ವಂಡರ್ ಬಾಕ್ಸ್ವಿಂಗಡಿಸದವಿಸ್ಮಯ ವಿಶ್ವ

ಎಂಟು ಕಣ್ಣಿನ ಹೊಸ ಚೇಳು ಥೈಲ್ಯಾಂಡಲ್ಲಿ ಪತ್ತೆ

ಈ ಪ್ರಕೃತಿಯೇ ಹಾಗೆ ಅದೊಂದು ವಿಸ್ಮಯಗಳ ಆಗರ. ಇಲ್ಲಿ ಘಟಿಸುವ ಒಂದೊಂದು ಘಟನೆಗಳು ಮನುಷ್ಯನ ಕಲ್ಪನೆಗೂ ನಿಲುಕದ್ದು.

ಅದರಲ್ಲಿಯೂ ಜೀವ ಸಂಕುಲ ಲೋಕದಲ್ಲಿ ನಡೆಯುವ ಒಂದಿಷ್ಟು ಘಟನೆಗಳು ಮಾನವ ಅಚ್ಚರಿಗೆ ಕಾರಣವಾಗುತ್ತದೆ. ಇದೀಗ ಅಂಥದ್ದೇ ಒಂದು ಜೀವ ಪ್ರಭೇದ ಅಚ್ಚರಿ ಥೈಲ್ಯಾಂಡ್ ನಲ್ಲಿ ನಡೆದಿದೆ.

ಥೈಲ್ಯಾಂಡ್ ನ(Thailand) ರಾಷ್ಟ್ರೀಯ ಪಾರ್ಕ್(National Park) ಒಂದರಲ್ಲಿ ಹೊಸ ಪ್ರಭೇದದ ಚೇಳಿನ ತಳಿಯೊಂದನ್ನು ಗುರುತಿಸಲಾಗಿದೆ. ಇದೊಂದು ಅಪರೂಪದ ಚೇಳಾಗಿದ್ದು, ಎಂಟು ಕಣ್ಣುಗಳು ಹಾಗೂ ಕಾಲುಗಳನ್ನು ಹೊಂದಿದೆ(8 Leg and 8 Eye).

 ಸಾಮಾನ್ಯವಾಗಿ ಚೇಳುಗಳಿಗೆ(Scorpio) ತಲೆಯ ಮೇಲೆ ಎರಡು ಕಣ್ಣುಗಳು ಇರುತ್ತವೆ. ಐದು ಜೊತೆ ಕಣ್ಣುಗಳನ್ನು ಹೊಂದಿರುವ ವಿಶಿಷ್ಟ ಪ್ರಭೇದಗಳೂ ಇವೆ.

ಇಷ್ಟು ಕಣ್ಣುಗಳು ತಲೆಯ ಮುಂಭಾಗದ ಅಂಚಿನಲ್ಲಿ ಕಂಡುಬರುತ್ತವೆ.  ಈ ಪ್ರಭೇದ ಯೂಸ್ಕಾಪಿಯೊಪ್ಸ್ ಗುಂಪಿಗೆ ಸೇರಿದ್ದು ಯೂಸ್ಕಾಪಿಯೊಪ್ಸ್ ಕ್ರಚನ್ (Euscorpiops Krachan) ಎಂದು ಹೆಸರಿಸಲಾಗಿದೆ. 

Thailand

ಭಾರತ ಹಾಗೂ ಸುತ್ತಮುತ್ತಲ ದೇಶಗಳಲ್ಲಿ ಆಗಾಗ ನವೀನ ಪ್ರಭೇದದ ಜೀವಿಗಳು ಅಥವಾ ಅವುಗಳ ಪಳೆಯುಳಿಕೆಗಳು ಕಂಡುಬರುತ್ತಲೇ ಇರುತ್ತವೆ. 

ಥೈಲ್ಯಾಂಡ್ ನ ಕಾಯೆಂಗ್ ಕ್ರಚನ್ ನ್ಯಾಷನಲ್ ಪಾರ್ಕ್ (Kaeng Krachan National Park) ನಲ್ಲಿ ಈ ಹೊಸ ಚೇಳು ತಳಿ (Scorpio Species) ಕಂಡುಬಂದಿದೆ.

ಸಂಶೋಧಕರ (Scientists) ತಂಡ ಮಹತ್ವವಾದ ಅನ್ವೇಷಣೆ (Innovation) ನಡೆಸಿದ್ದು, ಇದು ಹಿಂದೆ ಕಂಡುಬಂದಿರುವ ಎಲ್ಲ ಚೇಳಿಗಿಂತ ವಿಭಿನ್ನವಾಗಿದೆ.

