ದೂರ ತೀರ ಯಾನವಿಂಗಡಿಸದ

ವಿಶ್ವದ ಅತ್ಯಂತ ಪುರಾತನ ದೇಶಗಳಿವು

ವಿಶ್ವದಲ್ಲಿರುವ ಅತ್ಯಂತ ಪುರಾತನವಾದ ದೇಶಗಳ ಪಟ್ಟಿಯಲ್ಲಿ ಯಾವೆಲ್ಲಾ ದೇಶಗಳಿವೆ ಎಂಬುದರ  ಕುರಿತಾದ ಲೇಖನ ಇಲ್ಲಿದೆ.

 ನಮ್ಮ ವಿಶ್ವಕ್ಕೂ ಶತಕೋಟಿ ವರ್ಷಗಳಷ್ಟು ಆಯಸ್ಸು ಭರ್ತಿಯಾಗಿದ್ದು, ತನ್ನ ಅಸ್ತಿತ್ವವನ್ನು ಇಂದಿಗೂ ಉಳಿಸಿಕೊಂಡು ಬಂದಿದೆ. ಅಂದರೆ ವಿಶ್ವದ ಅತ್ಯಂತ ಪುರಾತನವಾದ ದೇಶಗಳು ಇಂದು ಅತ್ಯಂತ ಶ್ರೀಮಂತವಾದ ದೇಶಗಳ ಪಟ್ಟಿಯಲ್ಲಿ ಸ್ಥಾನ ಅಲಂಕರಿಸಿವೆ.

ಸ್ಯಾನ್‌ ಮರಿನೋ (San Marino)

 ಇದು  ವಿಶ್ವದ ಅತ್ಯಂತ ಚಿಕ್ಕ ಮತ್ತು ಪುರಾತನವಾದ ದೇಶ ಎಂದು ಜನಪ್ರಿಯವಾಗಿದೆ.  ಇದು ಸುಂದರವಾದ ಇಟಲಿ(ಇಟಲಿ) ಹುದುಗಿಸಿಕೊಂಡಿದೆ. ಸುಮಾರು 41 ಚ ಕಿ.ಮೀ ವ್ಯಾಪ್ತಿಯನ್ನು ಹೊಂದಿರುವ ಈ ದೇಶವು ವಿಶ್ವದ ಪುರಾತನ ಗಣರಾಜ್ಯವಾಗಿದ್ದು, ವರ್ಷವಿಡೀ ಆಹ್ಲಾದಕರವಾದ ವಾತಾವರಣವನ್ನು ಹೊಂದಿರುತ್ತದೆ. ಈ ಪುಟ್ಟ ದೇಶವು ಪ್ರವಾಸೋದ್ಯಮವನ್ನು ಪ್ರಮುಖ ಆರ್ಥಿಕ ಚಟುವಟಿಕೆಯನ್ನಾಗಿಸಿಕೊಂಡಿದೆ.

San Marino

ಫ್ರಾನ್ಸ್‌(France)

ಫ್ರಾನ್ಸ್‌ ವಿಶ್ವದ ಅತ್ಯಂತ ಹಳೆಯ ದೇಶ ಮಾತ್ರವಲ್ಲ, ಪ್ರವಾಸಿಗರ ಫೇವರೆಟ್‌ ಪ್ರವಾಸಿ ದೇಶವು ಹೌದು. ಫ್ರಾನ್ಸ್‌ನ ರಾಜಧಾನಿ ಪ್ಯಾರಿಸ್ಗೆ ಪ್ರಯಾಣ ಬೆಳೆಸುವುದು  ಹಲವರ ಕನಸು . ಫ್ರಾನ್ಸ್‌ ದೇಶವನ್ನು 5 ನೇ ಶತಮಾನದಲ್ಲಿ ಕಿಂಗ್‌ ಕ್ಲೋವಿಸ್‌ ಸಿಂಹಾಸನಕ್ಕೆ ಏರಿದಾಗ ಸ್ಥಾಪಿಸಲಾಯಿತು.

