ಮುಂಬೈನಲ್ಲಿ ಹುಟ್ಟಿದ ವಡಾಪಾವ್ ಗೆ ಜಗತ್ತಿನ ಟಾಪ್ 20 ಸ್ಯಾಂಡ್ ವಿಚ್ ಗಳಲ್ಲಿ ಸ್ಥಾನ
ವಡಾಪಾವ್ ಈ ತಿಂಡಿ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಆಲೂ, ಬ್ರೆಡ್ ಬನ್ ಕಾಂಬಿನೇಷನ್ ಗೆ ಮನಸೋಲದ ಮಂದಿಯೇ ಇಲ್ಲ. ಇದೀಗ ಈ ತಿನಿಸಿಗೆ ಅಂತಾರಾಷ್ಟ್ರೀಯ ಮಾನ್ಯತೆ ಸಿಕ್ಕಿದೆ.
ಇತ್ತೀಚಿಗಷ್ಟೇ ದಕ್ಷಿಣ ಭಾರತದ ಫಿಲ್ಟರ್ ಕಾಫಿಗೆ(Filter Coffe) ಜಾಗತಿಕ ಮನ್ನಣೆ ಸಿಕ್ಕಿತ್ತು. ಜಗತ್ತಿನ ಬೆಸ್ಟ್ ಫಿಲ್ಟರ್ ಕಾಫಿಗಳ ಪಟ್ಟಿಯಲ್ಲಿ ಭಾರತದ ಫಿಲ್ಟರ್ ಕಾಫಿ ಎರಡನೇ ಸ್ಥಾನವನ್ನು ಪಡೆದಿದೆ.
ಇದೀಗ ನಮ್ಮ ದೇಶದ ಮತ್ತೊಂದು ತಿನಿಸು ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ ವಡಾಪಾವ್. ವಿಶ್ವದ ಅತ್ಯುತ್ತಮ 20 ಸ್ಯಾಂಡ್ ವಿಚ್(Sandwiches) ಸ್ಥಾನ ಪಡೆದಿದೆ.
ಮುಂಬೈಯ(Mumbai) ಅತ್ಯಂತ ಪ್ರಸಿದ್ಧ ತಿನಿಸು ವಡಾಪಾವ್ (Vadapav) ಇದೀಗ ವಿಶ್ವದ ಅತ್ಯುತ್ತಮ ಸ್ಯಾಂಡ್‌ವಿಚ್‌ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.
ಟೇಸ್ಟ್ ಅಟ್ಲಾಸ್ ಎಂಬ ಸಂಸ್ಥೆ ನಡೆಸುವ ಈ ಸ್ಪರ್ಧೆಯಲ್ಲಿ ವಿಶ್ವದ ವಿವಿದೆಡೆಗಳ ಸ್ಯಾಂಡ್‌ವಿಚ್‌ಗಳು ಕಣದಲ್ಲಿದ್ದವು.
ಅವುಗಳ ಪೈಕಿ ಭಾರತದ ವಡಾಪಾವ್ 19ನೇ ಸ್ಥಾನ ಗಳಿಸುವ ಮೂಲಕ ಬೆಸ್ಟ್ ಸ್ಯಾಂಡ್‌ವಿಚ್‌ಗಳ ಟಾಪ್ 20 ಪಟ್ಟಿಯಲ್ಲಿ ಸ್ಥಾನ ಪಡೆದಿದೆ.
ಟೇಸ್ಟ್ ಅಟ್ಲಾಸ್ (Taste Atlas) ಪಟ್ಟಿ ಮಾಡಿದ ವಿಶ್ವದ ಸ್ಯಾಂಡ್‌ವಿಚ್‌ಗಳ ಪೈಕಿ ಭಾರತದ ಈ ವಡಾಪಾವ್ ಅನ್ನೂ ಕೂಡ ಉನ್ತತ ಪಟ್ಟಿಯಲ್ಲಿರಿಸಿತ್ತು.
ಜನರು ವಡಾಪಾವ್‌ಗೂ ಓಟ್ ಮಾಡಿದ್ದು, ಇದು ಅದನ್ನು ವಿಶ್ವದ ಅತ್ಯಂತ ರುಚಿಕರ ಸ್ಯಾಂಡ್‌ವಿಚ್‌ಗಳ ಪೈಕಿ 19ನೇ ಸ್ಥಾನದಲ್ಲಿರಿಸಿದೆ.
ಬಹಳ ಸುಲಭವಾಗಿ ಮಾಡಬಹುದಾದ ಈ ವಡಾ ಪಾವ್ ಮುಂಬೈಯ ಬಹುತೇಕ ಮಂದಿಯ ಬೆಳಗಿನ ಬ್ರೇಕ್‌ಫಾಸ್ಟ್ ಕಡಿಮೆ ಬೆಲೆಯಲ್ಲಿ ಪ್ರತೀ ಬೀದಿ ಕಾರ್ನರ್‌ಗಳಲ್ಲೂ ದೊರೆಯುವ ಇದರಲ್ಲಿ ಮುಂಬೈ ಮಂದಿಯ ಹೃದಯವೇ ಇದೆ.
