ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್‌ನಲ್ಲಿ 2024ನೇ ಸಾಲಿನ ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ (Union Budget 2024) ಮಂಡಿಸಿದ್ದು, ಪ್ರವಾಸೋದ್ಯಮ ಕ್ಷೇತ್ರವನ್ನು ಉತ್ತೇಜಿಸುವ ಮಹತ್ವದ ಯೋಜನೆಗಳ ಕುರಿತು ವಿವರಿಸಿದರು.
ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ, ಸರ್ಕಾರವು ಭಾರತದ ರೈಲ್ವೆ ಮೂಲಸೌಕರ್ಯವನ್ನು ಅಭಿವೃದ್ಧಿಗೊಳಿಸುವ ಮತ್ತು ಪ್ರವಾಸೋದ್ಯಮ ಕ್ಷೇತ್ರವನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ಮಹತ್ವದ ಯೋಜನೆಗಳನ್ನು ತನ್ನ ಬಜೆಟ್ ನಲ್ಲಿ ಒಳಗೊಂಡಿದೆ.
ರೈಲ್ವೆ ಮೂಲಸೌಕರ್ಯವನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಿಂದ, 40,000 ಸಾಮಾನ್ಯ ರೈಲು ಬೋಗಿಗಳನ್ನು ವಂದೇ ಭಾರತ್ ಕೋಚ್ ಗಳಾಗಿ (Vande Bharath Train) ಪರಿವರ್ತಿಸಲಾಗುವುದಾಗಿ ವಿತ್ತ ಸಚಿವೆ ಹೇಳಿದರು. ಇದು ಗಣನೀಯವಾಗಿ ಪ್ರಯಾಣಿಕರ ಸುರಕ್ಷತೆ, ಸೌಕರ್ಯವನ್ನು ಉತ್ತಮಗೊಳಿಸುತ್ತದೆ ಎಂದು ಅವರು ಹೇಳಿದರು.
ವಂದೇ ಭಾರತ್ ರೈಲುಗಳು ಈಗಾಗಲೇ ತಮ್ಮ ಅತ್ಯಾಧುನಿಕ ತಂತ್ರಜ್ಞಾನ, ಉನ್ನತ ಸೌಕರ್ಯಗಳಿಂದಾಗಿ ಹೆಸರುವಾಸಿಯಾಗಿದೆ.
ಈಗ ವಂದೇ ಭಾರತ ರೈಲುಗಳ ಕೋಚ್ ಗಳ ಫ್ಲೀಟ್ ಅನ್ನು ವಿಸ್ತರಿಸುವ ಮೂಲಕ, ಪ್ರಯಾಣದ ಸಮಯವನ್ನು ಕಡಿಮೆಗೊಳಿಸುವ ಮತ್ತು
ಪ್ರಯಾಣಿಕರ ಅನುಭವವನ್ನು ಹೆಚ್ಚಿಸುವ, ದೇಶಾದ್ಯಂತ ಪ್ರವಾಸೋದ್ಯಮ ಬೆಳವಣಿಗೆಯನ್ನು ವೇಗಗೊಳಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ.
ವಂದೇ ಭಾರತ್ ರೈಲುಗಳ ಜೊತೆಗೆ NAMO ರೈಲುಗಳು ಮತ್ತು ಮೆಟ್ರೋ ರೈಲು ಸೇವೆಗಳನ್ನು ಸಹ ನಗರಗಳಲ್ಲಿ ನಿರೀಕ್ಷಿಸಬಹುದಾಗಿದೆ.
ಪ್ರವಾಸಿ ಕೇಂದ್ರಗಳನ್ನು ಉತ್ತೇಜಿಸುವ ನಿಟ್ಟಿನಿಂದ ರಾಜ್ಯಗಳಿಗೆ ದೀರ್ಘಾವಧಿಯ ಬಡ್ಡಿ ರಹಿತ ಸಾಲವನ್ನು(Interest free loans) ನೀಡಲು ದಿಟ್ಟ ಯೋಜನೆಗಳನ್ನು ಸಹ ರೂಪಿಸಿದೆ.
ಈ ಹೂಡಿಕೆಯಿಂದಾಗಿ ಪ್ರವಾಸಿ ತಾಣಗಳ ಮೂಲ ಸೌಕರ್ಯ, ಸೌಲಭ್ಯಗಳನ್ನು ವರ್ಧಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ.
ರಾಜ್ಯಗಳ ಪ್ರವಾಸಿ ತಾಣಗಳ ಮೇಲಿನ ಹೂಡಿಕೆಯಿಂದಾಗಿ, ಪ್ರವಾಸೋದ್ಯಮವನ್ನು ಜಾಗತಿಕ ಮಟ್ಟದಲ್ಲಿ ಏರಿಸಬಹುದು.
ಸ್ಥಳೀಯವಾಗಿ ಉದ್ಯೋಗಾವಕಾಶವನ್ನು ಹೆಚ್ಚಿಸಲು ಸಹ ಸಹಾಯವಾಗುತ್ತದೆ. ಮತ್ತು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸಿಗರನ್ನು ಆಕರ್ಷಿಸಬಹುದಾಗಿದೆ.
ಬಜೆಟ್ ನಲ್ಲಿ ಲಕ್ಷದ್ವೀಪ (Lakshadweep) ಸೇರಿದಂತೆ ದ್ವೀಪಗಳಲ್ಲಿನ ಪ್ರವಾಸೋದ್ಯಮ ಯೋಜನೆಗಳಿಗೆ ಸಂಪನ್ಮೂಲಗಳನ್ನು ಸಹ ನಿಗದಿ ಪಡಿಸಲಾಯಿತು.
ಭಾರತದಲ್ಲಿರುವ ಅನ್ವೇಷಿಸದ ದ್ವೀಪಗಳಲ್ಲಿ ಸಂಪರ್ಕ, ಮೂಲಸೌಕರ್ಯ, ಸೌಲಭ್ಯಗಳನ್ನು ಅಭಿವೃದ್ಧಿಗೊಳಿಸುವ ಮೂಲಕ ಭಾರತದ ಪ್ರವಾಸೋದ್ಯಮ ಸಾಮರ್ಥ್ಯವನ್ನು ಮತ್ತಷ್ಟು ಉತ್ತಮಗೊಳಿಸುವ ಉದ್ದೇಶವನ್ನು ಮಂಡಿಸಲಾಯಿತು.
ಒಟ್ಟಿನಲ್ಲಿ, ಈ ವರ್ಷದ ಮಧ್ಯಂತರ ಬಜೆಟ್ ನಲ್ಲಿ ಭಾರತದ ರೈಲ್ವೆ ಮತ್ತು ಪ್ರವಾಸೋದ್ಯಮ(Tourism) ಕ್ಷೇತ್ರವನ್ನು ಪುನರುಜ್ಜೀವನಗೊಳಿಸುವ ಕೆಲವು ಯೋಜನೆಗಳ ಘೋಷಣೆಯಾಗಿದ್ದು, ಸರ್ಕಾರ ಈ ಯೋಜನೆಗಳ ಮೂಲಕ ಪ್ರವಾಸೋದ್ಯಮ ಕ್ಷೇತ್ರವನ್ನು ಉತ್ತೇಜಿಸಬೇಂಕೆಂಬ ಗುರಿಯನ್ನು ಹೊಂದಿದೆ.
ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.