ಮ್ಯಾಜಿಕ್ ತಾಣಗಳುವಿಂಗಡಿಸದಸೂಪರ್ ಗ್ಯಾಂಗು

ಎಂ.ಜಿ.ಎಂ ಕಾಲೇಜಿನ ವಿದ್ಯಾರ್ಥಿ ಬರೆದ ಅನಿರೀಕ್ಷಿತ ಗೋವಾ ಪ್ರವಾಸದ ಕಥೆ

ಗೋವಾ ಎಂದರೆ ಬೀಚ್ ಎನ್ನುವವರೇ ಜಾಸ್ತಿ. ಬೀಚ್ ಹೊರತುಪಡಿಸಿ ಗೋವಾದಲ್ಲಿ ನೋಡುವುದಕ್ಕೆ ಹಲವು ತಾಣಗಳಿವೆ. ಬೀಚ್ ಹೊರತುಪಡಿಸಿ ಗೋವಾ ಹಲವರಿಗೆ ಹಲವು ನೆನಪು ಗಳನ್ನು ಸೃಷ್ಟಿಸಿ ಕೊಡುತ್ತದೆ. ಅದೇ ರೀತಿ ಗೋವಾಕ್ಕೆ ಗೆಳೆಯರೊಂದಿಗೆ ಹೋಗಿ ಬಂದಿದ್ದ ಎಂಜಿಎಂ ಕಾಲೇಜಿನ ವಿದ್ಯಾರ್ಥಿಯ ಗೋವಾದ ಪ್ರವಾಸದ ನೆನಪಿನ ಕುರಿತಾದ ಪುಟ್ಟ ಬರಹ

ರಾಹುಲ್ ಆರ್ ಸುವರ್ಣ

ಗೋವಾ ಎಂದರೆ ಬೀಚ್ ಮಾತ್ರವಲ್ಲ. ಅದರಾಚೆಗೆ ಗೋವಾದಲ್ಲಿ ನಾವು ಅನುಭವಿಸುವುದಕ್ಕೆ ಹಲವು ವಿಷಯಗಳಿವೆ. ನಾನು ಹತ್ತನೇ ತರಗತಿಯ ಪಬ್ಲಿಕ್ ಎಕ್ಸಾಮ್ ಮುಗಿಸಿ ರಜೆಯಲ್ಲಿದ್ದಾಗ ಗೋವಾಕ್ಕೆ ಹೋಗುವ ಪ್ರವಾಸದ ಅವಕಾಶ ಸಿಕ್ಕಿತ್ತು. ಅದಕ್ಕೂ ಮುನ್ನ ಇದರ ಒಳಗಿರುವ ಕಥೆಯನ್ನು ಹೇಳುತ್ತೇನೆ.

Goa

ನಾನು ಯಕ್ಷಗಾನ ಕೇಂದ್ರದ ವಿದ್ಯಾರ್ಥಿ. ಪ್ರತಿ ವರ್ಷ ನನ್ನ ರಜಾ ದಿನಗಳನ್ನು ನೆನಪಿನಲ್ಲಿಟ್ಟುಕೊಳ್ಳುವಂತೆ ಮಾಡಿದ್ದೂ ನನ್ನ ಗುರುಗಳು ಬನ್ನಂಜೆ ಸಂಜೀವ ಸುವರ್ಣ. ಅದರಂತೆ ಕೇಂದ್ರದ ವತಿಯಿಂದ ಒಮ್ಮೆ ಜಮಖಂಡಿಯಲ್ಲಿ ನಡೆಯುವ ಯಕ್ಷಗಾನ ತರಬೇತಿಗೆ ಸುಮಂತ್ ಅಣ್ಣನೊಂದಿಗೆ ಹೋಗುವ ಅವಕಾಶ ಸಿಕ್ಕಿತು.

