ಆಹಾರ ವಿಹಾರವಿಂಗಡಿಸದ

ರಾಜ್ಯದಲ್ಲಿ ಬ್ಯಾನ್ ಆಗುತ್ತಾ ಗೋಬಿ ಮಂಚೂರಿ, ಬಾಂಬೆ ಮಿಠಾಯಿ.?

ಗೋಬಿ(Gobi) ಎಂದು ಬಾಯಿ ಚಪ್ಪರಿಸಿಕೊಂಡು ತಿನ್ನುವ ಮಂದಿಗೇನೂ ನಮ್ಮಲ್ಲಿ ಕಡಿಮೆಯಿಲ್ಲ. ಅದರ ಜೊತೆಗೆ ಕಲರ್ ಗಳಿಂದಲೇ ಬಾಯಿಯಲ್ಲಿ ನೀರೂರಿಸುವ ಕಾಟನ್ ಕ್ಯಾಂಡಿಗೂ(Cotton candy) ಕೂಡ ಕಡಿಮೆಯಿಲ್ಲ.

ಆದ್ರೆ ಗೋಬಿ ಪ್ರಿಯರು ಮತ್ತು ಕಾಟನ್ ಕ್ಯಾಂಡಿ ಪ್ರಿಯರಿಗೆ ಶಾಕಿಂಗ್ ಸಮಾಚಾರವೊಂದು ಹೊರ ಬಿದ್ದಿದೆ. ಇನ್ಮುಂದೆ ಗೋಬಿ ಮಂಚೂರಿ ಮತ್ತು ಕಾಟನ್ ಕ್ಯಾಂಡಿ ರಾಜ್ಯದಲ್ಲಿ ನಿಷೇಧವಾಗಬಹುದು ಎನ್ನಲಾಗುತ್ತಿದೆ.

ರಾಜ್ಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯು ಕಾಟನ್ ಕ್ಯಾಂಡಿ ಮತ್ತು ಗೋಬಿ ಮಂಚೂರಿ (Gobi Manchurian)ಮಾದರಿಯನ್ನು ಸಂಗ್ರಹಿಸಿದ್ದು, ಇವುಗಳಲ್ಲಿ ಬಳಸುವ ಕೃತಕ ಬಣ್ಣಗಳಲ್ಲಿ ಹಾನಿಕಾರಕ ರಾಸಾಯನಿಕ ಇರುವುದು ಪತ್ತೆಯಾಗಿದ್ದು, ಈ ವರದಿ ಆರೋಗ್ಯ ಇಲಾಖೆಯ ಕೈ ಸೇರಿದೆ.

ಮೂಲಗಳ ಪ್ರಕಾರ ಕಾಟನ್ ಕ್ಯಾಂಡಿಯಲ್ಲಿ ಹಾನಿಕಾರಕ ರೋಡಮೈನ್- ಬಿ(Rhodamine B) ಹಾಗೂ ಗೋಬಿ ಮಂಚೂರಿಯಲ್ಲಿ ಸನ್‌ಸೆಟ್ ಯೆಲ್ಲೊ(SunSet Yellow) ಬಣ್ಣ ಮತ್ತು ಟಾಟ್ರಾಜಿನ್ (Tatrazine)ರಾಸಾಯಾನಿಕ ಅಂಶ(Chemical) ಪತ್ತೆಯಾದ ಹಿನ್ನಲೆಯಲ್ಲಿ ಆರೋಗ್ಯ ಇಲಾಖೆಯು(Health Department) ಎರಡೂ ತಿನಿಸುಗಳನ್ನು ನಿಷೇಧಿಸಲು ಮುಂದಾಗಿದೆ.

ಆಹಾರ ಮತ್ತು ಸುರಕ್ಷತಾ ಇಲಾಖೆ(Food and Safety Department) ವರದಿ ಆಧರಿಸಿ ಆರೋಗ್ಯ ಸಚಿವರು ಸೋಮವಾರ ರಾಜ್ಯದಲ್ಲಿ ಇವುಗಳ ನಿಷೇಧದ(Ban) ಕುರಿತು ಪ್ರಕಟಣೆಯನ್ನು ಹೊರಡಿಸುವ ಸಾಧ್ಯತೆಯಿದೆ.

ಗೋವಾ(Goa) ರಾಜ್ಯದಲ್ಲಿ ಗೋಬಿ ಮಂಚೂರಿಯನ್‌ಗೆ ಬಟ್ಟೆ ಒಗೆಯುವ ಪುಡಿಯನ್ನು ಬಳಕೆ ಮಾಡಿದ ಹಿನ್ನಲೆಯಲ್ಲಿ ಗೋಬಿ ಬ್ಯಾನ್ ಮಾಡಲಾಗಿತ್ತು. ಹೀಗಾಗಿ ಕರ್ನಾಟಕದಲ್ಲಿಯೂ(Karnataka) ಗೋಬಿ ಮಂಚೂರಿ ಬ್ಯಾನ್ ಆಗುತ್ತಾ ಎನ್ನುವ ಬಗ್ಗೆ ಚರ್ಚೆ ಎದ್ದಿರುವುದು.

ಕಾಟನ್ ಕ್ಯಾಂಡಿಯನ್ನು ಕೂಡ ಈಗಾಗಲೇ ತಮಿಳುನಾಡು(Tamilnadu), ಪಾಂಡಿಚೇರಿ(Pandicherry), ಕೇರಳ(Kerala) ರಾಜ್ಯಗಳಲ್ಲಿ ನಿಷೇಧವನ್ನು ಮಾಡಲಾಗಿದೆ. ಇದಕ್ಕೆ ಬಳಸುವ ಬಣ್ಣಗಳೇ ಜನರ ಜೀವಕ್ಕೆ ಹಾನಿಕಾರಕ ಎಂದು ವರದಿಯೊಂದು ಹೇಳಿತ್ತು.

