ರೈಲಿನ ಮಾಸಿಕ ಪಾಸ್ ಪಡೆಯುವುದು ಹೇಗೆ..? ಈ ಲೇಖನ ಓದಿ
ರೈಲು (Train) ಬಡ, ಮಧ್ಯಮ ವರ್ಗದ ಮಂದಿಯ ಪಾಲಿಗೆ ಸಂಚಾರ ಸಾರಥಿ. ಅಗ್ಗ ಅನ್ನೋ ಕಾರಣಕ್ಕೆ ಹೆಚ್ಚಿನವರು ರೈಲು ಪ್ರಯಾಣವನ್ನು ಅವಲಂಬಿಸಿರುತ್ತಾರೆ. ಇನ್ನು ಕೆಲವರಂತೂ ನಿತ್ಯದ ಪ್ರಯಾಣಕ್ಕೆ ಕೂಡ ರೈಲನ್ನು ಅನುಸರಿಸುತ್ತಾರೆ.
ಅದರಲ್ಲಿಯೂ ಹೆಚ್ಚಾಗಿ ವಿದ್ಯಾರ್ಥಿಗಳು ಹಾಗೂ ನೌಕರರ ಪಾಲಿಗೆ ರೈಲು ಒಂದು ರೀತಿ ನೆಚ್ಚಿನ ಸಾರಥಿ ಅಂದರೂ ತಪ್ಪಿಲ್ಲ.
ಅಂತಹವರು ಮಾಸಿಕ ಪಾಸ್ ಮಾಡಿಕೊಳ್ಳುವುದು ಉತ್ತಮ ಆಯ್ಕೆ. ಅಷ್ಟಕ್ಕೂ ರೈಲ್ವೆ ಮಾಸಿಕ ಪಾಸ್ ಅಂದರೆ ಏನು? ಅದರಿಂದ ಆಗೋ ಲಾಭವೇನು ಅನ್ನೋ ಬಗ್ಗೆ ಮಾಹಿತಿ ಪೂರ್ಣ ಬರಹ.
ಯಾವುದೇ ವ್ಯಕ್ತಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗಲು ಪ್ರತಿದಿನ ರೈಲನ್ನು ಬಳಸಿದಾಗ, ರೈಲ್ವೆ ಅವರಿಗೆ ಪಾಸ್ ನೀಡುತ್ತದೆ. ಇದಕ್ಕೆ ಟಿಕೆಟ್ ಬೆಲೆಗಿಂತ ಕೊಂಚ ರಿಯಾಯಿತಿ ಕೂಡ ನೀಡುತ್ತದೆ. ರೈಲ್ವೆ ಪಾಸ್ ಒಂದು ತಿಂಗಳಿಂದ ಮೂರು ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯವರೆಗೆ ಮಾನ್ಯವಾಗಿರುತ್ತದೆ ಮಾಸಿಕ ರೈಲ್ವೇ ಪಾಸ್(Monthly Pass)ಮಾಡಿವುದರಿಂದ ಸಮಯ ಉಳಿತಾಯವಾಗುವುದಲ್ಲದೆ, ಸರದಿ ಸಾಲಿನಲ್ಲಿ ನಿಲ್ಲುವುದು ತಪ್ಪುತ್ತದೆ. ಈ ಮೂಲಕ ನೀವು ತಲುಪಬೇಕು ಅಂತಿರುವ ಜಾಗವನ್ನು ಸುಲಭವಾಗಿ ತಲುಪಬಹುದು.
ಈ ಪಾಸ್‌ನ ಬಳಕೆಯು ಬಳಕೆಯು ಮೀಸಲಾತಿ ಕೋಚ್‌ನಲ್ಲಿ ಮಾನ್ಯವೆಂದು ಪರಿಗಣಿಸಲಾಗುವುದಿಲ್ಲ ರಿಸರ್ವ್ ಕಂಫರ್ಟ್‌ಮೆಂಟ್‌ನಲ್ಲಿ (Reserve Comfort ment)ಪ್ರಯಾಣಿಸುವಂತಿಲ್ಲ. ಸಾಮನ್ಯ ಕೋಚ್(General Coach) ಗಳಲ್ಲಿ ಮಾತ್ರ ಪ್ರಯಾಣಿಸಬಹುದು.ಮಾಸಿಕ ಪಾಸ್ ನ ದರವನ್ನು ದೂರಕ್ಕೆ ಅನುಗುಣವಾಗಿ ನಿರ್ಧರಿಸಲಾಗುತ್ತದೆ.
