ವಿಂಗಡಿಸದಸ್ಮರಣೀಯ ಜಾಗ

ಇಂದು ವಿಜಯವಾಡದಲ್ಲಿ ವಿಶ್ವದ ಅತಿ ಎತ್ತರದ ಡಾ. ಬಿ.ಆರ್ ಅಂಬೇಡ್ಕರ್ ಪ್ರತಿಮೆ ಲೋಕಾರ್ಪಣೆ

ಭಾರತದ “ಸಂವಿಧಾನ ಶಿಲ್ಪಿ” ಡಾ.ಬಿ.ಆರ್ ಅಂಬೇಡ್ಕರ್ ಅವರ ಅತಿ ಎತ್ತರದ ಪ್ರತಿಮೆಯನ್ನು ಆಂಧ್ರಪ್ರದೇಶದ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರು ಇಂದು (ಜ.19) ಸಂಜೆ ಅನಾವರಣಗೊಳಿಸಲಿದ್ದಾರೆ.

ಈ ಪ್ರತಿಮೆಯು 125 ಅಡಿ ಎತ್ತರವಿದ್ದು, 81 ಅಡಿ ಪೀಠದ ಮೇಲೆ ನಿಂತಿದೆ. ಒಟ್ಟು ಎತ್ತರ 206 ಅಡಿ ಇದ್ದು, ಇದು ವಿಶ್ವದ ಅತಿ ಎತ್ತರದ ಅಂಬೇಡ್ಕರ್ ಅವರ ಪ್ರತಿಮೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ಡಾ.ಬಿ.ಆರ್ ಅಂಬೇಡ್ಕರ್ (Dr. B.R. Ambedkar) ಅವರ ಈ ಪ್ರತಿಮೆಗೆ “ಸಾಮಾಜಿಕ ನ್ಯಾಯದ ಪ್ರತಿಮೆ” (Statue of Social Justice) ಎಂಬ ಹೆಸರನ್ನು ಇಡಲಾಗಿದೆ. ಹಾಗೂ ವಿಜಯವಾಡದ ಸ್ವರಾಜ ಮೈದಾನದಲ್ಲಿ (Swaraj Maidan) ಇದು ಅನಾವರಣಗೊಳ್ಳಲಿದ್ದು, ಈ ಮೈದಾನಕ್ಕೆ ಬಿ.ಆರ್ ಅಂಬೇಡ್ಕರ್ ಅವರ ಹೆಸರನ್ನೇ ಇಡಲಾಗುವುದು ಎಂದು ಸರ್ಕಾರ ತಿಳಿಸಿದೆ.

125 ಅಡಿ ಎತ್ತರದ ಪ್ರತಿಮೆಯನ್ನು ಉಕ್ಕಿನ ಚೌಕಟ್ಟು ಮತ್ತು ಕಂಚಿನ ಹೊದಿಕೆಯಿಂದ ಮಾಡಲಾಗಿದ್ದು, ಸಂಪೂರ್ಣವಾಗಿ ಭಾರತದಲ್ಲಿಯೇ ತಯಾರಿಸಲಾಗಿದೆ.

ಕಳೆದ ವರ್ಷ, ಭಾರತದ ಹೊರಗಿನ ಯುಎಸ್‌ನ ಮೇರಿಲ್ಯಾಂಡ್‌ನಲ್ಲಿ ಅತಿ ಎತ್ತರದ ಅಂಬೇಡ್ಕರ್ ಪ್ರತಿಮೆಯನ್ನು ಅನಾವರಣಗೊಳಿಸಲಾಗಿತ್ತು. 19 ಅಡಿ ಎತ್ತರದ ಆ ಪ್ರತಿಮೆಗೆ ‘ಸಮಾನತೆಯ ಪ್ರತಿಮೆ’ ಎಂಬ ಹೆಸರು ಇಡಲಾಗಿತ್ತು.

ಸಾಮಾಜಿಕ ನ್ಯಾಯ ಪ್ರತಿಮೆಯ ವೈಶಿಷ್ಟ್ಯತೆಗಳು:

1.ವಿಶ್ವದ ಅತಿ ಎತ್ತರದ ಈ ಪ್ರತಿಮೆಯು 81 ಅಡಿಯ ಪೀಠದ ಮೇಲೆ ಇದ್ದು, 125 ಅಡಿ ಎತ್ತರವಿದೆ.

