ಶಿವ ಭಕ್ತರಿಗೆ ಶುಭ ಸುದ್ದಿ; ಕೇದಾರನಾಥ್ ಬಾಗಿಲು ತೆರೆಯುವುದಕ್ಕೆ ದಿನಾಂಕ ನಿಗದಿ.
ಕೇದಾರನಾಥ 12 ಜ್ಯೋತಿರ್ಲಿಂಗ ಕ್ಷೇತ್ರಗಳಲ್ಲಿ ಒಂದು. ಅದೆಷ್ಟೋ ಜನ ಈ ಕ್ಷೇತ್ರವನ್ನು ಕಣ್ತುಂಬಿಕೊಳ್ಳುವುದಕ್ಕೆ ಕಾಯುತ್ತಿರುತ್ತಾರೆ. ಅಂತಹವರಿಗೆ ಶಿವರಾತ್ರಿಯ ದಿನವೇ ಶುಭ ಸುದ್ದಿ ಸಿಕ್ಕಿದೆ.
ಜನರು ಕೇದಾರನಾಥ ಧಾಮಕ್ಕೆ ಭೇಟಿ ನೀಡುವುದಕ್ಕೆ ಹೆಚ್ಚು ಕಾಯುತ್ತಾರೆ. ಏಕೆಂದರೆ ಕೇದಾರನಾಥ್ ದೇವಾಲಯವು ವರ್ಷಕ್ಕೆ 6 ತಿಂಗಳು ಮಾತ್ರ ಭಕ್ತರಿಗೆ ತೆರೆಯುತ್ತದೆ.
ಹೀಗಾಗಿ ಜನರಿಗೆ ಕೇದಾರನಾಥ ಕ್ಷೇತ್ರವನ್ನು ಕಣ್ತುಂಬಿಕೊಳ್ಳುವುದಕ್ಕೆ ಹೆಚ್ಚು ಒಲವು. ಅಂತಹವರಿಗೆ ಸದ್ಯ ಶುಭ ಸುದ್ದಿ ಸಿಕ್ಕಿದೆ.
ಮಹಾಶಿವರಾತ್ರಿಯಂದು ಅಂದರೆ ಮಾರ್ಚ್ 08 ರಿಂದು ಉಖಿಮಠದಲ್ಲಿರುವ ಓಂಕಾರೇಶ್ವರ ದೇವಾಲಯದ ಬಾಗಿಲು ಯಾವಾಗ ತೆರೆಯುವುದಾಗಿ ದೇವಸ್ಥಾನದ ಮಂಡಳಿ ಘೋಷಿಸಿದೆ.
ಇಂದಿನಿಂದ 62 ದಿನಗಳ ನಂತರ ಅಂದರೆ ಶುಕ್ರವಾರ, ಮೇ 10 ರಂದು ಬೆಳಿಗ್ಗೆ 7 ಗಂಟೆಯಿಂದ ಭಕ್ತರು ಔಪಚಾರಿಕ ರೀತಿಯಲ್ಲಿ ಕೇದಾರನಾಥ ಧಾಮಕ್ಕೆ ಭೇಟಿ ನೀಡಲು ಸಾಧ್ಯವಾಗುತ್ತದೆ. ಆ ಬಳಿಕ ಮುಂದಿನ ಆರು ತಿಂಗಳು ದೇವಾಲಯ ಭಕ್ತರ ಪ್ರವೇಶಕ್ಕೆ ಮುಕ್ತವಾಗಿರುತ್ತದೆ.
ರುದ್ರಪ್ರಯಾಗದಲ್ಲಿರುವ ಕೇದಾರನಾಥ ಧಾಮದ ಬಾಗಿಲುಗಳನ್ನು ವರ್ಷದಲ್ಲಿ 6 ತಿಂಗಳು ಮುಚ್ಚಲಾಗುತ್ತದೆ. ಇನ್ನು, 6 ತಿಂಗಳ ಕಾಲ ಉಖಿಮಠ ಓಪನ್ ಇರುತ್ತದೆ.
ಪ್ರತಿ ವರ್ಷ ಮಹಾಶಿವರಾತ್ರಿಯ ದಿನದಂದು ಬಾಗಿಲು ತೆರೆಯುವ ದಿನಾಂಕವನ್ನು ನಿಗದಿಪಡಿಸಲಾಗುತ್ತದೆ. ಈ ವರ್ಷಕ್ಕೆ ದಿನಾಂಕ ನಿಗದಿಯಾಗಿದ್ದು, ನೀವು ಭೇಟಿ ನೀಡಬಹುದು.
ಕೇದಾರನಾಥ ತಲುಪುವುದು ಹೇಗೆ..?
ನೀವು ಸುಲಭ ಮತ್ತು ವೇಗದ ಮಾರ್ಗದಲ್ಲಿ ಕೇದಾರನಾಥವನ್ನು ತಲುಪಲು ಹೆಲಿಕಾಪ್ಟರ್ ಸೇವೆಯನ್ನು ಬಳಸಬಹುದು. ಹರಿದ್ವಾರ, ಡೆಹ್ರಾಡೂನ್ ಮತ್ತು ಗುಪ್ತಕಾಶಿಯಂತಹ ಹತ್ತಿರದ ನಗರಗಳಿಂದ ವಿಮಾನಗಳು ಲಭ್ಯವಿವೆ.
