ದೂರ ತೀರ ಯಾನ

ಮಾಲ್ಡೀವ್ಸ್ ಗೆ ಪ್ರಯಾಣಿಸುವ ಭಾರತೀಯರ ಸಂಖ್ಯೆಯಲ್ಲಿ ಮತ್ತೆ ಇಳಿಕೆ

ಭಾರತ ಮತ್ತು ಮಾಲ್ಡೀವ್ಸ್ ನಡುವಿನ ಸಂಬಧ ಹದೆಗಟ್ಟಿರುವುದು ಗೊತ್ತೇ ಇದೆ. ಹೀಗಾಗಿ ಭಾರತೀಯರು ಮಾಲ್ಡೀವ್ಸ್ ಬಿಟ್ಟು ಭಾರತದ ಲಕ್ಷದ್ವೀಪದ ಕಡೆಗೆ ಪ್ರವಾಸ ಹೋಗಿ ಎನ್ನುವ ಬಹುದೊಡ್ಡ ಆಂದೋಲನವೇ ಭಾರತದಲ್ಲಿ ನಡೆದಿರುವುದು ನಮಗೆಲ್ಲ ಗೊತ್ತಿರುವ ವಿಚಾರ. ವಿದೇಶದಲ್ಲಿ ಹೋಗಿ ಎಂಜಾಯ್ ಮಾಡ್ಕೊಂಡು ಬರ್ಬೇಕು ಅಂತಿದ್ದವರು ಮಾಲ್ಡೀವ್ಸ್ ಬಿಟ್ಟು ಬೇರೆ ದೇಶಗಳ ಕಡೆಗೆ ಮುಖ ಮಾಡುತ್ತಿದ್ದಾರೆ. ಅದರಲ್ಲಿಯೂ ನೆರೆ ದೇಶ ಶ್ರೀಲಂಕಾಕ್ಕೆ(Sri Lanka) ಹೆಚ್ಚು ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಇದು ಮಾಲ್ಡೀವ್ಸ್ . ಇದು ಮಾಲ್ಡೀವ್ಸ್ ಪ್ರವಾಸೋದ್ಯಮದ ಮೇಲೆ ಸಾಕಷ್ಟು ಪರಿಣಾಮವನ್ನು ಬೀರಿತ್ತು. ಇದಕ್ಕೆ ಮಾಲ್ಡೀವ್ಸ್ ದೇಶದ ವರದಿ ಕೂಡ ಬಹಿರಂಗ ಪಡಿಸಿದೆ.

Maldives

ಭಾರತೀಯ ಪ್ರವಾಸಿಗರ ಸಂಖ್ಯೆಯಲ್ಲಿ ಪ್ರಮುಖ ಕುಸಿತವನ್ನು ಕಂಡರೆ, ಚೀನಾದ(China) ಪ್ರವಾಸಿಗರು ಮಾಲ್ಡೀವ್ಸ್​ಗೆ ಭೇಟಿ ನೀಡುವ ಪ್ರಮಾಣ ಹಠಾತ್ ಏರಿಕೆಯನ್ನು ಕಂಡಿದೆ. ಚೀನಾ ಮತ್ತು ಮಾಲ್ಡೀವ್ಸ್(Maldives) ನಡುವಿನ ಸಂಬಂಧಗಳು ಬಲಗೊಳ್ಳುತ್ತಿದ್ದಂತೆ 2024 ರಲ್ಲಿ ದೇಶಕ್ಕೆ 54,000 ಕ್ಕೂ ಹೆಚ್ಚು ಪ್ರವಾಸಿಗರು( Tourist) ಭೇಟಿ ನೀಡಿದ್ದಾರೆ.

