ವಿಂಗಡಿಸದಸಂಸ್ಕೃತಿ, ಪರಂಪರೆ

ಉಡುಪಿಯಲ್ಲಿದೆ ಒಂದು ಚೆಂದದ ಸಂಸ್ಕೃತಿ ಗ್ರಾಮ

ಆ ಕಾಲವೇ ಚೆಂದ ತುಂಬು ಕುಟುಂಬ..ವಿಶಾಲ ಮನೆ ಆದರೆ ಈಗ ಹಾಗಿಲ್ಲ ಮೂರ್ನಾಲ್ಕು ಜನರು ಮಾತ್ರವಿರುವ ಪುಟ್ಟ ಕುಟುಂಬ. ಮಹಡಿ ಮನೆಗಳ ಭರಾಟೆಯ ನಡುವೆ ನಿಮಗೆ ಹಳೆಯ ಕಾಲದ ಮನೆಗಳು ಕಾಣುವುದಕ್ಕೆ ಅಲ್ಲೊಂದು ,ಇಲ್ಲೊಂದು ಅಷ್ಟೇ. ಆದ್ರೆ ನೀವು ಉಡುಪಿಯ(Udupi) ಈ ಸ್ಥಳಕ್ಕೆ ಹೋದ್ರೆ ಹೊಸದೊಂದು ಮಾಯಾಲೋಕ ನಿಮ್ಮ ಕಣ್ಮುಂದೆ ತೆರೆದುಕೊಳ್ಳುತ್ತದೆ.

ಅಂದಿನ ಕಾಲದ ನಮ್ಮ ಹಿರಿಯರು ಜೀವಿಸಿದ್ದ ಮನೆ , ಅನುಭವಿಸಿದ್ದ  ಕಲಾತ್ಮಕತೆ ವಸ್ತುಗಳ ನೋಟ ,ಹಳೆಯ ಕಾಲದ ವಿವಿಧತೆ ಎಲ್ಲವೂ ಒಂದೇ ಸೂರಿನಡಿಯಲ್ಲಿ ಸಿಗುವ ಜಾಗ ಉಡುಪಿ ಜಿಲ್ಲೆಯಲ್ಲಿ. ಅದುವೇ ಹಸ್ತಶಿಲ್ಪ ಹೆರಿಟೇಜ್ ವಿಲೇಜ್.(Hastas hilpa Herritage Village)

ಸುಮಾರು 6 ಎಕರೆ ಪ್ರದೇಶದಲ್ಲಿರುವ ಈ ಹಸ್ತಶಿಲ್ಪ ಸಂಸ್ಕೃತಿ ಗ್ರಾಮದ ಕಾಯಕಲ್ಪ, ಆರಂಭವಾಗಿದ್ದು 1997 ರಲ್ಲಿ

ಹಸ್ತಶಿಲ್ಪ ಸಂಸ್ಕೃತಿ ಗ್ರಾಮ ದಿ. ವಿಜಯನಾಥ್ ಶೆಣೈ ಅವರ ಕನಸು. ಬ್ಯಾಂಕ್ ಉದ್ಯೋಗಿಯಾಗಿದ್ದ ಇವರಿಗೆ ಹಳ್ಳಿಗಳಿಗೆ ಹೋಗಿ ಅಲ್ಲಿನ ಹಳೆಯ ಕಾಲದ ಮನೆಗಳ ವಿಶೇಷತೆ ನೋಡುವ ಹವ್ಯಾಸವಿತ್ತು. ಕೆಲ ಘಟನೆಗಳು ಪಾರಂಪರಿಕ ಕಟ್ಟಡಗಳಿಗೆ ಮರುಜೀವ ನೀಡುವ ಕಾಯಕಲ್ಪಕ್ಕೆ ಮುನ್ನುಡಿಯಾಯಿತು.

ಹಸ್ತಶಿಲ್ಪ ಸಂಸ್ಕೃತಿ ಗ್ರಾಮ ದಿ. ವಿಜಯನಾಥ್ ಶೆಣೈ ಅವರ ಕನಸು. ಬ್ಯಾಂಕ್ ಉದ್ಯೋಗಿಯಾಗಿದ್ದ ಇವರಿಗೆ ಹಳ್ಳಿಗಳಿಗೆ ಹೋಗಿ ಅಲ್ಲಿನ ಹಳೆಯ ಕಾಲದ ಮನೆಗಳ ವಿಶೇಷತೆ ನೋಡುವ ಹವ್ಯಾಸವಿತ್ತು. ಕೆಲ ಘಟನೆಗಳು ಪಾರಂಪರಿಕ ಕಟ್ಟಡಗಳಿಗೆ ಮರುಜೀವ ನೀಡುವ ಕಾಯಕಲ್ಪಕ್ಕೆ ಮುನ್ನುಡಿಯಾಯಿತು.

