ವಿಂಗಡಿಸದ

ಅಯೋಧ್ಯೆಗೆ ಆಸ್ಥಾ ಸ್ಪೆಷಲ್ ರೈಲು ; ನಮ್ಮ ರಾಜ್ಯದಲ್ಲೂ ಸಂಚರಿಸಲಿದೆ

ಅಯೋಧ್ಯೆಯಲ್ಲಿ ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮ ವಿರಾಜಮಾನ ಆಗಲಿದ್ದಾನೆ . ಆದರೆ ಅಂದು ಗಣ್ಯರಿಗೆ ಮಾತ್ರ ಆಹ್ವಾನ . ಆದರೆ ಜನವರಿ 23 ರಿಂದ ಜನ ಸಾಮಾನ್ಯರು ಅಯೋಧ್ಯಾ ರಾಮ ಮಂದಿರಕ್ಕೆ (Ram Mandir )ಭೇಟಿ ನೀಡಬಹುದು. ಇದಕ್ಕಾಗಿ ದೇಶದೆಲ್ಲೆಡೆಯಿಂದ ವಿಶೇಷ ರೈಲುಗಳು ಅಯೋಧ್ಯೆಗೆ ತೆರಳಲಿವೆ.

Ayodhye

ಜನವರಿ 22 ರಂದು ಅಯೋಧ್ಯೆಯ ಶ್ರೀರಾಮ ಮಂದಿರದ ಗರ್ಭ ಗೃಹದಲ್ಲಿ ರಾಮ ಲಲ್ಲಾ(Ram lalla)ಪ್ರತಿಮೆಯ ಪ್ರಾಣ ಪ್ರತಿಷ್ಠಾಪನಾ ಕಾರ್ಯ ಸಂಪನ್ನಗೊಂಡ ಬಳಿಕ ವಿಶೇಷ ರೈಲುಗಳನ್ನು ಓಡಿಸಲು ಭಾರತೀಯ ರೈಲ್ವೆ ನಿರ್ಧರಿಸಿದೆ. ದೇಶದ ವಿವಿದೆಡೆಗಳಿಂದ 200 ವಿಶೇಷ ರೈಲುಗಳನ್ನ ಅಯೋಧ್ಯೆಗೆ ರವಾನಿಸಲು ಭಾರತೀಯ ರೈಲ್ವೆ ತೀರ್ಮಾನಿಸಿದ್ದು, ಈ ವಿಶೇಷ ರೈಲುಗಳಿಗೆ ‘ಆಸ್ಥಾ ಸ್ಪೆಷಲ್’(Aastha Special)ಎಂದು ಹೆಸರಿಡಲಾಗಿದೆ.ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮದ ಬಳಿಕ 100 ದಿನಗಳ ಕಾಲ ಈ ವಿಶೇಷ ರೈಲುಗಳು ಸಂಚಾರ ಮಾಡಲಿವೆ.

ನೀವು ಇದನ್ನೂ ಓದಬಹುದು:ಅಯೋಧ್ಯೆಗೆ ಭೇಟಿ ನೀಡುವ ಪ್ರವಾಸಿಗರಿಗಾಗಿ “ದಿವ್ಯ ಅಯೋಧ್ಯಾ” ಆಪ್ ಬಿಡುಗಡೆ;

Aastha special train

ದೇಶಾದ್ಯಂತ 66 ರೈಲುಗಳು ಸಂಚರಿಸಲಿವೆ . ಕರ್ನಾಟಕ (Karnataka )ರಾಜ್ಯದಲ್ಲಿ ಬೆಂಗಳೂರು(Bangalore )ಹಾಗೂ ಅಯೋಧ್ಯೆಯ ನಡುವೆ ಮೂರು ರೈಲುಗಳು ಸಂಚರಿಸುವ ಸಾಧ್ಯತೆ ಇದೆ. ಇದಲ್ಲದೆ ಹುಬ್ಬಳ್ಳಿ(Hubbali )ಮೈಸೂರು(Mysore), ತುಮಕೂರು(Tumkuru )ಹಾಗೂ ಮಂಗಳೂರಿನಿಂದಲೂ(Mangalore )ಎರಡು ರೈಲುಗಳು ಸಂಚರಿಸಲಿದೆ. ಹೆಚ್ಚುವರಿಯಾಗಿ ಶಿವಮೊಗ್ಗ(Shivamogaga )ಹಾಗೂ ಬೆಳಗಾವಿಯಿಂದ(Belgavi) ತಲಾ ಒಂದು ರೈಲು ಸಂಚರಿಸಲಿದೆ ಅನ್ನೋ ಮಾಹಿತಿ ಇದೆ. ಪ್ರಯಾಣಿಕರ ಬೇಡಿಕೆಗೆ ಅನುಸಾರವಾಗಿ ರೈಲುಗಳ ವೇಳಾಪಟ್ಟಿ ಹೊಂದಿಸಬೇಕಿದ್ದು, ನಿರ್ದಿಷ್ಟ ದಿನಾಂಕ ಹಾಗೂ ಸಮಯದ ಕುರಿತಾಗಿ ಇನ್ನಷ್ಟೇ ಹೆಚ್ಚಿನ ಮಾಹಿತಿ ಹೊರ ಬೀಳಬೇಕಿದೆ.

ಇನ್ನು ಮೈಸೂರಿನಿಂದ (Mysore )ಹೊರಡುವ ರೈಲು ಬೆಂಗಳೂರು, ತುಮಕೂರು(Tumkuru), ಅರಸೀಕೆರೆ(Arasikere), ಕಡೂರು(Kaduru), ಬೀರೂರು(Beeruru), ಹೊಸಪೇಟೆ(Hospete), ವಿಜಯ ನಗರ(Vijayanagara), ಸೋಲಾಪುರ,(Solapura ) ದೌಂಡ್, ಭೂಸಾವಾಲ್, ಇಟಾರ್ಸಿ, ಬಿನಾ, ಝಾನ್ಸಿ(Jansi )ಹಾಗೂ ಪ್ರಯಾಗರಾಜ್(Prayagraj )ಮೂಲಕ ಅಯೋಧ್ಯೆಯನ್ನು ತಲುಪಲಿದೆ. ಮೈಸೂರಿನಿಂದ ಅಯೋಧ್ಯೆಗೆ ಒಟ್ಟು 2,894 ಕಿ. ಮೀ. ದೂರ ರೈಲು ಪ್ರಯಾಣ ಮಾಡಬೇಕಿದೆ. ರೈಲ್ವೆ ಇಲಾಖೆಯ ವೆಬ್‌ ಸೈಟ್‌ನಲ್ಲಿ ಈ ಕುರಿತ ಸಮಗ್ರ ಮಾಹಿತಿ ಲಭ್ಯ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button