Moreವಿಂಗಡಿಸದ

ಹಿಮಾಚಲ ಪ್ರದೇಶದಲ್ಲಿ ವಂದೇ ಭಾರತ್ ಬಸ್ ಸೇವೆ ಆರಂಭ; ಸೈನಿಕರು ಮತ್ತು ಪತ್ರಕರ್ತರಿಗೆ ರಿಯಾಯಿತಿ ದರ

ಹಿಮಾಚಲ ಪ್ರದೇಶ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ಉಪಾಧ್ಯಕ್ಷ ಆರ್.ಎಸ್.ಬಾಲಿ ಅವರು ಹಿಮಾಚಲ ಪ್ರದೇಶ ಪ್ರವಾಸೋದ್ಯಮ (Himachal Pradesh Tourism) ವಂದೇ ಭಾರತ್ ಬಸ್ ಸೇವೆಯನ್ನು ಶನಿವಾರ (ಮಾ.9) ರಂದು ಉದ್ಘಾಟಿಸಿದರು.

ಉದ್ಘಾಟನಾ ಬಸ್ ಪಾಲಂಪುರ್‌ನಿಂದ ಪ್ರಾರಂಭವಾಗಿ ನಗ್ರೋಟಾ ಮತ್ತು ಕಂಗ್ರಾ ಮೂಲಕ ಉನಾ ಜಿಲ್ಲೆಯ ಅಂಬ್‌ನಲ್ಲಿ (Amb) ಮುಕ್ತಾಯಗೊಳ್ಳುತ್ತದೆ.

ವಂದೇ ಭಾರತ್ ರೈಲಿನ (Vande Bharat Express Train) ಮೂಲಕ ಕಂಗ್ರಾ (Kangra) ಜಿಲ್ಲೆಗೆ ಆಗಮಿಸುವ ಪ್ರವಾಸಿಗರ ಅನುಕೂಲಕ್ಕಾಗಿ ಈ ಬಸ್ ಸೇವೆ ಆರಂಭಗೊಂಡಿದೆ.

ಪಾಲಂಪುರ್‌ನಿಂದ (Palampur) ಬೆಳಗ್ಗೆ 8:00 ಗಂಟೆಗೆ ಹೊರಡುವ ವಂದೇ ಭಾರತ್ ಬಸ್ (Vande Bharat Bus) ಪ್ರವಾಸಿಗರಿಗೆ ಆರಾಮದಾಯಕ ಪ್ರಯಾಣವನ್ನು ನೀಡುತ್ತದೆ. ಅಂಬ್‌ನಿಂದ ಕಂಗ್ರಾಕ್ಕೆ ತಲುಪಿ 11:30 ರ ವೇಳೆಗೆ ಪಾಲಂಪೂರ್‌ಗೆ ಹಿಂತಿರುಗುತ್ತದೆ.

ಪಾಲಂಪೂರ್ ನಿಂದ ಅಂಬ್ ನಿರ್ದಿಷ್ಟ ದರ ರೂ 571 ಎಂದು ಸೂಚಿಸಲಾಗಿದೆ. ಆದರೆ ಈ ದರದಲ್ಲಿ ಸೈನಿಕರು ಮತ್ತು ನೋಂದಾಯಿತ ಪತ್ರಕರ್ತರಿಗೂ ರಿಯಾಯಿತಿ ನೀಡಲಾಗುತ್ತದೆ.

ಜೊತೆಗೆ ರಾಜ್ಯದ ಎಲ್ಲಾ ಹಾಲಿ ಮತ್ತು ಮಾಜಿ ಸೈನಿಕರಿಗೆ (Soldiers) ಎಂಟು ತಿಂಗಳ ಕಾಲ ರಾಜ್ಯದ ಪ್ರವಾಸೋದ್ಯಮ ಹೋಟೆಲ್‌ಗಳಲ್ಲಿ ತಂಗಲು ಶೇಕಡಾ 50 ರಷ್ಟು ರಿಯಾಯಿತಿ (discount) ನೀಡಲಾಗುತ್ತದೆ.

ಉಳಿದ ನಾಲ್ಕು ತಿಂಗಳು ಮಾರ್ಚ್, ಏಪ್ರಿಲ್, ಮೇ ಮತ್ತು ಜೂನ್ ತಿಂಗಳು ಶೇಕಡಾ 30 ರಷ್ಟು ಆಹಾರ ದರದಲ್ಲಿ ರಿಯಾಯಿತಿಯನ್ನು ನೀಡಲಾಗುತ್ತದೆ.

ಇದರೊಂದಿಗೆ, ರಾಜ್ಯಾದ್ಯಂತ ನೋಂದಾಯಿತ ಪತ್ರಕರ್ತರಿಗೂ (Registered journalists) ಸಹ ಎಂಟು ತಿಂಗಳ ಕಾಲ ರಾಜ್ಯದ ಪ್ರವಾಸೋದ್ಯಮ ಹೋಟೆಲ್‌ಗಳಲ್ಲಿ ವಾಸ್ತವ್ಯದ ಮೇಲೆ ಶೇಕಡಾ 50 ರಷ್ಟು ರಿಯಾಯಿತಿ ದೊರೆಯಲಿದೆ.

ಉಳಿದ ನಾಲ್ಕು ತಿಂಗಳುಗಳಾದ ಮಾರ್ಚ್, ಏಪ್ರಿಲ್, ಮೇ ಮತ್ತು ಜೂನ್‌ಗೆ ಶೇಕಡಾ 30 ರಷ್ಟು ಆಹಾರ ದರದಲ್ಲಿ ರಿಯಾಯಿತಿಯನ್ನು ಪಡೆಯುತ್ತಾರೆ.

ಹಿಮಾಚಲ ಪ್ರದೇಶವು (Himachal Pradesh) ಅತ್ಯಂತ ಸುಂದರ ಪ್ರಾಕೃತಿಕ ಸೌಂದರ್ಯವನ್ನು ಹೊಂದಿರುವ ತಾಣ. ಇಲ್ಲಿಗೆ ಲಕ್ಷಾಂತರ ಪ್ರವಾಸಿಗರು ಭೇಟಿ ನೀಡುತ್ತಲೇ ಇರುತ್ತಾರೆ.

ದೇಶದಲ್ಲಿ ಹೊಸದಾಗಿ ಸೇರ್ಪಡೆಯಾದ ವಂದೇ ಭಾರತ್ ಹೆಚ್ಚು ವೇಗದ ರೈಲಾಗಿದ್ದು, ಇದನ್ನು ಅನೇಕರು ಆಯ್ಕೆ ಮಾಡುತ್ತಾರೆ.

ಈಗ ವಂದೇ ಭಾರತ ರೈಲಿನೊಂದಿಗೆ ವಂದೇ ಭಾರತ ಬಸ್ ಸೇವೆ ಆರಂಭವಾಗುತ್ತಿರುವುದು ಹಲವಾರು ಪ್ರವಾಸಿಗರು, ಸೈನಿಕರು ಮತ್ತು ನೋಂದಾಯಿತ ಪತ್ರಕರ್ತರಿಗೆ ಉಪಯೋಗವಾಗಲಿದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button