ದೂರ ತೀರ ಯಾನವಿಂಗಡಿಸದ

ಹೊಸ ರೂಪದಲ್ಲಿ ಏರ್ ಇಂಡಿಯಾ ಎಕ್ಸ್‌ಪ್ರೆಸ್‌. ಇನ್ನುಮುಂದೆ ಕಿತ್ತಳೆ ಬಣ್ಣದಲ್ಲಿ ಕಂಗೊಳಿಸಲಿದೆ.

ಪ್ರತಿ ಕಾಲಕ್ಕೂ ತಕ್ಕಂತೆ ಹೊಸತನದ ಬದಲಾವಣೆಗಳು ಆಗುತ್ತಲೇ ಇರುತ್ತದೆ. ನಾವು ಈ ಬದಲಾವಣೆಗಳನ್ನು ಖುಷಿ ಖುಷಿ ಯಿಂದಲೇ ಒಪ್ಪಿಕೊಳ್ಳುತ್ತೇವೆ. ಇದೀಗ ಮತ್ತೊಂದು ಬದಲಾವಣೆಗೆ ಜನತೆ ಸಾಕ್ಷಿಯಾಗಲಿದ್ದಾರೆ. ಈ ಬದಲಾವಣೆ ವಿಮಾನಯಾನ ಮಾಡುವವರಿಗೆ ಖುಷಿಯ ಸಂಗತಿ.

ಇತ್ತೀಚಿನ ದಿನಗಳಲ್ಲಿ ಕಡಿಮೆ ಬೆಲೆಯ ವಿಮಾನಯಾನ ಸಂಸ್ಥೆಗಳಿಗೆ ಕಿತ್ತಳೆ ಬಣ್ಣ ಅಚ್ಚುಮೆಚ್ಚಿನ ಬಣ್ಣವಾಗಿ ರೂಪುಗೊಂಡಿದೆ. ಇದೇ ವೇಳೆ ಪೂರ್ಣ ಪ್ರಮಾಣದ ಸೇವೆ ನೀಡುವ ವಿಮಾನಯಾನ ಸಂಸ್ಥೆಗಳು ಕೆಂಪು ಮತ್ತು ನೀಲಿ ಬಣ್ಣಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಕಿತ್ತಳೆ ಮತ್ತು ಬಿಳಿ ಬಣ್ಣವನ್ನು ಕಡಿಮೆ-ವೆಚ್ಚದಲ್ಲಿ  ವಿಮಾನದ ವಿನ್ಯಾಸದಲ್ಲಿ ಹೆಚ್ಚಾಗಿ ಬಳಕೆಯಾಗುತ್ತವೆ. ಈ ಸಾಲಿಗೆ ಇದೀಗ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ಕೂಡ ಸೇರ್ಪಡೆಯಾಗಿದೆ.

 ಆಕಾಶ ಏರ್‌ ಬಳಿಕ ಟಾಟಾ ಗ್ರೂಪ್‌ ಒಡೆತನದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಕಿತ್ತಳೆ ಮತ್ತು ಬಿಳಿ ಬಣ್ಣದ ಲೈವರಿ ಅಂದರೆ ವಿಮಾನದ ಬಣ್ಣಗಳ ಪ್ಯಾಟರ್ನ್ ಗಳನ್ನು  ಬದಲಾವಣೆ ಮಾಡಿ ಬಿಡುಗಡೆ ಮಾಡಿದೆ.

 ಏರ್‌ಏಷ್ಯಾ ಇಂಡಿಯಾದೊಂದಿಗೆ ವಿಲೀನಗೊಂಡಿರುವ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ಗಾಗಿ ಟಾಟಾ ಸಮೂಹವು  ಬಿಳಿ, ಕಿತ್ತಳೆ ಮತ್ತು ಟರ್ಕಾಯಿಸ್‌ ನೀಲಿ ಬಣ್ಣದ ಲೈವರಿಯನ್ನು ಅನಾವರಣಗೊಳಿಸಿದೆ.

Air India Express Unveils
Air India Express Unveils

ಏರ್ ಇಂಡಿಯಾದ (Air India) ನಂತರ, ಟಾಟಾ ಗ್ರೂಪ್ (TATA Group) ತನ್ನ ಬಜೆಟ್ ಏರ್‌ಲೈನ್ ‘ಏರ್ ಇಂಡಿಯಾ ಎಕ್ಸ್‌ಪ್ರೆಸ್’ನ ಹೊಸ ನೋಟವನ್ನು  ತೋರಿಸಿದೆ. ವಿಮಾನದ ಹಿಂದಿನ ಭಾಗದ ವಿನ್ಯಾಸವು  ಮಾತೃ ಸಂಸ್ಥೆ ಏರ್ ಇಂಡಿಯಾ ಮತ್ತು ಬಾಂಧನಿ ಕಲೆಯಿಂದ ಪ್ರೇರಿತವಾಗಿದೆ. ಈ ಬದಲಾವಣೆಯು ಕಂಪನಿಯ ರೂಪಾಂತರ ಕಾರ್ಯಕ್ರಮದ ಭಾಗವಾಗಿದೆ.

ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ಹೊಸ ವಿಮಾನವನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಅನಾವರಣಗೊಳಿಸಿದೆ. ಕಿತ್ತಳೆ, ವೈಡೂರ್ಯದ ಬಣ್ಣಗಳನ್ನು ವಿಮಾನದಲ್ಲಿ ಬಳಸಲಾಗಿದೆ. 

