ಮ್ಯಾಜಿಕ್ ತಾಣಗಳುವಿಂಗಡಿಸದ

ಕೆಲವೇ ದಿನಗಳಲ್ಲಿ ಬೆಂಗಳೂರು-ಕೊಯಮತ್ತೂರು ವಂದೇ ಭಾರತ್ ರೈಲು ಸಂಚಾರ

ಕರ್ನಾಟಕ ಶೀಘ್ರದಲ್ಲಿಯೇ 4ನೇ ವಂದೇ ಭಾರತ್ ಎಕ್ಸ್‌ಪ್ರೆಸ್‌ (Vande Bharat Express) ರೈಲಿಗೆ ಸಾಕ್ಷಿಯಾಗಲಿದೆ. ಡಿಸೆಂಬರ್ (December) ಅಂತ್ಯದ ವೇಳೆಗೆ ಬೆಂಗಳೂರು (Bengaluru) – ಕೊಯಮತ್ತೂರು (Coimbatore) ನಡುವೆ ಈ ರೈಲು ಸಂಚಾರ ನಡೆಸಲಿದೆ. ಆ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

Vande Bharat Express

ಕೆಎಸ್‍ಆರ್ ಬೆಂಗಳೂರನ್ನು (Bengaluru) ಕೊಯಮತ್ತೂರು ಜಂಕ್ಷನ್‍ನಿಂದ ಸೇಲಂ ಮೂಲಕ ಸಂಪರ್ಕಿಸುವ ರೈಲಿಗೆ ರೈಲ್ವೆ ಅಧಿಕಾರಿಗಳು ತಾತ್ಕಾಲಿಕವಾಗಿ ಅನುಮೋದನೆ ನೀಡಿದ್ದಾರೆ. ಇದು ಎಂಟು ಬೋಗಿಗಳ ರೈಲು ಸೆಟ್ ಆಗಿರುತ್ತದೆ.

Bengluru

ಪ್ರಸ್ತುತ ಅತಿ ವೇಗದ ರೈಲು ಎರಡು ನಗರಗಳ ನಡುವಿನ ಅಂತರವನ್ನು ಕ್ರಮಿಸಲು 6 ಗಂಟೆ 45 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ವಂದೇ ಭಾರತ್ ಸುಮಾರು ಐದು ಗಂಟೆ ಸಮಯ ತೆಗೆದುಕೊಳ್ಳುತ್ತೆ.

ನೀವು ಇದನ್ನು ಇಷ್ಟ ಪಡಬಹುದು:ಶೀಘ್ರದಲ್ಲೇ ಕೇರಳ – ದುಬೈ ಸಂಪರ್ಕಿಸುವ ಕ್ರೂಸ್ ಸೇವೆ ಆರಂಭ

Coimbatore

ಬೆಂಗಳೂರು-ಕೊಯಮತ್ತೂರು ವಂದೇ ಭಾರತ್ ಎಕ್ಸ್ಯಾ ಪ್ರೆಸ್ ಮಾರ್ಗದಲ್ಲಿ ಚಲಿಸುತ್ತದೆ ಎಂಬುದು ಸ್ಪಷ್ಟವಾಗಿಲ್ಲ. ಕುಪ್ಪಂ ಮತ್ತು ಸೇಲಂ ಮಾರ್ಗದ ಮಾರ್ಗವನ್ನು ದ್ವಿಗುಣಗೊಳಿಸಲಾಗಿದೆ ಮತ್ತು ವಿದ್ಯುದ್ದೀಕರಿಸಲಾಗಿದೆ.

ರೈಲ್ವೆ ಮಂಡಳಿಯು ಎರಡು ನಗರಗಳ ನಡುವೆ ಸೆಮಿ-ಹೈ-ಸ್ಪೀಡ್ ಓಡಿಸುವ ವಾಣಿಜ್ಯ ಮತ್ತು ಕಾರ್ಯಾಚರಣೆಯ ಕಾರ್ಯಸಾಧ್ಯತೆಯ ಬಗ್ಗೆ ವರದಿ ಕೇಳಿತ್ತು. ವರದಿಯನ್ನು ಇತ್ತೀಚೆಗೆ ಸಲ್ಲಿಸಲಾಗಿದ್ದು, ರೈಲ್ವೆ ಮಂಡಳಿಯ ಅಂತಿಮ ಅನುಮೋದನೆಗೆ ಕಾಯಲಾಗುತ್ತಿದೆ ಎಂದು ಹೇಳಲಾಗಿದೆ.

Express

ಅನುಮೋದನೆ ಬಳಿಕ ಸಂಪೂರ್ಣ ಮಾಹಿತಿರೈಲ್ವೆ ಮಂಡಳಿಯು ಅನುಮೋದನೆ ನೀಡಿದ ನಂತರವೇ ಪ್ರಯಾಣ ದರ, ನಿಲುಗಡೆ ಮತ್ತು ಪ್ರಯಾಣದ ಸಮಯದ ವಿವರಗಳು ಸ್ಪಷ್ಟವಾಗಿ ತಿಳಿಯಲಿವೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button