Moreಕಾಡಿನ ಕತೆಗಳುವಿಂಗಡಿಸದ

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ ಶೀಘ್ರದಲ್ಲೇ ಚಿರತೆ ಸಫಾರಿ ಆರಂಭ:

ಬಹು ನಿರೀಕ್ಷಿತ ಚಿರತೆ ಸಫಾರಿಯನ್ನು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ ಆರಂಭಿಸಲು ಸಿದ್ಧತೆಗಳು ಆರಂಭವಾಗಿದೆ.

ಅರಣ್ಯ ಸಚಿವರಾದ ಈಶ್ವರ ಖಂಡ್ರೆ (Ishwar Khandre) ಅವರು ಇತ್ತೀಚೆಗೆ ಅರಣ್ಯ ಇಲಾಖೆ ಮತ್ತು ಮೃಗಾಲಯ ನಿರ್ವಹಣಾ ಅಧಿಕಾರಿಗಳ ಬಳಿ ಈಗ ಇರುವ ಸಿಂಹ ಮತ್ತು ಹುಲಿ ಸಫಾರಿಯ ಜೊತೆ ಚಿರತೆ ಸಫಾರಿಯನ್ನೂ ಆರಂಭಿಸುವಂತೆ ಸೂಚಿಸಿದ್ದಾರೆ.

ಎಲ್ಲವೂ ಸರಿಯಾಗಿ ನಡೆದರೆ, ಇನ್ನು ಒಂದೂವರೆ ತಿಂಗಳಲ್ಲಿ ಸಾರ್ವಜನಿಕರಿಗೆ ಚಿರತೆ ಸಫಾರಿ (Leopard Safari) ಆರಂಭವಾಗಲಿದೆ. ಆದರೆ ಮುಂದೆ ನೀತಿ ಸಂಹಿತೆ ಜಾರಿಯಾದರೆ ಮೇ ತಿಂಗಳಿನಲ್ಲಿ ಅಥವಾ ನೀತಿ ಸಂಹಿತೆ (Neeti Samhite) ಹಿಂಪಡೆದ ನಂತರ ಜಾರಿಯಾಗಬಹುದು.

ಉದ್ಯಾನವು ಚಿರತೆ ಸಫಾರಿಗಾಗಿ 20 ಹೆಕ್ಟೇರ್ ಭೂಮಿಯನ್ನು ಗೊತ್ತು ಪಡಿಸಿದೆ. ಪ್ರಾಣಿಗಳು ತಪ್ಪಿಸಿಕೊಳ್ಳದಂತೆ ತಡೆಯಲು ಎತ್ತರದ ಜಾಲರಿ ಮತ್ತು ಆಯಕಟ್ಟಿನ ಬೇಲಿಗಳನ್ನು ಒಳಗೊಂಡಿರುವ ಎಚ್ಚರಿಕೆಯ ಆವರಣವನ್ನು ವಿನ್ಯಾಸಗೊಳಿಸಲಾಗಿದೆ.

ಚಿರತೆಗಳ ಚುರುಕುತನ ಮತ್ತು ಕುತಂತ್ರದ ಸ್ವಭಾವವನ್ನು ಗುರುತಿಸಿ ಅದಕ್ಕೆ ಅನುಗುಣವಾಗಿ ತಪ್ಪಿಸಿಕೊಳ್ಳಲು ಆಗದಂತೆ ಆವರಣಗಳನ್ನು ರಚಿಸಲಾಗಿದೆ.

ಸುಮಾರು 20 ಚಿರತೆಗಳು ಇರಲು ಸಾಮರ್ಥ್ಯ ಹೊಂದಿರುವ ಈ ಸ್ಥಳದಲ್ಲಿ ಪ್ರಸ್ತುತ 12 ಚಿರತೆಗಳಿಗೆ ಸ್ಥಳಾವಕಾಶ ನೀಡಲಾಗಿದೆ.

ಸಫಾರಿಯ ಪ್ರದರ್ಶನಕ್ಕೆ ಇಡಲಾದ ಎಲ್ಲಾ ಚಿರತೆಗಳೂ ಒಂದು ವರ್ಷ ಒಳಗಿನವು. ಮೊದಲ ಎರಡು ತಿಂಗಳಲ್ಲಿ ರಕ್ಷಿಸಲ್ಪಟ್ಟ ನಂತರ ಮೃಗಾಲಯದಲ್ಲಿ ಸಾಕಲಾಗುತ್ತದೆ.

BBP ದಾಖಲೆಗಳ ಪ್ರಕಾರ, ಪ್ರಸ್ತುತ ಮೃಗಾಲಯದಲ್ಲಿ (zoo) ಒಟ್ಟು 70 ಚಿರತೆಗಳು (Leopards), 19 ಹುಲಿಗಳು (tigers) ಮತ್ತು 19 ಸಿಂಹಗಳು (Lions) ಇವೆ.

ಅರಣ್ಯ ಇಲಾಖೆ (Forest Department) ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಸಚಿವರಾದ ಖಂಡ್ರೆ ಅವರು ಹಂಗಾಮಿ ಕಾರ್ಮಿಕರು ಸೇರಿದಂತೆ ಹೆಚ್ಚುವರಿ ಸಿಬ್ಬಂದಿಯನ್ನು ಇದಕ್ಕಾಗಿ ನೇಮಿಸುವಂತೆ, ಮತ್ತು ಸಕಾಲದಲ್ಲಿ ಅವರಿಗೆ ವೇತನ ಪಾವತಿ ಮಾಡುವ ಅಗತ್ಯತೆಯನ್ನು ಒತ್ತಿ ಹೇಳಿದರು.

ವಿಶೇಷ ಕಾರ್ಯಪಡೆಗಳಲ್ಲಿನ ಸಿಬ್ಬಂದಿಗೆ ತ್ವರಿತ ಪಾವತಿಗಳನ್ನು ಖಚಿತಪಡಿಸಿಕೊಳ್ಳಬೇಕಾಗಿ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಅರಣ್ಯಕ್ಕೆ ಬೆಂಕಿ ಹಚ್ಚುವ ಕಿಡಿಗೇಡಿಗಳ ವಿರುದ್ಧ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಒತ್ತಾಯಿಸಿದರು.

ಅರಣ್ಯ ಅತಿಕ್ರಮಣ ಕುರಿತು ಜಂಟಿ ಸಮೀಕ್ಷೆಯ ವರದಿಗೆ ಸಂಬಂಧಿಸಿದಂತೆ ಮಾತನಾಡಿದ ಅವರು, ಎಲ್ಲಾ ದಾಖಲೆಗಳೂ ಸಾರ್ವಜನಿಕರಿಗೆ ಲಭ್ಯವಾಗುವಂತೆ ಪಾರದರ್ಶಕತೆ ಕಾಪಾಡಿಕೊಳ್ಳುವ ಕುರಿತು ಅಧಿಕಾರಿಗಳಿಗೆ ಸೂಚಿಸಿದರು.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button