ಜಮಖಂಡಿಯಲ್ಲಿ ಮೆಣಸು ಎಷ್ಟು ಕಾರವಿತ್ತೋ ಅದಕ್ಕಿಂತ ಎರಡು ಪಟ್ಟು ಅಲ್ಲಿನ ವಿದ್ಯಾರ್ಥಿಗಳ ಹಾಗೂ ಊರಿನವರ ಮನಸ್ಸು ಮೃದುವಾಗಿತ್ತು. ಪ್ರತಿ ಮಾತು ಮಾತಿಗೂ ಸರ್ ರಿ, ಸರ್ ರಿ ಎನ್ನುತ್ತಿದ್ದದ್ದು ಈಗಲೂ ನೆನಪಿದೆ. ಅಲ್ಲಿ ಅಂದುಕೊಂಡಂತೆ ಕೊನೆಯ ದಿನದ ಕಾರ್ಯಕ್ರಮವು ಮುಗಿಯಿತು. ಆದರೆ ಅದಕ್ಕಿಂತ ಮುಂಚೆಯೇ ಅಲ್ಲಿನ ವಿದ್ಯಾರ್ಥಿಗಳೆಲ್ಲ ಸೇರಿ ಪ್ರವಾಸದ ಪ್ಲಾನ್ ಮಾಡಿದ್ದರು. ಇಷ್ಟು ದಿನಗಳು ಒಟ್ಟಿಗಿದ್ದು ಇನ್ನೊಂದು ದಿನ ತಾನೇ, ಅವರಿಗೇಕೆ ಬೇಜಾರು ಮಾಡುವುದು, ಪ್ರವಾಸ ಮುಗಿಸಿ ಅಲ್ಲಿಂದಲೇ ಉಡುಪಿಗೆ ಮರಳಿದರಾಯ್ತು ಎಂದು ಹೋಗುವುದಕ್ಕೆ ಒಪ್ಪಿದೆವು.

Trip

ಬೆಳಿಗ್ಗೆ ಬೇಗನೆ ಅಲ್ಲಿಂದ ಬಸ್ಸಿನಲ್ಲಿ ಹೊರಟೆವು, ನಡು ನಡುವೆ ಅದು ಬಸ್ಸೋ ಎತ್ತಿನ ಗಾಡಿಯೊ ಎಂದೆನಿಸಿದ್ದು ಉಂಟು. ಬಿಸಿಲು ನೆತ್ತಿಗೇರಿದ ಸಮಯಕ್ಕೆ ಗೋವಾದ ಬಾಮ್ ಜೀಸಸ್ ಬಸಿಲಿಕಾ ಚರ್ಚ್ ಬಳಿ ತಲುಪಿದೆವು. ಊಟ ಮುಗಿಸಿ ಚರ್ಚ್ ನೊಳಗೆ ಹೋದೆವು. ಅಷ್ಟು ದೊಡ್ಡ ಚರ್ಚ್ ಅನ್ನು ನಾನಲ್ಲಿಯವರೆಗೂ ನೋಡಿರಲೇ ಇಲ್ಲ. ಅದು ತುಂಬಾ ಹಳೆಯ ಚರ್ಚ್, ಅಲ್ಲಿಗೆ ವಿದೇಶಗಳಿಂದಲೂ ಪ್ರವಾಸಿಗರು ಬಂದು ಹೋಗುತ್ತಿದ್ದರಲ್ಲದೆ, ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದ ಹಿರಿಯರು ಬರುತಿದ್ದರು. ನಿತ್ತಲ್ಲಿಂದಲೇ ಕಣ್ಣು ಹಾಯಿಸುವಾಗ ಸುಮಾರು ಹೊತ್ತು ಕಳೆದಿದ್ದು ಗೊತ್ತೇ ಆಗಲಿಲ್ಲ.

