ವಿಂಗಡಿಸದ

ಹಿರೇಬೆಣಕಲ್ ನಲ್ಲಿದೆ ರಾಜ್ಯದ ಅದ್ಭುತ ಶಿಲಾ ಸಮಾಧಿ

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿ ಬಹುತೇಕ ಕನ್ನಡಿಗರಿಗೆ ಅಪರಿಚಿತವಾಗಿರುವ ಒಂದು ಅದ್ಭುತವಾದ ಜಾಗವಿದು. ಸಾವಿರಾರು ವರ್ಷಗಳ ಇತಿಹಾಸವಿರುವ ಈ ಸ್ಥಳ ನಮ್ಮ ನೆಲದ ಪ್ರಾಗೈತಿಕ ಇತಿಹಾಸವನ್ನು ಸಾರುತ್ತದೆ. ಅದುವೇ ಹಿರೇಬೆಣಕಲ್‌ ಶಿಲಾ ಸಮಾಧಿ.

Gangavati

ಇದು ಸಾವಿರಾರು ವರ್ಷಗಳಷ್ಟು ಹಳೆಯ ಇತಿಹಾಸ ಇರುವ ತಾಣ.ಕೊಪ್ಪಳ(Koppal) ಜಿಲ್ಲೆ ಗಂಗಾವತಿ ತಾಲೂಕಿನ ಹಿರೇಬೆಣಕಲ್‌ ಗ್ರಾಮ(hirebenakal village)ದ ಮೋರ್ಯಾರ ಗುಡ್ಡ(Morya Hill) ದಲ್ಲಿದೆ. ಆದಿಮಾನವ ನಿರ್ಮಿತ ಬೃಹತ್‌ ಶಿಲಾಯುಗದ ನೂರಾರು ಶಿಲಾಸಮಾಧಿಗಳು ಹಾಗೂ ಆದಿಮಾನವ ರಚಿತ ಗುಹಾಚಿತ್ರಗಳು ಇವೆ. ಲಂಡನ್ ನ ಸ್ಟೋನ್‌ ಹೆಂಜಸ್‌(Stonehenges of London), ಈಜಿಪ್ಟಿನ ಪಿರಮಿಡ್ ಗಳು(Egyptian pyramids), ಬಹರೈನಿನ ದಿಲ್ಮನ್‌ ಸಮಾಧಿ ದಿಬ್ಬ(Dilman burial mound, Bahrain) ಇಲ್ಲಿವೆ ಎನ್ನಲಾಗುತ್ತದೆ.

Meghalitic

ಹಿರೇಬೆಣಕಲ್‌ ಈ ಮೋರ್ಯಾರ ಗುಡ್ಡ ಇಡೀ ದಕ್ಷಿಣ ಭಾರತದಲ್ಲೇ ಅತಿದೊಡ್ಡ ಮೆಗಾಲಿಥಿಕ್‌ ತಾಣವಾಗಿದೆ. ಸುಮಾರು 1-2 ಕಿ.ಮೀ ದೂರದಲ್ಲಿ ವಿಶಾಲವಾಗಿ ಹರಡಿಕೊಂಡಿರುವ ಬೆಟ್ಟದಲ್ಲೇ ಪ್ರಾಗೈತಿಹಾಸದ ಶಿಲಾಸಮಾಧಿಗಳಿವೆ. ಅಲ್ಲಿ ಸುಮಾರು 600ಕ್ಕೂ ಅಧಿಕ ಶಿಲಾಸಮಾಧಿಗಳಿದ್ದವೆಂದು ಹೇಳಲಾಗುತ್ತಿದೆ.

ನೀವು ಇದನ್ನು ಇಷ್ಟ ಪಡಬಹುದು:ಉಡುಪಿಯಲ್ಲಿದೆ ಒಂದು ಚೆಂದದ ಸಂಸ್ಕೃತಿ ಗ್ರಾಮ

Morya Hill

ಅವುಗಳಲ್ಲದೆ ಬಹುತೇಕ ಬಿದ್ದುಹೋದ, ಒಡೆದ, ಹಾಳಾದ ವಿನಾಶದ ಸ್ಥಿತಿಯಲ್ಲಿರುವಂತೆಯೂ ಶಿಲಾಸಮಾಧಿಗಳು ಇಲ್ಲಿ ಕಂಡುಬರುತ್ತವೆ. ಪ್ರಾಚೀನ ಕಾಲದಲ್ಲಿ ಆದಿಮಾನವರು ಈ ಬೆಟ್ಟದ ಮೇಲೇಯೇ ವಾಸವಾಗಿದ್ದರೆಂಬುದಕ್ಕೆ ಸಾಕಷ್ಟು ಪುರಾವೆಗಳು ಕೂಡ ಇಲ್ಲಿ ದೊರೆಯುತ್ತವೆ.

ನೀವು ಇದನ್ನು ಇಷ್ಟ ಪಡಬಹುದು:ಉಡುಪಿಯಲ್ಲಿದೆ ಒಂದು ಚೆಂದದ ಸಂಸ್ಕೃತಿ ಗ್ರಾಮ

Hirebenakal village

ಜೊತೆಗೆ ಅವರು ವಾಸವಾಗಿದ್ದ ಗುಹೆಗಳನ್ನು ಇಂದಿಗೂ ಸಹ ಕಾಣಬಹುದಾಗಿದೆ. ಇವುಗಳಲ್ಲದೇ ಆದಿಮಾನವರು ಉಪಯೋಗಿಸುತ್ತಿದ್ದ ಮಡಕೆ ಭಾಗದ ಚೂರುಗಳು, ನೀಳಚಕ್ಕೆ, ಶಿಲಾಗಟ್ಟಿಗಳು ದೊರಕಿವೆ. ವಿಶೇಷವಾಗಿ ಅನೇಕ ಗವಿವರ್ಣ ಚಿತ್ರಗಳನ್ನೂ ಸಹ ಕಾಣಬಹುದಾಗಿದೆ.

Koppal

ಹಿರೇಬೆಣಕಲ್ ಗ್ರಾಮವು ಕೊಪ್ಪಳ ಜಿಲ್ಲಾ ಕೇಂದ್ರದಿಂದ ಸುಮಾರು 40 ಕಿ.ಮೀ ದೂರದಲ್ಲಿದ್ದರೆ; ತಾಲ್ಲೂಕು ಕೇಂದ್ರವಾದ ಗಂಗಾವತಿಯಿಂದ ಸುಮಾರು 9-10 ಕಿ.ಮೀ ಅಂತರದಲ್ಲಿದೆ. ಕೊಪ್ಪಳ-ಗಂಗಾವತಿ ಮುಖ್ಯ ರಸ್ತೆಯಿಂದ ಸುಮಾರು 3-4 ಕಿ.ಮೀ ದೂರದಲ್ಲಿ ಈ ಗ್ರಾಮವಿದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button