ವರದಿಗಳ ಪ್ರಕಾರ, 1 ರಿಂದ 20 ಕಿ.ಮೀ ದೂರಕ್ಕೆ ಅಂದಾಜು 100 ರೂ. ರೈಲ್ವೆ ಪಾಸ್‌ನಲ್ಲಿ(Railway Pass)ನೀವು ಯಾವ ಮಾರ್ಗದಲ್ಲಿ ಪ್ರಯಾಣಿಸಬಹುದು ಮತ್ತು ಯಾವ ಮಾರ್ಗದಲ್ಲಿ ಪ್ರಯಾಣಿಸಬಾರದು ಎಂಬ ಮಾಹಿತಿಯೂ ಲಭ್ಯವಿರುತ್ತದೆ
ರೈಲ್ವೆ ಮಾಸಿಕ ಪಾಸ್ ಪಡೆಯುವುದು ತುಂಬಾ ಸುಲಭ. ಇದಕ್ಕಾಗಿ ನೀವು ರೈಲ್ವೆಯ ಬುಕಿಂಗ್ ಕೌಂಟರ್‌ನಲ್ಲಿ(Railway Booking Counter) ಅರ್ಜಿ ಸಲ್ಲಿಸಬೇಕು.
ಫಾರ್ಮ್ ಭರ್ತಿ ಮಾಡಿದ ನಂತರ ಗುರುತಿನ ಚೀಟಿಯನ್ನು ನೀಡಬೇಕು. ರೈಲ್ವೆ ಇಲಾಖೆಯು ತನಿಖೆಯ ನಂತರ ಪಾಸ್ ನೀಡಲಾಗುತ್ತದೆ. ಇದರ ಹೊರತಾಗಿ ನೀವು ಆನ್‌ಲೈನ್ (Online)ಮೂಲವು ಮಾಸಿಕ ಪಾಸ್ ಮಾಡಿಸಬಹುದು.
ರೈಲ್ವೆ ಮಾಸಿಕ ಪಾಸ್ ಬೇಕು ಅನ್ನುವವರು ತಮ್ಮ ಬಳಿ ಪಾಸ್‌ಪೋರ್ಟ್ ಸೈಜ್ ಫೋಟೋ(Passport Size Photo), ಗುರುತಿನ ಚೀಟಿಯನ್ನು(I’d Proof )ಹೊಂದಿರಬೇಕು. ಈ ಗುರುತಿನ ಚೀಟಿಯಲ್ಲಿ ಹೆಸರು(Name)ವಿಳಾಸ(Adress), ವಯಸ್ಸು(Age )ಮಾಹಿತಿಯಿರಬೇಕು.
ಇದನೆಲ್ಲ ಅಧಿಕಾರಿಗಳಿಗೆ ಸಲ್ಲಿಸಿದರೆ ನಿಮಗೆ ತಿಂಗಳ ಮಾಸಿಕ ಪಾಸ್ ಸಿಗುತ್ತದೆ. ಇದರಿಂದ ನಿಮ್ಮ ಪ್ರಯಾಣ ಕೂಡ ಬಹು ಸುಲಭ. ಹೀಗಾಗಿ ನಿತ್ಯ ರೈಲಿನಲ್ಲಿ ಓಡಾಟ ನಡೆಸುವವರು ರೈಲಿನ ಮಾಸಿಕ ಪಾಸ್ ಮಾಡಿಕೊಳ್ಳುವುದರ ಬಗ್ಗೆ ಯೋಚಿಸಿ.
ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.