ಏರ್ ಇಂಡಿಯಾ ಎಕ್ಸ್‌ಪ್ರೆಸ್ (Air India Express) ಪ್ರಸ್ತುತ ಏರ್ ಏಷ್ಯಾದಿಂದ 28 ಏರ್‌ಬಸ್, 26 ಬೋಯಿಂಗ್ ಮತ್ತು 737 ವಿಮಾನಗಳನ್ನು ಹೊಂದಿದೆ. ವಿಮಾನಯಾನ ಸಂಸ್ಥೆಯು ಮಾರ್ಚ್ ಅಂತ್ಯದ ವೇಳೆಗೆ 23 ಹೊಸ ಬೋಯಿಂಗ್ 737 ಮ್ಯಾಕ್ಸ್ ವಿಮಾನಗಳನ್ನು ತನ್ನ ಫ್ಲೀಟ್‌ಗೆ ಸೇರಿಸಲಿದೆ.

Air India Express Unveils
New Air India Express Design

ಏರ್ ಇಂಡಿಯಾದಲ್ಲಿ ಆಗಿರುವ ಪ್ರಮುಖ ಬದಲಾವಣೆಗಳು ಯಾವುದು ಎನ್ನುವುದು ಅನ್ನೋದನ್ನ ನೋಡುವುದಾದರೆ ,

* ಗಾಢ ಕೆಂಪು AI ಅಕ್ಷರಗಳನ್ನು ಉಳಿಸಿಕೊಂಡಿವೆ, ಆದರೆ ಫಾಂಟ್ ವಿಭಿನ್ನವಾಗಿದೆ. ಚಿನ್ನದ ಕಿಟಕಿ ಚೌಕಟ್ಟನ್ನು ಇದರಲ್ಲಿ ಸೇರಿಸಲಾಗಿದೆ.

* ಏರ್ ಇಂಡಿಯಾ ತನ್ನ ಹೊಸ ಬದಲಾವಣೆಯೊಂದಿಗೆ ಎಮಿರೇಟ್ಸ್ ಮತ್ತು ಕತಾರ್ ಏರ್‌ವೇಸ್‌ನಂತಹ ವಾಹಕಗಳೊಂದಿಗೆ ಸ್ಪರ್ಧಿಸಲು ಬಯಸಿದೆ.

* ಇದುವರೆಗೆ ವಿಮಾನಯಾನ ಸಂಸ್ಥೆಯು 400 ಮಿಲಿಯನ್ ಡಾಲರ್‌ಗಳನ್ನು ಅಂದರೆ ಸುಮಾರು 3300 ಕೋಟಿ ರೂಪಾಯಿಗಳನ್ನು ವಿಮಾನಗಳನ್ನು ನವೀಕರಿಸಲು ಖರ್ಚು ಮಾಡಿದೆ ಎಂದು ಏರ್ ಇಂಡಿಯಾದ ಸಿಇಒ ಹೇಳಿದ್ದಾರೆ.

Air India Express Unveils

* ಏರ್‌ಲೈನ್‌ನ ಮೆಗಾ ಮೇಕ್‌ಓವರ್ ನಂತರವೂ ಮಹಾರಾಜ ಬ್ರ್ಯಾಂಡ್‌ನ ಭಾಗವಾಗಿ ಉಳಿಯುತ್ತದೆ. ವಿಮಾನಯಾನ ಸಂಸ್ಥೆಯು ತನ್ನ ವಿಮಾನ ನಿಲ್ದಾಣದ ವಿಶ್ರಾಂತಿ ಕೊಠಡಿಗಳು ಮತ್ತು ಪ್ರೀಮಿಯಂ ವರ್ಗಕ್ಕಾಗಿ ಮಹಾರಾಜರ ಚಿತ್ರವನ್ನು ಬಳಸುವುದನ್ನು ಮುಂದುವರಿಸಬಹುದು.

ನಾವು ಏರ್ ಏಷ್ಯಾ ಇಂಡಿಯಾ ಬ್ರ್ಯಾಂಡ್ ಅನ್ನು ಬದಲಾಯಿಸುತ್ತಿದ್ದೇವೆ. ನೀವು ಕೆಲವು ಸಮಯದವರೆಗೆ ಎರಡು ಏರ್‌ಲೈನ್ ವಿನ್ಯಾಸಗಳಾದ IX ಮತ್ತು I5ನಲ್ಲಿ ವಿಮಾನಗಳಲ್ಲಿ ನೋಡಲಿದ್ದೀರಿ. ಆದರೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಬ್ರ್ಯಾಂಡ್‌ನ ಅಡಿಯಲ್ಲಿ ಸೇವೆಗಳು, ಟಿಕೆಟ್‌ ಮಾರಾಟ ಮತ್ತು ವಿತರಣೆಯನ್ನು ಮಾಡಲಾಗುತ್ತದೆ,” ಎಂದು ವಿಮಾನಯಾನ ಸಂಸ್ಥೆಯ ಎಂಡಿ ಮತ್ತು ಸಿಇಒ ಅಲೋಕ್ ಸಿಂಗ್ ಹೇಳಿದ್ದಾರೆ.

Air India Express Unveils

ಹೊಸ ಬಣ್ಣದಿಂದ ಚೆಂದ ಗೊಂಡಿರುವ ಈ ವಿಮಾನಗಳು ಸದ್ಯ ಎಲ್ಲರ ಗಮನ ಸೆಳೆಯುತ್ತಿದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ

Related Articles

Leave a Reply

Your email address will not be published. Required fields are marked *

Back to top button