ಕಾರು ಟೂರುದೂರ ತೀರ ಯಾನವಿಂಗಡಿಸದ

ರೇಷ್ಮೆ ನಾಡು ರಾಮನಗರ ಜಿಲ್ಲೆಯಲ್ಲಿ ನೋಡಬಹುದಾದ ತಾಣಗಳು

ರಾಮನಗರ(Ramanagar )ಇಲ್ಲಿ ಅತಿ ಹೆಚ್ಚು ರೇಷ್ಮೆ(Silk) ಉತ್ಪಾದನೆ ಆಗುವ ಕಾರಣಕ್ಕೆ ಈ ಜಿಲ್ಲೆಯನ್ನು ರೇಷ್ಮೆ ನಾಡು ಎಂದು ಕರೆಯುತ್ತಾರೆ.2007ರಲ್ಲಿ ಬೆಂಗಳೂರು ಗ್ರಾಮಾಂತರ(Bangalore Rural)ಜಿಲ್ಲೆಯ ಭಾಗವಾಗಿದ್ದ ರಾಮನಗರ ಪ್ರತ್ಯೇಕ ಜಿಲ್ಲೆಯಾಯಿತು.

ರಾಮನಗರವು ರೇಷ್ಮೆ ನಾಡು ಜೊತೆಗೆ ಕ್ಷೀರ ನಗರ, ಸಪ್ತಗಿರಿ ನಾಡು ಎಂದು ಖ್ಯಾತಿಗಳಿಸಿದೆ. ಈ ಜಿಲ್ಲೆಯಲ್ಲಿ ನೋಡಬಹುದಾದ ತಾಣಗಳ ಮಾಹಿತಿ ಇಲ್ಲಿದೆ.

ರಾಮದೇವರ ಬೆಟ್ಟ(Ramadevara Hills)

ರಾಮನಗರದ ಈ ರಾಮದೇವರ ಬೆಟ್ಟ ಶೋಲೆ ಬೆಟ್ಟ(Sholay Hills)ಎಂದೂ ಖ್ಯಾತಿ. ಅದಕ್ಕೆ ಕಾರಣ ಹಿಂದಿಯ ಸೂಪರ್ ಹಿಟ್ ಚಿತ್ರ ಶೋಲೆ(Sholay Film). 1975ರಲ್ಲಿ ರಾಮನಗರದ ಸುತ್ತಮುತ್ತಲಿನ ಬೆಟ್ಟಗಳಲ್ಲಿ ಶೋಲೆ ಚಿತ್ರದ ಶೂಟಿಂಗ್ ನಡೆದಿತ್ತು.

ಹೀಗಾಗಿ ಉತ್ತರ ಭಾರತದ(North India) ಮಂದಿ ಈ ಬೆಟ್ಟವನ್ನು ಶೋಲೆ ಬೆಟ್ಟ ಎಂದು ಕರೆಯುತ್ತಾರೆ.

ಬೆಂಗಳೂರಿನಿಂದ ಸುಮಾರು 55 ಕಿಲೋ ಮೀಟರ್ ಮತ್ತು ರಾಮನಗರ ಪಟ್ಟಣದಿಂದ ಸುಮಾರು 5 ಕಿಲೋ ಮೀಟರ್ ದೂರದಲ್ಲಿದೆ ರಾಮದೇವರ ಬೆಟ್ಟ. ರಾಮಗಿರಿ, (Ramagiri)ರಾಮದುರ್ಗ(Ramadurga) ಎಂಬ ಹೆಸರು ಕೂಡಾ ಈ ಬೆಟ್ಟಕ್ಕಿದೆ.

Best Places to visit in Ramanagara district

ಇಲ್ಲಿ ಪಟ್ಟಾಭಿರಾಮ (Pattabhi Rama)ದೇವರು ನೆಲೆಯಾಗಿರುವ ಸನ್ನಿಧಿ. ಸುಗ್ರೀವನಿಂದ (Sugreeva)ಪ್ರತಿಷ್ಠಾಪಿಸಲ್ಪಟ್ಟ ವಿಗ್ರಹವಿದು. ವನವಾಸದ ಸಂದರ್ಭದಲ್ಲಿ ಸೀತಾ(Sita) ಲಕ್ಷ್ಮಣ (Lakshmana)ಸಹಿತ ಶ್ರೀರಾಮ ಒಂದಷ್ಟು ಕಾಲ ಇಲ್ಲೇ ವಾಸವಿದ್ದ ನಂಬಿಕೆ ಕೂಡಾ ಇಲ್ಲಿದೆ.