ಚೀನಾ ಈಗ ಮಾಲ್ಡೀವ್ಸ್​ಗೆ ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ದೇಶವಾಗಿದೆ, ಇದು ಮಾರುಕಟ್ಟೆಯ ಗಮನಾರ್ಹ ಭಾಗವನ್ನು ಹೊಂದಿದೆ. ಮಾಲ್ಡೀವ್ಸ್ ರಾಷ್ಟ್ರವು ಈ ವರ್ಷದ ಫೆಬ್ರವರಿಯಲ್ಲಿ(February) ಒಟ್ಟು 217,394 ಪ್ರವಾಸಿಗರನ್ನು ಕಂಡಿದೆ. ಅದರಲ್ಲಿ 34,600 ಕ್ಕೂ ಹೆಚ್ಚು ಚೀನಾದಿಂದ ಬಂದವರು. ಗಮನಾರ್ಹವಾಗಿ, ಭಾರತವು 2021, 2022 ಮತ್ತು 2023 ರಲ್ಲಿ ಮಾಲ್ಡೀವ್ಸ್​​​ಗೆ ಅಗ್ರ ಪ್ರವಾಸಿ ಮಾರುಕಟ್ಟೆಯಾಗಿದ್ದು. ವರ್ಷಕ್ಕೆ 200,000 ಕ್ಕೂ ಹೆಚ್ಚು ಪ್ರವಾಸಿಗರು ಅಲ್ಲಿಗೆ ಹೋಗುತ್ತಿದ್ದರು.

Indian Tourist

ಮಾರ್ಚ್(March) 2023 ರಲ್ಲಿ, 41,000 ಕ್ಕೂ ಹೆಚ್ಚು ಭಾರತೀಯ ಪ್ರವಾಸಿಗರು(Indian Tourist) ಮಾಲ್ಡೀವ್ಸ್​ಗೆ ಭೇಟಿ ನೀಡಿದ್ದರೆ, ಮಾರ್ಚ್ 2024 ರಲ್ಲಿ ಈ ಸಂಖ್ಯೆ ಕೇವಲ 27,224 ಕ್ಕೆ ಅದರ ಪ್ರಮಾಣ ಇಳಿದಿದೆ. ಇದು ಶೇಕಡಾ 33 ರಷ್ಟು ತೀವ್ರ ಕುಸಿತ ಎಂದು ಮಾಲ್ಡೀವ್ಸ್ ಮೂಲದ ವರದಿ ಹೇಳಿದೆ. ಈ ಕುಸಿತದ ಹಿಂದಿನ ಪ್ರಾಥಮಿಕ ಕಾರಣವೆಂದರೆ ಭಾರತ ಸರ್ಕಾರದ ಪ್ರವಾಸೋದ್ಯಮ ಅಭಿಯಾನ. ಇದು ಲಕ್ಷದ್ವೀಪ ದ್ವೀಪಗಳಿಗೆ ಪ್ರವಾಸ ಹೋಗಲು ತನ್ನ ನಾಗರಿಕರನ್ನು ಪ್ರೋತ್ಸಾಹಿಸುತ್ತಿದೆ.

Tourism

ಮಾರ್ಚ್ 2023 ರವರೆಗೆ ಮಾಲ್ಡೀವ್ಸ್​​ಗೆ ಭಾರತದ ನಾಗರಿಕರೇ ಪ್ರವಾಸೋದ್ಯಮದ ಎರಡನೇ ಅತಿದೊಡ್ಡ ಮೂಲವಾಗಿತ್ತು. ಅಲ್ಲಿನ ಮಾರುಕಟ್ಟೆಯಲ್ಲಿ 10 ಪ್ರತಿಶತದಷ್ಟು ಪಾಲನ್ನು ಹೊಂದಿತ್ತು ಎಂದು ವರದಿ ತಿಳಿಸಿದೆ. ಆದಾಗ್ಯೂ, ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಉದ್ವಿಗ್ನತೆಯಿಂದಾಗಿ ಭಾರತದ ಪಾಲು ಶೇಕಡಾ 6ರಷ್ಟಾಗಿದ್ದು ಆರನೇ ಸ್ಥಾನಕ್ಕೆ ಕುಸಿದಿದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button