ಮುರುಡೇಶ್ವರದ ಮೆರಗು ಹೆಚ್ಚಿಸಲಿದೆ ಫ್ಲೋಟಿಂಗ್ ಬ್ರಿಡ್ಜ್
ಮುರುಡೇಶ್ವರ (Murudeshwar) ಅಂದ್ರೆ ಅಲ್ಲಿನ ಶಿವನ ದೇಗುಲ (Shiva Temple),ಅದರ ತೀರದಲ್ಲಿರುವ ಸಮುದ್ರವೇ ಬಹುತೇಕರಿಗೆ ನೆನಪಾಗುತ್ತದೆ. ದೇಶದ ನಾನಾ ಭಾಗದಿಂದ ಪ್ರವಾಸಿಗರ (Tourist )ದಂಡೇ ಇಲ್ಲಿಗೆ ಹರಿದು ಬರುತ್ತದೆ. ಇದೀಗ ಉತ್ತರ ಕನ್ನಡ ದ ಕಡೆಗೆ ಪ್ರವಾಸ ಹೊರಟಿರುವವರಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ.
ಪ್ರವಾಸಿಗರಿಗೆ ರಾಜ್ಯದ ಅತೀ ದೊಡ್ಡ ಫ್ಲೋಟಿಂಗ್ ಬ್ರಿಡ್ಜ್ (Floating Bridge) ನಿರ್ಮಾಣ ಆಗಿದೆ.
ಉಡುಪಿ(Udupi )ಜಿಲ್ಲೆಯ ಮಲ್ಪೆ ಬೀಚ್ (Malpe beach)ಫ್ಲೋಟಿಂಗ್ ಬ್ರಿಡ್ಜ್ ನಿರ್ಮಾಣ ಮಾಡಿದ್ದ ವಿಚಾರ ನಿಮಗೆಲ್ಲ ಗೊತ್ತಿರಬಹುದು. ಆದರೆ ಇದಕ್ಕೆ ಭಟ್ಕಳ (Bhatkal)ತಾಲೂಕಿನಲ್ಲಿ ಇಂತಹದ್ದೇ ತೇಲುವ ಸೇತುವೆ ನಿರ್ಮಾಣ ಆಗಿದೆ.
ಈ ಹಿಂದೆ ಮಲ್ಪೆಯಲ್ಲಿ ನಿರ್ಮಿಸಲಾಗಿದ್ದ ತೇಲು ಸೇತುವೆಗಿಂತ ಇದು ಹತ್ತು ಮೀಟರ್ ದೊಡ್ಡದಾಗಿದೆ. ಇಲ್ಲಿಂದ ನಿಂತು ನೀವು ಮುರ್ಡೇಶ್ವರದ ಶಿವನ ಬೃಹದಾಕಾರದ ಮೂರ್ತಿಯನ್ನು ಕಣ್ತುಂಬಿಕೊಳ್ಳಬಹುದು. ಅತ್ಯುತ್ತಮ ಸುರಕ್ಷೆಯೊಂದಿಗೆ ನೀವು ಎಂಡ್ ಪಾಯಿಂಟ್‍ಗೆ ಹೋಗಿ ಸಮುದ್ರ ಸೌಂದರ್ಯ ಸವಿಯಬಹುದು.
ಮೊದಲು 100 ರೂಪಾಯಿ ಎಂಟ್ರೆನ್ಸ್ ಫೀಸ್ (Entry Fees) ಕೊಟ್ಟು ಸೇತುವೆಗೆ ಎಂಟ್ರಿ ಪಡೆದುಕೊಳ್ಳಬೇಕು. ನಂತರ ಜ್ಯಾಕೇಟ್ ಗಳನ್ನು ಒದಗಿಸಲಾಗುವುದು. ಆ ಜ್ಯಾಕೇಟ್ ಧರಿಸಿ ನೀವು ಸಮುದ್ರದ ಮೇಲೆ ಅಲೆಗಳ ಜೊತೆಗೆ ತೇಲುವ ಅನುಭವ ಪಡೆಯಬಹುದು. ಎರಡೂ ಕಡೆ ಆಧಾರಕ್ಕೆ ಗಟ್ಟಿಯಾದ ದಾರವನ್ನು ಜೊತೆಗೆ ಕಂಬಿಗಳನ್ನು ಅಳವಡಿಸಲಾಗಿದೆ. ಎಂಡ್ ಪಾಯಿಂಟ್ ಮನಮೋಹಕವಾಗಿದ್ದು ಚೌಕಾಕಾರವಾಗಿದೆ.
ಈ ಸೇತುವೆಯು 130 ಮೀಟರ್ ಉದ್ದವಿದೆ. ಇದು ಕರ್ನಾಟಕದ ಅತಿ ದೊಡ್ಡ ತೇಲುವ ಸೇತುವೆ ಎಂಬ ಹೆಗ್ಗಳಿಕೆಯನ್ನು ಗಳಿಸಿದೆ. ಇಲ್ಲಿಂದ ಪ್ರವಾಸಿಗರು ಸಮುದ್ರದ ದೃಶ್ಯಗಳನ್ನು ಬಹಳ ಹತ್ತಿರದಿಂದ ನೋಡಬಹುದು. ಅಲ್ಲದೆ, ಸೇತುವೆಯಲ್ಲಿ ಸುರಕ್ಷಿತವಾಗಿ ಓಡಾಡಬಹುದು. ವಾಸ್ತವವಾಗಿ, ಜನರು ಈ ಸುಂದರವಾದ ಕಡಲತೀರದಲ್ಲಿ ಸ್ಕೂಬಾ ಡೈವಿಂಗ್‌ನಂತಹ (Scuba diving)ಥ್ರಿಲ್ಲಿಂಗ್ ಚಟುವಟಿಕೆಯನ್ನು ಕೈಗೊಳ್ಳಬಹುದು.
.
ಇನ್ನು ಸೇತುವೆಯನ್ನು ಮುಂಬೈ ಮೂಲದ ಎಚ್ ಎನ್ ಮರೈನ್ ಕಂಪನಿ ನಿರ್ಮಾಣ ಮಾಡಿದ್ದು, ಏಕಕಾಲದಲ್ಲಿ 100 ಜನರು ನಿಲ್ಲಬಹುದಾದ ಅಥವಾ ಓಡಾಡಬಹುದಾದ ಸಾಮರ್ಥ್ಯವನ್ನು ಹೊಂದಿದೆ. ಒಟ್ಟಾರೆ ಇನ್ನು ಮುಂದೆ ಹತ್ತಿರದಿಂದ ಸಮುದ್ರದ ನೋಟವನ್ನು ಪ್ರವಾಸಿಗರು ಆನಂದಿಸಬಹುದು
ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.