Moreವಿಂಗಡಿಸದಸಂಸ್ಕೃತಿ, ಪರಂಪರೆಸ್ಮರಣೀಯ ಜಾಗ

ಧೋಲವೀರ ಬಳಿ ಚಿನ್ನದ ಉತ್ಖನನದ ವೇಳೆ ಪುರಾತನ ಹರಪ್ಪನ್ ಯುಗದ ತಾಣ ಪತ್ತೆ.

ಇತ್ತೀಚಿನ ವರದಿಗಳ ಪ್ರಕಾರ, ಗ್ರಾಮಸ್ಥರು ಚಿನ್ನವನ್ನು ಹುಡುಕಲು ಪ್ರದೇಶವನ್ನು ಅಗೆಯುತ್ತಿದ್ದಾಗ, ಧೋಲಾವಿರಾ ಬಳಿ ಪ್ರಾಚೀನ ನಾಗರಿಕತೆಯ ಹರಪ್ಪನ್ ಯುಗದ (Harappan periods) ತಾಣವನ್ನು ಪತ್ತೆ ಮಾಡಿದ್ದಾರೆ.

ಪ್ರಾಚೀನ ಕಾಲದಲ್ಲಿ ಈ ಸ್ಥಳಗಳಲ್ಲಿ ಚಿನ್ನವನ್ನು ಹುದುಗಿಸಲಾಗಿದೆ ಎಂಬ ಅಲ್ಲಿನ ಗ್ರಾಮಸ್ಥರಲ್ಲಿ ಇದೆ. ಇದೇ ನಂಬಿಕೆಯಿಂದ ಗುಜರಾತಿನ (Gujarat) ಕಚ್ ಗ್ರಾಮಸ್ಥರು ಚಿನ್ನವನ್ನು ಅಗೆಯುವ ಸಂದರ್ಭದಲ್ಲಿ ಹೊಸ ಆವಿಷ್ಕಾರಕ್ಕೆ ಕಾರಣರಾಗಿದ್ದಾರೆ.

Photo Credit: @girirajajay

ಹರಪ್ಪನ್ ಯುಗದ ಹೆಸರಾಂತ ವಿಶ್ವ ಪರಂಪರೆಯ ತಾಣವಾದ ಧೋಲವೀರದಿಂದ (Dholavira World Heritage site) ಸುಮಾರು 50 ಕಿಲೋಮೀಟರ್ ದೂರದಲ್ಲಿರುವ ಲೋದ್ರಾಣಿ (Lodrani) ಗ್ರಾಮದಲ್ಲಿ ಈ ಆವಿಷ್ಕಾರವನ್ನು ಮಾಡಲಾಗಿದೆ.

ಇಲ್ಲಿ ಅವರಿಗೆ ಚಿನ್ನದ ಬದಲು, ಕೋಟೆಯ ವಸಾಹತುಗಳ ಅವಶೇಷಗಳು ದೊರೆತಿದ್ದು, ಇದು ಧೋಲವಿರದ ಹರಪ್ಪನ್ ನಾಗರಿಕತೆಗೆ (Harappan Civilisation) ಗಮನಾರ್ಹ ಹೋಲಿಕೆಯನ್ನು ಹೊಂದಿದೆ.

ಪ್ರಸಿದ್ಧ ಮತ್ತು ಪ್ರಾಚೀನ ಹರಪ್ಪನ್ ಯುಗವನ್ನು ನೆನಪಿಸುವ ಈ ಶೋಧವು ಪುರಾತತ್ವಶಾಸ್ತ್ರಜ್ಞರು ಮತ್ತು ಸ್ಥಳೀಯರಲ್ಲಿ ವಿಸ್ಮಯವನ್ನು ಉಂಟುಮಾಡಿದೆ.

Photo Credit : @girirajajay

ಧೋಲವೀರಾದ ಪುರಾತತ್ತ್ವ ಶಾಸ್ತ್ರದ ಸ್ಥಳಗಳ ಬಗ್ಗೆ ಅಧ್ಯಯನ ನಡೆಸಿರುವ ಸ್ಥಳೀಯ ಮಾರ್ಗದರ್ಶಿ ಜೆಮಲ್ ಮಕ್ವಾನಾ ಅವರು ಈ ಆವಿಷ್ಕಾರದ ಮಹತ್ವವನ್ನು ಗುರುತಿಸಿದವರಲ್ಲಿ ಮೊದಲಿಗರು.

