ಮ್ಯಾಜಿಕ್ ತಾಣಗಳುವಿಂಗಡಿಸದ

ಭಾರತದ ಅತ್ಯಂತ ಸುಂದರ ಮತ್ತು ಪುರಾತನ ರಾಮ ಮಂದಿರಗಳು

ನಾಳೆ ಜ.22 ರಂದು ಭಾರತ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ. ಅಯೋಧ್ಯೆಯಲ್ಲಿ ರಾಮ ಮಂದಿರದಲ್ಲಿ ರಾಮಲಲ್ಲಾನ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದೆ.

ಜ.23 ರಿಂದ ಸಾರ್ವಜನಿಕರಿಗೂ ರಾಮಲಲ್ಲಾನ (Ramlalla) ದರ್ಶನ ಲಭ್ಯವಾಗಲಿದೆ. ರಾಮನ ದರ್ಶನ ಪಡೆಯಲು ದೇಶ-ವಿದೇಶಗಳಿಂದ ಜನಸಾಗರವೇ ಅಯೋಧ್ಯೆಗೆ ಹರಿದು ಬರುತ್ತಿದೆ.

ಅಯೋಧ್ಯೆಯ (Ayodhya Ram Mandir) ರಾಮನ ಪ್ರಾಣ ಪ್ರತಿಷ್ಠಾಪನೆಯ ಸುದ್ದಿಯ ನಂತರ ರಾಮನ ಕುರಿತು ಜನರಲ್ಲಿ ಭಕ್ತಿ ಶ್ರದ್ಧೆ ಹೆಚ್ಚುತ್ತಿದ್ದು, ದೇಶದ ಬೇರೆ ಬೇರೆ ಕಡೆ ಇರುವ ರಾಮನ ದೇವಾಲಯಗಳಿಗೆ ಜನರು ಭೇಟಿ ನೀಡಲು ಆರಂಭಿಸಿದ್ದಾರೆ.

ಈ ಸಂದರ್ಭದಲ್ಲಿ, ಭಾರತದಲ್ಲಿರುವ ಕೆಲವು ರಾಮನ ದೇವಾಲಯಗಳ ಕುರಿತು ಮಾಹಿತಿ ಇಲ್ಲಿದೆ.

1.ರಾಜಾ ರಾಮ ದೇವಸ್ಥಾನ, ಓರ್ಚಾ, ಮಧ್ಯಪ್ರದೇಶ:

ರಾಜ ರಾಮ ದೇವಾಲಯವು (Raja Ram Temple) ಭಾರತದ ಮಧ್ಯಪ್ರದೇಶದ ಓರ್ಚಾದಲ್ಲಿರುವ (Orchha)ದೇವಾಲಯವಾಗಿದೆ. ಅರಮನೆಯನ್ನು ಮಂದಿರವಾಗಿ ನಿರ್ಮಿಸಲಾಗಿದೆ. ಇದು ತನ್ನ ಸುಂದರವಾದ ವಾಸ್ತುಶಿಲ್ಪದಿಂದಾಗಿ ಪ್ರಸಿದ್ಧವಾಗಿದೆ.

ಓರ್ಚಾದ ರಾಣಿ ಗಣೇಶ್ ಕುನ್ವಾರಿಯು ಭಗವಾನ್ ರಾಮನ ಭಕ್ತೆಯಾಗಿದ್ದಳು. ಅವಳು ಶ್ರೀರಾಮನನ್ನು ಇಲ್ಲಿ ನೆಲೆಗೊಳ್ಳುವಂತೆ ಮಾಡಿದಳು ಎಂಬ ದಂತಕಥೆ ಇದೆ.

ಅಸಾಧಾರಣವಾದ ಬಿಳಿ ಮತ್ತು ಮರಳಿನ ಬಣ್ಣದ ಕಲ್ಲುಗಳನ್ನು ಒಳಗೊಂಡ ರಾಜರಾಮ ದೇವಾಲಯವು ದೇಶದ ಅತ್ಯಂತ ಅಪ್ರತಿಮ ರಚನೆಗಳಲ್ಲಿ ಒಂದಾಗಿದೆ. ಈ ದೇವಾಲಯದಲ್ಲಿ ರಾಮನು ರಾಜಾ ರಾಮನಾಗಿ ಕಂಗೊಳಿಸುತ್ತಿದ್ದಾನೆ.

2. ರಾಮಚಂದ್ರ ಸ್ವಾಮಿ ದೇವಾಲಯ, ಭದ್ರಾಚಲಂ, ತೆಲಂಗಾಣ:

ಪವಿತ್ರ ಗೋದಾವರಿ ತಟದಲ್ಲಿ ನೆಲೆಗೊಂಡಿರುವ ಭದ್ರಚಲಂ (Bhadrachalam Ram Temple) ರಾಮಚಂದ್ರ ದೇವಾಲಯವು ಪುರಾತನ ಐತಿಹಾಸಿಕ ದೇವಾಲಯವಾಗಿದೆ. ರಾಮ, ಸೀತೆ ಮತ್ತು ಲಕ್ಷ್ಮಣರ ವನವಾಸದ ಅವಧಿಯಲ್ಲಿ ಈ ಸ್ಥಳ ಅವರ ನೆಲೆಯಾಗಿತ್ತು ಎಂದು ನಂಬಲಾಗಿದೆ. ಹಾಗಾಗಿ ಈ ದೇವಾಲಯವನ್ನು ‘ದಕ್ಷಿಣ ಅಯೋಧ್ಯೆ” ಎಂದೂ ಕರೆಯಲಾಗುತ್ತದೆ.

