ದೂರ ತೀರ ಯಾನವಿಂಗಡಿಸದ

“ವಿಶ್ವದ ಅತಿ ಸುಂದರ ವಿಮಾನ ನಿಲ್ದಾಣ”ಗಳ ಪಟ್ಟಿಯಲ್ಲಿ ಬೆಂಗಳೂರು ವಿಮಾನ ನಿಲ್ದಾಣ T2:

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (Kempegowda International Airport Terminal 2) ಯುನೆಸ್ಕೋನ ಪ್ರಿಕ್ಸ್​ ವರ್ಸೈಲ್ಸ್ 2023 ಪ್ರಶಸ್ತಿಗೆ ಪಾತ್ರವಾಗಿದೆ. ವಿಮಾನ ನಿಲ್ದಾಣದ ಟರ್ಮಿನಲ್​ 2 (T2)ನ ಒಳಾಂಗಣ ವಿನ್ಯಾಸಕ್ಕೆ ‘ವಿಶ್ವದ ಅತಿ ಸುಂದರ ವಿಮಾನ ನಿಲ್ದಾಣ”ಎಂಬ ಬಿರುದು ಲಭಿಸಿದೆ.

ಖ್ಯಾತ ಫ್ಯಾಷನ್​ ಡಿಸೈನರ್​​ ಎಲಿ ಸಬಾ ಅವರ ಅಧ್ಯಕ್ಷತೆಯಲ್ಲಿ, ವಿಶ್ವ ನ್ಯಾಯಾಧೀಶರ ಸಮಿತಿಯು ಈ ಪ್ರಶಸ್ತಿಯನ್ನು ಅನಾವರಣಗೊಳಿಸಿತು. ಈ ಗೌರವವನ್ನು ಪಡೆದ ಭಾರತದ ಏಕೈಕ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಬೆಂಗಳೂರು ವಿಮಾನ ನಿಲ್ದಾಣವು ಪಾತ್ರವಾಯಿತು.

Bengaluru’s Kempegowda International Airport Terminal 2

ಪ್ರಿಕ್ಸ್​ ವರ್ಸೈಲ್ಸ್ ಸಂಸ್ಥೆಯು (Prix Versailles), ವಿಮಾನ ನಿಲ್ದಾಣದ ಅದ್ಭುತ ವಿನ್ಯಾಸ ಮತ್ತು ವಾಸ್ತುಶಿಲ್ಪ ಹಾಗೂ ನಿಲ್ದಾಣಗಳಲ್ಲಿನ ಸೌಲಭ್ಯ, ಸೌಕರ್ಯಗಳನ್ನು ಪ್ರಮುಖ ಮಾನದಂಡವಾಗಿರಿಸಿಕೊಂಡು ಈ ಪ್ರಶಸ್ತಿಯನ್ನು ನೀಡುತ್ತದೆ.

ಇದೇ ಮಾನದಂಡದೊಂದಿಗೆ ಪ್ರಿಕ್ಸ್​ ವರ್ಸೈಲ್ಸ್ ಸಂಸ್ಥೆಯು ಬೆಂಗಳೂರು ವಿಮಾನ ನಿಲ್ದಾಣವನ್ನು ಅತ್ಯಂತ ಸುಂದರ ವಿಮಾನ ನಿಲ್ದಾಣ (world’s most beautiful airports) ಎಂದು ಘೋಷಿಸಿದ್ದು, “ಈ ವಿಮಾನ ನಿಲ್ದಾಣದ ಅದ್ಭುತ ಒಳಾಂಗಣ ವಿನ್ಯಾಸ ಮತ್ತು ವಾಸ್ತುಶಿಲ್ಪವು ಜಾಗತಿಕ ಮಟ್ಟದಲ್ಲಿದೆ” ಎಂದು ಹೊಗಳಿದೆ.

