ದೂರ ತೀರ ಯಾನವಿಂಗಡಿಸದ

ರಾಜ್ಯದ ಕರಾವಳಿಯಲ್ಲಿ ವಾಟರ್ ಮೆಟ್ರೋ. ಏನಿದು ಯೋಜನೆ..?

ಸಿಎಂ ಸಿದ್ದರಾಮಯ್ಯ(CM Siddaramaiah )ಅವರು ಬಜೆಟ್ (Budget ) ನಲ್ಲಿ ಪ್ರವಾಸೋದ್ಯಮ ಇಲಾಖೆಗೆ ಸಂಬಂಧಿಸಿದಂತೆ ಹಲವು ಮಹತ್ವದ ಯೋಜನೆಗಳನ್ನು ಘೋಷಣೆ ಮಾಡಿರುವುದು ನಿಮಗೆಲ್ಲ ತಿಳಿದಿರುವ ವಿಚಾರ. ಅದರಲ್ಲಿ ಹೆಚ್ಚು ಗಮನ ಸೆಳೆಯುತ್ತಿರುವುದು ಕರಾವಳಿ ಪ್ರದೇಶದ ನದಿ ನೀರಿನಲ್ಲಿ ವಾಟರ್ ಮೆಟ್ರೊ(Water Metro)ಓಡಲಿದೆ ಎನ್ನುವ ಯೋಜನೆ.. ಈ ಕುರಿತಾದ ಬರಹ ಇಲ್ಲಿದೆ.

ಬಜೆಟ್ ಮಂಡಿಸಿದ ಸಿದ್ದರಾಮಯ್ಯ ಅವರು ಮಂಗಳೂರಿನ ಗುರುಪುರ(Gurupura )ಹಾಗೂ ನೇತ್ರಾವತಿ(Netravati )ನದಿಗಳಲ್ಲಿ ಜಲಮೆಟ್ರೋ ಸೇವೆಗಳನ್ನು ಪರಿಚಯಿಸಲು ಕಾರ್ಯಸಾಧ್ಯತಾ ವರದಿಯನ್ನು ತಯಾರಿಸಲಾಗುವುದು ಎಂದು ಹೇಳಿದರು. ನದಿ ಸಮುದ್ರಕ್ಕೆ ಸೇರುವ ಅಳಿವೆ ಪ್ರದೇಶದಲ್ಲಿರುವ ಜನರ ಸಂಚಾರಕ್ಕೆ ಇದನ್ನು ಬಳಸಬಹುದು ಎಂದು ಹೇಳಲಾಗಿದೆ.

ನದಿ ಹಾಗೂ ತೀರ ಪ್ರದೇಶಗಳ ಅಭಿವೃದ್ಧಿಗೆ ಸಾರ್ವಜನಿಕ ಸಾರಿಗೆ ತುಂಬಾ ಮುಖ್ಯವಾಗಿದ್ದು, . ಅದಕ್ಕೆ ಕರ್ನಾಟಕದ (Karnataka) ಕರಾವಳಿ ನಗರಿ (Coastal) ಮಂಗಳೂರಿನಲ್ಲಿ (Mangaluru) ಈ ಸೇವೆಯನ್ನು ಶುರು ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ.

ಕೇರಳ (Kerala) ರಾಜ್ಯದ ಕೊಚ್ಚಿ(Kocchi )ಮಾದರಿಯಂತೆ ಮಂಗಳೂರಿನಲ್ಲಿಯೂ ರೂ.1,600 ಕೋಟಿ ವೆಚ್ಚದ ‘ವಾಟರ್ ಮೆಟ್ರೊ’ ಯೋಜನೆ ಜಾರಿಗೊಳಿಸಲು ನಿರ್ಧರಿಸಲಾಗಿದೆ.ಮೊದಲ ಹಂತದಲ್ಲಿ ಬೆಂಗ್ರೆಯಿಂದ(Bengre) ಮಂಗಳೂರು, ಉಳ್ಳಾಲದಿಂದ (Ulalla)ಮಂಗಳೂರಿಗೆ ವಾಟರ್ ಮೆಟ್ರೋ (Water Metro) ಸೇವೆ ಪ್ರಾರಂಭಿಸುವ ಬಗ್ಗೆ ಚಿಂತನೆ ನಡೆದಿದೆಯಂತೆ.

Water Metro

ಕಾರ್ಯಸಾಧ್ಯತಾ ವರದಿ (Feasibility Report) ಆಧಾರ ಮೇಲೆ ಸಾರ್ವಜನಿಕ ಖಾಸಗಿ ಸಹಭಾಗಿತ್ವ (ಪಿಪಿಪಿ) ಅಥವಾ ಬೇರೆ ಯಾವ ರೀತಿಯಲ್ಲಿ ಯೋಜನೆಯನ್ನು ಅನುಷ್ಠಾನಗೊಳಿಸಬೇಕೆಂದು ಜಲಸಾರಿಗೆ ಮಂಡಳಿ ನಿರ್ಧರಿಸಲಿದೆ .

