ಬೆಳಕಿನ ಅಲಂಕಾರದಲ್ಲಿ ಕಂಗೊಳಿಸುತ್ತಿರುವ ಸುವರ್ಣ ಸೌಧ
ಬೆಳಗಾವಿಯ ಸುವರ್ಣ ಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ದೀಪಗಳ ಅಲಂಕಾರದಿಂದ ಎಷ್ಟು ಸೊಗಸಾಗಿ ಸುವರ್ಣ ಸೌಧ ಕಂಗೊಳಿಸುತ್ತಿದೆ ನೋಡಿ.
ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿ 50 ವರ್ಷ ಪೂರ್ಣಗೊಂಡ ಹಿನ್ನಲ್ಲೆ ಸುವರ್ಣ ಸಂಭ್ರಮದ ಪ್ರಯುಕ್ತ ಬೆಳಗಾವಿಯ ಸುವರ್ಣ ಸೌಧದ ಕಟ್ಟಡಕ್ಕೆ ವಿಶೇಷ ವಿನ್ಯಾಸವುಳ್ಳ ಶಾಶ್ವತ ಬಣ್ಣ ಬಣ್ಣದ ದೀಪಾಲಂಕಾರ ಮಾಡಲಾಗಿದೆ.
ಪ್ರತಿ ಶನಿವಾರ, ಭಾನುವಾರ ಹಾಗೂ ಸರಕಾರಿ ರಜಾ ದಿನಗಳಂದು ವಿದ್ಯುತ್ ದೀಪ ಬೆಳಗಲಿದ್ದು, ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಹಿನ್ನೆಲೆಯಲ್ಲಿ ಈ ವ್ಯವಸ್ಥೆ ಮಾಡಲಾಗಿದೆ.
ಸೀಮಿತಗೊಳಿಸದೇ ಅದೊಂದು ಗಡಿ ಪ್ರದೇಶದ ಪ್ರವಾಸಿ ತಾಣವಾಗಿ ಮಾರ್ಪಾಡಾಗಲು ಚಿಂತನೆ ನಡೆಯುತ್ತಿದೆ
ಈ ಹಿಂದೆ ವರ್ಷದಲ್ಲೊಮ್ಮೆ ಅಧಿವೇಶನ ಸಂದರ್ಭ ಹತ್ತದಿನೈದು ದಿವಸ ಮಾತ್ರ ರಾತ್ರಿಯ ಬೆಳಕಿನ ವ್ಯವಸ್ಥೆ ಮಾಡಲಾಗುತ್ತಿತ್ತು. ಆದರೆ ಇದೀಗ ಮಹತ್ತರ ಬದಲಾವಣೆಗೆ ನಾಂದಿ ಹಾಡಲಾಗಿದೆ.. ಅಧಿವೇಶನ ನಡೆಯುವ ದಿನಗಳಲ್ಲದೇ ಪ್ರತಿ ಶನಿವಾರ ಮತ್ತು ಭಾನುವಾರ ಹಾಗೂ ರಾಷ್ಟ್ರೀಯ ದಿನಾಚರಣೆಗಳಂದು ಬಣ್ಣಬಣ್ಣದ ವಿನ್ಯಾಸದ ಬೆಳಕಿನೊಂದಿಗೆ ಸುವರ್ಣ ಸೌಧ ಕಂಗೊಳಿಸಲು ರೂಪುರೇಷೆಯನ್ನು ತಯಾರಿಸಿದ್ದಾರೆ.
RGBW ಎಲ್ಇಡಿ ಡೈನಾಮಿಕ್ ಲೈಟ್ ನೊಂದಿಗೆ ಮುಂದೆ ಸುವರ್ಣ ಸೌಧ ಕಂಗೊಳಿಸಲಿದೆ. ಬಗೆಬಗೆಯ ವಿನ್ಯಾಸ, ಹಲವು ಬಣ್ಣಗಳಲ್ಲಿ ಕಂಪ್ಯೂಟರೀಕೃತ ಸೌಲಭ್ಯದೊಂದಿಗೆ ಸೌಧದ ಅಂದವನ್ನು ಹೆಚ್ಚಿಸಲಿದೆ.
ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.