ವಿಂಗಡಿಸದಸಂಸ್ಕೃತಿ, ಪರಂಪರೆಸ್ಮರಣೀಯ ಜಾಗ

ನಾಳೆ ಅರುಣಾಚಲ ಪ್ರದೇಶ ಸಂಸ್ಥಾಪನಾ ದಿನ; ಈ ದಿನದ ಕುರಿತು ಆಸಕ್ತಿದಾಯಕ ಸಂಗತಿಗಳು

ಭಾರತದ ಈಶಾನ್ಯ ರಾಜ್ಯಗಳಲ್ಲಿ ಒಂದಾದ ಅರುಣಾಚಲ ಪ್ರದೇಶ ಅತ್ಯಂತ ಸುಂದರ ರಾಜ್ಯ. ಹಿಮದಿಂದ ಆವೃತವಾದ ಶಿಖರಗಳು, ಪ್ರಾಚೀನ ಕಣಿವೆಗಳು, ಜಲಪಾತಗಳು, ನದಿಗಳು ಹೀಗೆ ನೈಸರ್ಗಿಕ ಭೂದೃಶ್ಯಗಳಿಂದಾಗಿ ಅರುಣಾಚಲ ಪ್ರದೇಶ ಹೆಸರುವಾಸಿಯಾಗಿದೆ.

ಅದರೊಂದಿಗೆ ಅರುಣಾಚಲ ಪ್ರದೇಶ (Arunachal Pradesh) ರೋಮಾಂಚಕ ಇತಿಹಾಸ ಮತ್ತು ಸಂಸ್ಕೃತಿಯನ್ನೂ ಹೊಂದಿರುವ ರಾಜ್ಯ.

ಹಲವಾರು ಶತಮಾನಗಳಿಂದ ಅಲ್ಲಿ ವಾಸಿಸುತ್ತಿರುವ ಬುಡಕಟ್ಟು ಸಮುದಾಯ ತನ್ನ ಸಂಪ್ರದಾಯಗಳನ್ನು ಇನ್ನೂ ಉಳಿಸಿಕೊಂಡು ಬಂದಿವೆ.

1987 ರ ಫೆಬ್ರವರಿ 20 ರಂದು ಅರುಣಾಚಲ ಪ್ರದೇಶ ಸ್ವತಂತ್ರ ರಾಜ್ಯವಾಗಿ ಹೊರಹೊಮ್ಮಿತು. ಈ ದಿನವನ್ನು ರಾಜ್ಯದಲ್ಲಿ ಅರುಣಾಚಲ ಪ್ರದೇಶ ಸಂಸ್ಥಾಪನಾ ದಿನವಾಗಿ (Arunachal Pradesh Foundation Day) ಆಚರಿಸಲಾಗುತ್ತದೆ.

ಈ ಅರುಣಾಚಲ ಪ್ರದೇಶ ಸಂಸ್ಥಾಪನಾ ದಿನದ ಕೆಲವು ಆಸಕ್ತಿದಾಯಕ ವಿಷಯಗಳು ಇಲ್ಲಿವೆ:

ಬ್ರಿಟಿಷರ ವಸಾಹತು ಸಮಯದಲ್ಲಿ, ಅರುಣಾಚಲ ಪ್ರದೇಶದ ಭಾಗಗಳು ಅಸ್ಸಾಂನ ಭಾಗವಾಗಿದ್ದವು. ಮತ್ತು ಈ ಭಾಗಗಳನ್ನು NEFA (North East Frontier Agency) ಎಂದು ಕರೆಯಲಾಗುತ್ತಿತ್ತು.

ಭಾರತವು ಸ್ವತಂತ್ರ ದೇಶವಾದ ನಂತರವೂ ಈ ಪ್ರದೇಶವು ಶಾಂತಿಯುತವಾದ ಪ್ರದೇಶವಾಗಿದ್ದವು. ಆದರೆ 1962 ರಲ್ಲಿ ನಡೆದ ಭಾರತ-ಚೀನಾ ಯುದ್ಧದ (India-China War) ನಂತರ ಚೀನಾ ಈಶಾನ್ಯ (North East) ಭಾಗದ ಹಲವು ಭಾಗಗಳನ್ನು ವಶಪಡಿಸಿಕೊಂಡಿತು.

