ವಿಂಗಡಿಸದಸಂಸ್ಕೃತಿ, ಪರಂಪರೆ

ರಾಮ ಮಂದಿರ ನಿರ್ಮಾಣಕ್ಕೆ ಕನ್ನಡಿಗರ ಕೊಡುಗೆಗಳು ; ಭಾಗ -1

ಅಯೋಧ್ಯೆಯಲ್ಲಿ ಶೀಘ್ರದಲ್ಲೇ ರಾಮ ಮಂದಿರ (Ram Mandir)ಲೋಕಾರ್ಪಣೆಯಾಗಲಿದೆ. ಈ ರಾಮ ಮಂದಿರ ನಿರ್ಮಾಣದಲ್ಲಿ ಕರ್ನಾಟಕದ ಹಲವರು ಸೇವೆ ಸಲ್ಲಿಸಿದ್ದಾರೆ. ಇಡೀ ಮಂದಿರ ನಿರ್ಮಾಣ ಉಸ್ತುವಾರಿ ವಹಿಸಿದ್ದು ಕನ್ನಡಿಗ. ಹಾಗೂ ಬಾಲ ರಾಮನ ವಿಗ್ರಹದ ಕಲ್ಲು ಸಿಕ್ಕಿದ್ದು ಮೈಸೂರು ಬಳಿಯ ಹಳ್ಳಿಯಲ್ಲಿ. ಜತೆಗೆ, ಆಯ್ಕೆಯಾಗಿರುವ ರಾಮ ಲಲ್ಲಾ ಕೆತ್ತನೆ ಮಾಡಿದ್ದು ಸಹ ಮೈಸೂರಿನ ಅರುಣ್‌ ಯೋಗಿರಾಜ್‌. ಹೀಗೆ ರಾಮ ಮಂದಿರಕ್ಕೂ ಕರುನಾಡಿಗೂ ಇರುವ ನಂಟೇನು ಗೊತ್ತಾ..? ಈ ಕುರಿತಾದ ಮಾಹಿತಿ ಇಲ್ಲಿದೆ .

ರಾಮ ಮಂದಿರದ ಉಸ್ತುವಾರಿ

ರಾಮ ಮಂದಿರ ನಿರ್ಮಾಣ ಆಗಬೇಕು ಎನ್ನುವುದು ಕೋಟ್ಯಾಂತರ ಹಿಂದೂ ಭಕ್ತರ ಕನಸಾಗಿತ್ತು. ಆ ಕಾಯುವಿಕೆ ಕೊನೆಗೊಳ್ಳುವ ಕ್ಷಣ ಬಂದಾಗ ಅದರ ಸಂಪೂರ್ಣ ಸಾರಥ್ಯ ವಹಿಸಿದ್ದು ಕನ್ನಡಿಗ ಗೋಪಾಲ್ ನಾಗರಕಟ್ಟೆ. ರಾಮ ಮಂದಿರ ನಿರ್ಮಾಣದ ಹಂತದಿಂದ ಹಿಡಿದು ಮುಕ್ತಾಯದ ಹಂತದ ತನಕ ಹಲವು ಜವಾಬ್ದಾರಿಗಳನ್ನು ಗೋಪಾಲ್ ನಾಗರಕಟ್ಟೆ (Gopal Nagara katte)ವಹಿಸಿಕೊಂಡಿದ್ದಾರೆ.

Ayodhye

ಬಾಲರಾಮನ ವಿಗ್ರಹ(Balarama)

ಅಯೋಧ್ಯೆಯಲ್ಲಿ ವಿರಾಜಮಾನ ಆಗಲಿರುವ ರಾಮ ಅದ್ಯಾವ ರೀತಿಯಲ್ಲಿ ಕಂಗೊಳಿಸುತ್ತಾ ನೆ ಅನ್ನೋದು ಹಲವರ ಕುತೂಹಲಕ್ಕೆ ಕಾರಣವಾಗಿತ್ತು. ಆ ಕುತೂಹಲ ತಣಿಸಿದವರು ಕನ್ನಡಿಗ ಅರುಣ್ ಯೋಗಿರಾಜ್ (Arun yogiraj)