ಶ್ರೀರಾಮ ಕುಳಿತಿರುವ ಭಂಗಿಯಲ್ಲಿದ್ದರೆ, ರಾಮದೇವರ ತೊಡೆಯ ಮೇಲೆ ಕುಳಿತ ಸೀತಾದೇವಿ, ಬಲಭಾಗದಲ್ಲಿ ನಿಂತ ಲಕ್ಷ್ಮಣ ಮತ್ತು ಶ್ರೀರಾಮನ ಪಾದದ ಬಳಿ ಆಂಜನೇಯ(Anjaneya) ಕುಳಿತಿರುವಂತೆ ಇರುವ ಅಪೂರ್ವ ವಿಗ್ರಹವಿದು.

ಇದೇ ದೇಗುಲದ ಸನಿಹದಲ್ಲಿ ಎಂದೂ ಬತ್ತದ ಒಂದು ಕೊಳವೂ ಇದೆ. ಸೀತೆಯ ಬಾಯಾರಿಕೆಯನ್ನು ತಣಿಸಲು ಶ್ರೀರಾಮದೇವರು ಬಾಣ ಪ್ರಯೋಗಿಸಿ ಪಾತಾಳಗಂಗೆಯನ್ನು ಹೊರ ತಂದಿದ್ದಾಗಿ ಈ ಕೊಳದ ಬಗೆಗಿನ ನಂಬಿಕೆ.

ಸಾವನದುರ್ಗ(Savandurga)

ಸಾವನದುರ್ಗವು ಕರ್ನಾಟಕ ರಾಜ್ಯದ ರಾಜಧಾನಿ ಬೆಂಗಳೂರಿನಿಂದ 55 ಕಿಮೀ ಪಶ್ಚಿಮದಲ್ಲಿರುವ ಮಾಗಡಿ (Magadi)ರಸ್ತೆಯ ಎದುರಿಗಿರುವ ಒಂದು ಬೆಟ್ಟವಾಗಿದೆ.

ಆ ಬೆಟ್ಟವು ಅದರ ಮೇಲಿರುವ ದೇವಸ್ಥಾನಕ್ಕೆ ಹೆಸರುವಾಸಿಯಾಗಿದೆ ಮತ್ತು ಏಷ್ಯಾದಲ್ಲೇ(Asia) ಅತ್ಯಂದ ದೊಡ್ಡ ಏಕಶಿಲಾ ಬೆಟ್ಟವಾಗಿದೆ. ಇದು ಸಮುದ್ರ ಮಟ್ಟಕ್ಕಿಂತ 1226 ಮೀಟರ್‌ಗಳಷ್ಟು ಎತ್ತರದಲ್ಲಿದೆ.

Best Places to visit in Ramanagara district

ಸಾವನದುರ್ಗದ ಇತಿಹಾಸವು 14 ನೇ ಶತಮಾನಕ್ಕೆ ಹಿಂದಿನದು, ಅಲ್ಲಿ 3 ನೇ ಹೊಯ್ಸಳ(Hoysala) ರಾಜ ಬಲ್ಲಾಳ ಬೆಟ್ಟಕ್ಕೆ ಸಾವಂತಿ ಎಂದು ಹೆಸರಿಡಲಾಗಿದೆ. ನಂತರ ಸಾವನದುರ್ಗ ಕೆಂಪೇಗೌಡ,(Kempegowda)ಟಿಪ್ಪು ಸುಲ್ತಾನ್(Tipu Sultan)ಮತ್ತು ಬ್ರಿಟಿಷರ (British) ಅಧೀನದಲ್ಲಿತ್ತು.

ಮಂಚನಬೆಲೆ ಜಲಾಶಯ(Manchanabele Dam)

ಮಂಚನ ಬೆಲೆ ಜಲಾಶಯ ರಾಮನಗರದಿಂದ 18 ಕಿ.ಮೀ. ದೂರದಲ್ಲಿರುವ ಮಂಚನಬೆಲೆ ಜಲಾಶಯಕ್ಕೆ ಮಾಗಡಿ ಕಡೆಯಿಂದಲೂ ಹೋಗಬಹುದು. ಅರ್ಕಾವತಿ ನದಿಗೆ (Arkavati River)ಅಡ್ಡವಾಗಿ ಈ ಜಲಾಶಯವನ್ನು ನಿರ್ಮಿಸಲಾಗಿದೆ.

