Moreಮ್ಯಾಜಿಕ್ ತಾಣಗಳುವಿಂಗಡಿಸದ

ಬೆಂಗಳೂರಿನ ಸಮೀಪವಿದೆ ಶತಮಾನಗಳಷ್ಟು ಹಳೆಯ ನಿಗೂಢ ಕೋಟೆ;

ಬೆಂಗಳೂರಿನ ಸಮೀಪದಲ್ಲಿರುವ ಶತಮಾನಗಳಷ್ಟು ಹಳೆಯ ಶಿಥಿಲಗೊಂಡ “ಚಿಕ್ಕಜಾಲ ಕೋಟೆ”ಯು (Chikkajala Fort) ಕೆಲವು ನಿಗೂಢತೆಯನ್ನು ಒಳಗೊಂಡಿದೆ. ಇದರ ಮೂಲ, ನಿರ್ಮಾತೃಗಳ ಕುರಿತು ಇನ್ನೂ ಸಂಶೋಧನೆಗಳು ನಡೆಯಬೇಕಿದೆ.

ಇದು ಇಸ್ಲಾಮಿಕ್ (Islamic) ಮತ್ತು ದ್ರಾವಿಡ (Dravida) ವಾಸ್ತುಶಿಲ್ಪದ (Architectural) ಅತ್ಯುನ್ನತ ಸಮ್ಮಿಲನವನ್ನು ಹೊಂದಿದೆ. ಕೋಟೆಯ ಬಲಿಷ್ಠವಾದ ಕಲ್ಲಿನ ಗೋಡೆಗಳು, ಬುರುಜುಗಳು ಮತ್ತು ಕಂದಕವು ಈ ಪ್ರದೇಶದಲ್ಲಿ ಅದರ ಐತಿಹಾಸಿಕ (Historical) ಮಹತ್ವವನ್ನು ಪ್ರದರ್ಶಿಸುತ್ತದೆ.

ಹೊಯ್ಸಳ (Hoysala) ರಾಜ ವಿಷ್ಣುವರ್ಧನನ ಕಾಲಕ್ಕೆ ಸಂಬಂಧಿಸಿದ 12 ನೇ ಶತಮಾನದಲ್ಲಿ ನಿರ್ಮಿಸಲಾದ ಚೆನ್ನರಾಯ ದೇವಸ್ಥಾನ (Chennaraya Temple) ಇರುವುದರಿಂದ ಕೋಟೆಯ ಇತಿಹಾಸವನ್ನು ಆ ಕಾಲದಿರಬಹುದೆಂದು ಊಹಿಸಲಾಗಿದೆ.

ಶಿಥಿಲಾವಸ್ಥೆಯಲ್ಲಿರುವ ಈ ಕೋಟೆಯಲ್ಲಿರುವ ಭವ್ಯವಾದ ಪ್ರವೇಶ ದ್ವಾರ ಮತ್ತು ಕೋಟೆಯ ಕೆಲವು ಭಾಗಗಳು ಇಂದು ಕೋಟೆಯ ಅವಶೇಷಗಳನ್ನು ಅನ್ವೇಷಿಸಲು ಬರುವ ಸಂದರ್ಶಕರಿಗೆ ಪ್ರವೇಶಲು ಯೋಗ್ಯವಾಗಿದೆ.

ಇದು ಕರ್ನಾಟಕದ ಗತಕಾಲದ ಜಿಜ್ಞಾಸೆಯ ನೋಟವನ್ನು ನೀಡುವುದರಿಂದ ಈ ತಾಣವು ಇತಿಹಾಸ ಉತ್ಸುಕರನ್ನು ಮತ್ತು ಕುತೂಹಲಕಾರಿ ಪ್ರವಾಸಿಗರನ್ನು ಹೆಚ್ಚಾಗಿ ಸೆಳೆಯುತ್ತದೆ.

ಈ ಚಿಕ್ಕಜಾಲ ಕೋಟೆಯು 3000 ವರ್ಷಗಳಷ್ಟು ಹಳೆಯ ಕೋಟೆ (Oldest Fort) ಎಂದು ಕೆಲವರು ಅಭಿಪ್ರಾಯ ಪಟ್ಟರೂ, ಇಲ್ಲಿಯ ವಾಸ್ತುಶಿಲ್ಪದ ಶೈಲಿಗಳ ವಿಶಿಷ್ಟ ಮಿಶ್ರಣದಿಂದಾಗಿ ನಿಖರವಾದ ಕಾಲವನ್ನು ನಿರ್ಧರಿಸುವುದು ಸವಾಲಿನ ಸಂಗತಿಯಾಗಿದೆ.

