ಅತ್ಯಂತ ಸುರಕ್ಷಿತ ನಗರಗಳ ಪಟ್ಟಿಯಲ್ಲಿ ಕೊಲ್ಕತ್ತಾ ಹ್ಯಾಟ್ರಿಕ್ ಸಾಧನೆ
ಸತತ ಮೂರನೇ ವರ್ಷ (Third year in row) ದೇಶದ ಅತ್ಯಂತ ಸುರಕ್ಷಿತ ನಗರ ಪಟ್ಟಿಯಲ್ಲಿ ಕೊಲ್ಕತ್ತಾ (Kolkata) ಸ್ಥಾನ ಪಡೆದಿದೆ. .ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) (NCRB) ಪ್ರಕಟಿಸಿದ ವರದಿಯ ಪ್ರಕಾರ , ಸತತ ಮೂರು ವರ್ಷಗಳ ಕಾಲ, ಕೋಲ್ಕತ್ತಾ ಭಾರತದ ಅತ್ಯಂತ ಸುರಕ್ಷಿತ ನಗರ ಎಂಬ ಸ್ಥಾನಮಾನವನ್ನು ಯಶಸ್ವಿಯಾಗಿ ಉಳಿಸಿಕೊಂಡು ಬಂದಿದೆ.ಈ ವರದಿಯ ಪ್ರಕಾರ, ಕೋಲ್ಕತ್ತಾ ನಗರವು ಭಾರತದ ಇತರ ಪ್ರಮುಖ ನಗರಗಳಿಗೆ ಹೋಲಿಸಿದರೆ ಪ್ರತಿ ಲಕ್ಷ ಜನಸಂಖ್ಯೆಗೆ ಕನಿಷ್ಠ ಸಂಖ್ಯೆಯ ಕಾಗ್ನೈಸಬಲ್ ಅಪರಾಧಗಳನ್ನು ದಾಖಲಿಸಿದೆ.ಇನ್ನು ಭಾರತದ ಸುರಕ್ಷಿತ ನಗರಗಳ ಪಟ್ಟಿಯಲ್ಲಿ ಕೋಲ್ಕತ್ತಾದ ನಂತರ ಮಹಾರಾಷ್ಟ್ರದ ಪುಣೆ ಮತ್ತು ತೆಲಂಗಾಣದ ಹೈದರಾಬಾದ್ ಸೇರಿದೆ.
ಭಾರತದ 19 ಪ್ರಮುಖ ನಗರಗಳ ಪಟ್ಟಿಯಲ್ಲಿ ಈ ನಗರಕ್ಕೆ ಪ್ರಥಮ ಸ್ಥಾನ ಸಿಕ್ಕಿದೆ.. ಈ ಎಲ್ಲಾ ನಗರಗಳು 20 ಲಕ್ಷಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿವೆ.
ಕೋಲ್ಕತ್ತಾದಲ್ಲಿರುವ ಅತ್ಯಂತ ಸುಂದರವಾದ ಪ್ರವಾಸಿ ಆಕರ್ಷಣೆಗಳೆಂದರೆ ವಿಕ್ಟೋರಿಯಾ ಮೆಮೋರಿಯಲ್, ಹೌರಾ ಸೇತುವೆ ಮತ್ತು ಮೈದಾನದಂತಹ ಕೆಲವು ಕೋಲ್ಕತ್ತಾದ ಸಾಂಪ್ರದಾಯಿಕ ಹೆಗ್ಗುರುತುಗಳು. ಇವು ನಗರದ ಶ್ರೀಮಂತ ಇತಿಹಾಸದ ಸಂಕೇತಗಳು ಮಾತ್ರವಲ್ಲದೆ ಸುರಕ್ಷಿತ ಮತ್ತು ಸ್ವಾಗತಾರ್ಹ ಸ್ಥಳಗಳಾಗಿವೆ. ಈ ಜನಪ್ರಿಯ ಪ್ರವಾಸಿ ತಾಣಗಳನ್ನು ಕುಟುಂಬಗಳು, ಸ್ನೇಹಿತರು ಮತ್ತು ಏಕಾಂಗಿಯಾಗಿ ಪ್ರಯಾಣಿಸಲು ಸುರಕ್ಷಿತವಾಗಿದೆ ಎನ್ನುವುದಕ್ಕೆ ಈ ವರದಿಯೇ ಸಾಕ್ಷಿ.
ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.