ಮ್ಯಾಜಿಕ್ ತಾಣಗಳುವಂಡರ್ ಬಾಕ್ಸ್ವಿಂಗಡಿಸದ

“ಪೆಂಚ್ ಟೈಗರ್ ರಿಸರ್ವ್” ಅನ್ನು ಭಾರತದ ಮೊದಲ ಡಾರ್ಕ್ ಸ್ಕೈ ಪಾರ್ಕ್ ಎಂದು ಪರಿಗಣಿಸಲಾಗಿದೆ;

ಮಹಾರಾಷ್ಟ್ರದ ಪೆಂಚ್ ಟೈಗರ್ ರಿಸರ್ವ್ ಅನ್ನು ಇತ್ತೀಚೆಗೆ ಭಾರತದ ಮೊದಲ ಮತ್ತು ಏಷ್ಯಾದಲ್ಲೇ ಐದನೇ ಡಾರ್ಕ್ ಸ್ಕೈ ಪಾರ್ಕ್ ಎಂದು ಪರಿಗಣಿಸಲಾಗಿದೆ. ಇದು ಕೃತಕ ಬೆಳಕಿನ ಮಾಲಿನ್ಯದಿಂದ ಆಕಾಶವನ್ನು ಸಂರಕ್ಷಿಸಿ, ನೈಸರ್ಗಿಕವಾಗಿ ಉಳಿಸುವ ಪ್ರಯತ್ನವಾಗಿದೆ.

ಈ ಉಪಕ್ರಮವು ಖಗೋಳಶಾಸ್ತ್ರದ ಉತ್ಸಾಹಿಗಳಿಗೆ ಮತ್ತು ನಕ್ಷತ್ರ ವೀಕ್ಷಕರಿಗೆ ಸೂಕ್ತವಾದ ವಾತಾವರಣವನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ.

ಡಾರ್ಕ್ ಸ್ಕೈ ಪಾರ್ಕ್ ಎಂದರೇನು?

ಡಾರ್ಕ್ ಸ್ಕೈ ಪಾರ್ಕ್‌ಗಳು (Dark sky parks) ರಾತ್ರಿಯ ಆಕಾಶವನ್ನು ಕೃತಕ ಬೆಳಕಿನ ಮಾಲಿನ್ಯದಿಂದ ರಕ್ಷಿಸಲು ಗೊತ್ತುಪಡಿಸಿದ ಪ್ರದೇಶಗಳಾಗಿವೆ. ಇದರ ಪರಿಣಾಮ ಸ್ಥಳೀಯ ಪರಿಸರವು ನೈಸರ್ಗಿಕವಾಗಿ ಅಭಿವೃದ್ಧಿ ಹೊಂದಲು ಸಹಾಯ ಮಾಡುತ್ತದೆ.

ಈ ಸ್ಥಳಗಳು ಪ್ರಕೃತಿ ಮತ್ತು ವನ್ಯಜೀವಿಗಳಿಗೆ ಮಾತ್ರ ಅನುಕೂಲ ಮಾಡಿಕೊಡುವುದಲ್ಲದೇ, ಖಗೋಳಶಾಸ್ತ್ರದಲ್ಲಿ ಆಸಕ್ತಿ ಹೊಂದಿರುವ ಸಂಶೋಧಕರಿಗೆ ಸಹ ಸಂಶೋಧನೆಗೆ ಅನುವು ಮಾಡಿಕೊಡುತ್ತದೆ.

ಗೋಚರತೆಗಾಗಿ ಸ್ಥಾಪಿಸುವ ಕೃತಕ ದೀಪಗಳು ಮಾನವರು, ಪ್ರಾಣಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದಲ್ಲದೇ, ಆಕಾಶದ ಭೂದೃಶ್ಯವನ್ನು ಸ್ಪಷ್ಟತೆಯೊಂದಿಗೆ ನೋಡಲು ಸಹ ಇದು ಅಡ್ಡಿ ಉಂಟು ಮಾಡುತ್ತದೆ.

ಪೆಂಚ್ ಹುಲಿ ಸಂರಕ್ಷಿತ ಪ್ರದೇಶದಲ್ಲಿ, (Pench Tiger Reserve) ಜಿಲ್ಲಾ ಯೋಜನಾ ಸಮಿತಿ ನಿಧಿಯ ವತಿಯಿಂದ ರಾತ್ರಿ ವೀಕ್ಷಣಾಲಯಗಳನ್ನು ಸ್ಥಾಪಿಸಲಾಗಿದೆ ಮತ್ತು ಬಾಘೋಲಿ ಬಳಿಯ ಪ್ರದೇಶವನ್ನು “ನಕ್ಷತ್ರ ವೀಕ್ಷಣೆ”ಗಾಗಿ ಗೊತ್ತುಪಡಿಸಲಾಗಿದೆ ಎಂದು ಮಹಾರಾಷ್ಟ್ರದ ಮೀಸಲು ಉಪ ನಿರ್ದೇಶಕ ಪ್ರಭು ನಾಥ್ ಶುಕ್ಲಾ (Prabhu Nath Shukla) ತಿಳಿಸಿದ್ದಾರೆ.