ಇಲ್ಲಿರುವ ಹನುಮಂತನ ದೇವಾಲಯವು ಕೋಟೆಯ ಗೋಡೆಗಳ ಗಡಿಯೊಳಗೆ ಎರಡು ಎಕರೆ ಭೂಮಿಯನ್ನು ಸುತ್ತುವರಿದಿದೆ. ಮತ್ತು ಇಲ್ಲಿಯ ಕಲ್ಯಾಣಿಯು ಮೆಟ್ಟಿಲುಗಳು, ಕಂಭಗಳಿಂದ ಕೂಡಿದ್ದು, ಇವು ಹಲವಾರು ವರ್ಷಗಳ ನಂತರೂ ನೋಡಲು ಅಷ್ಟೇ ಆಕರ್ಷಣೀಯವಾಗಿದೆ.

ಕಲ್ಯಾಣಿಯ (Kalyani) ದಕ್ಷಿಣ ಮತ್ತು ಪೂರ್ವ ಭಾಗದಲ್ಲಿ ಎರಡು ಸಂಭಾಗಣಗಳಿವೆ. ಸಭಾಂಗಣದ ಸ್ತಂಭಗಳು ಶತಮಾನಗಳ ನಂತರವೂ ಬಲಿಷ್ಠವಾಗಿ ನಿಂತಿದೆ.

ಪುರಾತತ್ವ ಶಾಸ್ತ್ರಜ್ಞರ ಪ್ರಕಾರ, ಇದು ಕೇವಲ ಗೋಡೆಯ ದೇವಾಲಯ ಸಂಕೀರ್ಣವಷ್ಟೇ ಹೊರತು ಕೋಟೆಯಲ್ಲ. ಇದು ಬುರುಜುಗಳನ್ನು ಹೊಂದಿರದ ಕಾರಣ ಇದನ್ನು ರಕ್ಷಿಸುವುದು ಕಷ್ಟ ಸಾಧ್ಯ.

ಇಲ್ಲಿರುವ ಸಭಾಂಗಣದ ಸ್ತಂಭಗಳು ಇಸ್ಲಾಮಿಕ್ ವಾಸ್ತುಶೈಲಿಯಲ್ಲಿದೆ. ಆದರೂ ದೇವಾಲಯವು ಆಧುನಿಕತೆಯಿಂದ ಕೂಡಿದೆ.

ಇಲ್ಲಿಯ ದೇವಾಲಯವು ತಾಣದ ಉಳಿದ ಭಾಗಕ್ಕಿಂತ ಚಿಕ್ಕದಾಗಿದ್ದು, ಹಿಂದೆ ದೊಡ್ಡ ದೇವಾಲಯವಾಗಿದ್ದನ್ನು, ಕುಸಿದಿರುವ ಕಾರಣ ನಂತರ ನಿರ್ಮಿಸಿರಬಹುದೆಂದು ಊಹಿಸಲಾಗಿದೆ. ಯಾತ್ರಿಕರಿಗಾಗಿ ಎರಡು ಸಭಾಂಗಣವಿದೆ.

ದಕ್ಷಿಣಕ್ಕೆ, ಗೋಡೆಯಲ್ಲಿ ಒಂದು ಸಣ್ಣ ಬಾಗಿಲು ಇದೆ ಮತ್ತು ಗೋಡೆಯ ಪಕ್ಕದಲ್ಲಿ ಎರಡು ಇಸ್ಲಾಮಿಕ್ ಗೋರಿಗಳಿವೆ (Islamic Tombs).

ಇಲ್ಲಿಯ ಗೋಡೆಗಳು ಟಿಪ್ಪು ಸುಲ್ತಾನ್ (Tippu Sultan) ನಿರ್ಮಿಸಿದ ದೇವನಹಳ್ಳಿ ಕೋಟೆಯನ್ನು ನೆನಪಿಸುತ್ತದೆ.

ಚಿಕ್ಕಜಾಲ ಕೋಟೆಯು ಬೆಂಗಳೂರಿನಿಂದ 26 ಕಿ.ಮೀ ದೂರದಲ್ಲಿದೆ. ಕೇವಲ 38 ನಿಮಿಷದಲ್ಲಿ ತಲುಪಬಹುದು.

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ (Kempegowda International Airport) ಕೇವಲ 15 ನಿಮಿಷಗಳು (10 ಕಿಮೀ) ದೂರದಲ್ಲಿದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button