Moreಕಾಡಿನ ಕತೆಗಳುವಿಂಗಡಿಸದ

ಅಮೆಜಾನ್ ಕಾಡಿನಲ್ಲಿ ಪತ್ತೆಯಾಯ್ತು ದೈತ್ಯ ಅನಕೊಂಡ

ಅಮೆಜಾನ್ ಮಳೆ ಕಾಡು(Amazon Rainforest) ದೇವಸೃಷ್ಟಿ ಪ್ರಕೃತಿಯ ಅದ್ಭುತ ಲೋಕ. ಮಾನವನ ತರ್ಕಕ್ಕೆ ನಿಲುಕದ ಅನನ್ಯ ಜೀವ ಸಂಕುಲಗಳ ನೆಲೆ.

ಇಂತಹ ಅಮೆಜಾನ್ ಕಾಡಿನಲ್ಲಿ ಅನಕೊಂಡ ಹಾವಿನ(Anaconda Snake)ಜಾತಿಗೆ ಸೇರಿದ ವಿಶ್ವದ ಅತೀ ದೈತ್ಯ ಗಾತ್ರದ ಹಾವು ಪತ್ತೆಯಾಗಿದೆ. ಅತೀ ವಿರಳವಾಗಿರುವ ಈ ಹಾವು ಇದೇ ಮೊದಲ ಬಾರಿಗೆ ಪತ್ತೆಯಾಗಿದೆ

Amazon Rainforest

ಅನಕೊಂಡ ಹಾವಿನ ಪ್ರಬೇಧಕ್ಕೆ ಸೇರಿದ ಈ ಹಾವುಗಳು ಇದೇ ಮೊದಲ ಬಾರಿಗೆ ಪತ್ತೆಯಾಗಿದೆ.

ಆದರೆ ಗಾತ್ರದಲ್ಲಿ ಅನಕೊಂಡ ಹಾವಿನ ದುಪ್ಪಟ್ಟ ಗಾತ್ರ ಹೊಂದಿದ್ದು, ಇದು ವಿಶ್ವದಲ್ಲೇ ಇದುವರೆಗೆ ಪತ್ತೆಯಾಗಿರುವ ದೈತ್ಯ ಗಾತ್ರದ ಹಾವು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.


ನ್ಯಾಷನಲ್ ಜಿಯೋಗ್ರಾಫಿಕ್(National geographic) ಕಾರ್ಯಕ್ರಮದಲ್ಲಿ ಅರಣ್ಯ ಜೀವಿಗಳ ಕುರಿತು ವರದಿ ಮಾಡುವ ಪ್ರೊ.ಫ್ರೀಂಕ್ ವಾಂಕ್(Freeck vonk) 500 ಕೀ.ಗ್ರಾಂ ತೂಕದ ಬೃಹತ್ ಹೆಬ್ಬಾವನ್ನು ಪತ್ತೆ ಹಚ್ಚಿದ್ದು, ಇದರ ತಲೆಯು ಮನುಷ್ಯನ ತಲೆಯಷ್ಟೇ ದೊಡ್ಡದಾಗಿದೆ‌.

ಈ ಹೆಬ್ಬಾವಿನ ತಳಿ ವಿಶ್ವದ ಅತೀ ದೊಡ್ಡ ಮತ್ತು ಭಾರವಾಗಿರುವ ಹಾವುಗಳೆಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ನೀವು ಇದನ್ನು ಇಷ್ಟ ಪಡಬಹುದು:ಕಾರ್ಕಳದ ಕೆರೆಯಲ್ಲಿ ಪತ್ತೆಯಾಗಿದೆ “ಮೈಮೇಲೆ ಅಣಬೆ ಇರುವ ಕಪ್ಪೆ”; ಜಗತ್ತಿನಲ್ಲಿ ಇದೇ ಮೊದಲು

ದಕ್ಷಿಣ ಹಸಿರು ಅನಕೊಂಡ ಹಾವಿನ ಮೇಲೆ ಅನಕೊಂಡ ಚಲನಚಿತ್ರ ಕೂಡ ಭಾರಿ ಸಂಚಲನ ಸೃಷ್ಟಿಸಿದೆ. ಇದೀಗ ಪತ್ತೆಯಾಗಿರುವುದು ಗ್ರೀನ್ ಅನಕೊಂಡ.

