ಕಾಡಿನ ಕತೆಗಳುಮ್ಯಾಜಿಕ್ ತಾಣಗಳುವಿಂಗಡಿಸದ

ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಜೇನುಕಲ್ಲು ಗುಡ್ಡ

ಯಲ್ಲಾಪುರದ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ‘ಜೇನುಕಲ್ಲು ಗುಡ್ಡ’ವೂ ಪ್ರಮುಖವಾದದ್ದು. ಇದು ತನ್ನ ಹಸಿರ ರಾಶಿ, ದಟ್ಟ ಕಾಡಿಗೆ ಪ್ರಸಿದ್ಧಿ ಪಡೆದಿದೆ.

  • ಗುರುಪಾದ ಭಟ್ಟ

ಯಲ್ಲಾಪುರ ತಾಲೂಕಿನ  ಅತ್ಯಂತ  ಸುಂದರ ಪ್ರದೇಶಗಳಲ್ಲಿ  ಜೇನುಕಲ್ಲು ಗುಡ್ಡವು ಒಂದಾಗಿದ್ದು, ಮೂರು ಕಾಲಗಳಲ್ಲಿಯೂ ಪ್ರವಾಸಿಗರ ಕಣ್ಮನ ಸೆಳೆಯುತ್ತಿದೆ. ಪ್ರತಿ ವರ್ಷವೂ ಈ ಸುಂದರ ತಾಣವನ್ನು ವೀಕ್ಷಿಸಲು ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು  ನಮ್ಮ ಜಿಲ್ಲೆ ಅಷ್ಟೇ ಅಲ್ಲದೆ ಹೊರ ಜಿಲ್ಲೆ ಹಾಗೂ ರಾಜ್ಯಗಳಿಂದಲೂ  ಬರುತ್ತಿದ್ದಾರೆ.

Jenukallu Gudda Yallapura

ತಾಲೂಕು ಕೇಂದ್ರ ಯಲ್ಲಾಪುರ ದಿಂದ  17 ಕಿ.ಮೀ ದೂರದ  ದಟ್ಟ ಕಾನನದ ನಡುವೆ ಇರುವುದೇ ಜೇನುಕಲ್ಲು ಗುಡ್ಡ. ಪಶ್ಚಿಮ ಘಟ್ಟಗಳ ಮಡಿಲಿನಲ್ಲಿ  ಇರುವ ಸುಂದರ ತಾಣಗಳಲ್ಲಿ ಇದು ಒಂದಾಗಿದೆ. ಜೇನುಹುಳುಗಳಿಗೆ ಪೂರಕ ವಾತಾವರಣ ಇರುವುದರಿಂದ ಅಪಾರ ಪ್ರಮಾಣದ ಜೇನು ಗೂಡುಗಳು  ಕಾಣಸಿಗುತ್ತವೆ ಅದಕ್ಕೆ  ಜೇನುಕಲ್ಲು ಗುಡ್ಡ ಎಂದು ಕರೆಯುತ್ತಾರೆ ಎಂಬ ಪ್ರತೀತಿ ಇದೆ.

ಯಲ್ಲಾಪುರ ಪಟ್ಟಣದ ಮೂಲಕ ಮಾಗೋಡ ಕ್ರಾಸ್ ಗೆ ಬಂದು, ಮುಂದೆ  ಮಾಗೋಡ ಮಾರ್ಗವಾಗಿ  ದಟ್ಟ ಅರಣ್ಯಗಳ ಮಧ್ಯ ರಸ್ತೆಯಲ್ಲಿ  ಸಾಗಿದಾಗ ಸಿಗುವ ಸುಂದರ ತಾಣ ಇದಾಗಿದೆ.  ಅಲ್ಲಿ ತಲುಪಿದಾಗ  ಮನಸ್ಸಿನ  ಬೇಸರವೆಲ್ಲ  ಕಳೆದು ಹೋಗುವುದಂತು ನಿಜ.ಗುಡ್ಡದ ತುದಿಯಲ್ಲಿ ನಿಂತು ಸುತ್ತಲಿನ ಪ್ರದೇಶವನ್ನು ನೋಡಿದಾಗ  ಗುಡ್ಡಗಳು ಒಂದರ ಮೇಲೊಂದರಂತೆ ಹಾಸಿಕೊಂಡಂತೆ ಗೋಚರವಾಗುತ್ತದೆ. ಗುಡ್ಡಗಳನ್ನು ಆಗಾಗ ಮುತ್ತಿಕ್ಕುವ  ಮಂಜಿನ  ಹೊದಿಕೆಗಳು ಗುಡ್ಡವನ್ನು ಅದೃಶ್ಯ ಗೊಳಿಸುತ್ತದೆ  ಕೆಲವೂಮ್ಮೆ ಮಂಜಿನ ಹೊದಿಕೆ ಸರಿದು ಗುಡ್ಡ  ಗೋಚರಿಸುತ್ತದೆ.