ಯುದ್ಧದ ನಂತರ, 1972 ರಲ್ಲಿ NEFA ಪ್ರದೇಶವನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಲಾಯಿತು. ಮುಂದೆ ಈ ಪ್ರದೇಶವನ್ನು 1987ರ ಫೆ.20 ರಂದು “ಅರುಣಾಚಲ ಪ್ರದೇಶ” ಎಂದು ಮರುನಾಮಕರಣ ಮಾಡಲಾಯಿತು.

ಅರುಣಾಚಲ ಪ್ರದೇಶ ಎಂಬ ಹೆಸರನ್ನು ಆಗಿನ ಸಂಶೋಧನಾ ನಿರ್ದೇಶಕರಾದ ಶ್ರೀ ಬಿಭಾಬಸು ದಾಸ್ ಶಾಸ್ತ್ರಿ ಮತ್ತು ಅರುಣಾಚಲ ಪ್ರದೇಶದ ಆಗಿನ ಮುಖ್ಯ ಆಯುಕ್ತರಾದ ಕೆಎಎ ರಾಜಾ ಅವರು ಸೂಚಿಸಿದರು.

ಅರುಣಾಚಲ ಪ್ರದೇಶದ 1240 ಮೀಟರ್ ಎತ್ತರದಲ್ಲಿರುವ ರಾಜ್ಯದ ಡಾಂಗ್ ಕಣಿವೆಯು (Dong valley) ಪ್ರತೀ ದಿನ ದೇಶದ ಮೊದಲ ಸೂರ್ಯೋದಯಕ್ಕೆ ಸಾಕ್ಷಿಯಾಗುವುದರಿಂದ “ಸೂರ್ಯ ಉದಯಿಸುವ ನಾಡು” ಎಂಬರ್ಥದಲ್ಲಿ ಅರುಣಾಚಲ ಪ್ರದೇಶ ಎಂದು ಹೆಸರಿಡಲಾಗಿದೆ.

ಅಂದಿನಿಂದ ಪ್ರತೀ ವರ್ಷ ಫೆ.20 (February 20) ಅನ್ನು “ಅರುಣಾಚಲ ಪ್ರದೇಶ ದಿನ ಅಥವಾ ಅರುಣಾಚಲ ಪ್ರದೇಶ ಸಂಸ್ಥಾಪನಾ ದಿನ” ಎಂದು ಆಚರಿಸಲಾಗುತ್ತದೆ.

ಅರುಣಾಚಲ ಪ್ರದೇಶವು ಶ್ರೀಮಂತ ಸಾಂಸ್ಕೃತಿಕ ಪರಂಪರೆಗೆ ನೆಲೆಯಾಗಿದೆ. ರಾಜ್ಯವು 26 ಮುಖ್ಯ ಬುಡಕಟ್ಟುಗಳು (Tribe Community) ಮತ್ತು ಹಲವಾರು ಇತರ ಉಪ ಬುಡಕಟ್ಟುಗಳಿಗೆ ನೆಲೆಯಾಗಿದೆ. ಪ್ರತೀ ಸಮುದಾಯವೂ ಅದರ ವಿಶಿಷ್ಟ ಸಂಪ್ರದಾಯವನ್ನು ಹೊಂದಿವೆ.

ಈ ಸಮುದಾಯದ ಪ್ರತಿನಿಧಿಗಳು ಸಂಸ್ಥಾಪನಾ ದಿನಾಚರಣೆಯ ಸಂದರ್ಭದಲ್ಲಿ ನೃತ್ಯ, ಹಾಡುಗಳು, ಪ್ರದರ್ಶನಗಳು ಮತ್ತು ಆಹಾರ ವೈವಿಧ್ಯತೆಯ ಮೂಲಕ ತಮ್ಮ ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸುತ್ತಾರೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button