ಇರಾನ್‌(Iran)

ಇರಾನ್‌ ದೇಶ ಕೂಡ ವಿಶ್ವದ ಪ್ರಾಚೀನವಾದ ದೇಶಗಳ ಪಟ್ಟಿಯಲ್ಲಿ ಸೇರ್ಪಡೆಗೊಂಡಿದೆ. ಕ್ರಿಸ್ತಪೂರ್ವ 92೦ ರಲ್ಲಿ ಅಕೆಮೆನಿಡ್‌ ಸಾಮ್ರಾಜ್ಯದ ಅಡಿಯಲ್ಲಿ ಇರಾನ್‌ ಅನ್ನು ಸ್ಥಾಪಿಸಲಾಯಿತು. ವಿವಿಧ ರಾಜರು, ರಾಜವಂಶಗಳು ಹೆಚ್ಚು ಕಾಲ ಆಳ್ವಿಕೆ ನಡೆಸಿದ್ದ ಹಳೆಯ ದೇಶ ಇದಾಗಿದೆ. 193೦ ರ ದಶಕದಲ್ಲಿ ಇರಾನ್‌ ಎಂದು ಅಧಿಕೃತವಾಗಿ ಬದಲಾಯಿಸಲಾಯಿತು. ಇರಾನ್‌ ಕೂಡ ಹಲವಾರು ಭವ್ಯವಾದ ಮಸೀದಿಗಳಿಗೆ ನೆಲೆಯಾಗಿದೆ.

Iran

ಚೀನಾ(China)

ಚೀನಾ ಕೂಡ ಅತ್ಯಂತ ಪ್ರಾಚೀನವಾದ ದೇಶಗಳಲ್ಲಿ ಒಂದು.  ಚೀನಾವನ್ನು ಮೊಟ್ಟಮೊದಲು ಆಳ್ವಿಕೆ ನಡೆಸಿದ ರಾಜವಂಶವೆಂದರೆ ಅದು ಕ್ಸಿಯಾ . ಚೀನಾದ ಪ್ರಾಚೀನ ಪರಂಪರೆಯ ಹೊರತುಪಡಿಸಿ ಪ್ರಪಂಚದಾದ್ಯಂತ ಪ್ರವಾಸಿಗರು ಚೀನಾದ ಪ್ರವಾಸ ಮಾಡಲು ಉತ್ಸಾಹ ಹೊಂದಿದ್ದಾರೆ.

China

ಈಜಿಪ್ಟ್‌(Egypt)

ಈಜಿಪ್ಟ್‌  ದೇಶವನ್ನು ಕ್ರಿ. ಪೂ 31೦೦ ರಲ್ಲಿ ಸ್ಥಾಪಿಸಲಾಯಿತು. ಈಜಿಪ್ಟ್‌ ಆ ಕಾಲದಲ್ಲಿಯೇ ಅತ್ಯಂತ ಶಕ್ತಿಶಾಲಿ ಮತ್ತು ಪ್ರಭಾವಶಾಲಿ ನಾಗತಿಕತೆಗಳಲ್ಲಿ ಒಂದಾಗಿತ್ತು.

Egypt

ದೊಡ್ಡ ದೊಡ್ಡ ಪಿರಾಮಿಡ್‌ಗಳೇ ಈ ದೇಶದ ಹೆಗ್ಗುರುತು. ಈಜಿಪ್ಟ್‌ ಈಗ ಸಾಕಷ್ಟು ಬೆಳೆದು ನಿಂತಿದೆ. ಇಲ್ಲಿನ ಸೊಗಸಾದ ಮತ್ತು ಪ್ರಾಚೀನ ಆಕರ್ಷಣೆಗಳು ವಿಶ್ವದ ಜನರನ್ನು ತನ್ನತ್ತ ಆಕರ್ಷಿಸುತ್ತಿದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತ ಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button