Heritage Village

ಹಳೆಯ ಕಾಲದ ಒಂದೊಂದೇ ವಸ್ತುಗಳ ಸಂಗ್ರಹ ಆರಂಭಿಸಿದರು. ಬಾಡಿಗೆ ಮನೆಯಲ್ಲಿ ಇರುವ ಸಮಯದಲ್ಲಿಯೇ ಆ ಹವ್ಯಾಸ ಆರಂಭವಾಗಿ ನಿರಂತರವಾಗಿ ಸಾಗುತ್ತಾ ಬಂದಿತು. ಆ ದೆಸೆಯಲ್ಲಿ ಬೆಳೆದು ಬಂದಿದ್ದು ಇಂದು ನಾವು ನೋಡುತ್ತಿರುವ ಹಸ್ತ ಶಿಲ್ಪ ಹೆರಿಟೇಜ್ ವಿಲೇಜ್.

UDUPI

ನೀವು ಇದನ್ನು ಇಷ್ಟ ಪಡಬಹುದು:ಕರಾವಳಿ ಕಡೆ ಹೋದ್ರೆ ಈ ಖಾದ್ಯಗಳನ್ನು ಸವಿಯೋದನ್ನು ಮರೆಯಬೇಡಿ.

ಶೆಣೈ ಅವರ ಸುಮಾರು 20 ವರ್ಷಗಳ ಪರಿಶ್ರಮ ಫಲವಾಗಿ 17 ಪಾರಂಪರಿಕ ಕಟ್ಟಡಗಳನ್ನು ಈ ಸಂಸ್ಕೃತಿ ವಿಲೇಜ್ ನಲ್ಲಿ ಮರು ನಿರ್ಮಿಸಲಾಗಿದೆ. ಶತಮಾನಗಳಿಗೂ ಅಧಿಕವಾದ ಹಳೆಯ ಪಾರಂಪರಿಕ ಕಟ್ಟಡಗಳನ್ನು ಇಲ್ಲಿ ಮರು ಸ್ಥಾಪಿಸಲಾಗಿದೆ.

Museum

ಕರಾವಳಿಯ ಭೂತರಾಧನೆಯ ಸೊಬಗು ,ವಿಜಯನಗರ ಕಾಲದ ರಾಜರ ಕಾಲದ ಪುರಾತನ, ಮಿಯಾರು ಮನೆ,ಶೃಂಗೇರಿ ಮನೆ, ದರ್ಬಾರ್ ಹಾಲ್, ಜಂಗಮ ಮಠ ಎಲ್ಲವನ್ನೂ ನೀವು ಒಂದೇ ಗ್ರಾಮದಡಿ ಕಣ್ತುಂಬಿಕೊಳ್ಳಬಹುದು.

Traditional house

ಈ ಸಂಸ್ಕೃತಿ ಗ್ರಾಮದಲ್ಲಿ 18 ಪಾರಂಪರಿಕ ಕಟ್ಟಡಗಳು ,3 ಮ್ಯೂಸಿಯಂಗಳಿದೆ. ಇಲ್ಲಿ ಬರುವ ಪ್ರವಾಸಿಗರಿಗೆ ನಮ್ಮ ಸಂಸ್ಕೃತಿ, ಪುರಾತನ ಕಾಲ ಘಟ್ಟದ ಮಹತ್ವಗಳನ್ನು ತಿಳಿಸಲಾಗುತ್ತದೆ. ಸಾರ್ವಜನಿಕರಿಗೆ ಪ್ರವೇಶ ಶುಲ್ಕವನ್ನು ನಿಗದಿ ಪಡಿಸಲಾಗಿದೆ .ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯ ತನಕ ಪ್ರವಾಸಿಗರ ಭೇಟಿಗೆ ಮುಕ್ತ ಅವಕಾಶ.ಉಡುಪಿ ಜಿಲ್ಲೆಯ ಮಣಿಪಾಲ ಸಮೀಪದ ಅಲೆವೂರಿನಲ್ಲಿ ಸಂಸ್ಕೃತಿ ಗ್ರಾಮವಿದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button