Moreವಿಂಗಡಿಸದ

ದೀಪಾವಳಿ ಹಬ್ಬ ಮಾತ್ರವಲ್ಲ, ಮರುದಿನ ನಡೆಯುವ ಗೋವಿನ ಪೂಜೆ ಕೂಡ ವಿಶೇಷ

ಬೆಳಕಿನ ಹಬ್ಬ ದೀಪಾವಳಿಯನ್ನು ನಮ್ಮ ದೇಶದಲ್ಲಿ ಒಂದೊಂದು ಕಡೆಯಲ್ಲಿ ಒಂದೊಂದು ರೀತಿಯಲ್ಲಿ ಮಾಡುತ್ತಾರೆ. ಆದರೆ ಮೂರು ದಿನಗಳ ಈ ಹಬ್ಬವನ್ನು ಸರ್ವಧರ್ಮೀಯರು ಕೂಡ ಸಡಗರದಿಂದ ಆಚರಿಸುತ್ತದೆ. ಬಲಿಪಾಡ್ಯಮಿ ,ನರಕ ಚತುರ್ದಶಿಯಂತೆ ಗೋಪೂಜೆ ಕೂಡ ದೀಪಾವಳಿಯ ಮೆರಗನ್ನು ಮತ್ತಷ್ಟು ಹೆಚ್ಚು ಮಾಡುತ್ತದೆ.

Festival

ದೀಪಾವಳಿ ಹಬ್ಬದ(Deepavali Festival)ಮರುದಿನ ಗೋವರ್ಧನ ಪೂಜೆ ಅಥವಾ ಗೋ ಪೂಜೆ ಮಾಡುವುದು ವಾಡಿಕೆ. ಗೋವರ್ಧನ ಪೂಜೆಯನ್ನು ಅನ್ನ ಕೂಟದ ಹಬ್ಬ ಎಂದೂ ಕರೆಯುತ್ತಾರೆ. ಈ ಹಬ್ಬವನ್ನು ಭಾರತದಾದ್ಯಂತ ಆಚರಿಸಲಾಗುತ್ತದೆ . ವಿಶೇಷವಾಗಿ ಮಥುರಾ, ವೃಂದಾವನ, ನಂದಗಾಂವ್, ಗೋಕುಲ್, ಬರ್ಸಾನಾದಲ್ಲಿ ಇದನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ. ಶ್ರೀಕೃಷ್ಣನು ಸ್ವತಃ ಗೋಕುಲದ ಜನರನ್ನು ಗೋವರ್ಧನನನ್ನು ಪೂಜಿಸಲು ಪ್ರೇರೇಪಿಸಿದನು ಮತ್ತು ದೇವರಾಜ ಇಂದ್ರನ ಅಹಂಕಾರವನ್ನು ಈ ದಿನದಂದು ನಾಶಮಾಡಿದನು ಎನ್ನುವ ನಂಬಿಕೆಯಿದೆ.

Deepavali

ಕರ್ನಾಟಕದ ಕರಾವಳಿ(coastal karnataka)ಭಾಗದಲ್ಲಿ ಗೋಪೂಜೆ ಗೆ ಹೆಚ್ಚಿನ ಮಹತ್ವದ ಸ್ಥಾನವಿದೆ. ಹೈನುಗಾರಿಕೆಯನ್ನು ಬದುಕಿನ ಆಧಾರ ಮಾಡಿಕೊಂಡಿರುವ ಈ ಭಾಗದಲ್ಲಿ ನೀವು ಈ ಸಂದರ್ಭದಲ್ಲಿ ಯಾರೇ ಮನೆಗೆ ಹೋದರು ಗೋವಿನ ಪೂಜೆಯಂತಹ ವಿಶೇಷ ಪೂಜೆ ಸರ್ವೇ ಸಾಮಾನ್ಯ ಎನ್ನುವಂತೆ ಇಲ್ಲಿನ ಆರಾಧನಾ ಪದ್ಧತಿಯಿದೆ.

ನೀವು ಇದನ್ನು ಇಷ್ಟ ಪಡಬಹುದು:ಅ.20.2023; ನವರಾತ್ರಿಯ ಆರನೆಯ ದಿನ “ಕಾತ್ಯಾಯನಿ” ದೇವಿ ಮತ್ತು ಸರಸ್ವತಿ ಪೂಜೆ; ಏನಿದರ ಮಹತ್ವ?

Pooja

ಚಿತ್ರ ಕೃಪೆ: ಅಂತರ್ಜಾಲ

ಬೆಳ್ಳಂಬೆಳಗ್ಗೆಯೇ ಮನೆಯಲ್ಲಿರುವ ಗೋವುಗಳಿಗೆ ಸ್ನಾನ ಮಾಡಿಸಿ, ಕೊಟ್ಟಿಗೆಯನ್ನು ಶುಭ್ರಗೊಳಿಸುತ್ತಾರೆ. ಆ ಬಳಿಕ ಗೋವುಗಳ ಹಣೆಗೆ ಹಾಗೂ ಕಾಲುಗಳಿಗೆ ಅರಶಿನ ಕುಂಕುಮವನ್ನು ಹಚ್ಚುತ್ತಾರೆ. ನಂತರ ವಿಭೂತಿ ಉಂಡೆಯನ್ನು ನೀರಿನಲ್ಲಿ ಮಿಶ್ರಣ ಮಾಡಿ, ಜಾಜಿ ಕಲ್ಲನ್ನು ಪುಡಿಯನ್ನು ಹಾಕುತ್ತಾರೆ. ಅವುಗಳನ್ನು ಗೋವುಗಳ ದೇಹಕ್ಕೆ ಹಾಕುತ್ತಾರೆ. ಅವುಗಳನ್ನು ಹಚ್ಚಿದ ನಂತರ ಗೋವುಗಳಿಗೆ ಹೂವಿನ ಹಾರಗಳನ್ನು ಹಾಕಿ, ಆರತಿ ಬೆಳಗಿ, ಬಾಳೆಹಣ್ಣು, ಸಿಹಿ ತಿನಿಸಬೇಕು.

Cow worship

ಚಿತ್ರ ಕೃಪೆ: ಅಂತರ್ಜಾಲ

ಹೂವಿನ ಹಾರ ಅಂದ್ರೆ ಕೆಲವರು ಮಾರುಕಟ್ಟೆಯಿಂದ ತಂದಿರುವ ಹೂವಿನ ಹಾರ ಹಾಕುವ ಮಂದಿ ವಿರಳ. ಮನೆಯಲ್ಲಿಯೇ ಬೆಳೆದ ಹೂವು ಉದಾಹರಣೆಗೆ ದಾಸವಾಳದಂತಹ ಹೂವಿನ ಮಾಲೆ ತಯಾರಿಸಿ ಗೋಮಾತೆ ಕೊರಳಿಗೆ ಹಾಕುತ್ತಾರೆ. ನಂತರ ದೋಸೆ ಅಥವಾ ಇಡ್ಲಿ ರೀತಿಯ ತಿನಿಸುಗಳನ್ನು ನೀಡಿ ಹಸುವಿನ ಆಶೀರ್ವಾದ ಪಡೆಯುತ್ತಾರೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button