Arun Yogiraj

ಅಯೋಧ್ಯೆಯಲ್ಲಿ ರಾಮನ ಮೂರ್ತಿ ನಿರ್ಮಾಣ ಮಾಡುವುದಕ್ಕೆ ಮೂವರು ಶಿಲ್ಪಿಗಳಿಗೆ ಅನುಮತಿಯನ್ನು ನೀಡಲಾಗಿತ್ತು. ಅವುಗಳ ಪೈಕಿ ಒಬ್ಬರು ಕೆತ್ತಿದ ಮೂರ್ತಿಯನ್ನು ಅಂತಿಮವಾಗಿ ಆಯ್ಕೆ ಮಾಡಲಾಗಿದ್ದು ಕನ್ನಡಿಗ ಮೈಸೂರಿನ ಅರುಣ್ ಕೆತ್ತಿದ ಮೂರ್ತಿಯನ್ನು ಅಂತಿಮವಾಗಿ ಆಯ್ಕೆ ಮಾಡಲಾಗಿದೆ. ಅರುಣ್‌ ಕೆತ್ತಿದ ಮುದ್ದ ಮೊಗದ ಮಂದಸ್ಮಿತ ರಾಮನ(Rama) ವಿಗ್ರಹ ಸದ್ಯ ದೇಶದ ಆಕರ್ಷಣೆಯ ಕೇಂದ್ರವಾಗಿದೆ.

ನೀವು ಇದನ್ನೂ ಇಷ್ಟ ಪಡಬಹುದು:ಅಯೋಧ್ಯೆಗೆ ಆಸ್ಥಾ ಸ್ಪೆಷಲ್ ರೈಲು ; ನಮ್ಮ ರಾಜ್ಯದಲ್ಲೂ ಸಂಚರಿಸಲಿದೆ

ಅನ್ನದಾಸೋಹದಲ್ಲಿ ಕನ್ನಡಿಗರು

ಭಾಗಿ1992 ರಲ್ಲಿ ಕರಸೇವೆಗೆ (karaseva)ಅಂತ ಅಯೋಧ್ಯೆಗೆ ಬಂದ ರಾಮಭಕ್ತರಿಗೆ ಸಮಯಕ್ಕೆ ಸರಿಯಾಗಿ ಊಟ ಮತ್ತು ತಿಂಡಿ ಒದಗಿಸುವ ದೃಷ್ಟಿಯಿಂದ ಟ್ರಸ್ಟ್ ನವರು ದಾಸೋಹ ಆರಂಭಿಸಿದರಂತೆ. ರಾಮಮಂದಿರ ಪ್ರಾಣ ಪ್ರತಿಷ್ಠೆ ಹಿನ್ನೆಲೆಯಲ್ಲಿ ಅಯೋಧ್ಯೆಗೆ ಅಗಮಿಸಿರುವ ರಾಮಭಕ್ತ ಸ್ವಯಂಸೇವಕರು ಮತ್ತು ಭದ್ರತಾ ಸಿಬ್ಬಂದಿಯವರಿಗೆ ಕಳೆದ 15 ದಿನಗಳಿಂದ ಊಟ-ತಿಂಡಿ ಮತ್ತು ಚಹಾಪಾನೀಯದ ವ್ಯವಸ್ಥೆ ಮಾಡಲಾಗುತ್ತಿದೆ. ಅವರು ಮಾತ್ರವಲ್ಲದೆ, ಧಾರ್ಮಿಕ ನಗರಿಗೆ ಭೇಟಿ ನೀಡುತ್ತಿರುವ ಭಕ್ತ ಜನರಿಗೂ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ಕರಸೇವಕಪುರಂ ಅನ್ನದಾಸೋಹ ಕನ್ನಡಿಗ ಆನ ಲಿಂಗಪ್ಪ ಉಸ್ತುವಾರಿಯಲ್ಲಿ ನಡೆಯುತ್ತಿದೆ.

ಪ್ರಧಾನ ಅರ್ಚಕರಲ್ಲಿ ಓರ್ವ ಕನ್ನಡಿಗ

ರಾಮಲಲ್ಲಾನ ವಿಗ್ರಹ ಪ್ರತಿಷ್ಠೆಯ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲು ನೇಮಕವಾಗಿರುವ 101 ಮಂದಿ ಪ್ರಧಾನ ಪುರೋಹಿತರಲ್ಲಿ ಕರ್ನಾಟಕದವರು ಕೂಡ ಇದ್ದಾರೆ ಅನ್ನೋದು ವಿಶೇಷ. ತುಳುನಾಡಿನ ಡಾ.ಕೆ.ಗಣಪತಿ ಭಟ್ (Ganapati Bhat)ಆ ಅರ್ಚಕರ ಗುಂಪಿನಲ್ಲಿದ್ದಾರೆ. ಇವರ ನಾಯಕತ್ವದಲ್ಲಿ 40 ಮಂದಿ ಆರ್ಚಕರಿರಲಿದ್ದಾರೆ. ಕಾಶಿಯ ವಿದ್ವಾಂಸರಾದ ಗಣೇಶ್ವರ ಶಾಸ್ತ್ರಿ(Ganeshwar Shastri)ಮತ್ತು ಲಕ್ಷ್ಮಿಕಾಂತ್ ದೀಕ್ಷಿತ್ ಅವರು ಡಾ. ಕೆ. ಗಣಪತಿ ಭಟ್ ಅವರ ಹೆಸರನ್ನು ಸೂಚಿಸಿದ್ದಾರೆ. ಡಾ.ಕೆ ಗಣಪತಿ ಅವರು ಕರ್ನಾಟಕ ರಾಜ್ಯದಿಂದ ಆಯ್ಕೆಯಾದ ಏಕೈಕ ಪುರೋಹಿತರಾಗಿದ್ದಾರೆ.