ಗೋವಾ ಹಾಗೂ ತಮಿಳುನಾಡು ಬಳಿಕ ಕರ್ನಾಟಕದಲ್ಲೂ ರಾಜ್ಯ ಸರ್ಕಾರ ಈ ರೀತಿಯ ಕ್ರಮಕ್ಕೆ ಮುಂದಾಗಿದೆ.

ಸಾರ್ವಜನಿಕರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿರುವ ಬಾಂಬೆ ಮಿಠಾಯಿ ಹಾಗೂ ಗೋಬಿ ಮಂಚೂರಿಯನ್ನು ನಿಷೇಧ ಮಾಡುವ ಕುರಿತಂತೆ ಆರೋಗ್ಯ ಸಚಿವ(Health minister) ದಿನೇಶ್ ಗುಂಡೂರಾವ್( Dinesh Gundurao) ಸೋಮವಾರ(Monday) ಸುದ್ದಿಗೋಷ್ಠಿಯನ್ನು(Pressmeet) ಕರೆದಿದ್ದಾರೆ.


ಇನ್ನು ಬಾಂಬೆ ಮಿಠಾಯಿ ಮತ್ತು ಗೋಬಿ ಮಂಚೂರಿಯಲ್ಲಿ ಪತ್ತೆಯಾಗಿರುವ ಈ ಹಾನಿಕಾರಕ ಅಂಶವು ಮೆದುಳಿಗೆ ಹಾನಿಯನ್ನು ಉಂಟು ಮಾಡುತ್ತದೆ. ಅಲ್ಲದೇ ಕ್ಯಾನ್ಸರ್‌ಗೂ(Cancer) ಕಾರಣವಾಗುತ್ತದೆ ಎಂದು ತಮಿಳುನಾಡಿನಲ್ಲಿ ವರದಿಯೊಂದು ಬಹಿರಂಗ ಪಡಿಸಿತ್ತು.

ಏನಿದು ರೋಡಮೈನ್‌-ಬಿ?

ತಮಿಳುನಾಡಿನ ಸರ್ಕಾರಿ ಲ್ಯಾಬ್‌ನಲ್ಲಿ ನಡೆಸಲಾದ ಪರೀಕ್ಷೆಯಲ್ಲಿ ಕಾಟನ್‌ ಕ್ಯಾಂಡಿಯಲ್ಲಿ ರೋಡಮೈನ್‌-ಬಿ ಅಂಶ ಇರುವುದು ದೃಢಪಟ್ಟಿತ್ತು. ಇದು ಕ್ಯಾನ್ಸರ್‌ ರೋಗಕ್ಕೆ ಕಾರಣವಾಗುವ ಹಿನ್ನೆಲೆಯಲ್ಲಿ ಬ್ಯಾನ್‌ ಮಾಡಿದೆ.

ಒಂದು ವೇಳೆ ಯಾರಾದರೂ ಮಾರಾಟ ಮಾಡಿದರೆ ಅಂತಹವರ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆಯನ್ನು ನೀಡಿದೆ. ಇನ್ನೂ ಪಾಂಡಿಚೆರಿಯಲ್ಲಿ ಇದೇ ರೀತಿಯ ದೂರುಗಳು ಕೇಳಿ ಬಂದ ಕಾರಣಕ್ಕೆ ಅಲ್ಲಿನ ಆರೋಗ್ಯ ಇಲಾಖೆ ಪರೀಕ್ಷಿಸಿ ಖಚಿತ ಪಡಿಸಿದ ನಂತರ ಪಾಂಡಿಚೆರಿ ಕೇಂದ್ರಾಡಳಿತ ಕಾಟನ್‌ ಕ್ಯಾಂಟಿಯನ್ನು ನಿಷೇಧಿಸಿದೆ.

ಅಂದಹಾಗೇ ರಾಸಾಯನಿಕ ಪದಾರ್ಥವಾಗಿರುವ ರೋಡಮೈನ್‌-ಬಿ ಅಥವಾ ಆರ್‌ಎಚ್‌ವಿಯನ್ನು ಜವಳಿ, ಕಾಗದ, ಚರ್ಮ ಮತ್ತು ಬಣ್ಣಗಳ ಉದ್ಯಮದಲ್ಲಿ ಬಳಕೆ ಮಾಡಲಾಗುತ್ತದೆ.

ಕೆಂಪು ಮತ್ತು ಗುಲಾಬಿ ಬಣ್ಣ ಪಡೆಯಲು ಈ ರಾಸಾಯನಿಕವನ್ನು ಬಳಸಲಾಗುತ್ತದೆ. ಪುಡಿ ರೂಪದಲ್ಲಿರುವ ಈ ರಾಸಾಯನಿಕವು ಹಸಿರು ಬಣ್ಣದಲ್ಲಿರುತ್ತದೆ.

ನೀರಿಗೆ ಸೇರಿಸಿದಾಗ ಇದು ಗುಲಾಬಿ ಬಣ್ಣಕ್ಕೆ ತಿರುಗುತ್ತದೆ. ಈ ರಾಸಾಯನಿಕವು ದೇಹದೊಳಗೆ ಹೋದರೆ ಮಾರಕ ರೋಗ ಬರುವುದು ಗ್ಯಾರಂಟಿ ಆಗಿದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button