ಈಗ ಕೇವಲ ಮುಂಬೈ ಮಾತ್ರವಲ್ಲ. ಭಾರತದ ಹಲವು ನಗರಗಳಲ್ಲಿ ವಡಾಪಾವ್ ಸುಲಭವಾಗಿ ದೊರೆಯುತ್ತವೆ ಕೂಡಾ.
ಮೆತ್ತನೆಯ ಬ್ರೆಡ್ ಬನ್ ಒಳಗೆ ಡೀಪ್ ಫ್ರೈ ಮಾಡಿದ ಆಲೂಗಡ್ಡೆಯ ಪ್ಯಾಟಿಯನ್ನು ಒಳಗೆ ಇಟ್ಟು, ಮೆಣಸಿನ ಕಾಂಬಿನೇಶನ್ ಇರುವ ಸ್ಪೈಸಿ ವಡಾ ಪಾವ್ ಮುಂಬೈಯ ಜನತೆಯ ನಿತ್ಯದ ತಿನಿಸು.
ಅಶೋಕ್ ವೈದ್ಯ ಎಂಬ ದಾದರ್ ರೈಲ್ವೇ ಸ್ಟೇಶನ್ ಬಳಿಯ ಬೀದಿ ಬದಿಯ ತಿನಿಸಿನ ಮಾರಾಟ ಮಾಡುವವರು ಈ ತಿಂಡಿಯನ್ನು ಮೊದಲು ಆರಂಭಿಸಿದ್ದು.
ಆ ಬಳಿಕ ಈ ತಿಂಡಿ ಮುಂಬೈ ನಗರದಾದ್ಯಂತ ಜನಪ್ರಿಯತೆ ಪಡೆಯಿತು. ಬಳಿಕ ಅದರ ಕೀರ್ತಿ ಜಗತ್ತಿಗೆ ಹಬ್ಬಿತ್ತು.
1960 ಹಾಗೂ 1970ರ ಸಮಯದಲ್ಲಿ ಆರಂಭಿಸಿದ ಈ ತಿನಿಸು ಮುಂಬೈಯ ಅತ್ಯಂತ ಪ್ರಸಿದ್ಧ ಬೀದಿಬದಿಯ ತಿನಿಸುಗಳ ಪೈಕಿ ಪ್ರಮುಖವಾದುದು.
ವಡಾ ಪಾವ್ ಜನರಿಗೆ ಅಗ್ಗದ ಊಟವಾಗಬೇಕೆಂದು ಅವರು ಬಯಸಿದ್ದರು.
ಅವರ ಆ ಕನಸು ಕೂಡ ಸಾಕರಗೊಂಡಿತ್ತು. ಮಾಧ್ಯಮ ವರ್ಗದ ಪಾಲಿಗೆ ಈ ತಿಂಡಿ ಹೊಟ್ಟೆ ತುಂಬಿಸುವ ಆಹಾರವಾಗಿ ಬದಲಾಯಿತು.
ಪ್ರಮುಖ ಆಹಾರ ಮತ್ತು ಪ್ರಯಾಣ ಮಾರ್ಗದರ್ಶಿಯಾದ ಟೇಸ್ಟ್ ಅಟ್ಲಾಸ್ ಪ್ರಕಾರ 19 ನೇ ಸ್ಥಾನದ ಪ್ರಭಾವಶಾಲಿ ಶ್ರೇಯಾಂಕದೊಂದಿಗೆ, ಈ ಸಾಧನೆಯು ಜಾಗತಿಕ ವೇದಿಕೆಯಲ್ಲಿ ಭಾರತೀಯ ಬೀದಿ ಪಾಕಪದ್ಧತಿಯ ರುಚಿಕರವಾದ ಆಕರ್ಷಣೆಯನ್ನು ಎತ್ತಿ ತೋರಿಸುತ್ತದೆ.
ಈ ಪೋಸ್ಟ್ ಅನ್ನು ಒಂದು ದಿನದ ಹಿಂದೆ ಹಂಚಿಕೊಳ್ಳಲಾಗಿದೆ. ಪೋಸ್ಟ್ ಮಾಡಿದ ನಂತರ, ಇದು 11,000 ಕ್ಕೂ ಹೆಚ್ಚು ಇಷ್ಟಗಳು ಮತ್ತು ಹಲವಾರು ಕಾಮೆಂಟ್‌ಗಳನ್ನು ಗಳಿಸಿದೆ.
ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.