ಕಾಯೆಂಗ್ ಪಾರ್ಕಿನ ತೆನಸ್ಸೇರಿಯಂ ಪರ್ವತ ಶ್ರೇಣಿಯಲ್ಲಿ ಸಂಶೋಧಕರು ಕ್ಯಾಂಪ್ ಹಾಕಿಕೊಂಡು ಹಗಲಿರುಳು ಶ್ರಮಿಸಿ ಇದನ್ನು ಪತ್ತೆ (Discover) ಮಾಡಿದ್ದಾರೆ. ಕಲ್ಲುಗಳ (Rock) ಅಡಿಯಲ್ಲಿ ಇದು ಜೀವಿಸುವುದು ಕಂಡುಬಂದಿದೆ. 

Scorpio

ಸಂಶೋಧಕರು 3 ವಯಸ್ಕ ಗಂಡು ಹಾಗೂ ಒಂದು ವಯಸ್ಕ ಹೆಣ್ಣು ಚೇಳನ್ನು ಸಮಗ್ರವಾಗಿ ಅಧ್ಯಯನ (Study) ಮಾಡಿದ್ದಾರೆ. ಯುಸ್ಕೊರ್ಪಿಯೊಪ್ಸ್ ಉಪಪ್ರಭೇದದ ಎಲ್ಲ ಚೇಳುಗಳು ಹೊಂದಿರುವ ಲಕ್ಷಣಗಳು ಇವುಗಳಲ್ಲೂ ಇವೆ.

ಇತರ ಪ್ರಭೇದದ ಚೇಳಿಗಿಂತ ಇವು ಚಿಕ್ಕ ದೇಹ ಹೊಂದಿವೆ. ಹೆಚ್ಚು ಕಂದು (Brown) ಬಣ್ಣದಲ್ಲಿವೆ. ಹೆಣ್ಣು ಚೇಳುಗಳು ಗಂಡಿಗಿಂತ ಹೆಚ್ಚು ದಟ್ಟವಾಗಿರುತ್ತವೆ.

ಇವು ಎಂಟು ಕಣ್ಣುಗಳು (8 Eyes), ಎಂಟು ಕಾಲುಗಳನ್ನು (Legs) ಹೊಂದಿವೆ. ಈ ಉಪಪ್ರಭೇದದ ಚೇಳುಗಳು ಕಾದು ಕುಳಿತಿದ್ದು ತಮ್ಮ ಬೇಟೆಯನ್ನಾಡುತ್ತವೆ.

ಇದೇ ಕಾರ್ಯತಂತ್ರವನ್ನು ಈ ಚೇಳೂ ಸಹ ಅನುಸರಿಸುತ್ತದೆ. ಇವು ಹೆಚ್ಚು ಸ್ಥಳೀಯವಾಗಿವೆ ಎಂದು ಸಂಶೋಧಕರು ಹೇಳಿದ್ದಾರೆ. 

ಥೈಲ್ಯಾಂಡ್ ನಲ್ಲಿ ಕಂಡುಬಂದಿರುವ ಎಲ್ಲ ಚೇಳುಗಳೂ ಸ್ಥಳೀಯ (Endemic) ಪ್ರಭೇದವಾಗಿವೆ. ಅವು ಮುಖ್ಯವಾಗಿ ಪರ್ವತ ಪ್ರದೇಶಗಳಲ್ಲಿ ಮಾತ್ರ ಕಂಡುಬರುತ್ತವೆ.

ಕಲ್ಲುಗಳ ಹಿಂದೆ, ಅಡಿಯಲ್ಲಿ ಜೀವಿಸುತ್ತವೆ. ಇನ್ನೂ ಹಲವು ಪ್ರದೇಶಗಳಲ್ಲಿ ಅನ್ವೇಷಣೆ ಮಾಡಬೇಕಾಗಿದೆ ಎಂದು ಅಧ್ಯಯನ ತಿಳಿಸಿದೆ. 

Euscorpiops Krachan

ಇದಕ್ಕೂ ಮುನ್ನ ನಮ್ಮ ದೇಶದ ಒಡಿಶಾ ಹಾಗೂ ಪಶ್ಚಿಮ ಬಂಗಾಳದಲ್ಲಿ ಝೂವಾಲಾಜಿಕಲ್ ಸರ್ವೇ ಆಫ್ ಇಂಡಿಯಾ ಸಂಸ್ಥೆಯು ಸಮುದ್ರ ಮೃದ್ವಂಗಿಗಳನ್ನು (Marine Slug Molluscs) ಪತ್ತೆ ಮಾಡಿತ್ತು.

ಈ ಮೃದ್ವಂಗಿಗಳು ಇಲ್ಲಿನ ಮರಳುಮಿಶ್ರಿತ ಜೌಗು ಕರಾವಳಿ ತೀರದಲ್ಲಿ ಕಂಡುಬಂದಿದ್ದವು. ಇವುಗಳಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಗೌರವಾರ್ಥ ಅವರ ಹೆಸರನ್ನೇ ನೀಡಲಾಗಿದೆ. ಮೆಲನೊಕ್ಲಮಿಸ್ ದ್ರೌಪದಿ ಎಂದು ಹೆಸರಿಸಲಾಗಿದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button