ಆಹಾರ ವಿಹಾರವಿಂಗಡಿಸದ

ಭಾರತದ ಫಿಲ್ಟರ್ ಕಾಫಿಗೆ ಜಾಗತಿಕ ಮನ್ನಣೆ:ಅತ್ಯುತ್ತಮ ಕಾಫಿಗಳ ಸಾಲಿನಲ್ಲಿ 02ನೇ ಸ್ಥಾನ

ಕಾಫಿ ರುಚಿಗೆ ಮನಸೋಲದ ಮಂದಿಯೇ ಇಲ್ಲ ಅಂದರೂ ತಪ್ಪಿಲ್ಲ. ಜಗತ್ತಿನಾದ್ಯಂತ ಬೇರೆ ಬೇರೆ ವೆರೈಟಿಯ ಕಾಫಿ ಬೀಜಗಳು ಇರುತ್ತವೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ.

ನೀವು ‘ಭಾರತದ ವಿಚಾರಕ್ಕೆ ಬಂದ್ರೆ ಟೀಗಿಂತಲೂ ಹೆಚ್ಚಾಗಿ ಕಾಫಿಯನ್ನು ಬಹುವಾಗಿ ಇಷ್ಟ ಪಡುವ ಬಹುದೊಡ್ಡ ವರ್ಗವೇ ಇದೆ ಎಂಬುದನ್ನು ನಾವು ನಿಮಗೆ ಬಿಡಿಸಿ ಹೇಳಬೇೆಕಂತಿಲ್ಲ.

Filter Coffe

ಅದರಲ್ಲಿಯೂ ಫಿಲ್ಟರ್ ಕಾಫಿಗೆ ತುಸು ಹೆಚ್ಚೇ ಅಭಿಮಾನಿಗಳ ವರ್ಗವಿದೆ. ಇದೀಗ ದಕ್ಷಿಣ ಭಾರತ ಫಿಲ್ಟರ್ ಕಾಫಿಗೆ ಜಾಗತಿಕ ಮನ್ನಣೆ ಸಿಕ್ಕಿದೆ. ವಿಶ್ವದ (Wolrd) 38 ಅತ್ಯುತ್ತಮ ಕಾಫಿಗಳ ಸಾಲಿನಲ್ಲಿ ನಮ್ಮ ದಕ್ಷಿಣ ಭಾರತದ ಹೆಮ್ಮೆಯ ಕಾಫಿಗೆ 2ನೇ ಸ್ಥಾನ ದೊರೆತಿದೆ.


ಇತ್ತೀಚೆಗಷ್ಟೇ ಫುಡ್ ಮತ್ತು ಟ್ರಾವೆಲ್ ಗೈಡ್ ಪ್ಲಾಟ್ ಫಾರ್ಮ (food and travel guide platform TasteAtlas.) 38 ಕಾಫಿಗಳ ಹೊಸ ರೇಟಿಂಗ್ಸ್ ಬಿಡುಗಡೆ ಮಾಡಿದೆ.

ವಿಶ್ವದ ಟಾಪ್ 38 ಕಾಫಿಗಳ ಹೊಸ ರೇಟಿಂಗ್ ಲಿಸ್ಟ್ನಲ್ಲಿ ಕ್ಯೂಬನ್ ಎಸ್ಪ್ರೆಸೊ( ‘Cuban Espresso) ಕಾಫಿ ನಂ.01 ಸ್ಥಾನದಲ್ಲಿದ್ದರೆ , ದಕ್ಷಿಣ ಭಾರತದ ಫಿಲ್ಟರ್ ಕಾಫಿ(South Indian Filter Coffe) ಎರಡನೇ ಸ್ಥಾನವನ್ನು ಪಡೆದುಕೊಂಡಿದೆ.