ಅರ್ಕಾವತಿ ನದಿಯು ಇಲ್ಲಿಂದ ಮುಂದೆ ಹರಿದು ಸಂಗಮದ ಬಳಿ ಕಾವೇರಿ ನದಿಯನ್ನು(Kaveri River) ಸೇರುತ್ತದೆ.

Best Places to visit in Ramanagara district

ಚುಂಚಿ ಜಲಪಾತ (Chunchi Falls)

ಚುಂಚಿ ಜಲಪಾತ ಅರ್ಕಾವತಿ ನದಿಯು ಸೃಷ್ಟಿಸಿರುವ ಸ ಜಲಪಾತ. ಇದು ಸುಮಾರು 7೦ ಅಡಿಗಳಷ್ಟು ಎತ್ತರವಿದ್ದು ಕನಕಪುರದಿಂದ (Kanakapura)ಸಂಗಮಕ್ಕೆ ಹೋಗುವ ದಾರಿಯಲ್ಲಿ ಮುಖ್ಯ ರಸ್ತೆಯಿಂದ 5 ಕಿ.ಮೀ ದೂರದಲ್ಲಿದೆ.

Best Places to visit in Ramanagara district

ಕಬ್ಬಾಳಮ್ಮ ದೇವಾಲಯ(Kabbalamma Temple)

ರಾಮನಗರ ಜಿಲ್ಲೆಯ ಕನಕಪುರ(Kanakapura) ತಾಲ್ಲೂಕಿನಲ್ಲಿರುವ ಶ್ರೀ. ಕಬ್ಬಾಳಮ್ಮ ದೇವಾಲಯವು ಐತಿಹಾಸಿಕ ಮಹತ್ವವನ್ನು ಹೊಂದಿರುವ ಧಾರ್ಮಿಕ ಪ್ರವಾಸಿ ಕ್ಷೇತ್ರ.

ರಾಜ್ಯ ರಾಜ ಧಾನಿಯಿಂದ 80 ಕಿ.ಮೀದೂರದಲ್ಲಿರುವ ಈ ದೇವಾಲಯ ಬೆಂಗಳೂರು-ಮೈಸೂರು ರಸ್ತೆಯ ಚನ್ನಪಟ್ಟಣದಿಂದ 28 ಕಿ.ಮೀ ದೂರದಲ್ಲಿದೆ. ಶಕ್ತಿ ದೇವತೆಯ ತಾಣವಾದ ಈದೇವಾಲಯಕ್ಕೆ ಸುಮಾರು 200 ವರ್ಷಗಳ ಇತಿಹಾಸವಿದೆ.

ಈ ದೇವಿಯ ಮೂಲ ನೆಲೆ ತಮಿಳುನಾಡು ರಾಜ್ಯ(Tamilnadu) ದೇವಿಯು ಕಬ್ಬಾಳು ಎಂಬ ಗ್ರಾಮದಲ್ಲಿ ನೆಲೆ ನಿಂತಿರುವುದರಿಂದ ಇಂದಿಗೂ ಕಬ್ಬಾಳಮ್ಮಎಂದೇ ಪ್ರಸಿದ್ಧಿಯಾಗಿದ್ದಾಳೆ.

Best Places to visit in Ramanagara district

ವಿ.ಸೂ: ಒಂದು ಜಿಲ್ಲೆಯಲ್ಲಿ ನೂರಾರು ಪ್ರವಾಸಿ ತಾಣಗಳು ಇರುತ್ತವೆ. ಅದರಲ್ಲಿ ಕೆಲವು ತಾಣಗಳ ಬಗ್ಗೆ ನಿಮಗೆ ನೀಡಿದ್ದೇವೆ . ನಿಮ್ಮ ಜಿಲ್ಲೆಯಲ್ಲಿ ಅಂತಹ ಅಪರೂಪ ಜಾಗದ ಬಗ್ಗೆ ನಿಮಗೆ ಗೊತ್ತಿದ್ದಲ್ಲಿ ಬರೆದು ಕಳುಹಿಸಿ. ನಾವು ಅದನ್ನು ಪ್ರಕಟಿಸುತ್ತೇವೆ.)

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button