ನೀವು ಇದನ್ನು ಇಷ್ಟ ಪಡಬಹುದು:ಗೋವಾ ಬದಲಾಗಿ ಈ ಸಲ ವರಕಲ ಹೋಗಿ ಬನ್ನಿ: ಕೇರಳ ಬಚ್ಚಿಟ್ಟುಕೊಂಡಿರುವ ಸುಂದರ ಗುಟ್ಟು ವರಕಲ

ಅಲ್ಲಿ 450 ವರ್ಷಗಳ ಹಿಂದಿನ ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಅವರ ಪಾರ್ಥಿವ ಶರೀರವನ್ನು ಇಡಲಾಗಿತ್ತು. ಆ ಶರೀರವು ವರ್ಷದಿಂದ ವರ್ಷಕ್ಕೆ ಚಿಕ್ಕದಾಗುತ್ತಾ ಬರುತ್ತದೆ ಎಂದು, ನಾನು ಆರನೇ ತರಗತಿಯಲ್ಲಿರುವಾಗ ಚಂದನ ಟೀಚರ್ ಹೇಳಿದ ಮಾತೊಂದು ನೆನಪಾಯಿತು.ಅದು ಮೊದಲ ಬಾರಿಗೆ ಗೋವಾ ನೋಡಿದ್ದು,ಆಗ ಕೈಯ್ಯಲ್ಲಿ ಮೊಬೈಲ್ ಕೂಡ ಇರಲಿಲ್ಲ. ಅಲ್ಲಿ ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಅವರ ಜೀವನಧಾರಿತ ವರ್ಣ ಚಿತ್ರಗಳು ಅವರ ಧರ್ಮ ಪ್ರಚಾರವನ್ನು ಪ್ರತಿಬಿಂಬಿಸುತ್ತಿದ್ದವು.

Chruch

ಗೋವಾ ಬೀಚ್ ಗಳಿಗೆ ಮಾತ್ರ ಪ್ರಸಿದ್ಧ ಎಂಬುದು ನನ್ನ ತಲೆಯಿಂದ ದೂರ ಹೋಗಿತ್ತು. ನಿದ್ರೆಯ ಮಂಪರಿನಲ್ಲಿ ತೇಲುತ್ತಿದ್ದ ಡ್ರೈವರ್ ಅವರನ್ನು ಎಬ್ಬಿಸಿ ಬೀಚ್ ತಿರುಗಲು ಹೊರಟೆವು, ಅವರೆಷ್ಟು ಬೈದುಕೊಂಡಿರುವರೊ ಗೊತ್ತಿಲ್ಲ.

ಗೋವಾದಲ್ಲಿನ ಪ್ರಮುಖ ಚರ್ಚ್ ಗಳು

ಗೋವಾ ಬೀಚ್ ಗಳ ಜೊತೆಗೆ ಚರ್ಚ್ ಗಳಿಗೂ ಹೆಸರುವಾಸಿ. ಅಂತಹ ಕೆಲವು ಚರ್ಚ್ ಗಳ ಹೆಸರು ಇಲ್ಲಿದೆ.

ಸೈಂಟ್ ಕ್ಯಾಥೆಡ್ರಲ್ ಚರ್ಚ್, ಸೈಂಟ್ ಫ್ರಾನ್ಸಿಸ್ ಚರ್ಚ್, ಸೈಂಟ್ ಕ್ಯಾಥರಿನ್, ಬೆಸಿಲಿಕಾ ಆಫ್ ಜೀಸಸ್, ಸೈಂಟ್ ಫ್ರಾನ್ಸಿಸ್ ಕ್ಷೇವಿಯರ್, ಡ್ಯೂಕ್ ಆಫ್ ಟುಸ್ಕಾನಿ, ಹೀಗೆ ಇನ್ನೂ ಹಲವಾರು ಚರ್ಚ್‌ಗಳನ್ನು ಇಲ್ಲಿ ನೋಡಬಹುದು.

ನಾವೂ ಟೆಲಿಗ್ರಾಮ್ ನಲ್ಲೂ ಇದ್ದೀವಿ! ಕನ್ನಡ.ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada. Travel) ಜಾಲತ ಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button