Moreಇವರ ದಾರಿಯೇ ಡಿಫರೆಂಟುನಡಿಗೆ ನಮ್ಮ ಖುಷಿಗೆವಿಂಗಡಿಸದ

ಏಳು ದಿನಗಳಲ್ಲಿ ಆಫ್ರಿಕಾದ ಅತಿ ಎತ್ತರದ ಶಿಖರ ಏರಿದ ದಿಟ್ಟ ಕನ್ನಡಿಗ;

ಅಕೌಂಟೆಂಟ್ ಜನರಲ್ ಕಚೇರಿಯ ಅಕೌಂಟ್ಸ್ ಅಧಿಕಾರಿಯಾಗಿರುವ 39 ವರ್ಷದ ಗೌತಮ್ ಪುಟ್ಟಮಾದಯ್ಯ (Gautam Puttamadaiah) ಅವರು ಇತ್ತೀಚಿಗೆ ಏಳು ದಿನಗಳಲ್ಲಿ ಆಫ್ರಿಕಾದ ಅತಿ ಎತ್ತರದ ಶಿಖರ ಕಿಲಿಮಂಜಾರೋ ಪರ್ವತ (Mount Kilimanjaro) ಏರಿ ಸಾಧನೆಗೈದಿದ್ದಾರೆ.

ಕಿಲಿಮಂಜಾರೋ ಪರ್ವತವು ಆಫ್ರಿಕಾದ ಅತಿ ಎತ್ತರದ ಶಿಖರವಾಗಿದ್ದು, ಇದು ಸಮುದ್ರ ಮಟ್ಟದಿಂದ 5,895 ಮೀ (19,341 ಅಡಿ) ಎತ್ತರದಲ್ಲಿದೆ. ಇದು ಒಟ್ಟು 8 ಸವಾಲಿನ ಚಾರಣ ಮಾರ್ಗಗಳನ್ನು ಹೊಂದಿರುವ ಏಕೈಕ ಶಿಖರವಾಗಿದೆ.

ಇದು ಚಾರಣದ ಉದ್ದಕ್ಕೂ 55 ಡಿಗ್ರಿ ಫ್ಯಾರನ್‌ಹೀಟ್ ತಾಪಮಾನದ ಏರಿಳಿತಗಳು ಮತ್ತು ವಿಭಿನ್ನ ಸಸ್ಯ ವಲಯಗಳು ಪರ್ವತಾರೋಹಿಗಳಿಗೆ ಅತ್ಯಂತ ಕಷ್ಟದ ಸವಾಲುಗಳನ್ನು ನೀಡುತ್ತದೆ.

ನಮ್ಮ ಕನ್ನಡದ ಯುವಕ ಗೌತಮ್ ಪುಟ್ಟಮಾದಯ್ಯ ಅವರು ಈ ಎಲ್ಲಾ ಸವಾಲುಗಳನ್ನು ಎದುರಿಸಿ ಕೇವಲ ಏಳು ದಿನಗಳಲ್ಲಿ ಶಿಖರವನ್ನು ಏರಿವಲ್ಲಿ ಯಶಸ್ವಿಯಾಗಿದ್ದಾರೆ.

ಈ ಯೋಜನೆಯನ್ನು ಅವರ ಕಿರಿಯ ಸಹೋದರ ಮಿಥುನ್ ಪುಟ್ಟಮಾದಯ್ಯ (Mithun Puttamadaiah) ಅವರು ರೂಪಿಸಿದರು. ಆರಂಭದಲ್ಲಿ ಗೌತಮ್ ಅವರು ನಿರಾಕರಿಸಿದ್ದರೂ ಸಹ ನಂತರ ಒಪ್ಪಿಗೆ ನೀಡಿದ್ದರು.

ಪರ್ವತಾರೋಹಣದ ಕುರಿತು ಯಾವುದೇ ಅರಿವು ಇಲ್ಲದಿದ್ದರೂ, ಚಾರಣದ (Trekking) ಸಂದರ್ಭದಲ್ಲಿ ಎದುರಾಗುವ ಸವಾಲುಗಳ ಕುರಿತು ಸಂಶೋಧನೆಯ ಮೂಲಕ ಶೇ 20 ರಷ್ಟು ಜ್ಞಾನವನ್ನು ಪಡೆದುಕೊಂಡರು.

