ಹೋಳಿ ಹಬ್ಬದ ಪ್ರಯುಕ್ತ ಕರ್ನಾಟಕದಿಂದ ವಿಶೇಷ ರೈಲುಗಳ ಸಂಚಾರ; ನೈರುತ್ಯ ರೈಲ್ವೆ ಕೊಡುಗೆ
ಮಾ. 25 ರಂದು ಆಚರಿಸಲಾಗುವ ಹೋಳಿ ಹಬ್ಬದ (Holi Festival) ಪ್ರಯುಕ್ತ ಉಂಟಾಗುವ ಜನರ ದಟ್ಟಣೆಯನ್ನು ನಿಯಂತ್ರಿಸಲು ನೈರುತ್ಯ ರೈಲ್ವೆಯು (South Western Railways) ವಿಶೇಷ ರೈಲುಗಳ ಘೋಷಣೆ ಮಾಡಿದೆ.
ಕರ್ನಾಟಕದಿಂದ (Karnataka) ಮೂರು ವಿಶೇಷ ರೈಲುಗಳನ್ನು (Special Trains) ಬೆಂಗಳೂರು, ಹುಬ್ಬಳ್ಳಿಯಿಂದ ವಿವಿಧ ರಾಜ್ಯಗಳಿಗೆ ಓಡಿಸಲು ನೈರುತ್ಯ ರೈಲ್ವೆಯು ನಿರ್ಧರಿಸಿದೆ.
ಮೂರು ವಿಶೇಷ ರೈಲುಗಳ ಸಂಪೂರ್ಣ ವಿವರ ಮತ್ತು ವೇಳಾಪಟ್ಟಿ ಇಲ್ಲಿದೆ.
ಎಸ್ಎಂವಿಟಿ (SMVT) ಬೆಂಗಳೂರು – ಕೊಚುವೇಲಿ (Kochuveli) ವಿಶೇಷ ರೈಲು: (ರೈಲು ಸಂಖ್ಯೆ 06555/06556)
ಎಸ್ಎಂವಿಟಿ ಬೆಂಗಳೂರು-ಕೊಚುವೇಲಿ ನಿಲ್ದಾಣಗಳ ನಡುವೆ ಎರಡು ಟ್ರಿಪ್ ಈ ವಿಶೇಷ ರೈಲು ಸಂಚರಿಸಲಿದೆ.
ಮಾರ್ಚ್ 23 ಮತ್ತು ಮಾರ್ಚ್ 30, 2024 ಕ್ಕೆ ಈ ವಿಶೇಷ ರೈಲು ರೈಲು ಸಂಖ್ಯೆ 06555 ಎಸ್ಎಂವಿಟಿ ಬೆಂಗಳೂರಿನಿಂದ ರಾತ್ರಿ 11:55 ಗಂಟೆಗೆ ಹೊರಡುತ್ತದೆ.
ಮರುದಿನ ಸಂಜೆ 7:10 ಗಂಟೆಗೆ ಕೊಚುವೇಲಿ ನಿಲ್ದಾಣವನ್ನು ತಲುಪಲಿದೆ.
ಮಾರ್ಚ್ 24 ಮತ್ತು 31, 2024 ರಂದು ರೈಲು ಸಂಖ್ಯೆ 06556 ಕೊಚುವೇಲಿ ನಿಲ್ದಾಣಯಿಂದ ರಾತ್ರಿ 10:00 ಗಂಟೆಗೆ ಹೊರಡುತ್ತದೆ.
ಮರುದಿನ ಸಂಜೆ 4:30 ಗಂಟೆಗೆ ಎಸ್ಎಂವಿಟಿ ಬೆಂಗಳೂರು ನಿಲ್ದಾಣಕ್ಕೆ ಆಗಮಿಸಲಿದೆ.
ನಿಲುಗಡೆ: (Stops)
ವೈಟ್ ಫೀಲ್ಡ್, ಬಂಗಾರಪೇಟೆ, ಕುಪ್ಪಂ, ಸೇಲಂ ಜಂ, ಈರೋಡ್ ಜಂ, ತಿರುಪ್ಪೂರು, ಕೊಯಮತ್ತೂರು ಜಂ, ಪಾಲಕ್ಕಾಡ್ ಜಂ, ಒಟ್ಟಪ್ಪಲಂ, ತ್ರಿಶೂರ್, ಅಲುವಾ, ಎರ್ನಾಕುಲಂ ಟೌನ್, ಕೊಟ್ಟಾಯಂ, ತಿರುವಲ್ಲಾ, ಚೆಂಗಣ್ಣೂರ್, ಕಾಯಂಕುಲಂ ಮತ್ತು ಕೊಲ್ಲಂ.
ಬೆಂಗಳೂರು ಕಣ್ಣೂರು (Kannur) ವಿಶೇಷ ರೈಲು: (ರೈಲು ಸಂಖ್ಯೆ 06557/06558)
ಎಸ್ಎಂವಿಟಿ ಬೆಂಗಳೂರು- ಕಣ್ಣೂರು ನಿಲ್ದಾಣಗಳ ನಡುವೆ ಎರಡು ಟ್ರಿಪ್ ಈ ವಿಶೇಷ ರೈಲು ಸಂಚರಿಸಲಿದೆ.
