ಸೂರತ್ ವಿಮಾನ ನಿಲ್ದಾಣ ಇನ್ನು ಮುಂದೆ “ಅಂತರಾಷ್ಟ್ರೀಯ ವಿಮಾನ ನಿಲ್ದಾಣ”
ನಾಗರಿಕ ವಿಮಾನಯಾನ ಸಚಿವಾಲಯ (Ministry of Civil Aviation) ಜ.30ರಂದು ಹೊರಡಿಸಿದ ಅಧಿಸೂಚನೆಯ ಪ್ರಕಾರ, ಗುಜರಾತಿನ ಸೂರತ್ ವಿಮಾನ ನಿಲ್ದಾಣವನ್ನು “ಅಂತರಾಷ್ಟ್ರೀಯ ವಿಮಾನ ನಿಲ್ದಾಣ” ವೆಂದು (International Airport) ಘೋಷಿಸಲಾಗಿದೆ.
ಸೂರತ್ ಪ್ರಸ್ತುತ ದೆಹಲಿ, ಚೆನ್ನೈ, ಬೆಂಗಳೂರು, ಕೋಲ್ಕತ್ತಾ, ಹೈದರಾಬಾದ್, ಗೋವಾ, ಬೆಳಗಾವಿ, ಪುಣೆ, ಜೈಪುರ ಸೇರಿದಂತೆ 14 ದೇಶೀಯ ನಗರಗಳಿಗೆ ಸಂಪರ್ಕವನ್ನು ಹೊಂದಿದೆ.
ಅಂತರಾಷ್ಟ್ರೀಯವಾಗಿ ಶಾರ್ಜಾ ಮೂಲಕ ಪ್ರಪಂಚದ ಇತರ ಭಾಗಗಳಿಗೆ ಸೂರತ್ ಸಂಪರ್ಕವನ್ನು ಕಲ್ಪಿಸುತ್ತದೆ. ಇದು ವಾರಕ್ಕೆ 252 ಕ್ಕೂ ಹೆಚ್ಚು ಪ್ರಯಾಣಿಕರನ್ನು ನಿರ್ವಹಿಸುತ್ತಿದೆ.
352 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾದ ಸೂರತ್ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ಕಟ್ಟಡವನ್ನು ಇತ್ತೀಚಿಗಷ್ಟೇ ಉದ್ಘಾಟಿಸಿದ ಒಂದು ತಿಂಗಳ ನಂತರ ಈ ಘೋಷಣೆಯನ್ನು ಕೇಂದ್ರ ಸರ್ಕಾರ ಮಾಡಿದೆ.
ಸೂರತ್ ವಿಮಾನ ನಿಲ್ದಾಣವು (Surat Airport) 2906 X 45 ಮೀಟರ್‌ಗಳ ರನ್‌ವೇಯನ್ನು ಹೊಂದಿದ್ದು, ಕೋಡ್ “ಸಿ” ( Code C) ಮಾದರಿಯ ವಿಮಾನವನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದೆ. ಹಾಗೂ 8474 ಚದರ ಮೀಟರ್ ವಿಸ್ತೀರ್ಣದ ಟರ್ಮಿನಲ್ ಅನ್ನು (Terminal) ಸಹ ಇದು ಹೊಂದಿದೆ.
ಹೊಸ ಟರ್ಮಿನಲ್ ಕಟ್ಟಡವು 1,200 ದೇಶೀಯ ಪ್ರಯಾಣಿಕರು, 600 ಅಂತರಾಷ್ಟ್ರೀಯ ಪ್ರಯಾಣಿಕರನ್ನು ಪೀಕ್ ಅವರ್ ನಲ್ಲಿ ನಿರ್ವಹಿಸಲು ಸಜ್ಜಾಗಿದೆ.
ಮುಂದೆ ಪೀಕ್ ಅವರ್ ನಲ್ಲಿ (Peak Hour) 3000 ಪ್ರಯಾಣಿಕರನ್ನು ನಿರ್ವಹಿಸಲು ಸ್ಥಳಾವಕಾಶ ನೀಡುವ ಸಾಮರ್ಥ್ಯವನ್ನು ಸಹ ಇದು ಹೊಂದಿದ್ದು, ತದನಂತರ ವಾರ್ಷಿಕ ನಿರ್ವಹಣಾ ಸಾಮರ್ಥ್ಯ 55 ಲಕ್ಷ ಪ್ರಯಾಣಿಕರಿಗೆ ಏರುತ್ತದೆ.
ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.