ವಿಂಗಡಿಸದ

ಅ.20.2023; ನವರಾತ್ರಿಯ ಆರನೆಯ ದಿನ “ಕಾತ್ಯಾಯನಿ” ದೇವಿ ಮತ್ತು ಸರಸ್ವತಿ ಪೂಜೆ; ಏನಿದರ ಮಹತ್ವ?

ಆಶ್ವಯುಜ ಮಾಸದ ಶುಕ್ಲಪಕ್ಷದ ಷಷ್ಠಿಯಂದು ಕಾತ್ಯಾಯನಿ ದೇವಿಯನ್ನು ಆರಾಧಿಸಲಾಗುತ್ತದೆ. ಹಾಗೂ ಸರಸ್ವತಿ ಪೂಜೆಯನ್ನು ಆರಂಭಿಸಲಾಗುತ್ತದೆ. ಈ ದಿನದ ವೈಶಿಷ್ಟ್ಯತೆ ಮತ್ತು ಮೈಸೂರು ದಸರಾ 2023 ರ ಕಾರ್ಯಕ್ರಮಗಳ ಮಾಹಿತಿ ಇಲ್ಲಿದೆ.

ಉಜ್ವಲಾ ವಿ ಯು

ಕಾತ್ಯಾಯನಿ ದೇವಿಯ ಹಿನ್ನೆಲೆ:

ನವರಾತ್ರಿಯ ಆರನೆಯ ದಿನ ಸರಸ್ವತಿ, ಲಕ್ಷ್ಮೀ, ದುರ್ಗೆ ಮೂರೂ ದೇವತೆಗಳ ಸ್ವರೂಪಳಾದ “ಕಾತ್ಯಾಯನಿ” ದೇವಿಯನ್ನು ಪೂಜಿಸಲಾಗುತ್ತದೆ. ದೇವಿಯು ದುಷ್ಟ ರಾಕ್ಷಸರ ಸಂಹಾರಕ್ಕೆಂದೇ ಜನಿಸಿದವಳು.

Navaratri 6th Day: Katyayani Devi

ಕಾತ್ಯಾಯನ ಎಂಬ ಋಷಿಯ ಕಠಿಣ ತಪಸ್ಸಿಗೆ ಒಲಿದು ದುರ್ಗೆಯು ಋಷಿಯ ಮಗಳಾಗಿ ಜನಿಸುತ್ತಾಳೆ. ಕಾತ್ಯಾಯನ ಋಷಿಯ ಮಗಳಾಗಿರುವುದರಿಂದ ಇವಳನ್ನು “ಕಾತ್ಯಾಯನಿ” ಎಂಬ ಹೆಸರಿಂದ ಕರೆಯಲಾಗುತ್ತದೆ. ಕೆಂಪು ಬಣ್ಣದ ಹೂಗಳಿಂದ ಪೂಜಿಸಲ್ಪಡುವ ಇವಳು ಧೈರ್ಯದ ಸಂಕೇತ. ಕಾತ್ಯಾಯನಿ ದೇವಿಯು ಸಿಂಹದ ಮೇಲೆ ಕುಳಿತಿರುತ್ತಾಳೆ ಮತ್ತು ನಾಲ್ಕು ಕೈಗಳನ್ನು ಹೊಂದಿದ್ದಾಳೆ.

ಕಾತ್ಯಾಯನಿ ದೇವಿಯು ಗುರು ಗ್ರಹವನ್ನು ಆಳುತ್ತಾಳೆ. ಇವಳನ್ನು ಪೂಜಿಸುವ ವ್ಯಕ್ತಿ ಧೈರ್ಯವಂತನಾಗಿದ್ದು, ಜೀವನದಲ್ಲಿ ಅಪಾರ ಯಶಸ್ಸನ್ನು ಪಡೆದುಕೊಳ್ಳುತ್ತಾನೆ.

ದಕ್ಷಿಣ ಭಾರತದಲ್ಲಿ ಇಂದಿನಿಂದ ಸರಸ್ವತಿ ಪೂಜೆ:

ದಕ್ಷಿಣ ಭಾರತದಲ್ಲಿ “ಸರಸ್ವತಿ ಪೂಜೆ”ಯು ನವರಾತ್ರಿಯ ಸಮಯದಲ್ಲಿ ಆಚರಿಸುವ ಪ್ರಮುಖ ಹಬ್ಬವಾಗಿದೆ, ಈ ಪೂಜೆಯನ್ನು ನವರಾತ್ರಿಯ ಆರನೇ ದಿನ ಅಥವಾ ಒಂಬತ್ತನೇ/ಹತ್ತನೇ ದಿನದಂದು ಆಚರಿಸಲಾಗುತ್ತದೆ. ಕೇರಳ ಮತ್ತು ತಮಿಳುನಾಡಿನಲ್ಲಿ ಆಯುಧಪೂಜೆಯ ದಿನದಂದೇ ಸರಸ್ವತಿ ಪೂಜೆಯನ್ನು ಆಚರಿಸಲಾಗುತ್ತದೆ.

