Moreವಿಂಗಡಿಸದಸಂಸ್ಕೃತಿ, ಪರಂಪರೆ

ರಾಮ ಮಂದಿರದ ಬೆನ್ನಲ್ಲೇ ಉದ್ಘಾಟನೆಗೆ ಸಜ್ಜಾಗುತ್ತಿದೆ ಭಾರತ ಈ 5 ಪ್ರಮುಖ ದೇಗುಲಗಳು:

ಅಯೋಧ್ಯೆಯಲ್ಲಿ ಬಾಲಕರಾಮ ವಿರಾಜಮಾನ ಆಗಿದ್ದಾನೆ. 1800 ಕೋಟಿ ರೂಪಾಯಿ ವೆಚ್ಚದಲ್ಲಿ ಅದ್ಭುತವಾಗಿ ರೂಪುಗೊಂಡಿರುವ ರಾಮ ಮಂದಿರ ಕಳೆದ ತಿಂಗಳ 22 ರಂದು ಉದ್ಘಾಟನೆ ಆಗಿದೆ.

ರಾಮನ ಆಶೀರ್ವಾದ ಪಡೆಯಲು ಲಕ್ಷಾಂತರ ಭಕ್ತರು ದೇವನಗರಿಗೆ ಧಾವಿಸಿ ಬರುತ್ತಿದ್ದಾರೆ. ಅಯೋಧ್ಯೆಯಲ್ಲಿ ರಾಮಮಂದಿರಕ್ಕೆ ಲಕ್ಷಾಂತರ ಭಕ್ತರ ಆಗಮನ ಮುಂದುವರಿದಿದೆ, ಬೆನ್ನಲ್ಲೇ ಹಿಂದೂ ಭಕ್ತರಿಗೆ ಮತ್ತೊಂದು ಶುಭ ಸುದ್ದಿ ಸಿಕ್ಕಿದೆ.

ಭಾರತದಲ್ಲಿ ನಿರ್ಮಾಣ ಹಂತದಲ್ಲಿರುವ ಕೆಲವು ಸುಂದರವಾದ ದೇವಾಲಯಗಳು ಶೀಘ್ರದಲ್ಲೇ ತೆರೆಯುವ ನಿರೀಕ್ಷೆಯಿದೆ. ಈ ಕುರಿತಾದ ಬರಹ ಇಲ್ಲಿದೆ ನೋಡಿ.

1.ಹನುಮಾನ್ ರ ಅತಿ ಎತ್ತರದ ಪ್ರತಿಮೆ(Hanuman Ji’s Tallest Statue):

ಹಂಪಿ(Hampi )ಮೂಲದ ಹನುಮಾನ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್(Hanuman Janmabhoomi Teertha Trust)ಮುಂದಿನ ಆರು ವರ್ಷಗಳಲ್ಲಿ ಕಿಷ್ಕಿಂಧಾದಲ್ಲಿ ಅಂದಾಜು 1,200 ಕೋಟಿ ರೂಪಾಯಿ ವೆಚ್ಚದಲ್ಲಿ 215 ಮೀಟರ್ ಹನುಮಾನ್ ಪ್ರತಿಮೆಯನ್ನು ನಿರ್ಮಿಸಲು ಯೋಜಿಸುತ್ತಿದೆ.

ಕಿಷ್ಕಿಂಧಾ(Kishkindha) ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ(World Heritage site)ಹಂಪಿಯ ಹೊರವಲಯದಲ್ಲಿದೆ ಎನ್ನುವುದು ಇತಿಹಾಸಗಳ ನಂಬಿಕೆ.

2.ಇಸ್ಕಾನ್ ಚಂದ್ರೋದಯ ಮಂದಿರ(Iskcon Chandraodaya Mandir):

ವೃಂದಾವನ(Vrindavan)ಚಂದ್ರೋದಯ ಮಂದಿರವು ಮಥುರಾದ(Mathura)ವೃಂದಾವನದಲ್ಲಿ ನಿರ್ಮಾಣವಾಗುತ್ತಿರುವ ದೇವಾಲಯವಾಗಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಇದು ವಿಶ್ವದ ಅತಿ ಎತ್ತರದ ಧಾರ್ಮಿಕ ಸ್ಮಾರಕವಾಗಲಿದೆ.

ಸುಮಾರು 700 ಕೋಟಿ ರೂಪಾಯಿಗಳಲ್ಲಿ ದೇವಾಲಯ ನಿರ್ಮಾಣ ಆಗುತ್ತಿದ್ದು, ಇದು ವಿಶ್ವದ ಅತ್ಯಂತ ದುಬಾರಿ ದೇವಾಲಯಗಳಲ್ಲಿ ಒಂದಾಗುವ ಸಾಧ್ಯತೆಯಿದೆ.

