ಮ್ಯಾಜಿಕ್ ತಾಣಗಳುವಿಂಗಡಿಸದಸ್ಮರಣೀಯ ಜಾಗ

ಅಯೋಧ್ಯೆಗೆ ಭೇಟಿ ನೀಡುವ ಪ್ರವಾಸಿಗರಿಗಾಗಿ “ದಿವ್ಯ ಅಯೋಧ್ಯಾ” ಆಪ್ ಬಿಡುಗಡೆ;

ಅಯೋಧ್ಯೆಯ ಶ್ರೀರಾಮನ ದರ್ಶನಕ್ಕೆ ತೆರಳುವ ಭಕ್ತರಿಗೆ ಗುಡ್ ನ್ಯೂಸ್. ಅಯೋಧ್ಯೆಯಲ್ಲಿ ನೋಡುವ ತಾಣಗಳ ಕುರಿತು, ಹೋಟೆಲ್‌ ಬುಕ್ಕಿಂಗ್‌, ಕ್ಯಾಬ್‌-ಬಸ್‌ ವಿವರ ಸೇರಿದಂತೆ ಎಲ್ಲಾ ಮಾಹಿತಿ ನೀಡುತ್ತದೆ “ದಿವ್ಯ ಅಯೋಧ್ಯಾ” ಆಪ್.

ಅಯೋಧ್ಯಾ ರಾಮ ಮಂದಿರದ ಉದ್ಘಾಟನೆಗೆ ದಿನಗಣನೆ ಆರಂಭವಾಗಿದೆ. ಇಂದಿನಿಂದ ಜ.22ರವರೆಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿದೆ. ಜ.23 ರಿಂದ ಸಾರ್ವಜನಿಕರಿಗೂ ರಾಮನ ದರ್ಶನಕ್ಕೆ ಅವಕಾಶ ಕಲ್ಪಿಸಿದ್ದು, ಶ್ರೀರಾಮನ ದರ್ಶನಕ್ಕಾಗಿ ಅಯೋಧ್ಯೆಗೆ ತೆರಳುವ ಜನರ ಸಂಖ್ಯೆಯೂ ಹೆಚ್ಚುತ್ತಿದೆ.

ಅಯೋಧ್ಯೆಗೆ ತೆರಳುವ ಭಕ್ತರಿಗೆ & ಪ್ರವಾಸಿಗರಿಗೆ ಅನುಕೂಲವಾಗಲೆಂದು “ದಿವ್ಯ ಅಯೋಧ್ಯಾ” (Divya Ayodhya Tourism App) ಎಂಬ ಆಪ್ ಅನ್ನು ಉತ್ತರ ಪ್ರದೇಶ ಸರ್ಕಾರವು ಬಿಡುಗಡೆ ಮಾಡಿದೆ. ಈಗ ಆಪ್ ನಲ್ಲಿ ಅಯೋಧ್ಯೆಯ ನಗರಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ದೊರೆಯಲಿದೆ.

ಇದು ಅಯೋಧ್ಯೆಯ ಆಸುಪಾಸಿನಲ್ಲಿರುವ ಪ್ರಮುಖ ದೇವಾಲಯಗಳು, ಮಠಗಳು, ಹಾಗೂ ಇತರೆ ಐತಿಹಾಸಿಕ ತಾಣಗಳ ಕುರಿತು ಮಾಹಿತಿಯನ್ನು ನೀಡಲಾಗಿದೆ.

ತಾಣಗಳ ಕುರಿತಾದ ಮಾಹಿತಿ ಮಾತ್ರವಲ್ಲದೇ, ಈ ಆಪ್ ಇ-ಕಾರ್ ಮತ್ತು ಇ-ಬಸ್ ಬುಕಿಂಗ್ ವ್ಯವಸ್ಥೆಯನ್ನು ಕಲ್ಪಿಸುತ್ತದೆ. ಇವುಗಳ ಸಮಯವನ್ನು ಆಪ್ ಮೂಲಕ ಟ್ರ್ಯಾಕ್‌ ಮಾಡುವ ಜೊತೆಗೆ ಅನುಕೂಲಕರವಾದ ಬೋರ್ಡಿಂಗ್ ಮತ್ತು ಡಿಬೋರ್ಡಿಂಗ್ ಆಯ್ಕೆಗಳನ್ನು ಸಹ ಇದು ನೀಡುತ್ತದೆ.ಈ ಆಪ್ ಬಳಸಿ ಪ್ರವಾಸಿಗರು ಹೋಂಸ್ಟೇಗಳು, ಹೋಟೇಲ್ ಗಳು, ಟೆಂಟ್ ಸಿಡಿಗಳನ್ನು ಕಾಯ್ದಿರಿಸಬಹುದು.

ಇದು ಪ್ರವಾಸಿಗರನ್ನು ಸ್ಥಳೀಯವಾಗಿ ತರಬೇತಿ ಪಡೆದ ಪ್ರವಾಸಿ ಮಾರ್ಗದರ್ಶಿ (Tour Guide) ಗಳೊಂದಿಗೆ ಸಂಪರ್ಕ ಕಲ್ಪಿಸಲು ಸಹ ಸಹಾಯ ಮಾಡುತ್ತದೆ.

ಇದರಲ್ಲಿ ಅವಶ್ಯತೆ ಇರುವವರಿಗೆ ವೀಲ್‌ಚೇರ್‌ ಹಾಗೂ ಗಾಲ್ಫ್ ಕಾರ್ಟ್‌ಗಳನ್ನು ಬುಕ್ ಮಾಡುವ ಆಯ್ಕೆ ಕೂಡ ಲಭ್ಯವಿದೆ.

ಅಯೋಧ್ಯೆಯ ಹೊರಭಾಗದಲ್ಲಿ ಉತ್ತರ ಪ್ರದೇಶ ಸರ್ಕಾರವು (Uttar Pradesh Government) ಗ್ರಾಮೀಣ ಹೋಮ್‌ಸ್ಟೇಗಳನ್ನು ನಿರ್ಮಿಸಿದ್ದು, ಈ ಆಪ್ ಮೂಲಕ ಸರ್ಕಾರವು ಗ್ರಾಮೀಣ ಹೋಮ್‌ಸ್ಟೇ ಆಯ್ಕೆಗಳನ್ನು ಜನರಿಗೆ ಪರಿಚಯಿಸುತ್ತಿದೆ.

ಅಯೋಧ್ಯೆಗೆ (Ayodhya) ಭೇಟಿ ನೀಡುವ ಜನರು ಈಗ ಇಲ್ಲಿಗೆ ಸಮೀಪದ ದೌಲತ್‌ಪುರ ಗ್ರಾಮದಲ್ಲಿ ಹೋಮ್‌ಸ್ಟೇಗಳನ್ನು ಬಾಡಿಗೆಗೆ ಪಡೆಯಬಹುದು.

ಆಪ್ ಹೇಗೆ ಲಭ್ಯ:

ಈ ಆಪ್ ಅಂಡ್ರಾಯ್ಡ್‌ ಹಾಗೂ ಐಒಎಸ್‌ ಎರಡರಲ್ಲೂ ಲಭ್ಯವಿದೆ. ಗೂಗಲ್‌ ಪ್ಲೇ ಸ್ಟೋರ್ ನಿಂದ (Google Play Store) ಇದನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಈಗಾಗಲೇ 5,000 ಕ್ಕೂ ಹೆಚ್ಚು ಮಂದಿ ಡೌನ್‌ಲೋಡ್‌ ಮಾಡಿದ್ದಾರೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button