ಈ ದೇವಾಲಯವು ಭಗವಾನ್ ರಾಮನ ಮಹಾಕಾವ್ಯ “ರಾಮಾಯಣ”ವನ್ನು ನಿರೂಪಿಸುವ ಸೊಗಸಾದ ಕೆತ್ತನೆಗಳೊಂದಿಗೆ ಸುಂದರವಾದ ರಚನೆಯನ್ನು ಹೊಂದಿದೆ.

3. ರಾಮಸ್ವಾಮಿ ದೇವಸ್ಥಾನ, ಕುಂಭಕೋಣಂ, ತಮಿಳುನಾಡು:

ಭಾರತದಲ್ಲಿ ರಾಮನಿಗೆ ಅರ್ಪಿತವಾದ ಪ್ರಮುಖ ದೇವಾಲಯಗಳಲ್ಲಿ ತಮಿಳುನಾಡಿನ ಕುಂಭಕೋಣಂನಲ್ಲಿರುವ (Kumbakonam Ram Temple) ರಾಮ ದೇವಾಲಯವೂ ಒಂದು. ಈ ದೇವಾಲಯವು ಸುಂದರವಾದ ವಾಸ್ತುಶಿಲ್ಪವನ್ನು ಹೊಂದಿದೆ. ಇದನ್ನು 16 ನೇ ಶತಮಾನದಲ್ಲಿ ತಂಜಾವೂರು ರಾಜರು ನಿರ್ಮಿಸಿದ್ದಾರೆ.

ದೇವಾಲಯವು ಗೋಡೆಗಳಿಂದ ಸುತ್ತುವರಿದ 3-ಶ್ರೇಣಿಯ ಗೋಪುರವನ್ನು ಹೊಂದಿದೆ. ಗೋಪುರದ ಬಳಿಯ ಸಭಾಂಗಣದಲ್ಲಿ ಅರವತ್ನಾಲ್ಕು ಕಂಬಗಳು ಮಹಾಕಾವ್ಯ ರಾಮಾಯಣದ ವಿವಿಧ ಪ್ರಸಂಗಗಳನ್ನು ಚಿತ್ರಿಸುವ ಸೊಗಸಾದ ಕೆತ್ತನೆಗಳನ್ನು ಹೊಂದಿದೆ.

4. ಕೋದಂಡರಾಮ ದೇವಸ್ಥಾನ, ಹಿರೇಮಗಳೂರು, ಕರ್ನಾಟಕ

ಕರ್ನಾಟಕದ ತುಂಗಭದ್ರೆಯ ತಟದಲ್ಲಿ ನೆಲೆಗೊಂಡಿರುವ ಕೋದಂಡರಾಮ ದೇವಾಲಯ (Kodandaram Temple) ಚಿಕ್ಕಮಗಳೂರಿನ ಹಿರೇಮಗಳೂರಿನಲ್ಲಿದೆ (Hiremagalur). ದೇವಾಲಯದ ಮುಖ್ಯ ವಿಗ್ರಹಗಳನ್ನು ಒಂದೇ ಕಲ್ಲಿನಿಂದ ಕೆತ್ತಲಾಗಿದೆ. ಕಲೆ ಮತ್ತು ಕರಕುಶಲತೆಯನ್ನು ಸಂಯೋಜಿಸುವ ವಿಶಿಷ್ಟ ಲಕ್ಷಣಕ್ಕೆ ಸಾಕ್ಷಿ ಈ ದೇವಾಲಯ.

ರಾಮನು ವಾಲಿಯನ್ನು ಕೊಂದ ಸ್ಥಳದಲ್ಲಿಯೇ ಈ ದೇವಾಲಯವಿದೆ. ಈ ದೇವಾಲಯದ ಒಳಗೆ ಇರುವ ರಾಮ,ಸೀತಾದೇವಿ,ಲಕ್ಷ್ಣಣ ಮೂರು ವಿಗ್ರಹಗಳನ್ನು ಸುಗ್ರೀವನಿಂದಲೇ ಕೆತ್ತಲಾಗಿದೆ ಎಂದು ಇಲ್ಲಿನ ಸ್ಥಳೀಯರು ನಂಬುತ್ತಾರೆ.

5. ಕಲಾರಾಮ್ ದೇವಸ್ಥಾನ, ನಾಶಿಕ್, ಮಹಾರಾಷ್ಟ್ರ:

ರಾಮನ ಪ್ರತಿಮೆಯನ್ನು ಒಳಗೊಂಡಂತೆ ಎಲ್ಲೆಡೆ ಕಪ್ಪು ವರ್ಣದ ಶಿಲೆಯಿಂದ ದೇವಾಲಯವನ್ನು ನಿರ್ಮಿಸಲಾಗಿದೆ. ಸಾಂಕೇತಿಕವಾಗಿ, ಈ ದೇವಾಲಯವು ರಾಮನ 14 ವರ್ಷಗಳ ವನವಾಸದ ನೆನಪಿಗಾಗಿ 14 ಮೆಟ್ಟಿಲುಗಳನ್ನು ಹೊಂದಿದೆ.

84 ಲಕ್ಷ ಜೀವನ ಚಕ್ರಗಳನ್ನು ಪ್ರಚೋದಿಸುವ 84 ಕಂಬಗಳನ್ನು ಹೊಂದಿದೆ. ನಾಸಿಕ್‌ನ (nashik) ಹೃದಯಭಾಗದಲ್ಲಿರುವ ಈ ಕಲಾರಾಮ್ ದೇವಾಲಯವು (Kalaram Temple) ಮಹಾರಾಷ್ಟ್ರದ ವಾಸ್ತುಶಿಲ್ಪದ ಕೌಶಲ್ಯಕ್ಕೆ ಸಾಕ್ಷಿಯಾಗಿದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button