ಕೊಡಗಿನಲ್ಲಿರುವ ಚೆಂದದ ಅಬ್ಬಿ ಜಲಪಾತ
ಕೊಡಗು ಎಂದ ತಕ್ಷಣ ನೆನಪಿಗೆ ಬರುವುದು ಪ್ರಕೃತಿ ರಮಣೀಯತೆ. ಅದೆಷ್ಟೋ ಜಲಪಾತಗಳು ಕೊಡಗಿನ ಉದ್ದಕ್ಕೂ ಕಾಣಸಿಗುತ್ತದೆ. ಅಂತಹ ಜಲಪಾತಗಳಲ್ಲಿ ಅಬ್ಬಿ ಜಲಪಾತ ಕೂಡಾ ಒಂದು. ಜೋಡುಪಾಲ ಗ್ರಾಮದಲ್ಲಿ ಕಂಡುಬರುವ ಈ ಜಲಪಾತವು ಕೊಡಗಿನ ಇನ್ನಿತರ ಜಲಪಾತಗಳಿಗಿಂತ ವಿಭಿನ್ನ.
ರಿಯಾನ
ಕೊಡಗು ಕರುನಾಡಿನ ಕಾಶ್ಮೀರ. ಪ್ರವಾಸಿಗರ ಸ್ವರ್ಗ. ಈ ಜಿಲ್ಲೆಯಲ್ಲಿ ಹಲವು ಪ್ರವಾಸಿ ತಾಣಗಳಿವೆ. ಮಳೆಗಾಲದಲ್ಲಿ ಅತಿ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ಕರ್ನಾಟಕದ ಜಾಗಗಳಲ್ಲಿ ಕೊಡಗು(kodagu) ಕೂಡ ಒಂದು. ಈ ಜಿಲ್ಲೆಯ ಚೆಂದದ ತಾಣವೇ ಅಬ್ಬಿ ಜಲಪಾತ(abbi falls).
ಜೆಸ್ಸಿ ಜಲಪಾತ ಎನ್ನುವ ಹೆಸರಿದೆ.
ಇದು ಒಂದು ಅದ್ಭುತವಾದ ಜಲಪಾತ. ಕಾವೇರಿ ನದಿಯ 20 ಅಡಿ ಎತ್ತರದಿಂದ ಬಂಡೆಯ ಮೇಲೆ ಧುಮುಕುತ್ತದೆ. ಕೊಡಗು ಜಿಲ್ಲೆಯ ಜೋಡುಪಾಲ(jodupala) ಗ್ರಾಮದಲ್ಲಿದೆ. ಮಡಿಕೇರಿ(madikeri) ಪಟ್ಟಣದಿಂದ ಕೇವಲ ಏಳರಿಂದ ಎಂಟು ಕಿಲೋಮೀಟರ್ ದೂರದಲ್ಲಿದೆ. ಮಡಿಕೇರಿಯ ನಾಯಕನ ಮಗಳು ಜೆಸ್ಸಿಯಾ ನೆನಪಿಗಾಗಿ ಬ್ರಿಟಿಷರು ಇದಕ್ಕೆ ‘ಜೆಸ್ಸಿ ಜಲಪಾತ’ ಎಂದು ಹೆಸರಿಟ್ಟಿದ್ದರು. ಜಲಪಾತದ ಉತ್ತಮ ನೋಟಕ್ಕಾಗಿ ಈಗ ತೂಗು ಸೇತುವೆಯನ್ನು ನಿರ್ಮಿಸಲಾಗಿದೆ. ಮಡಿಕೇರಿಯಿಂದ ಕಿರಿದಾದ ರಸ್ತೆಯ ಮೂಲಕ ಜಲಪಾತವನ್ನು ತಲುಪಬಹುದು. ವಾಹನಗಳ ಮೂಲಕವೂ ಈ ಜಲಪಾತದ ಪ್ರವೇಶದ್ವಾರವನ್ನು ತಲುಪಬಹುದು. ಅಲ್ಲಿಂದ ಸ್ವಲ್ಪಮಟ್ಟಿಗೆ ಸುಸಜ್ಜಿತವಾದ ಮೆಟ್ಟಿಲುಗಳ ಮೇಲೆ 500 ಮೀಟರ್ ಗಳ ಇಳಿಯುವಿಕೆ ನಡೆಯುತ್ತದೆ.
