ವಿಂಗಡಿಸದಸಂಸ್ಕೃತಿ, ಪರಂಪರೆ

ಉತ್ತರ ಪ್ರದೇಶದಲ್ಲಿ ನಿರ್ಮಾಣವಾಗಲಿದೆ ದೇಶದ ಮೊದಲ ಕಲ್ಕಿ ಧಾಮ

ಉತ್ತರ ಪ್ರದೇಶದ(Uttar Pradesh)ನೆಲದಲ್ಲಿ ಭಕ್ತಿ, ಭಾವನೆ ಮತ್ತು ಆಧ್ಯಾತ್ಮಿಕತೆಯ ಮತ್ತೊಂದು ಹೊಳೆ ಹರಿಯಲು ಸಿದ್ಧವಾಗಿದೆ. ಸಂತರ ಭಕ್ತಿ ಮತ್ತು ಜನರ ಉತ್ಸಾಹದಿಂದ ಮತ್ತೊಂದು ಪವಿತ್ರ ಸ್ಥಳದ ಅಡಿಪಾಯ ಹಾಕಲಾಗುತ್ತಿದೆ.

ಭವ್ಯವಾದ ಕಲ್ಕಿ ಧಾಮದ ಶಿಲಾನ್ಯಾಸವನ್ನು ಪ್ರಧಾನಿ ನರೇಂದ್ರ ಮೋದಿ(PM Narendra Modi) ನೆರವೇರಿಸಿದ್ದಾರೆ. ಈ ಮೂಲಕ ಕಲ್ಕಿಧಾಮವು ಮತ್ತೊಂದು ಶ್ರೇಷ್ಠ ನಂಬಿಕೆಯ ಕೇಂದ್ರವಾಗಿ ಹೊರಹೊಮ್ಮಲಿದೆ ಅಂತಲೇ ಹೇಳಲಾಗುತ್ತಿದೆ.

Kalki Dham

ದೇಶದ ಮೊದಲ ಕಲ್ಕಿ ದೇವಾಲಯವನ್ನು ಉತ್ತರ ಪ್ರದೇಶದ ಸಂಭಾಲ್‌ ಜಿಲ್ಲೆಯಲ್ಲಿ (Sambhal District) ಕಲ್ಕಿ ದೇವಾಲಯ ನಿರ್ಮಾಣ ಮಾಡುತ್ತಿದ್ದು, ಐದು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸುವ ಗುರಿ ಇದೆ.

ಕಲ್ಕಿ ಧಾಮವನ್ನು (Kalki Dham) ವಿಶ್ವದ ಅತ್ಯಂತ ವಿಶಿಷ್ಟವಾದ ದೇವಾಲಯ ಎಂದು ಕರೆಯಲಾಗುತ್ತಿದೆ. ಏಕೆಂದರೆ ಕಲ್ಕಿ ಧಾಮವು ಅವತಾರ ತಾಳುವುದಕ್ಕಿಂತ ಮೊದಲು ಸ್ಥಾಪಿಸಲಾಗುತ್ತಿರುವ ಮೊದಲ ಧಾಮವಾಗಿದೆ.

Uttar Pradesh

ಸಾಮಾನ್ಯವಾಗಿ ದೇವಾಲಯದಲ್ಲಿ ಒಂದು ಗರ್ಭಗುಡಿ ಇರುತ್ತದೆ. ಆದರೆ, ಕಲ್ಕಿ ಧಾಮ ದೇವಾಲಯದಲ್ಲಿ 10 ಗರ್ಭಗುಡಿಗಳಿರಲಿವೆ.

ಈ ವಿಷ್ಣುವಿನ (Vishnu)10 ಅವತಾರಗಳ 10 ವಿವಿಧ ಗರ್ಭಗುಡಿಗಳನ್ನು ಸ್ಥಾಪಿಸಲಾಗುತ್ತದೆ. ಇಡೀ ದೇವಾಲಯದ ಸಂಕೀರ್ಣವನ್ನು ಬಿಳಿ ಮತ್ತು ಕೇಸರಿ ಬಣ್ಣಗಳಲ್ಲಿ ಅಲಂಕರಿಸಲಾಗಿದ್ದು, ಕಲ್ಕಿ ದೇವಸ್ಥಾನದ ಮಾದರಿಯೂ ಬಹಿರಂಗವಾಗಿದೆ.

ಅಯೋಧ್ಯೆಯ(Ayodhya) ಸೋಮನಾಥ ದೇವಾಲಯ(Somanatha Temple)ಮತ್ತು ರಾಮಮಂದಿರವನ್ನು(Ram Mandira) ನಿರ್ಮಿಸಿದ ಅದೇ ಗುಲಾಬಿ ಬಣ್ಣದ ಕಲ್ಲಿನಿಂದ ಕಲ್ಕಿ ಧಾಮವನ್ನು ನಿರ್ಮಿಸಲಾಗುತ್ತಿದೆ.

ಈ ದೇವಾಲಯದ ಗೋಪುರವು 108 ಅಡಿ ಎತ್ತರವಿರುತ್ತದೆ. ದೇವಸ್ಥಾನದ ಅಂಗಣವನ್ನು 11 ಅಡಿ ಎತ್ತರದಲ್ಲಿ ನಿರ್ಮಿಸಲಾಗುವುದು. ಇಲ್ಲಿ 68 ಯಾತ್ರಾ ಸ್ಥಳಗಳನ್ನು ಸ್ಥಾಪಿಸಲಾಗುವುದು ಎಂದು ಹೇಳಲಾಗುತ್ತದೆ.

Narendra Modi

ಸುಮಾರು 5 ಎಕರೆ ಪ್ರದೇಶದಲ್ಲಿ ಕಲ್ಕಿ ದೇವಸ್ಥಾನ ನಿರ್ಮಾಣವಾಗಲಿದ್ದು, ನಿರ್ಮಾಣಕ್ಕೆ 5 ವರ್ಷ ಬೇಕಾಗಬಹುದು.

ಕಲ್ಕಿ ಪೀಠವು (Kalki Peeth) ಹಳೆಯ ಸ್ಥಳದಲ್ಲಿಯೇ ಇರಲಿದೆ ಎಂಬುದು ಗಮನಾರ್ಹ. ಕಲ್ಕಿಧಾಮವನ್ನು ನಿರ್ಮಿಸಿದಾಗ, ಹೊಸ ದೇವರ ವಿಗ್ರಹವಿರುತ್ತದೆ. ಅಂದರೆ ಆ ಮೂರ್ತಿಗೆ ಪ್ರಾಣಪ್ರತಿಷ್ಠೆ ನಡೆಯಲಿದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button