ಆನ್ ಲೈನ್ ಬುಕಿಂಗ್ ಇಲ್ಲದ ತಾಣಗಳಿಗೆ ಚಾರಣ ನಿಷೇಧ; ಕರ್ನಾಟಕ ಸರ್ಕಾರ ನಿರ್ಧಾರ
ಚಾರಣ ತಾಣಗಳಲ್ಲಿ ಹೆಚ್ಚುತ್ತಿರುವ ಜನ ಸಂದಣಿಯನ್ನು ತಡೆಗಟ್ಟುವ ಮತ್ತು ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಆನ್ ಲೈನ್ ಬುಕಿಂಗ್ ವ್ಯವಸ್ಥೆಯಿರದ ಚಾರಣ ತಾಣಗಳಿಗೆ ಚಾರಣಿಗರ ಪ್ರವೇಶವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ ಎಂದು ಅರಣ್ಯ ಸಚಿವರಾದ (Environment Minister ) ಈಶ್ವರ ಖಂಡ್ರೆ (Eshwar Khandre) ಆದೇಶಿಸಿದ್ದಾರೆ.
ಅದರ ಜೊತೆಗೆ ಚಾರಣಕ್ಕೆ ಪ್ರತ್ಯೇಕ ಪ್ರಮಾಣೀಕೃತ ಕಾರ್ಯ ವಿಧಾನ (Standard Operating Procedure) ವನ್ನು ರೂಪಿಸಲು ನಿರ್ಧರಿಸಲಾಗಿದೆ.
ಈ ಕಾರ್ಯವಿಧಾನಗಳು ರೂಪುಗೊಳ್ಳುವವರೆಗೂ ಚಾರಣಕ್ಕೆ ಫೆ.1 ರಿಂದ ನಿಷೇಧ ಹೇರಲಾಗುವುದು ಎಂದು ಅರಣ್ಯ ಇಲಾಖೆ (Forest Department) ತಿಳಿಸಿದೆ.
ಜ.26 ರಂದು ದೀರ್ಘ ವಾರಾಂತ್ಯದ ಸಂದರ್ಭದಲ್ಲಿ ಕುಮಾರ ಪರ್ವತ ಚಾರಣಕ್ಕೆ ಒಂದೇ ದಿನ ಸಾವಿರಾರು ಮಂದಿ ಭೇಟಿ ನೀಡಿದ್ದರು.
ಇದರಿಂದ ಜನ ಸಂದಣಿ ಹೆಚ್ಚಾಗಿ, ವನ್ಯ ಜೀವಿಗಳಿಗೆ ತೊಂದರೆ ಉಂಟಾಗಿದ್ಡಲ್ಲದೇ, ಪ್ಲಾಸ್ಟಿಕ್ ಮತ್ತು ಇನ್ನಿತರ ಪರಿಸರಕ್ಕೆ ಹಾನಿ ಉಂಟು ಮಾಡುವ ವಸ್ತುಗಳು ಅಲ್ಲಲ್ಲಿಯೇ ಬಿದ್ದದ್ದು ಕಂಡು ಬಂದಿತು.
ಇದರಿಂದ ಎಚ್ಚೆತ್ತು ಕೊಂಡಿರುವ ಅರಣ್ಯ ಇಲಾಖೆಯು ಚಾರಣಕ್ಕೆ ಸಂಬಂಧಿಸಿದಂತೆ ಮಾರ್ಗಸೂಚಿ ರೂಪಿಸಲು ಮುಂದಾಗಿದೆ.
ಅಲ್ಲಿಯವರೆಗೂ ಆನ್ ಲೈನ್ ಬುಕಿಂಗ್ ವ್ಯವಸ್ಥೆಯಿರದ (online booking system) ಚಾರಣವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಅರಣ್ಯ ಸಚಿವರಾದ ಈಶ್ವರ ಖಂಡ್ರೆ ಅವರು ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಗಳು ಮತ್ತು ಅರಣ್ಯ ಕಾರ್ಯಪಡೆಗೆ ಸ್ಪಷ್ಟ ಸೂಚನೆಗಳನ್ನು ನೀಡಿದ್ದಾರೆ.