ನೀವುಇದನ್ನುಇಷ್ಟಪಡಬಹುದು: ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಜೇನುಕಲ್ಲು ಗುಡ್ಡ
ಕಾಫಿ ತೋಟಗಳು ಮತ್ತು ಮೆಣಸು ಬಳ್ಳಿಗಳಿಂದ ಸುತ್ತುವರಿದ ಎತ್ತರದ ಮರಗಳನ್ನು ದಾಟಿದ ನಂತರ ಹನೀರು ಬಂಡೆಗಳ ಮೇಲೆ ಶಾಂತ ಕೊಳಗಳಲ್ಲಿ ಹರಿಯುತ್ತಿರುವ ಈ ಜಲಪಾತವು ಗೋಚರವಾಗುತ್ತದೆ. ಕಾವೇರಿ ನದಿಯನ್ನು ಸೇರಲು ಜಲಪಾತಗಳು ಸ್ಪಟಿಕ ದಂತಿರುವ ಕೊಳಗಳಲ್ಲಿ ಇಳಿಯುವ ಮೂಲಕ ಅದ್ಭುತವಾಗಿ ಕಾಣಿಸಿಕೊಳ್ಳುತ್ತದೆ
ಮಡಿಕೇರಿ – ಮಂಗಳೂರು ಮಾರ್ಗದಲ್ಲಿ ಕಂಡುಬರುವ ಜಲಪಾತ
ಮಡಿಕೇರಿ – ಮಂಗಳೂರು(mangalore) ಮಧ್ಯೆ ಸಂಚರಿಸುವ ಎಲ್ಲರಿಗೂ ಈ ಜಲಪಾತದ ದೃಶ್ಯ ವೈಭವಕಣ್ಣಿಗೆ ರಾಚುತ್ತದೆ. ಪ್ರಯಾಣಿಕರಿಗೆ ಈ ಜಲಪಾತ ಮನಕ್ಕೆ ಮುದ ನೀಡುತ್ತದೆ. ಮಳೆಗಾಲದಲ್ಲಿ ಈ ಜಲಪಾತಗಳು ಅತ್ಯಂತ ಆಕರ್ಷಕವಾಗಿದೆ. ಮುಖ್ಯರಸ್ತೆಯಿಂದ ಕಾಫಿ ಮತ್ತು ಏಲಕ್ಕಿ ತೋಟದ ಮೂಲಕ ಹೋಗುವ ಮಾರ್ಗ ಜಲಪಾತದ ಆಕರ್ಷಣೆಯನ್ನು ಹೆಚ್ಚಿಸುತ್ತದೆ.
ದಾರಿಯ ಪ್ರತೀ ತಿರುವಿನಲ್ಲಿ ಪ್ರಕೃತಿ ನಮ್ಮನ್ನು ಸ್ವಾಗತಿಸುತ್ತದೆ. ಮಳೆಗಾಲದಲ್ಲಿ ಪ್ರಕೃತಿಗೆ ಸಿಂಪಡಿಸಿ ದಂತಿರುವ ಮಂಜು ಅದ್ಭುತವಾದ ನೋಟವನ್ನು ನೀಡುತ್ತದೆ. ಮಳೆಗಾಲದಲ್ಲಿ ಕಾಣುವ ದೃಶ್ಯವಂತೂ ವರ್ಣಿಸಲು ಅಸಾಧ್ಯ. ಸುಮಾರು ಇನ್ನೂರು ಅಡಿ ಎತ್ತರದಿಂದ ನೀರು ಧುಮುಕುವ ದೃಶ್ಯ ಬಹಳ ನಯನಮನೋಹರ. ಜಿಟಿ ಜಿಟಿ ಮಳೆಯಲ್ಲಿ ಬಿಸಿ ಕಾಫಿ ಹೀರುತ್ತಾ, ಬಜ್ಜಿ ಬೋಂಡ ಬಜ್ಜಿ ಬೋಂಡ ತಿನ್ನುತ್ತಾ ಜಲಪಾತದ ಸೌಂದರ್ಯ ಸವಿಯುವುದು ಅದೃಷ್ಟವೇ ಸರಿ.
ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.