Navaratri Saraswati Pooja

ಸರಸ್ವತಿ ದೇವಿಯನ್ನು 3 ಅಥವಾ 4 ದಿನಗಳ ಕಾಲ ಪೂಜಿಸಲಾಗುತ್ತದೆ. ಪೂಜೆಯು ಸರಸ್ವತಿ ಆವಾಹನದೊಂದಿಗೆ ಪ್ರಾರಂಭವಾಗಿ , ನಂತರ ಸರಸ್ವತಿ ಪೂಜೆ , 3 ನೇ ದಿನದಂದು ಸರಸ್ವತಿ ಬಲಿದಾನವನ್ನು ಮತ್ತು ಸರಸ್ವತಿ ವಿಸರ್ಜನೆಯೊಂದಿಗೆ ಕೊನೆಗೊಳ್ಳುತ್ತವೆ.

ಮೈಸೂರು ದಸರಾ 2023:(Mysore Dasara 2023) ಅರಮನೆ ವೇದಿಕೆಗಳಲ್ಲಿ ಇಂದು ನಡೆವ ಕಾರ್ಯಕ್ರಮಗಳು:

ಅರಮನೆ ವೇದಿಕೆಯಲ್ಲಿ ಇಂದು ಶುಕ್ರವಾರ ಸಂಜೆ 5.30ರಿಂದ 6 ಗಂಟೆ ತನಕ ಮುಡಿಗುಂಡ ಮೂರ್ತಿ ತಂಡದಿಂದ ಕಾವ್ಯ – ಕುಂಚ – ಗಾಯನ, ನಂತರ ವಿದುಷಿ ರೇಖಾ ಸುಬ್ರಹ್ಮಣ್ಯ ತಂಡದಿಂದ ಪಂಚ ವೀಣಾ ವಾದನ. ಅದಾಗಿ ಸಂಜೆ 7ರಿಂದ 8 ರ ತನಕ ವಿದುಷಿ ಸೋಹನಿ ಬೋಸ್ ಬ್ಯಾನರ್ಜಿ ಅವರಿಂದ ತ್ರಿವೇಣಿ (ಒಡಿಸ್ಸಿ-ಕೂಚಿಪುಡಿ-ಭರನಾಟ್ಯಂ). ನಂತರ ಪಂಡಿತ್ ಕುತ್ಲೇ ಖಾನ್‌ ಹಾಗೂ ವಿದುಷಿ ರಸಿಕಾ ಶೇಖರ್ ತಂಡದಿಂದ ಜುಗಲ್ಬಂದಿ ಕಾರ್ಯಕ್ರಮ.

Mysore Dasara 2023

ಜಗನ್ಮೋಹನ ಅರಮನೆ ವೇದಿಕೆಯಲ್ಲಿ ಇಂದು ಸಂಜೆ 5.30ರಿಂದ 6ರ ತನಕ ವಿಶ್ವನಾಥ ಎಲ್ ಮತ್ತು ತಂಡದಿಂದ ಜನಪದ ಗಾಯನ. ನಂತರ ಬೆಂಗಳೂರು ಎಸ್‌ ಎಲ್ ಶಿವಶಂಕರ ಅವರಿಂದ ತಾಳವಾದ್ಯ. ಅದಾದ ನಂತರ ಚಿತ್ರದುರ್ಗದ ನಾಗಶ್ರೀ ಎಂ.ಪಿ. ಇವರಿಂದ ನೃತ್ಯ ರೂಪಕ. ನಂತರ ಮೈಸೂರು ರವಿರಾಜ್ ಮತ್ತು ತಂಡದಿಂದ ವಚನ ಗಾಯನ. ನಂತರ ಮೈಸೂರು ಶ್ರೀ ಸರ್ವೇಶ್ವರ ನೃತ್ಯ ಕಲಾಮಂದಿರದ ಪಂಕಜಾ ರಾಮಕೃಷ್ಣಯ್ಯ ಅವರಿಂದ ನೃತ್ಯ ರೂಪಕ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತ ಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button