ದೂರ ತೀರ ಯಾನವಿಂಗಡಿಸದ

ಮಹಿಳೆಯರಿಂದ ಮಹಿಳೆಯರಿಗಾಗಿಯೇ ಇರುವ ಪ್ರವಾಸಿ ಗುಂಪುಗಳಿವು

ಸೋಲೋ ಪ್ರವಾಸ ಕೆಲವರಿಗೆ ಇಷ್ಟ. ಇನ್ನು ಕೆಲವರಿಗೆ ಕಷ್ಟ ಕಷ್ಟ. ಅದರಲ್ಲೂ ಮಹಿಳೆಯರಿಗೆ ಸೋಲೋ ಪ್ರವಾಸ ಎಂದರೆ ಅದು ಕೊಂಚ ಯೋಚನೆ ಮಾಡಬೇಕಾದ ವಿಚಾರ.

ಎಲ್ಲ ಮಹಿಳೆಯರು ಸೋಲೋ ಪ್ರವಾಸ (Women solo travel) ಮಾಡುವ ಧೈರ್ಯ ಮಾಡುವುದಿಲ್ಲ. ಜೊತೆ ಯಾರೂ ಇಲ್ಲ ಎಂಬ ಭಯ ಕಾಡುತ್ತದೆ, ಸೋಲೋ ಪ್ರವಾಸ ರಿಸ್ಕ್‌ ಇತ್ಯಾದಿ ಸಮಸ್ಯೆಗಳು. ಇದೆ.ಅದಕ್ಕಾಗಿಯೇ ಇಂಥ ಮಹಿಳೆಯರಿಗೆಂದೇ ಭಾರತದಲ್ಲಿ ಹಲವಾರು ಪ್ರವಾಸ ಸಂಸ್ಥೆಗಳಿವೆ. . ಮಹಿಳೆಯರಿಂದ, ಮಹಿಳೆಯರಿಗಾಗಿಯೇ, ಮಹಿಳೆಯರಿಗೋಸ್ಕರ ಇರುವ ಪ್ರವಾಸದ ಗುಂಪುಗಳಿವು.

ಇಂತಹ ಗುಂಪುಗಳು ಆಗಾಗ, ಮಹಿಳೆಯರಿಗಾಗಿ ಬಗೆಬಗೆಯ ಗುಂಪು ಪ್ರವಾಸ ಆಯೋಜಿಸುತ್ತವೆ. ಕೇವಲ ಮಹಿಳೆಯರು ಮಾತ್ರ ಈ ಪ್ರವಾಸದಲ್ಲಿ ಭಾಗವಹಿಸಬಹುದು. ತನಗೆ ಇಷ್ಟವಿರುವ ಪ್ಯಾಕೇಜನ್ನು ಆಯ್ದುಕೊಂಡು ಮಹಿಳೆಯರ ಗುಂಪಿನಲ್ಲಿ ಪ್ರವಾಸ ಮಾಡಿ ಬರಬಹುದು.

1. ವಾವ್‌ ಕ್ಲಬ್‌ (Wow Club): ವಿಮೆನ್‌ ಆನ್‌ ವಾಂಡರ್‌ಲಸ್ಟ್‌ (Women on Wanderlust) ಎಂಬ ಪ್ರವಾಸಿ ಸಂಸ್ಥೆಯನ್ನು ಆರಂಭಿಸಿದ್ದು ಸ್ವತಃ ಸಾಕಷ್ಟು ಪ್ರವಾಸಗಳನ್ನು ಮಾಡಿ ಅನುಭವವಿರುವ ಹಾಗೂ ಬರಹಗಾರ್ತಿ ಸುಮಿತ್ರಾ ಎಂಬವರು. ಬಹಳಷ್ಟು ಸೋಲೋ ಪ್ರವಾಸಗಳನ್ನು ಮಾಡಿರುವ ಇವರಿಗೆ, ಭಾರತದಲ್ಲಿ ಮಹಿಳೆಯರಿಗಾಗಿಯೇ ಮೀಸಲಿರುವ ಪ್ರವಾಸಿ ಸಂಸ್ಥೆಗಳಿಲ್ಲ, ಹಾಗೂ ಮಹಿಳಾ ಪ್ರವಾಸಿ ಸಹವರ್ತಿ ಹುಡುಕುವುದು ಬಹಳ ಕಷ್ಟ ಎಂಬುದನ್ನು ಅರಿತುಕೊಂಡು ತನ್ನದೇ ಒಂದು ಸಂಸ್ಥೆ ಕಟ್ಟುವ ಕನಸು ಕಂಡು ಅದರಂತೆ ನನಸೂ ಮಾಡಿಕೊಂಡರು. 2005ರಲ್ಲಿ ಹುಟ್ಟಿಕೊಂಡ ಈ ಸಂಸ್ಥೆ, ಈವರೆಗೆ 100ಕ್ಕೂ ಹೆಚ್ಚು ಪ್ರವಾಸಗಳನ್ನು ಆಯೋಜಿಸಿದ್ದು, 50ಕ್ಕೂ ಹೆಚ್ಚು ಬಗೆಯ ಪ್ಯಾಕೇಜುಗಳು ಇವರ ಬಳಿ ಇವೆ.

