ವಿಂಗಡಿಸದ

ರಾಮಮಂದಿರ ನಿರ್ಮಾಣದ ಚಿತ್ರಗಳನ್ನು ಹಂಚಿಕೊಂಡ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್

ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಅಧಿಕೃತ X ಖಾತೆಯಲ್ಲಿ (ಟ್ವಿಟರ್) ಸೋಮವಾರ ರಾಮಮಂದಿರ ನಿರ್ಮಾಣದ ಕೆಲವು ಚಿತ್ರಗಳನ್ನು ಬಿಡುಗಡೆ ಮಾಡಿದ್ದು, ರಾಮಮಂದಿರ ನಿರ್ಮಾಣದ ಪ್ರಗತಿ ಕಂಡ ಜನರು ಸಂತಸ ವ್ಯಕ್ತಪಡಿಸುತ್ತಿದ್ದಾರೆ.

ಉಜ್ವಲಾ ವಿ.ಯು.

Latest construction pictures of the Ram Mandir

ಟ್ರಸ್ಟ್ ಹಂಚಿಕೊಂಡಿರುವ ಛಾಯಾಚಿತ್ರಗಳಲ್ಲಿ ನೆಲ ಅಂತಸ್ತಿನ ನಿರ್ಮಾಣದ ಕಾರ್ಯ ಸ್ಪಷ್ಟವಾಗಿ ಗೋಚರಿಸುತ್ತದೆ. ದೇವಾಲಯದ ನಿರ್ಮಾಣದ ಮೊದಲ ಹಂತವು ಬಹುತೇಕ ಪೂರ್ಣಗೊಳ್ಳುತ್ತಾ ಬಂದಿದೆ ಎಂಬುದು ಈ ಚಿತ್ರಗಳ ಮೂಲಕ ತಿಳಿಯಬಹುದು.

Latest Picture of Ayodhya Ram Mandir

ಟ್ರಸ್ಟ್ ಪ್ರಕಾರ, ರಾಮಲಾಲ ಗರ್ಭಗುಡಿಯ ಮೇಲ್ಛಾವಣಿಗೆ ಗೋಡೆಗಳನ್ನೂ ನಿರ್ಮಿಸಲಾಗಿದ್ದು, ಗರ್ಭಗುಡಿಯ ಸುಮಾರು 90% ಕೆಲಸ ಪೂರ್ಣಗೊಂಡಿದೆ. ಗರ್ಭಗುಡಿಯ ಸುತ್ತಲೂ ಬಿಳಿ ಅಮೃತಶಿಲೆಯನ್ನು ಸ್ಥಾಪಿಸಲಾಗುತ್ತಿದೆ ಹಾಗೂ ಅದರ ಮೇಲೆ ಕೆತ್ತನೆಗಳನ್ನು ಕೂಡ ಮಾಡಲಾಗುತ್ತಿದೆ.

Ayodhya Ram Mandir

ಅಯೋಧ್ಯೆಯ ಭವ್ಯವಾದ ರಾಮಮಂದಿರದ ಮೊದಲ ಹಂತದ ನಿರ್ಮಾಣವು ಡಿಸೆಂಬರ್ 2023ರಲ್ಲಿ ಪೂರ್ಣಗೊಂಡು, 2024 ರ ಜನವರಿಯ ಸಂಕ್ರಾಂತಿ ಹಬ್ಬದಂದು ರಾಮನ ಮೂರ್ತಿಯನ್ನು ಪ್ರತಿಷ್ಠಾಪಿಸಬೇಕಾಗಿರುವುದರಿಂದ ನಿರ್ಮಾಣದ ಕಾರ್ಯವು ತ್ವರಿತಗತಿಯಲ್ಲಿ ಸಾಗುತ್ತಿದೆ.

Ayodhya Ram Mandir

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button