ವಾಟರ್‌ ಮೆಟ್ರೋ ಎಂಬುದು ಬ್ಯಾಟರಿ ಚಾಲಿತ ಎಲೆಕ್ಟ್ರಿಕ್‌ ಬೋಟ್(Electric Boat). ನಗರ ಸಾರಿಗೆ ವ್ಯವಸ್ಥೆಯ ಮಾದರಿಯಲ್ಲೇ ಇದು ಕೂಡ ಕಾರ್ಯಾಚರಿಸುತ್ತದೆ. ಮೊದಲ ವಾಟರ್ ಮೆಟ್ರೋ ಸೇವೆ ಆರಂಭಗೊಂಡಿದ್ದು ಕೇರಳದ ಕೊಚ್ಚಿನ್‌ನಲ್ಲಿ . ಈ ಹೈಬ್ರಿಡ್ ಬೋಟ್‌ಗಳು ಕೊಚ್ಚಿನ್ ಸುತ್ತಮುತ್ತ ಇರುವ 10 ದ್ವೀಪಗಳಿಗೆ ಸಂಪರ್ಕ ಕಲ್ಪಿಸುತ್ತವೆ.ಬ್ಯಾಟರಿ ಮತ್ತು ಡೀಸೆಲ್ ಚಾಲಿತ ಮೋಟಾರ್ ಇದರಲ್ಲಿದೆ.

Kerala

ಅಗತ್ಯಕ್ಕೆ ಅನುಗುಣವಾಗಿ ಇದು ಬೇಕಾದ ಇಂಧನ ಬಳಸಿಕೊಂಡು ಸಂಚರಿಸುತ್ತದೆ. ರಾತ್ರಿ ಪ್ರಯಾಣಕ್ಕೆ ಅನುಕೂಲವಾಗುವಂತೆ ಕ್ಯಾಪ್ಟನ್ಗೆ ಥರ್ಮಲ್ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಅಪಘಾತ ತಪ್ಪಿಸಲು ರಾಡಾರ್ ವ್ಯವಸ್ಥೆ ಕೂಡ ಇದೆ. ಕೇವಲ 15 ನಿಮಿಷದಲ್ಲೇ ಇದು ರಿಚಾರ್ಜ್ ಆಗುವ ಸಾಮರ್ಥ್ಯ ಹೊಂದಿದೆ. ಇದು ಒಂದು ಗಂಟೆಗೆ 10 ನಾಟಿಕಲ್ ಮೈಲು ವೇಗದಲ್ಲಿ ಸಂಚರಿಸುತ್ತದೆ.

ನೀವು ಇದನ್ನು ಇಷ್ಟ ಪಡಬಹುದು:

ಕಳೆದ ವರ್ಷದ ಏಪ್ರಿಲ್‌ನಲ್ಲಿ(April )ದೇಶದಲ್ಲಿ ಮೊದಲ ವಾಟರ್ ಮೆಟ್ರೋಗೆ ಕೇರಳದ ಕೊಚ್ಚಿಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಚಾಲನೆ ನೀಡಿದ್ದರು. ಕೇರಳದ ಕರಾವಳಿಯಲ್ಲಿರುವ ಈ ವಾಟರ್‌ ಮೆಟ್ರೋ ನಗರ ಸಮೂಹ ಸಾರಿಗೆ ವ್ಯವಸ್ಥೆಯ ಮಾದರಿಯಲ್ಲೇ ಕಾರ್ಯನಿರ್ವಹಿಸುತ್ತಿದೆ.

Kocchi

ಕೊಚ್ಚಿ ವಾಟರ್ ಮೆಟ್ರೊ ಬ್ಯಾಟರಿಯಿಂದ ಕಾರ್ಯನಿರ್ವಹಿಸುತ್ತಿದ್ದು, ಪರಿಸರ ಸ್ನೇಹಿ/ಕೊಚ್ಚಿಯ ಜಲ ಮೆಟ್ರೋ 747 ಕೋಟಿ ರೂಪಾಯಿ ಗಾತ್ರದ ಯೋಜನೆಯಾಗಿದೆ.ಕೊಚ್ಚಿ ನಗರ ಮೆಟ್ರೋ ರೈಲು ಹಾಗೂ ಜಲ ಮೆಟ್ರೊ ಹೊಂದಿರುವ ಭಾರತದ ಏಕೈಕ ಮೆಟ್ರೊ ನಗರ.ಕೊಚ್ಚಿನ್ ವಾಟರ್ ಮೆಟ್ರೋ ಏಷ್ಯಾದ ಬಲಿಷ್ಠ ಜಲ ಸಾರಿಗೆ ವ್ಯವಸ್ಥೆಯಾಗಿದೆ. 76 ಕಿ.ಮೀ. ಉದ್ದ ಜಲ ಮಾರ್ಗದಲ್ಲಿ 38 ಸ್ಟೇಷನ್ ಗಳನ್ನ ಹೊಂದಿದೆ.