ನ್ಯಾಷನಲ್ ಜಿಯೋಗ್ರಫಿ ವಾಹಿನಿ ಅಮೆಜಾನ್ ಕಾಡಿನಲ್ಲಿ ನಡೆಸುತ್ತಿದ್ದ ವಿಡಿಯೋ ಚಿತ್ರೀಕರಣದ ವೇಳೆ ದೈತ್ಯ ಹಾವು ಪತ್ತೆಯಾಗಿದೆ. ಶೂಟಿಂಗ್ ವೇಳೆ ಅಮೆಜಾನ್ ಕಾರಿನ ನದಿಯ ತಳಬಾಗದಲ್ಲಿ ಅತೀ ಉದ್ದನೆಯ ಈ ಅನಕೊಂಡ ಗ್ರೀನ್ ಹಾವು(Green Snake)ಪತ್ತೆಯಾಗಿದೆ.

ಹಿಂಬಾಗದಿಂದ ಹಾವಿನ ತಲೆವರೆಗಿನ ವಿಡಿಯೋ ಲಭ್ಯವಿದೆ. ಅತೀ ದೊಡ್ಡ ಗಾತ್ರದ ಈ ಹಾವು ನೀರಿನ ಪ್ರದೇಶದಲ್ಲೇ ಹಚ್ಚಾಗಿ ವಾಸವಿರುತ್ತದೆ.

ನೀರಿನಲ್ಲಿ ಚಲಿಸುವುದು, ಆಹಾರ ಹುಡುಕುವುದು ಸುಲಭವಾಗಿದೆ. ಭೂ ಪ್ರದೇಶದಲ್ಲಿ ಹಾವಿನ ಮೇಲೆ ಇತರ ದೈತ್ಯ ಪ್ರಾಣಿಗಳಿಂದ ದಾಳಿಯಾಗುವ ಸಾಧ್ಯತೆ ಹೆಚ್ಚು.

Anaconda Sanke


ಅತೀ ಉದ್ದನೆಯ ಹಾವು ಇದಾಗಿದ್ದು, 500 ಕೆಜಿಗೂ ಹೆಚ್ಚಿನ ತೂಕವಿದೆ ಎಂದು ಅಂದಾಜಿಸಲಾಗಿದೆ. 26ಅಡಿಗೂ ಹೆಚ್ಚ ಉದ್ದ ಹೊಂದಿದೆ. ಇಷ್ಟು ದೊಡ್ಡ ಗಾತ್ರದ ಹಾವು ಇದುವರೆಗೂ ಪತ್ತೆಯಾಗಿಲ್ಲ.

ಒಂದೇ ಹಾವು ಪತ್ತೆಯಾಗಿದೆ. ಹೀಗಾಗಿ ಇದು ಅತೀ ವಿರಳ ಹಾವಿನ ಪ್ರಬೇಧ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇದಕ್ಕೂ ಮೊದಲು ಪತ್ತೆಯಾಗಿರುವ ದಕ್ಷಿಣ ಗ್ರೀನ್ ಅನಕೊಂಡ ಹಾವುಗಳು ಅಮೆಜಾನ್ ಮಳೆ ಕಾಡಿನ ಬ್ರೆಜಿಲ್ ಬಾಗ, ಪೆರು, ಬೊಲಿವಿಯಾ, ಫ್ರೆಂಚ್ ಗೈನಾಗಳಲ್ಲಿ ಕಾಣಿಸಿಕೊಂಡಿದೆ.

ಇನ್ನು ಉತ್ತರ ಭಾಗಗಳಾದ ಈಕ್ವೆಡಾರ್, ಕೊಲಂಬಿಯಾ ವೆನಿಜುವೆಲಾ, ಗಯಾನ ಭಾಗದಲ್ಲೂ ಕಾಣಿಸಿಕೊಂಡಿದೆ..

 Green Snake

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button