2. ಪ್ರತಿಮೆ ನಿರ್ಮಾಣ ಯೋಜನೆಗೆ ₹ 404.35 ಕೋಟಿ ವೆಚ್ಚವಾಗಿದ್ದು, ಇದು ಹಚ್ಚ ಹಸಿರಿನ ಉದ್ಯಾನವನದಲ್ಲಿ 18.81 ಎಕರೆ ಭೂಮಿಯಲ್ಲಿ ನಿಂತಿದೆ.

3. ಈ ಪ್ರತಿಮೆಯ ನಿರ್ಮಾಣದ ಕಚ್ಛಾ ವಸ್ತುಗಳಿಂದ ವಿನ್ಯಾಸದವರೆಗೂ ಸಂಪೂರ್ಣವಾಗಿ “ಮೇಡ್ ಇನ್ ಇಂಡಿಯಾ” ಯೋಜನೆಯಡಿ ನಿರ್ಮಿಸಲಾಗಿದೆ. ಸುಮಾರು 400 ಟನ್‌ಗಳಷ್ಟು ಉಕ್ಕನ್ನು ಈ ಪ್ರತಿಮೆ ನಿರ್ಮಾಣಕ್ಕಾಗಿ ಬಳಸಲಾಗಿದೆ.

4. ಪ್ರತಿಮೆಯನ್ನು ನಿರ್ಮಿಸಿದ ಸ್ವರಾಜ್ ಮೈದಾನದ ಜೊತೆಗೆ ಪ್ರತಿಮೆಯ ಸುತ್ತಲಿನ ಪ್ರದೇಶಗಳನ್ನು ಮರು-ಅಭಿವೃದ್ಧಿಪಡಿಸಲಾಗಿದೆ. ಮುಂಭಾಗದಲ್ಲಿ ಜಲಮೂಲಗಳು, ಪೀಠಕ್ಕಾಗಿ ಮೂರು-ಬದಿಯ ಬಾಹ್ಯ ಜಲಮೂಲಗಳು ಮತ್ತು ಪ್ರದೇಶದಲ್ಲಿ ಸಂಗೀತ ನೀರಿನ ಕಾರಂಜಿ ನಿರ್ಮಿಸಲಾಗಿದೆ.

5. ಅಂಬೇಡ್ಕರರ ಜೀವನ ಚರಿತ್ರೆಯನ್ನು ಪ್ರದರ್ಶಿಸಲು ಎಲ್‌ಇಡಿ ಪರದೆಗಳನ್ನು ಇಲ್ಲಿ ಸ್ಥಾಪಿಸಲಾಗಿದೆ. 2,000 ಆಸನ ಸಾಮರ್ಥ್ಯದ ಸಮಾವೇಶ ಕೇಂದ್ರ, 8,000 ಚದರ ಅಡಿ ವಿಸ್ತೀರ್ಣದ ಫುಡ್ ಕೋರ್ಟ್ ಜೊತೆಗೆ ಮಕ್ಕಳ ಆಟವಾಡುವ ಸ್ಥಳ, ವಾಕಿಂಗ್ ಪಥಗಳನ್ನು ಸಹ ಇಲ್ಲಿ ನಿರ್ಮಿಸಲಾಗಿದೆ.

“ವಿಜಯವಾಡದಲ್ಲಿ ನಮ್ಮ ಸರ್ಕಾರವು ಸ್ಥಾಪಿಸಿದ ಅಂಬೇಡ್ಕರ್ ಅವರ 206 ಅಡಿ ಎತ್ತರದ ಮಹಾಶಿಲ್ಪವು ರಾಜ್ಯದ ಮಾತ್ರವಲ್ಲದೆ ದೇಶದ ಅಮೂಲ್ಯ ರತ್ನವಾಗಲಿದೆ” ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಎಕ್ಸ್ (ಹಿಂದಿನ ಟ್ವಿಟರ್) ನಲ್ಲಿ ಹಂಚಿಕೊಂಡಿದ್ದಾರೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button