ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರಧಾನಿ ಮೋದಿ ಸಫಾರಿ
ಪ್ರಧಾನಿ ನರೇಂದ್ರ ಮೋದಿಯವರು ನಿನ್ನೆ (ಮಾ.9) ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನವನ (Kaziranga National Park) ಮತ್ತು ಹುಲಿ ಸಂರಕ್ಷಿತ ಪ್ರದೇಶಕ್ಕೆ ಭೇಟಿ ನೀಡಿ ಆನೆ (Elephant) ಮತ್ತು ಜೀಪ್ ಸಫಾರಿ (Jeep Safari) ನಡೆಸಿದ್ದಾರೆ.
ಕಾಜಿರಂಗ ರಾಷ್ಟ್ರೀಯ ಉದ್ಯಾನವನ ಮತ್ತು ಸಫಾರಿಯ ಫೋಟೋಗಳನ್ನು ಪ್ರಧಾನಿ ನರೇಂದ್ರ ಮೋದಿಯವರು (Prime Minister Narendra Modi) ಸಾಮಾಜಿಕ ಜಾಲತಾಣದಲ್ಲಿ “Splendid Kaziranga” (ಭವ್ಯವಾದ ಕಾಜಿರಂಗ” ಎಂದು ಹಂಚಿಕೊಂಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ (ಮಾ.8) ರಂದು ಎರಡು ದಿನದ ಅಸ್ಸಾಂ ಪ್ರವಾಸಕ್ಕೆ ಬಂದಿದ್ದರು.
ಈ ಸಂದರ್ಭದಲ್ಲಿ ನಿನ್ನೆ (ಮಾ.9) ಮುಂಜಾನೆ ವಿಶ್ವ ಪಾರಂಪರಿಕ ತಾಣವಾದ (World Heritage Site) ಕಾಜಿರಂಗ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಿದರು.
ಈ ಉದ್ಯಾನವನದಲ್ಲಿ ಆನೆ ಸಫಾರಿಯನ್ನು (Elephant Safari) ಸಹ ನಡೆಸಿದರು. ಇದರೊಂದಿಗೆ ಜೀಪ್ ಸಫಾರಿ ಮಾಡುವುದರ ಮೂಲಕ ರಾಷ್ಟ್ರೀಯ ಉದ್ಯಾನವನದ ರಮಣೀಯ ದೃಶ್ಯವನ್ನು ಕಣ್ತುಂಬಿ ಕೊಂಡರು.
ಜೊತೆಗೆ ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಿ ಇಲ್ಲಿನ ಸೌಂದರ್ಯವನ್ನು ಕಣ್ತುಂಬಿಕೊಳ್ಳುವಂತೆ ಪ್ರವಾಸಿಗರಿಗೆ, ದೇಶದ ಜನರಿಗೆ ಪ್ರಧಾನಿ ಕರೆ ನೀಡಿದ್ದಾರೆ.
ಪ್ರಧಾನಿಯವರ ಈ ಭೇಟಿ ಅಸ್ಸಾಂನ ಪ್ರವಾಸೋದ್ಯಮವನ್ನು ಇನ್ನಷ್ಟು ಅಭಿವೃದ್ಧಿಗೊಳಿಸಿದೆ ಎಂದು ಊಹಿಸಲಾಗಿದೆ.
ಅಸ್ಸಾಂನ ಮುಖ್ಯಮಂತ್ರಿ ಕಛೇರಿ ನೀಡಿರುವ ಮಾಹಿತಿಯ ಪ್ರಕಾರ, 1957 ರಿಂದ ಅಸ್ಸಾಂನ (Assam) ಯುನೆಸ್ಕೋ ವಿಶ್ವ ಪಾರಂಪರಿಕ ತಾಣಕ್ಕೆ ಭೇಟಿ ನೀಡಿದ ಮೊದಲ ಪ್ರಧಾನಿ ನರೇಂದ್ರ ಮೋದಿಯವರಾಗಿದ್ದಾರೆ.
ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ಭೇಟಿಯ ವೇಳೆಯಲ್ಲಿ ಮೊದಲ ಪ್ರಧಾನಿ ಅವರು ಮೊದಲು ಆನೆ ಸಫಾರಿ ನಡೆಸಿದರು.
ನಂತರ ರಾಷ್ಟ್ರೀಯ ಉದ್ಯಾನವನದ ಸೆಂಟ್ರಲ್ ಕೊಹೊರಾ ವ್ಯಾಪ್ತಿಯಲ್ಲಿರುವ ಮಿಹಿಮುಖ್ ಪ್ರದೇಶದಲ್ಲಿ ಜೀಪ್ ಸಫಾರಿ ನಡೆಸಿದರು.
ಈ ವೇಳೆ ಅವರೊಂದಿಗೆ ಉದ್ಯಾನದ ನಿರ್ದೇಶಕಿ ಸೋನಾಲಿ ಘೋಷ್ ಮತ್ತು ಇತರ ಹಿರಿಯ ಅರಣ್ಯ ಅಧಿಕಾರಿಗಳು ಜೊತೆಗಿದ್ದರು.
ಇದರೊಂದಿಗೆ ಉದ್ಯಾನವನದ ಆನೆಗಳಾದ ಲಖಿಮೈ, ಪ್ರದ್ಯುಮ್ನ ಹಾಗೂ ಫೂಲ್ಮೈ ಕಬ್ಬಿನ ಜಲ್ಲೆಗಳನ್ನು ತಿನ್ನಿಸಿದರು. ಈ ಫೋಟೋಗಳನ್ನು ಮೋದಿಯವರು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ.
ಕಾಜಿರಂಗ ಉದ್ಯಾನವನವೂ ಒಂದು ಕೊಂಬಿನ ಘೇಂಡಾಮೃಗಗಳಿಗೆ ಪ್ರಸಿದ್ಧಿ ಹೊಂದಿದೆ. ಅದರೊಂದಿಗೆ ಇಲ್ಲಿ ದೊಡ್ಡ ಸಂಖ್ಯೆಯಲ್ಲಿ ಆನೆಗಳು ಸಹ ಇವೆ ಎಂದು ಪ್ರಧಾನಿ ಹೇಳಿದ್ದಾರೆ.
ಈ ಹಿಂದೆ ಲಕ್ಷದ್ವೀಪಕ್ಕೆ (Lakshadweep) ಭೇಟಿ ನೀಡಿ ದೇಶದ ಜನರಿಗೆ ಪ್ರವಾಸ ಹೋಗುವಂತೆ ಪ್ರೇರೇಪಿಸಿದ್ದರು. ಅವರು ಭೇಟಿ ನೀಡಿದ ಕೆಲವೇ ದಿನಗಳಲ್ಲಿ ಲಕ್ಷದ್ವೀಪಕ್ಕೆ ಹಲವು ಸೆಲಬ್ರಿಟಿಗಳು ಭೇಟಿ ನೀಡಿದ್ದರು.
ಅಂತೆಯೇ ಈಗ ಪ್ರಧಾನಿ ಅವರು ಅಸ್ಸಾಂನ ವಿಶ್ವ ಪಾರಂಪರಿಕ ತಾಣ ಕಾಜಿರಂಗ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಿರುವುದು ಮುಂದೆ ಕಾಜಿರಂಗಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗಬಹುದು ಎಂದು ನಿರೀಕ್ಷಿಸಲಾಗುತ್ತಿದೆ.
ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.