ಮಂಡಲ ಪೂಜೆಗೆ ರಾಯಚೂರಿನ ವೈದಿಕರ ತಂಡ ಆಯ್ಕೆ

ಅಯೋಧ್ಯೆ ರಾಮ ಜನ್ಮಭೂಮಿಯಲ್ಲಿ ಜನವರಿ 22ರಂದು ಪ್ರಭು ಶ್ರೀರಾಮಚಂದ್ರನ ದೇವಾಲಯ ಲೋಕಾರ್ಪಣೆ ಹಿನ್ನಲೆಯಲ್ಲಿ, ಧಾರ್ಮಿಕ ವಿಧಿವಿಧಾನಗಳನ್ನು ನಡೆಸಿಕೊಡಲು ರಾಯಚೂರಿನ (Raichuru)ವೈದಿಕ ಪಂಡಿತರು ಆಯ್ಕೆಯಾಗಿದ್ದಾರೆ.ಜನವರಿ 23ರಿಂದ 48 ದಿನ ಅಯೋಧ್ಯೆಯಲ್ಲಿ ಬ್ರಹ್ಮ ಕಳಶೋತ್ಸವ ಕಾರ್ಯಕ್ರಮ ನಡೆಯಲಿದ್ದು, ಇದೇ ವೇಳೆ 48 ದಿನಗಳ ಕಾಲ ರಾಮಮಂದಿರದಲ್ಲಿ ವಿಶೇಷ ಮಂಡಲಪೂಜೆ ಜರುಗಲಿದೆ. ಇದನ್ನು ನೆರವೇರಿಸಿಕೊಡಲು ದೇಶದ ನಾನಾ ಕಡೆಗಳಿಂದ ಸುಮಾರು 1500ಕ್ಕೂ ಹೆಚ್ಚು ವೈದಿಕ ಪಂಡಿತರನ್ನು ಆಯ್ಕೆ ಮಾಡಲಾಗಿದೆ.

ಇವರಲ್ಲಿ ರಾಯಚೂರು ಜಿಲ್ಲೆಯ ವೈದಿಕ ವಿದ್ವಾಂಸರೂ ಇದ್ದಾರೆ.ಲಿಂಗಸ್ಗೂರಿನ ಗುರುಗುಂಟಾ ನಿವಾಸಿ ಆದಯ್ಯಸ್ವಾಮಿ ಹಾಗೂ ಸಿಂಧನೂರಿನ ಹಸಮಕಲ್‌ನ ಶ್ರೀಧರಸ್ವಾಮಿ‌ ಆಯ್ಕೆಯಾಗಿದ್ದಾರೆ. ವೈದಿಕ ಸೇವೆಗಾಗಿ ರಾಮಮಂದಿರ ಟ್ರಸ್ಟ್‌ನಿಂದ ಆನ್‌ಲೈನ್ ಮೂಲಕ ಅರ್ಜಿ ಕರೆಯಲಾಗಿತ್ತು.

ಋಗ್ವೇದ, ವೇದಾಧ್ಯಯನ, ಜ್ಯೋತಿಷ್ಯ ಶಾಸ್ತ್ರದಲ್ಲಿ ಪಾಂಡಿತ್ಯ ಪಡೆದವರಿಗಾಗಿ ಕರೆಯಲಾಗಿದ್ದ ಅರ್ಜಿಗೆ ಸ್ಪಂದಿಸಿದವರಲ್ಲಿ ಅಭ್ಯರ್ಥಿಗಳ ದಾಖಲೆಗಳ ಪರಿಶೀಲನೆ ನಡೆಸಿ ಮೌಖಿಕ ಸಂದರ್ಶನ ಮಾಡಿ ಸಂದರ್ಶನದಲ್ಲಿ ಜಿಲ್ಲೆಯ ವೈದಿಕ ಪಂಡಿತರನ್ನು ಆರಿಸಲಾಗಿದೆ.

(ಮುಂದುವರೆಯುವುದು)

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button