ವಿಶ್ವದ ಅಗ್ರ 10 ಕಾಫಿಗಳಲ್ಲಿ ಭಾರತದ ಫಿಲ್ಟರ್ ಕಾಫಿ 02 ನೇ ಸ್ಥಾನ ಗಳಿಸಿರುವುದನ್ನು ಭಾರತೀಯರಿಗೆ ಖುಷಿ ಸುದ್ದಿ. ಹಾಗಿದ್ರೆ ಈ ಟಾಪ್ 10 ನಲ್ಲಿರುವ ಬೆಸ್ಟ್ ರೇಟಿಂಗ್ಸ್ ಕಾಫಿಗಳು (Best Rated Coffe)ಯಾವುದು ಅನ್ನೋದನ್ನು ನೋಡುವುದಾದ್ರೆ,

ಕ್ಯೂಬನ್ ಎಸ್ಪ್ರೆಸೊ (ಕ್ಯೂಬಾ) Cuban Espresso (Cuba)

ದಕ್ಷಿಣ ಭಾರತದ ಕಾಫಿ (ಭಾರತ)South Indian Coffee (India)

ಎಸ್ಪ್ರೆಸೊ ಫ್ರೆಡ್ಡೊ (ಗ್ರೀಸ್)Espresso freddo (Greece)

ಫ್ರೆಡ್ಡೋ ಕ್ಯಾಪುಸಿನೊ (ಗ್ರೀಸ್)Freddo cappuccino (Greece)

ಟರ್ಕಿಶ್ ಕಾಫಿ (ಟರ್ಕಿಯೆ)Turkish Coffee (Turkiye)
ರಿಸ್ಟ್ರೆಟ್ಟೊ (ಇಟಲಿ)Ristretto (Italy)

ಫ್ರಾಪ್ಪೆ (ಗ್ರೀಸ್)Frappe (Greece)

ಐಸ್ಕಫೀ (ಜರ್ಮನಿ)Eiskaffee (Germany)

ವಿಯೆಟ್ನಾಮೀಸ್ ಐಸ್ಡ್ ಕಾಫಿ (ವಿಯೆಟ್ನಾಂ)Vietnamese Iced Coffee (Vietnam)

ಭಾರತೀಯ ಫಿಲ್ಟರ್ ಕಾಫಿಯನ್ನು ಬಹಳ ಸುಲಭ ಮತ್ತು ಸರಳವಾಗಿ ಫಿಲ್ಟರ್ ಮಷಿನ್‌ನಲ್ಲಿ(Filter Machine) ತಯಾರಿಸಲಾಗುತ್ತದೆ. ಈ ಮಷಿನ್ ಸ್ಟೀಲ್‌ನಿಂದ ಮಾಡಲಾಗುತ್ತಿದ್ದು, ಎರಡು ಡಬ್ಬಿಗಳನ್ನು ಹೊಂದಿರುತ್ತದೆ.

ಅಲ್ಲದೇ ಅದರ ಮೇಲ್ಭಾಗದಲ್ಲಿ ರಂಧ್ರಗಳಿರುತ್ತದೆ. ಇದಕ್ಕೆ ಕಾಫಿ ಡಿಕಾಕ್ಷನ್ ಅನ್ನು ಕುದಿಸಿ ನಂತರ ನೀರು ಕೆಳಗಿನ ಡಬ್ಬಿಗೆ ನಿಧಾನವಾಗಿ ತೊಟ್ಟಿಕ್ಕಿ, ಮೇಲಿನ ಡಬ್ಬಿಯಲ್ಲಿ ಪುಡಿ ಮಾತ್ರ ಉಳಿಯುತ್ತದೆ. ಕೊನೆಗೆ ಡಿಕಾಕ್ಷನ್ ನೀರಿಗೆ ಹಾಲನ್ನು ಬೆರೆಸಿದರೆ ಪಿಲ್ಟರ್ ಕಾಫಿ ರೆಡಿಯಾಗಿರುತ್ತದೆ.

Ranking

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button