2. ಎಫ್‌5 ಎಸ್ಕೇಪ್ಸ್‌ (F5 Escapes):

ಮಾಲಿನಿ ಗೌರಿಶಂಕರ್‌ ಎಂಬವರಿಂದ ಆರಂಭವಾದ ಈ ಸಂಸ್ಥೆ ಮಹಿಳೆಯರಿಗಾಗಿಯೇ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ ಹಲವಾರು ಪ್ರವಾಸಗಳನ್ನು ಹಮ್ಮಿಕೊಳ್ಳುತ್ತದೆ. ನಾನು ದೇಶದ ಉದ್ದಗಲಕ್ಕೂ ಒಂಟಿಯಾಗಿ ಸುತ್ತಾಡಿದ್ದೇನೆ, ಆದರೆ, ಎಲ್ಲರಿಗೂ ಈ ಭಾಗ್ಯ ಸಿಗುವುದಿಲ್ಲ. ಕೆಲವರಿಗೆ ಜೊತೆಗಾರ್ತಿಯರು ಬೇಕಾಗುತ್ತದೆ ಎಂದು ಅರಿತುಕೊಂಡ ನಾನು ಇಂತಹ ಸಂಸ್ಥೆಯೊಂದನ್ನು ಆರಂಭಿಸಿದೆ ಎಂದು ಅವರು ಹೇಳುತ್ತಾರೆ.

3. ಗರ್ಲ್ಸ್‌ ಆನ್‌ ದಿ ಗೋ (Girls on The Go): ಜೆಮ್‌ಶೆಡ್‌ಪುರದ ಪ್ರಿಯಾ ಬೋಸ್‌ ಎಂಬವರು ಆರಂಭಿಸಿದ ಈ ಸಂಸ್ಥೆ, ಭಾರತದೊಳಗೂ ಹೊರಗೂ, ಪ್ರಪಂಚದಾದ್ಯಂತ ಹಲವು ಪ್ರವಾಸಗಳನ್ನು ಯೋಜಿಸುತ್ತದೆ. ಮಹಿಳೆಯರಿಂದ ಮಹಿಳೆಯರಿಗಾಗಿ ಇರುವ ಈ ಸಂಸ್ಥೆ, ನಾರ್ವೆ, ಮಂಗೋಲಿಯಾ, ಭೂತಾನ್‌, ಸ್ಪೈನ್‌, ನ್ಯೂಜಿಲ್ಯಾಂಡ್‌, ಅಂಟಾರ್ಟಿಕಾ ಹೀಗೆ ಪ್ರಪಂಚದ ಮೂಲೆ ಮೂಲೆಗಳಿಗೂ ಪ್ರವಾಸಗಳನ್ನು ಯಶಸ್ವಿಯಾಗಿ ಆಯೋಜಿಸಿದ ಹೆಗ್ಗಳಿಗೆಯಿದೆ.

4. ವಾಂಡರಿಂಗ್‌ ಜೇನ್ (Wandering Jane):‌ ಕಾರ್ಪೋರೇಟ್‌ ಜಗತ್ತಿನಲ್ಲಿ ವರ್ಷಾನುಗಟ್ಟಲೆ ಕೆಲಸ ಮಾಡಿ, ಪ್ರವಾಸಕ್ಕಾಗಿ ತುಡಿದ ಮನಸ್ಸಿನ ಅಕ್ಷತ್‌ ಹಾಗೂ ಗರಿಮಾ ಜೇನ್‌ ಎಂಬ ಇಬ್ಬರು ಆರಂಭಿಸಿದ ಮಹಿಳೆಯರಿಗಾಗಿ ಇರುವ ಟ್ರಾವೆಲ್‌ ಸಂಸ್ಥೆಯಿದು.

5. ಚಿಂದಿ ಸಫರ್ (Chindi Safar):‌

ಕಡಿಮೆ ವೆಚ್ಚದಲ್ಲಿ ಬಜೆಟ್‌ ಪ್ರವಾಸವನ್ನು ಇಷ್ಟಪಡುವ ಮಹಿಳೆಯರಿಗಾಗಿ ಇರುವ ಸಂಸ್ಥೆಯಿದು. ಇಲ್ಲಿ ಸುಮಾರು ಹೆಚ್ಚೆಂದರೆ 10 ಮಂದಿ ಮಹಿಳೆಯರು ಒಟ್ಟಾಗಿ ಮಾಡಬಹುದಾದ ಪ್ರವಾಸಗಳು, ಪ್ಯಾಕೇಜುಗಳು ಲಭ್ಯವಿರುತ್ತವೆ. ಭಾರತದಲ್ಲೇ, ಉತ್ತರ ಭಾರತ, ದಕ್ಷಿಣ ಭಾರತದೆಲ್ಲೆಡೆ ಹಲವು ಪ್ರವಾಸಗಳನ್ನು ಈ ಗುಂಪು ಕಡಿಮೆ ಬಜೆಟ್‌ನಲ್ಲಿ ಹಮ್ಮಿಕೊಂಡಿದೆ.

ಇವಿಷ್ಟೇ ಅಲ್ಲ, ಭಾರತದಲ್ಲಿ ಈಗ ಮಹಿಳೆಯರಿಗಾಗಿಯೇ ಇರುವ ಪ್ರವಾಸಿ ಗುಂಪುಗಳು ದಿನೇ ದಿನೇ ಹೆಚ್ಚುತ್ತಿದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button