ಪರ್ವತಾರೋಹಣದ ಸಂದರ್ಭದಲ್ಲಿ ಆಕಸ್ಮಿಕವಾಗಿ ಅರಿಯದೇ ಎದುರಾದ ಸವಾಲುಗಳೂ ಸಹ ಆನಂದ ಉಂಟು ಮಾಡಿದವು ಎಂದು ಗೌತಮ್ ಅವರು ಅವರ ಅನುಭವವನ್ನು ವ್ಯಕ್ತ ಪಡಿಸುತ್ತಾರೆ.

ಜನವರಿ 19 ರಿಂದ ಜನವರಿ 27 ರವರೆಗೆ ಅವರ ಪರ್ವತಾರೋಹಣ ಕಾರ್ಯವು ನಡೆಯಿತು. ಈ ಏಳು ದಿನಗಳೂ ದಿನಕ್ಕೆ 600-900 ಮೀಟರ್ ಗಳಂತೆ ಲೆಮೊಶೋ ಮಾರ್ಗದ ಮೂಲಕ ನಡೆದರು.

ಕಿಲಿಮಂಜಾರೋ ಪರ್ವತದ ಶಿಖರವನ್ನು ಏರುವವರಿಗೆ ಕಾಲಮಿತಿಯನ್ನು ನೀಡಲಾಗುತ್ತದೆ. ಪರ್ವತಾರೋಹಿಗಳಿಗೆ ಸಾಮಾನ್ಯವಾಗಿ ಕನಿಷ್ಠ 5 ದಿನಗಳಿಂದ ಗರಿಷ್ಠ 11 ದಿನಗಳವರೆಗೆ ಸಮಯ ನಿಗದಿ ಮಾಡಲಾಗುತ್ತದೆ.

ಶಿಖರದ ಹತ್ತಿರಕ್ಕೆ ಸಮೀಪವಾಗುತ್ತಿರುವಂತೆ, ಪರ್ವತಾರೋಹಿಗಳಿಗೆ ಆಗಾಗ್ಗೆ ಹೈ ಆಲ್ಟಿಟ್ಯೂಡ್ ಪಲ್ಮನರಿ ಎಡಿಮಾ (HAPE) ಮತ್ತು ಹೈ ಆಲ್ಟಿಟ್ಯೂಡ್ ಸೆರೆಬ್ರಲ್ ಎಡಿಮಾ (HACE) ಎದುರಾಗುತ್ತದೆ.

ತಲೆತಿರುಗುವಿಕೆ ಮತ್ತು ವಾಕರಿಕೆ ಮುಂತಾದ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತಾ ಹೋಗುತ್ತದೆ. ಪರ್ವತಾರೋಹಣದ ಕುರಿತಾದ ಅರಿವಿನ ಅಜ್ಞಾನವೂ ಸಹ ಗುರಿಯನ್ನು ತಲುಪಲು ಕಷ್ಟವಾಗುತ್ತದೆ. ಎಂದು ಗೌತಮ್ ಅವರು ತಿಳಿಸಿದ್ದಾರೆ.

2023ರ ಜುಲೈನಲ್ಲಿ ತನ್ನ ಸಹೋದರ ಪರ್ವತಾರೋಹಣ ಮಾಡುವ ಯೋಜನೆ ರೂಪಿಸಿದನು. ಮೊದಲ ನೋಟಕ್ಕೆ ಕಿಲಿಮಂಜಾರೋ ಪರ್ವತ ನನ್ನಲ್ಲಿ ಪುಳಕವನ್ನು ಉಂಟು ಮಾಡಿತ್ತು.

ಪರ್ವತ ಏರುತ್ತಾ ಹೋದಂತೆ ಬಂದ ಸವಾಲುಗಳು ನಿಜಕ್ಕೂ ಪರ್ವತ ಏರುತ್ತೇವೆಯೇ ಎಂಬ ಅನುಮಾನ ಉಂಟಾಗುತ್ತಿತ್ತು. ಈ ಸಮಯದಲ್ಲಿ ಸಹೋದರನಿಗೆ HACE ಮತ್ತು HAPE ಕಾಣಿಸಿಕೊಳ್ಳಲಾರಂಭಿತು.

ನಾನು ಯಾವ ಸಮಯದಲ್ಲಿಯೂ ಉತ್ಸಾಹ ಕಳೆದುಕೊಳ್ಳದೇ, ಎದೆಗುಂದದೇ ಪರ್ವತವನ್ನು ಏರಿದ್ದೇನೆ. ಈ ಪರ್ವತಾರೋಹಣ ನನಗೆ ಸಾಕಷ್ಟು ಅರಿವು ಹಾಗೂ ಜ್ಞಾನವನ್ನು ನೀಡಿತು ಎಂದು ಗೌತಮ್ ಹೇಳಿದ್ದಾರೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button