Moreವಿಂಗಡಿಸದ

ಕಾರ್ಕಳದ ಕೆರೆಯಲ್ಲಿ ಪತ್ತೆಯಾಗಿದೆ “ಮೈಮೇಲೆ ಅಣಬೆ ಇರುವ ಕಪ್ಪೆ”; ಜಗತ್ತಿನಲ್ಲಿ ಇದೇ ಮೊದಲು

ಈ ಜಗತ್ತೇ ಒಂದು ಅಚ್ಚರಿ. ಪ್ರತೀ ದಿನ ಒಂದಲ್ಲ ಒಂದು ಚಿತ್ರ ವಿಚಿತ್ರ ಘಟನೆಗಳಿಗೆ ಸಾಕ್ಷಿಯಾಗುತ್ತಲೇ ಇರುತ್ತದೆ. ನಮ್ಮ ವಿಜ್ಞಾನಿಗಳೂ (Scientists) ಸಹ ಈ ಜಗತ್ತಿನಲ್ಲಿರುವ ಇಂತಹ ಅಚ್ಚರಿಯ ವಿಷಯಗಳನ್ನು ಹುಡುಕಿ ತೆಗೆದು ಜನರನ್ನು ಬೆರಗಾಗಿಸುತ್ತಲೇ ಇರುತ್ತಾರೆ.

ಇದೀಗ ಅಂತಹದ್ದೇ ಸಂಶೋಧನೆ ನಮ್ಮ ಕರ್ನಾಟಕದ ಕರಾವಳಿ ಭಾಗದಲ್ಲಿ ಕಂಡು ಬಂದಿದೆ. ಸಾಮಾನ್ಯವಾಗಿ ನೀವು ಅಣಬೆಗಳನ್ನು ಕೊಳೆತ ವಸ್ತುಗಳ ಅಥವಾ ಮರ ಗಿಡಗಳ ಮೇಲೆ ಬೆಳೆದಿರುವುದನ್ನು ನೋಡಿರುತ್ತೀರ. ಆದರೆ ಪ್ರಾಣಿಗಳ ಮೈಮೇಲೆ ಬೆಳದಿರುವುದನ್ನು ಕಂಡಿರಲು ಸಾಧ್ಯವೇ ಇಲ್ಲ.

ಆದರೆ ಅಣಬೆ (mushroom) ಪ್ರಾಣಿಗಳ ಮೇಲೂ ಬೆಳೆಯಬಹುದು ಎಂಬುದಕ್ಕೆ ಕರ್ನಾಟಕದ ಉಡುಪಿ (Udupi) ಜಿಲ್ಲೆ ಕಾರ್ಕಳ (Karkala) ಸಮೀಪದ ಕೆರೆಯೊಂದರಲ್ಲಿ ಕಂಡು ಬಂದ ಕಪ್ಪೆಯೇ (Frog) ಸಾಕ್ಷಿ. ಇದನ್ನು ಕಂಡ ಸಂಶೋಧಕರು, ವಿಜ್ಞಾನಿಗಳು ಮೂಕವಿಸ್ಮಿತರಾಗಿದ್ದಾರೆ.

ವಿಶ್ವ ವನ್ಯಜೀವಿ ನಿಧಿಯ (World Wildlife Fund) ಸಂಶೋಧಕರು ಸ್ಥಳೀಯ ಯುವಕರ ತಂಡದ ಜೊತೆ ಪಕ್ಷಿಗಳನ್ನು ಅರಸಿ ಹೋಗುತ್ತಿದ್ದಾಗ ಈ ಹೊಸ ಕಪ್ಪೆ ಪ್ರಭೇದ ಕಂಡು ಬಂದಿದೆ.

ಜೀವ ಇರುವ ಉಭಯಚರ ಪ್ರಾಣಿಗಳ ಮೇಲೆ ಅಣಬೆ ಬೆಳೆದಿರುವ ವಿಚಿತ್ರ ಘಟನೆ ಎಲ್ಲೂ ದಾಖಲಾಗಿಲ್ಲ ಎಂದು “ರೆಪ್ಟೈಲ್ಸ್‌ ಆ್ಯಂಡ್‌ ಆ್ಯಂಫಿಬಿಯನ್ಸ್‌’ (Reptiles and Amphibians) ಎಂಬ ವಿಜ್ಞಾನ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಈ ಪತ್ರಿಕೆಯಲ್ಲಿ ಪ್ರಕಟವಾದ ಚಿತ್ರದಲ್ಲಿ ಕಪ್ಪೆಯ ಒಂದು ಭಾಗದಲ್ಲಿ ಸಣ್ಣ ಅಣಬೆ ಬೆಳೆದಿರುವುದು ಕಂಡು ಬಂದಿದೆ. ಮಳೆಗಾಲದಲ್ಲಿ ಮಾತ್ರ ಇಂತಹ 40 ಕಪ್ಪೆಗಳು ಕಂಡು ಬಂದಿದ್ದವು.

ನೋಡಲು ಸಾಮಾನ್ಯ ಕಪ್ಪೆಯಂತಿದ್ದರೂ ಸೂಕ್ಷ್ಮವಾಗಿ ಗಮನಿಸಿದಾಗ ಅಣಬೆ ಬೆಳೆದಿರುವುದು ಕಂಡು ಬಂದಿದೆ ಎಂದು ಹೇಳಲಾಗಿದೆ.

ಕಪ್ಪೆಗಳ ಮೇಲೆ ಕಂಡುಬಂದ ಅಣಬೆಯನ್ನು ಬೊನೆಟ್‌ ಮಶ್ರೂಮ್‌ (Bonnet mushroom) ಎಂದು ಗುರುತಿಸಲಾಗಿದೆ. ಇದು ಸಾಮಾನ್ಯವಾಗಿ ಕೊಳೆತ ಮರಗಳ ಮೇಲೆ ಕಂಡುಬರುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಇದು ಜಗತ್ತಿನ ಜೀವ ಪರಿಸರ ನಡುವಿನ ವೈವಿಧ್ಯತೆಗೆ ಸಾಕ್ಷಿಯಾಗಿದೆ. ಪಶ್ಚಿಮ ಘಟ್ಟಪ್ರದೇಶದ (western Ghat) ಸ್ಥಳೀಯ ಜೀವವೈವಿಧ್ಯ ಹಾಗೆಯೇ ಉಳಿಯಲು ಇಂತಹ ಜೀವಿಗಳ ರಕ್ಷಣೆ ಆಗುವುದು ಅಗತ್ಯ ಎಂದು ವರದಿ ತಿಳಿಸಿದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button