ಮಲೆನಾಡಿನಲ್ಲಿ ನಿರಂತರ ಮಳೆಯಿಂದ ಪೃಕೃತಿ ಮಾತೆ ಹಚ್ಚ ಹಸಿರಿನಿಂದ ಕಂಗೊಳಿಸುವ ಜೊತೆಗೆ  ಹಸಿರು ಬಣ್ಣದ ಸೀರೆ ಉಟ್ಟಂತೆತೋರುತ್ತದೆ. ಉತ್ತಮ ವಾತಾವರಣ ಸೃಷ್ಟಿಯಾಗಿದೆ ಪ್ರವಾಸಿಗರು ನೈಸರ್ಗಿಕ ಸೌಂದರ್ಯ ಸವಿಯಲು ಎರಡು ಕಣ್ಣುಗಳು ಸಾಲದು. ತಂಪಾದ ಹವಾಮಾನ ಪ್ರವಾಸಿಗರ ಹೊರ ಜಗತ್ತಿನ ನೋವನ್ನು ಮರೆಸುವ ಜೊತೆಗೆ ಶುದ್ಧ ವಾತಾವರಣ ಒದಗಿಸುತ್ತದೆ.

ನೀವುಇದನ್ನುಇಷ್ಟಪಡಬಹುದು: ಇನ್‌ಕ್ರಿಡಿಬಲ್ ಯಲ್ಲಾಪುರದಲ್ಲೊಂದು ಇಂಪಾಸಿಬಲ್ ಜರ್ನಿ

Jenukallu Hills, Yallapura

ಗುಡ್ಡದ ಕೆಳ ಭಾಗದಲ್ಲಿ ಬೆಡ್ತಿ ನದಿ ಹರಿದು ಹೋಗಿದ್ದು,  ಕಾಡುಗಳ ನಡುವೆ ಅಕ್ಷಾಂಶ ರೇಖೆ ಹಾದುಹೊದಂತೆ ಭಾಸವಾಗುತ್ತದೆ. ಮರಗಳು ಒಂದಕ್ಕೊಂದು ಅಂಟಿಕೊಂಡು ಕೂತಂತೆ ಕಾಣುತ್ತದೆ.ಬೇಸಿಗೆಯಲ್ಲಿಯೂ ಸಹ ಇಲ್ಲಿನ ವಾತಾವರಣ ಸುಂದರವಾಗಿದ್ದು, ತಂಪಾದ ಪ್ರದೇಶವಾಗಿದೆ. ಬೇಸಿಗೆಯಲ್ಲಿ ಸೂರ್ಯಾಸ್ತ  ನೋಡುವುದೇ ಮನಮೋಹಕ. ಸೂರ್ಯನು ಅಸ್ತಂಗತನಾಗುವಾಗ  ಗುಡ್ಡಗಳ ಸಾಲಿನಲ್ಲಿ ಅಡಗಿ ಮರೆಯಾದಂತೆ ಕಾಣುವುದನ್ನು ನೋಡುವುದೇ ಒಂದು ಸೊಗಸು. ಭೂಮಿ ಮೇಲಿನ ಸ್ವರ್ಗ ದಂತೆ ಅನಿಸುತ್ತದೆ.

ಪ್ರಕೃತಿಯ ಮಡಿಲಲ್ಲಿ ಇರುವ ಪ್ರವಾಸಿ ತಾಣವನ್ನು ವೀಕ್ಷಿಸಲು ಬಂದ  ಪ್ರವಾಸಿಗರು  ಹಳ್ಳಿಯ ಜೀವನದ ಸುಂದರ ಅನುಭವವನ್ನು  ಪಡೆಯುತ್ತಾರೆ.  ಶುದ್ಧ ಗಾಳಿ ಮತ್ತು ಮನಸ್ಸಿಗೆ ನೆಮ್ಮದಿ  ದೊರಕುತ್ತದೆ. ಒಟ್ಟಿನಲ್ಲಿ ವರ್ಷ ಪೂರ್ತಿ ಪ್ರವಾಸಿಗರನ್ನು ತನ್ನತ್ತ ಸೆಳೆಯುವ ಅದ್ಭುತ ಪ್ರವಾಸಿ ತಾಣ ಇದಾಗಿದೆ.

Jenukallu Hills Yallapura Uttarakannada

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ. 

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ, ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button