ಬೆಳಕಿನ ಮಾಲಿನ್ಯವನ್ನು ತಗ್ಗಿಸಲು, ಉದ್ಯಾನವನದ ಪಯೋನಿ ಬಫರ್ ಪ್ರದೇಶದ ವಾಘೋಲಿ, ಪಿಪಾರಿಯಾ, ಸಿಲ್ಲಾರಿ ಮತ್ತು ಖಾಪಾ ಗ್ರಾಮಗಳಲ್ಲಿನ 100 ಕ್ಕೂ ಹೆಚ್ಚು ಬೀದಿ ದೀಪಗಳನ್ನು ನೆಲದ ದೀಪಗಳಾಗಿ ಬದಲಾಯಿಸಲಾಗಿದೆ ಎಂದು ಶುಕ್ಲಾ ಅವರು ತಿಳಿಸಿದರು.

ಇಂಟರ್ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್ (IUCN) ನೈಸರ್ಗಿಕ, ಸಾಂಸ್ಕೃತಿಕ ಮತ್ತು ಐತಿಹಾಸಿಕ ಸಂಪನ್ಮೂಲವಾಗಿ ರಾತ್ರಿಯ ಆಕಾಶದ ಅಂತರ್ಗತ ಮೌಲ್ಯವನ್ನು ಗುರುತಿಸಿ, ಪ್ರಕೃತಿ ಸಂರಕ್ಷಣೆಗಾಗಿ ನೈಸರ್ಗಿಕ ಕತ್ತಲೆಯನ್ನು ಸಂರಕ್ಷಿಸುವ ಪ್ರಾಮುಖ್ಯತೆಯನ್ನು ಒತ್ತಿ ಹೇಳುತ್ತದೆ. ಆರೋಗ್ಯಕರ ನಗರಗಳಲ್ಲಿ ಸಮುದಾಯಗಳ ಯೋಗಕ್ಷೇಮವನ್ನು ಕಾಪಾಡುತ್ತದೆ.

ಶುಕ್ಲಾ ಅವರ ಪ್ರಕಾರ, ಹುಲಿ ಸಂರಕ್ಷಿತ ಪ್ರದೇಶದಲ್ಲಿ ಡಾರ್ಕ್ ಸ್ಕೈ ಪ್ರಮಾಣೀಕರಣವು ಒಂದು ಮಹತ್ವದ ಹೆಜ್ಜೆಯಾಗಿದೆ ಏಕೆಂದರೆ ಇದು ಪೆಂಚ್ ಅನ್ನು ರಾಷ್ಟ್ರೀಯವಾಗಿ ಮಾತ್ರವಲ್ಲದೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡುತ್ತದೆ.

ಈಗಾಗಲೇ ವೀಕ್ಷಣಾಲಯವನ್ನು ಹೊಂದಿರುವ ವಘೋಲಿಯಲ್ಲಿರುವ ರಕ್ಷಣಾ ಗೋಪುರದಲ್ಲಿ ಮತ್ತೊಂದು ದೂರದರ್ಶಕವನ್ನು ಸಹ ಸ್ಥಾಪಿಸಲಾಗಿದೆ.

ನೆರೆಯ ಪರಿಸರ-ಅಭಿವೃದ್ಧಿ ಸಮಿತಿಯೊಂದಿಗೆ (EDC) ಸಹಭಾಗಿತ್ವದಲ್ಲಿ, ಈ ಸ್ಥಳದಲ್ಲಿ ವಸತಿ ಸೌಲಭ್ಯಗಳು ಮತ್ತು ಆತಿಥ್ಯ ಸೇವೆಗಳ ಲಭ್ಯತೆಯನ್ನು ಒದಗಿಸುವ ಯೋಜನೆ ರೂಪಿಸಿದೆ.

ಜನರು ರಾತ್ರಿಯಲ್ಲಿ ತಂಗಲು ಸೂಕ್ತವಾದ ವ್ಯವಸ್ಥೆಗಳನ್ನು ಒದಗಿಸುವುದು ಮತ್ತು ನಕ್ಷತ್ರ ವೀಕ್ಷಕರು ಮತ್ತು ಪ್ರಕೃತಿ ಪ್ರಿಯರಿಗೆ ರಾತ್ರಿಯಲ್ಲಿ ಕಾಡಿನ ಅನುಭವವನ್ನು ಅನುಭವಿಸಲು ಅಸಾಧಾರಣ ಅವಕಾಶವನ್ನು ನೀಡುವುದು ಪೆಂಚ್ ನ ಗುರಿಯಾಗಿದೆ.

ಪೆಂಚ್ ಟೈಗರ್ ರಿಸರ್ವ್‌ನಲ್ಲಿನ ಈ ಹೊಸ ಸೇರ್ಪಡೆಯು ದೇಶಾದ್ಯಂತದ ಇರುವ ಆಕಾಶ ಉತ್ಸಾಹಿಗಳಿಗೆ ಶಿಕ್ಷಣ ಮತ್ತು ಸಂಶೋಧನೆಗೆ ಅತ್ಯಂತ ಉಪಕಾರಿ ಆಗುವುದರಲ್ಲಿ ಸಂದೇಹವಿಲ್ಲ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button