“ದಟ್ಟವಾದ ಅರಣ್ಯ ಪ್ರದೇಶಗಳಿಗೆ ಮುಖ್ಯವಾಗಿ ಸಮೃದ್ಧ ಜೈವ ವೈವಿಧ್ಯತೆ ಹೊಂದಿರುವ ಪಶ್ಚಿಮ ಘಟ್ಟಗಳಿಗೆ ಒಮ್ಮೆಲೇ ಸಾವಿರಾರು ಮಂದಿ ಭೇಟಿ ನೀಡುವುದರಿಂದ ಪರಿಸರ ಮತ್ತು ವನ್ಯ ಜೀವಿಗಳಿಗೆ ಉಂಟಾಗುತ್ತದೆ ಮತ್ತು ಜಲಮೂಲಗಳೂ ಕಲುಷಿತಗೊಳ್ಳುತ್ತವೆ.
ಹೀಗಾಗಿ ಚಾರಣ ತಾಣಗಳಲ್ಲಿ ಚಾರಣಿಗರ ಸಂಖ್ಯೆಯನ್ನು ನಿಯಂತ್ರಿಸಬೇಕು ಮತ್ತು ಚಾರಣಿಗರು ಪ್ಲಾಸ್ಟಿಕ್ ವಸ್ತುಗಳು, ಆಹಾರ ಪದಾರ್ಥಗಳನ್ನು ತರುವುದನ್ನು ನಿರ್ಬಂಧಿಸಬೇಕು” ಎಂದು ಈಶ್ವರ್ ಖಂಡ್ರೆ ಅವರು ತಿಳಿಸಿದ್ದಾರೆ.
ಕೆಲವು ಚಾರಣಗಳಲ್ಲಿ ಚಾರಣಿಗರ (Trekkers) ಪ್ರವೇಶಕ್ಕೆ ನಿಗದಿತ ಸಂಖ್ಯೆ ಇಲ್ಲದ ಕಾರಣ ಕೆಲವರು ಟೆಂಟ್‌ಗಳಲ್ಲಿ ರಾತ್ರೋರಾತ್ರಿ ಕ್ಯಾಂಪಿಂಗ್ ಮಾಡುವುದು ಸಹ ಕಂಡು ಬಂದಿದೆ. ಇಂತಹ ಚಟುವಟಿಕೆಗಳನ್ನು ನಿಯಂತ್ರಿಸುವ ನಿಟ್ಟಿನಿಂದ ಚಾರಣ ತಾಣಗಳಲ್ಲಿ SOP ರೂಪಿಸಲು ಸಜ್ಜಾಗಿದೆ.
ರಾಜ್ಯದಲ್ಲಿ ಈಗಾಗಲೇ ಅರಣ್ಯ ಇಲಾಖೆಯ ನಿರ್ವಹಣೆಯಲ್ಲಿ 24 ಚಾರಣ ತಾಣಗಳಿದ್ದು,(Trekking points) ಅವುಗಳ ಪ್ರವೇಶಕ್ಕೆ ಆನ್ ಲೈನ್ ಬುಕಿಂಗ್ ವ್ಯವಸ್ಥೆ ಮಾಡಲಾಗಿದೆ.
ಇಲ್ಲಿಗೆ ಪ್ರತೀ ದಿನ ಕೇವಲ 150 ಚಾರಣಿಗರಿಗೆ ಮಾತ್ರ ಕಲ್ಪಿಸಲಾಗುತ್ತದೆ. www.karnatakakaecotourism.com ವೆಬ್ ಸೈಟ್ ಮೂಲಕ ಚಾರಣಿಗರು ಬುಕಿಂಗ್ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.
ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.