಪುನರುಚ್ಚರಿಸಲಿದೆ.” ಎಂದು ಅಂಕುರ್ ಗಾರ್ಗ್ ಅವರು ಮುಂದುವರೆಸಿದರು.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button