Bengaluru’s Kempegowda International Airport Terminal 2

ಜಾಗತಿಕ ಮಟ್ಟದಲ್ಲಿ ವಿಮಾನ ನಿಲ್ದಾಣವು ಸ್ಥಾನ ಪಡೆದಿರುವುದು ಹೆಮ್ಮೆಯ ಸಂಗತಿ ಎಂದು ಬೆಂಗಳೂರು ಇಂಟರ್​ನ್ಯಾಷನಲ್​ ಏರ್​ಪೋರ್ಟ್​ ಲಿಮಿಡೆಟ್​​ನ ಎಂಡಿ ಮತ್ತು ಸಿಒಒ ಹರಿ ಮಾರರ್ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ಮಾರರ್ ಅವರು “ ಟರ್ಮಿನಲ್‌ 2 (T2) ಕಲೆ ಮತ್ತು ತಂತ್ರಜ್ಞಾನದ ವಿಶಿಷ್ಟ ಮಿಶ್ರಣವನ್ನು ಹೊಂದಿದೆ. ಇದು ರಾಜ್ಯ ಮತ್ತು ದೇಶದ ಶ್ರೀಮಂತ ಸಂಸ್ಕೃತಿಯನ್ನು ಜಾಗತಿಕ ಪ್ರಯಾಣಿಕರಿಗೆ ಪ್ರದರ್ಶಿಸುವ ಮೂಲಕ ಅವರ ಮೇಲೆ ಶಾಶ್ವತ ಪ್ರಭಾವ ಬೀರುವ ವಿಶಿಷ್ಟ ಗೇಟ್ ವೇ ಆಗಿದೆ” ಎಂದು ಬೆಂಗಳೂರು ವಿಮಾನ ನಿಲ್ದಾಣದ ಕುರಿತು ಹೆಮ್ಮೆ ವ್ಯಕ್ತ ಪಡಿಸಿದರು.

Bengaluru’s Kempegowda International Airport Terminal 2

ಟರ್ಮಿನಲ್‌ 2 ಹಿಂದೆ ಕೂಡ ಇಂಡಿಯನ್​​ ಗ್ರೀನ್​ ಬಿಲ್ಡಿಂಗ್​ ಕೌನ್ಸಿಲ್​ನ ಐಜಿಬಿಸಿ ಪ್ಲಾಟಿನಂ ಪ್ರಶಸ್ತಿಯನ್ನೂ ಪಡೆದಿತ್ತು. ಟಿ2 ವಾರ್ಷಿಕವಾಗಿ 25 ಮಿಲಿಯನ್​ ಪ್ರಯಾಣಿಕರನ್ನು ನಿಭಾಯಿಸುವ ಸಾಮರ್ಥ್ಯ ಹೊಂದಿದ್ದು, ಇದು ವಿಶ್ವದ ಅತಿ ದೊಡ್ಡ ಟರ್ಮಿನಲ್‌ಗಳಲ್ಲಿ ಒಂದೆನಿಸಿದೆ.

ಕೃತಕ ಜಲಪಾತ, ಆಕರ್ಷಕ ಗಿಡಗಳು, ಆಧುನಿಕ ತಂತ್ರಜ್ಞಾನ, ಹ್ಯಾಂಗಿಂಗ್​ ಗಾರ್ಡನ್​ ನೊಂದಿಗೆಕರ್ನಾಟಕದ ಶ್ರೀಮಂತ ಸಂಸ್ಕೃತಿಯನ್ನು ಬಿಂಬಿಸುವ ಟಿ2 ನಲ್ಲಿ ಅಂತರಾಷ್ಟ್ರೀಯ ವಿಮಾನಗಳೂ ಸಹ ಹಾರಾಟ ನಡೆಸುತ್ತವೆ.

Bengaluru’s Kempegowda International Airport Terminal 2

ಯುನೆಸ್ಕೋನ ಈ ಪುರಸ್ಕಾರದಿಂದಾಗಿ ಬೆಂಗಳೂರು ವಿಮಾನ ನಿಲ್ದಾಣವು ಜಾಗತಿಕ ಮಟ್ಟದಲ್ಲಿ ಪ್ರಮುಖ ವಿಮಾನ ನಿಲ್ದಾಣಗಳ ಪಟ್ಟಿಯಲ್ಲಿ ದೃಢವಾದ ಸ್ಥಾನ ಪಡೆದಿದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button