ಕೊಚ್ಚಿನ್ನಲ್ಲಿ 80ಕ್ಕೂ ಅಧಿಕ ಮೆಟ್ರೋ ಬೋಟ್‌ಗಳಿವೆ. ಇದರಲ್ಲಿ 50 ರಿಂದ 100 ಆಸನಗಳಿವೆ. ಪ್ರಾಥಮಿಕ ಹಂತದಲ್ಲಿ ಕೊಚ್ಚಿನ್ ಶಿಪ್ ಯಾರ್ಡ್ ಆರು ಬೋಟ್ ಗಳನ್ನು ನಿರ್ಮಾಣ ಮಾಡಿದೆ.ಇವು ಎಲೆಕ್ಟ್ರಿಕ್ ಹೈಬ್ರಿಡ್ ಚಾಲಿತವಾಗಿದ್ದು, ಬೃಹತ್ ಬ್ಯಾಟರಿಯನ್ನು ಹೊಂದಿವೆ. 38 ನಿಲ್ದಾಣಗಳಲ್ಲಿ ನಿಲುಗಡೆಯಾಗುತ್ತವೆ.

Coastal karntaka

ಜಲ ಮೆಟ್ರೋ ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಬುಕ್ (Online Booking)ಮಾಡಬಹುದು. ಕೊಚ್ಚಿ ವಾಟರ್ ಮೆಟ್ರೋದಲ್ಲಿ ಪ್ರಯಾಣಿಸಲು ‘ಕೊಚ್ಚಿ 1’ ಕಾರ್ಡ್ ಕೂಡ ಲಭ್ಯವಿದೆ.ಜಲ ಮೆಟ್ರೋ ಪ್ರಯಾಣ ದರ ಕನಿಷ್ಠ 20 ರೂಪಾಯಿ, ಗರಿಷ್ಠ 40 ರೂಪಾಯಿ. ನಿತ್ಯ ಪ್ರಯಾಣಿಸುವವರು 180 ರೂಪಾಯಿಯ ದಿನದ ಹಾಗೂ 1,500 ರೂಪಾಯಿವರೆಗಿನ ಮಾಸಿಕ ಪಾಸ್ ಪಡೆಯಲು ಸಾಧ್ಯ.

ವಾಟರ್ ಮೆಟ್ರೋ ಸಣ್ಣ ಹಡಗಿನ ರೀತಿ ಇರಲಿದೆ. ನದಿ ಅಥವಾ ಸಮುದ್ರ ಮಾರ್ಗದಲ್ಲಿ ಸಂಚರಿಸಿ, ಕರಾವಳಿ ಮತ್ತು ನದಿ ಪಾತ್ರದಲ್ಲಿರುವ ಪ್ರಮುಖ ಪಟ್ಟಣಗಳಿಗೆ ಸಂಪರ್ಕವನ್ನು ಕಲ್ಪಿಸುತ್ತದೆ. ಆಕರ್ಷವಾಗಿ ವಿನ್ಯಾಸಗೊಳಿಸಲಾದ ವಾಟರ್ ಮೆಟ್ರೋ, ವೇಗವಾಗಿ ಚಲಿಸುವ ಮೂಲಕ ಪ್ರಯಾಣಿಕರನ್ನು ಬೇಗನೇ ನಿರ್ದಿಷ್ಟ ಸ್ಥಾನವನ್ನು ಸೇರಿಸುತ್ತದೆ. ಅಲ್ಲದೆ, ರಸ್ತೆಗಳಲ್ಲಿ ಉಂಟಾಗುವ ಸಂಚಾರ ದಟ್ಟಣೆ (Traffic) ಕಡಿಮೆಗೊಳಿಸಲು ಸಹಕಾರಿಯಾಗಿದೆ.

Electric Boat

ಕೇರಳದ ಕೊಚ್ಚಿಯಲ್ಲಿ ಬಿಟ್ಟರೆ ದೇಶದ ಯಾವುದೇ ಭಾಗದಲ್ಲಿ ವಾಟರ್ ಮೆಟ್ರೋ ಸೇವೆ ಇಲ್ಲವೇ ಇಲ್ಲ. ಈ ಬೋಟ್ ಗಳನ್ನು ಸಾರ್ವಜನಿಕ ಸಾರಿಗೆ ವಿಧಾನವಾಗಿ ಹೇರಳವಾಗಿ ಬಳಕೆ ಮಾಡಿದರೆ, ತೀರಾ ಪ್ರದೇಶದಲ್ಲಿ ಸಂಪರ್ಕ ಜಾಲ ಬಲಗೊಂಡು ಪ್ರವಾಸೋದ್ಯಮ ಹಾಗೂ ವ್ಯಾಪಾರ ಚಟುವಟಿಕೆಗಳು ವೃದ್ಧಿಸಲಿದ್ದು, ಸಂಚಾರ ದಟ್ಟಣೆಯೂ ಕಡಿಮೆಯಾಗಲಿದೆ. ಈ ಮೂಲಕ ಸಾಮಾನ್ಯ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button