2 ವರ್ಷಗಳಲ್ಲಿ ಈ ದೇವಾಲಯ ನಿರ್ಮಾಣ ಕಾರ್ಯ ಪೂರ್ಣವಾಗಲಿದ್ದು ,2026 ರ ವೇಳೆಗೆ ತೆರೆಯುವ ನಿರೀಕ್ಷೆಯಿದೆ.

3.ಶ್ರೀ ಚೈತನ್ಯ ಚಂದ್ರೋದಯ ಮಂದಿರ(Sri Chaitanya Chandrodaya Mandir)

ಸರಿಸುಮಾರು 100 ಮಿಲಿಯನ್ ಅಂದರೆ 830 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಮಾಯಾಪುರ(Mayapura )ಚಂದ್ರೋದಯ ಮಂದಿರವು ಪಶ್ಚಿಮ ಬಂಗಾಳದ(West Bengal) ಮಾಯಾಪುರ ಪಟ್ಟಣದಲ್ಲಿರುವ ಪಂಚ-ತತ್ತ್ವ ದೇವತೆಗಳಾದ ರಾಧಾ ಮಾಧವ(Radha Madhava), ನೃಸಿಂಹದೇವ(Nrisimha deva)ಮತ್ತು ಚೈತನ್ಯ ಮಹಾಪ್ರಭುಗಳಿಗೆ ಸಮರ್ಪಿತವಾಗಿರುವ ಹಿಂದೂ ದೇವಾಲಯ.

ಈ ಆಲಯದ ನಿರ್ಮಾಣ ಪೂರ್ಣಗೊಂಡ ನಂತ್ರ ಇದು ವಿಶ್ವದ ಅತಿದೊಡ್ಡ ಧಾರ್ಮಿಕ ಸ್ಮಾರಕವಾಗಲಿದೆ. ಹಿಂದೂ ಸಮುದಾಯದ ವೈಷ್ಣವರಿಗೆ ಇದು ಮಹತ್ವದ ದೇವಾಲಯವಾಗಿದೆ.

ಈ ದೇವಾಲಯವು ಮಾಯಾಪುರದ ಪ್ರಮುಖ ಪ್ರವಾಸಿ ಕೇಂದ್ರವಾಗಿದೆ.

4.ವಿರಾಟ್ ರಾಮಾಯಣ ಮಂದಿರ(Virat Ramayana Mandir)

500 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ವಿರಾಟ್ ರಾಮಾಯಣ ಮಂದಿರದ ನಿರ್ಮಾಣ ಕಾರ್ಯವು ಜೂನ್(June) 2023 ರಲ್ಲಿ ಪ್ರಾರಂಭವಾಯಿತು.

ಇದು ಬಿಹಾರದ(Bihar )ಪೂರ್ವ ಚಂಪಾರಣ್(Champaran) ಜಿಲ್ಲೆಯಲ್ಲಿರುವ “ವಿಶ್ವದ ಅತಿದೊಡ್ಡ ರಾಮಾಯಣ ದೇವಾಲಯ” (World’s Largest Ramayana Temple)ಆಗುವ ನಿರೀಕ್ಷೆಯಿದೆ.

5.ಜಗನ್ನಾಥ ಧಾಮ ಸಂಸ್ಕೃತಿ ಕೇಂದ್ರ(Jagannath Dham Sanskriti Kendra)

ಪಶ್ಚಿಮ ಬಂಗಾಳದ ಪುರ್ಬಾ(Purba)ಮೇದಿನಿಪುರ್(Medinipur)ಜಿಲ್ಲೆಯ ಬೀಚ್ ಟೌನ್ ದಿಘಾದಲ್ಲಿ(Digha) ಜಗನ್ನಾಥ ದೇವಾಲಯದ ನಿರ್ಮಾಣ ಕಾರ್ಯವು ನಡೆಯುತ್ತಿದೆ.

ಈ ವರ್ಷವೇ ಇದು ಪೂರ್ಣ ಆಗಲಿದೆ. ಮುಂದಿನ ತಿಂಗಳು ಅಂದರೆ ಮಾರ್ಚ್(March )2024 ರೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಸುಮಾರು ₹ 143 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ದೇವಾಲಯವು ಮುಂದಿನ ಏಪ್ರಿಲ್‌ನಲ್ಲಿ ಭಕ್ತರಿಗೆ ತೆರೆಯುವ ಸಾಧ್ಯತೆಯಿದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button