ಮಾರ್ಚ್ 19 ಮತ್ತು ಮಾ. 26 ರಂದು ರೈಲು ಸಂಖ್ಯೆ 06557 ಎಸ್ಎಂವಿಟಿ ಬೆಂಗಳೂರಿನಿಂದ ರಾತ್ರಿ 11:55 ಗಂಟೆಗೆ ಹೊರಡುತ್ತದೆ.
ಮರುದಿನ ಮಧ್ಯಾಹ್ನ 2 ಗಂಟೆಗೆ ಕಣ್ಣೂರು ನಿಲ್ದಾಣವನ್ನು ತಲುಪಲಿದೆ.
ಮಾರ್ಚ್ 20 ಮತ್ತು 27 ರಂದು ರೈಲು ಸಂಖ್ಯೆ 06558 ಕಣ್ಣೂರಿನಿಂದ ರಾತ್ರಿ 8 ಗಂಟೆಗೆ ಹೊರಡುತ್ತದೆ.
ಮರುದಿನ ಮಧ್ಯಾಹ್ನ 1 ಗಂಟೆಗೆ ಎಸ್ಎಂವಿಟಿ ಬೆಂಗಳೂರು ನಿಲ್ದಾಣಕ್ಕೆ ಆಗಮಿಸಲಿದೆ.
ನಿಲುಗಡೆ:
ಕೃಷ್ಣರಾಜಪುರಂ, ಬಂಗಾರಪೇಟೆ ಜಂ, ಸೇಲಂ ಜಂ, ಈರೋಡ್ ಜಂ, ಕೊಯಮತ್ತೂರು ಜಂ, ಪಾಲಕ್ಕಾಡ್ ಜಂ, ಶೋರನೂರ್ ಜಂ, ತಿರೂರ್, ಕೋಝಿಕ್ಕೋಡ್, ವಡಕರ ಮತ್ತು ಥಲಶೇರಿ.
ಹುಬ್ಬಳ್ಳಿ – ಅಹಮದಾಬಾದ್ (Ahmedabad) ವಿಶೇಷ ರೈಲು: (ರೈಲು ಸಂಖ್ಯೆ 07311/07312)
ಎಸ್ಎಸ್ಎಸ್ ಹುಬ್ಬಳ್ಳಿ – ಅಹಮದಾಬಾದ್ ನಿಲ್ದಾಣಗಳ ನಡುವೆ ಒಂದು ಟ್ರಿಪ್ ಈ ವಿಶೇಷ ರೈಲು ಸಂಚರಿಸಲಿದೆ.
ಮಾರ್ಚ್ 24, 2024 ರಂದು ರೈಲು ಸಂಖ್ಯೆ 07311 ಎಸ್ಎಸ್ಎಸ್ ಹುಬ್ಬಳ್ಳಿ ನಿಲ್ದಾಣದಿಂದ ಸಂಜೆ 7:30 ಗಂಟೆಗೆ ಹೊರಡುತ್ತದೆ.
ಮರುದಿನ ಸಂಜೆ 7:20 ಗಂಟೆಗೆ ಅಹಮದಾಬಾದ್ ನಿಲ್ದಾಣವನ್ನು ತಲುಪಲಿದೆ.
ಮಾರ್ಚ್ 25, 2024 ರಂದು ರೈಲು ಸಂಖ್ಯೆ 07312 ಅಹಮದಾಬಾದ್ ನಿಲ್ದಾಣದಿಂದ ರಾತ್ರಿ 9:25 ಗಂಟೆಗೆ ಹೊರಡುತ್ತದೆ.
ಮರುದಿನ ಸಂಜೆ 7:45 ಗಂಟೆಗೆ ಎಸ್ಎಸ್ಎಸ್ ಹುಬ್ಬಳ್ಳಿ ನಿಲ್ದಾಣಕ್ಕೆ ಬರಲಿದೆ.
ನಿಲುಗಡೆ:
ಧಾರವಾಡ, ಲೋಂಡಾ ಜಂ, ಬೆಳಗಾವಿ, ಘಟಪ್ರಭಾ, ಮಿರಜ್ ಜಂ, ಸಾಂಗ್ಲಿ, ಸತಾರಾ, ಪುಣೆ ಜಂ, ಲೋನಾವಲ, ಕಲ್ಯಾಣ್ ಜಂ, ವಸಾಯಿ ರೋಡ್, ಬೋಯಿಸರ್, ವಾಪಿ, ಸೂರತ್, ವಡೋದರಾ ಮತ್ತು ಆನಂದ.
ಹೆಚ್ಚಿನ ಮಾಹಿತಿಗಾಗಿ, ಭಾರತೀಯ ರೈಲ್ವೆ ವೆಬ್ ಸೈಟ್ (https://enquiry.indianrail.gov.in) ಗೆ ಭೇಟಿ ನೀಡಿ ಅಥವಾ 139 ನಂಬರ್ ಗೆ ಡಯಲ್ ಮಾಡಿ ಮಾಹಿತಿ ಪಡೆದುಕೊಳ್ಳಬಹುದು.
ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.