ಪ್ರಾಥಮಿಕ ಸಂಶೋಧನೆಗಳ ನಂತರ, ಪುರಾತತ್ತ್ವ ಶಾಸ್ತ್ರಜ್ಞರು, ಸಂಶೋಧನಾ ವಿದ್ವಾಂಸರಾದ ಅಜಯ್ ಯಾದವ್ ಮತ್ತು ಆಕ್ಸ್‌ಫರ್ಡ್‌ನ ಸ್ಕೂಲ್ ಆಫ್ ಆರ್ಕಿಯಾಲಜಿಯ ಪ್ರೊಫೆಸರ್ ಡಾಮಿಯನ್ ರಾಬಿನ್ಸನ್ ಅವರ ನೇತೃತ್ವದಲ್ಲಿ, ಉತ್ಖನನದ ಕಾರ್ಯವು ನೆರವೇರಿತು.

Photo Credit : @girirajajay

ಈ ಸಮಯದಲ್ಲಿ ಹರಪ್ಪನ್ ಯುಗದ ಕೋಟೆಯ ಅವಶೇಷಗಳು ದೊರಕಿತು. ಹೊಸದಾಗಿ ಪತ್ತೆಯಾದ ಪುರಾತತ್ತ್ವ ಶಾಸ್ತ್ರದ ಹರಪ್ಪನ್ ತಾಣವನ್ನು (Harappan Site) ‘ಮೊರೋಧರೋ‘ (Morodharo) ಎಂದು ಹೆಸರಿಸಲಾಗಿದೆ.

ಇದು ಧೋಲವಿರಾದಲ್ಲಿ ದೊರೆತ ಅನೇಕ ಅವಶೇಷಗಳಿಗೆ ಹೋಲಿಕೆಯಾಗುತ್ತದೆ.

ಮಡಿಕೆ ಚೂರುಗಳು ಸೇರಿದಂತೆ ಹರಪ್ಪನ್ ಕಲಾಕೃತಿಗಳು ಈ ಸ್ಥಳದಲ್ಲಿ ಕಂಡುಬಂದಿದ್ದು, ಇದು ಧೋಲವಿರಾದಲ್ಲಿ ಆಗ ದೊರೆತ ಅವಶೇಷಗಳನ್ನು ನೆನಪಿಸುತ್ತದೆ.

ಮೊರೋಧರೋ ಮತ್ತು ಧೋಲವೀರ ಎರಡೂ ತಾಣಗಳು ಸಮುದ್ರದ ಸಾಮೀಪ್ಯವನ್ನು ಹೊಂದಿವೆ. ರಣ್ (Rann) ಮರುಭೂಮಿಗೆ ಹತ್ತಿರದಲ್ಲಿದೆ.

ಇದು ಅಂತಿಮವಾಗಿ ಮರುಭೂಮಿಯಾಗಿ ಮಾರ್ಪಟ್ಟಿದ್ದು, ಹಿಂದೆ ಹರಪ್ಪನ್ ಯುಗದಲ್ಲಿ ಸಂಚಾರಯೋಗ್ಯವಾಗಿತ್ತು ಎಂದು ಪುರಾತತ್ತ್ವ ಶಾಸ್ತ್ರಜ್ಞರು ಸಂಶೋಧಿಸಿದ್ದಾರೆ.

ಹಿಂದೆ, 1967-68 ರಲ್ಲಿ, ಪುರಾತತ್ತ್ವ ಶಾಸ್ತ್ರಜ್ಞ (archaeologists) ಜೆ.ಪಿ. ಜೋಶಿ ಅವರು ಲೊದ್ರಾಣಿಯಲ್ಲಿ ಹರಪ್ಪಾ ಸ್ಥಳವಿದೆ ಎಂದು ವರದಿ ಮಾಡಿದ್ದರು, ಆದರೆ ಆ ಸಮಯದಲ್ಲಿ ಕಾಂಕ್ರೀಟ್ ಪುರಾವೆಗಳು ದೊರೆತ ಕಾರಣ ಆವಿಷ್ಕಾರವನ್ನು ನಿಲ್ಲಿಸಲಾಯಿತು.

ಆದರೆ ಈಗ ಲೋದ್ರಾಣಿ ಯನ್ನು ಮಧ್ಯಕಾಲೀನ ಕೋಟೆ ಮತ್ತು ಸಮಾಧಿ ನಿಧಿಯನ್ನು ಹೊಂದಿರುವ ತಾಣವೆಂದು ಈಗ ಪರಿಗಣಿಸಲಾಗಿದೆ. ಪ್ರಸ್ತುತ ಒಂದು ಗಮನಾರ್ಹ ಸಂಶೋಧನೆಯ ತಾಣವಾಗಿ ಗುರುತಿಸಲ್ಪಡುತ್ತಿದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button