ಇಲ್ಲಿಂದ ನೀವು ಸುಲಭವಾಗಿ ಕೇದಾರನಾಥಕ್ಕೆ ಹೋಗಬಹುದು. ಸಾಕಷ್ಟು ಭಕ್ತರು ಚಾರಣ ಮಾಡುವುದರ ಮೂಲಕ ತಲುಪುತ್ತಾರೆ. ಇದು ಧಾರ್ಮಿಕ ಅನುಭವದ ಪ್ರಯಾಣವಾಗಿದೆ.
ನೀವು ಗೌರಿಕುಂಡ್ ಅಥವಾ ಸೋನ್‌ಪ್ರಯಾಗದಿಂದ ಪರ್ವತ ಮಾರ್ಗದ ಮೂಲಕ ಧಾಮವನ್ನು ತಲುಪಬಹುದು.
ಧಾಮಕ್ಕೆ ಬಸ್ಸುಗಳು ಮತ್ತು ಟ್ಯಾಕ್ಸಿಗಳು ಸೇರಿದಂತೆ ಧಾರ್ಮಿಕ ತೀರ್ಥಯಾತ್ರೆಗೆ ಹೆದ್ದಾರಿ ಸೇವೆಯೂ ಲಭ್ಯವಿದೆ. ಇನ್ನು ಕೆಲವು ಭಕ್ತರು ಪಾಲ್ಕಿ ಸೇವೆಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.
ಇದರಲ್ಲಿ ಪಲ್ಲಕ್ಕಿಯು ಯಾತ್ರಿಕರನ್ನು ಧಾಮಕ್ಕೆ ಕರೆದೊಯ್ಯುತ್ತದೆ. ಇದು ಗೌರವ ಮತ್ತು ಧಾರ್ಮಿಕ ಆಚರಣೆಯ ಅದ್ಭುತ ಅನುಭವವನ್ನು ನೀಡುತ್ತದೆ.
ಕೇದಾರನಾಥ ಧಾಮಕ್ಕೆ ಹೋಗುವ ಮೊದಲು ನೀವು ಗುರುತಿನ ಚೀಟಿ, ಪಾಸ್‌ಪೋರ್ಟ್, ಪ್ರಯಾಣ ಟಿಕೆಟ್ ಅಥವಾ ಇತರ ಅಗತ್ಯ ದಾಖಲೆಗಳನ್ನು ತೆಗೆದುಕೊಂಡು ಹೋಗುವುದನ್ನು ಮರೆಯದಿರಲಿ.
ಇನ್ನೂ ಮೇ ಅಲ್ವಾ ಬೇಸಿಗೆ ಕಾಲ ಅಂದುಕೊಂಡು ಆ ಕಾಲಕ್ಕೆ ಹೊಂದುವ ಬಟ್ಟೆಯನ್ನು ಹಾಕಿಕೊಂಡು ಹೋಗುವ ತಪ್ಪನ್ನು ಮಾತ್ರ ಮಾಡದಿರಿ.
ಯಾವುದೇ ಹವಾಮಾನವಾಗಿರಲಿ ರೈನ್ ಕೋಟ್, ಬೆಚ್ಚಗಿನ ಬಟ್ಟೆ, ಶೌಚಾಲಯಕ್ಕೆ ಅಗತ್ಯವಾದ ವಸ್ತುಗಳು, ಬಾಟಲ್ ನೀರು, ಸನ್ ಸ್ಕ್ರೀನ್ ಮತ್ತು ಸೊಳ್ಳೆ ನಿವಾರಕ ಮುಂತಾದ ವಸ್ತುಗಳನ್ನು ತೆಗೆದುಕೊಂಡು ಹೋಗಿ.
ಸಾಬೂನು, ಟವೆಲ್, ಚಪ್ಪಲಿ ಮುಂತಾದ ಸ್ನಾನದ ಇಲ್ಲಿನ ಪ್ರಮುಖ ಆಕರ್ಷಣೆ ಕೇದಾರನಾಥ ದೇವಾಲಯ ಆದರೆ ಇದರ ನಂತರ ನೀವು ಚೋಪ್ತಾಗೆ ಭೇಟಿ ನೀಡಬಹುದು.
ವಾಸುಕಿ ತಾಲ್, ವಾಸುಕಿ ತಾಲಾಬ್, ಭೈರವನಾಥ ದೇವಾಲಯವನ್ನು ಸಹ ಉತ್ತಮ ಸ್ಥಳವೆಂದು ಪರಿಗಣಿಸಲಾಗಿದೆ. ಇಲ್ಲಿ ನೀವು ನೈಸರ್ಗಿಕ ಸೌಂದರ್ಯ ಆನಂದಿಸಬಹುದು.
ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.