ತುಂಬಿದ ಮನೆವಿಂಗಡಿಸದಸಂಸ್ಕೃತಿ, ಪರಂಪರೆ

ಬೆಂಗಳೂರಿನಲ್ಲಿರುವ ಪ್ರಸಿದ್ಧ ಶಿವನ ದೇಗುಲಗಳು

ಇನ್ನೆನು ಶಿವರಾತ್ರಿ(Maha Shivaratri)ಹತ್ತಿರ ಬಂತು. ಸಾಮಾನ್ಯವಾಗಿ ಶಿವರಾತ್ರಿಯ ದಿನ ಹೆಚ್ಚಿನವರು ಶಿವನ ದೇವಾಲಯಕ್ಕೆ ಹೋಗುವ ಅಭ್ಯಾಸಗಳನ್ನು ಹೊಂದಿರುತ್ತಾರೆ. ನೀವು ಬೆಂಗಳೂರಿನಲ್ಲಿಯೇ(Bangalore )ವಾಸವಿದ್ದು, ಶಿವರಾತ್ರಿಗೆ ದೇವಸ್ಥಾನಕ್ಕೆ ಹೋಗುವ ಬಗ್ಗೆ ಯೋಚನೆ ಮಾಡುತ್ತಿದ್ದರೆ ಈ ದೇವಾಲಯಗಳಿಗೆ ಕೂಡ ಹೋಗಬಹುದು.

ಗವಿ ಗಂಗಾಧರೇಶ್ವರ ದೇವಸ್ಥಾನ(Gavi Gangadeshwara Temple)

ಬೆಂಗಳೂರಿನ(Bangalore )ಪ್ರಸಿದ್ಧ ಶಿವ ದೇವಸ್ಥಾನಗಳಲ್ಲಿ ಗವಿ ಗಂಗಾಧರೇಶ್ವರ ದೇಗುಲ ಕೂಡಾ ಒಂದು. ಗವಿಪುರಂ ಗುಟ್ಟಹಳ್ಳಿಯಲ್ಲಿರುವ ಈ ಪವಿತ್ರ ತಾಣ.ಇಲ್ಲಿನ ನೈಸರ್ಗಿಕ ಗುಹೆಯಲ್ಲಿ ಶಿವಲಿಂಗವನ್ನು ಸ್ಥಾಪಿಸಲಾಗಿದ್ದು, ರಾಜಧಾನಿಯ ಹೆಗ್ಗುರುತುಗಳಲ್ಲಿ ಈ ದೇವಾಲಯ ಕೂಡಾ ಒಂದು. ಚಾಮರಾಜಪೇಟೆ ಮತ್ತು ರಾಮಕೃಷ್ಣಾಶ್ರಮಕ್ಕೆ ಹತ್ತಿರದಲ್ಲಿರುವ ಈ ಪುಣ್ಯಕ್ಷೇತ್ರಕ್ಕೆ ಪ್ರತಿದಿನ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಇದನ್ನು ಗೌತಮ ಕ್ಷೇತ್ರ ಎಂದೂ ಕರೆಯಲಾಗುತ್ತದೆ.

ಸೋಮೇಶ್ವರ ದೇವಸ್ಥಾನ,ಹಲಸೂರು(Someshwara Temple,Halsuru)

ಹಲಸೂರಿನ ಶ್ರೀ ಸೋಮೇಶ್ವರ ದೇವಾಲಯ.. ಈ ದೇವಾಲಯವನ್ನು ಚೋಳರ ಕಾಲಕ್ಕೂ ಹಿಂದಿನದು ಎನ್ನಲಾಗುತ್ತದೆ. ವಿಜಯನಗರ ಸಾಮ್ರಾಜ್ಯದ ದಿನಗಳಲ್ಲಿ ಇದನ್ನು ನವೀಕರಿಸಲಾಗಿದೆ ಭಗವಾನ್ ಶಿವ ಮತ್ತು ಪಾರ್ವತಿಯ ವಿವಾಹವನ್ನು ಇಲ್ಲಿರುವ ಶಿಲ್ಪಗಳು ಚಿತ್ರಿಸಿವೆ.

ಶಿವೋಹಂ ಶಿವ ಟೆಂಪಲ್, ಓಲ್ಡ್ ಏರ್ಪೋರ್ಟ್ ರೋಡ್, (Shivoham Shiva temple,Old Airport Road)

ಹಳೆ ಏರ್‌ಪೋರ್ಟ್‌ ರಸ್ತೆಯಲ್ಲಿ 65 ಅಡಿ ಎತ್ತರದ ಶಿವ ವಿಗ್ರಹ ಅತ್ಯಂತ ಪ್ರಸಿದ್ಧ. ಕೈಲಾಸ ಪರ್ವತದ ಮಾದರಿಯಲ್ಲಿ ಈ ಸನ್ನಿಧಿಯನ್ನು ರೂಪುಗೊಳಿಸಲಾಗಿದೆ. 1995ರಲ್ಲಿ ನಿರ್ಮಿಸಲಾದ ದೇವಸ್ಥಾನ ಇದು. ಶಿವಮಂದಿರ ಎಂದು ಕರೆಯಲ್ಪಡುತ್ತಿದ್ದ ಈ ದೇವಾಲಯಕ್ಕೆ 2016ರಲ್ಲಿ ಶಿವೋಹಂ ಶಿವ ದೇವಾಲಯ ಎಂದು ಮರುನಾಮಕರಣ ಮಾಡಲಾಗಿತ್ತು. ಈ ದೇವಸ್ಥಾನಕ್ಕೂ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಶಿವರಾತ್ರಿ ಸೇರಿದಂತೆ ವಿಶೇಷ ಸಂದರ್ಭದಲ್ಲಿ ಇಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ.

ಕಾಡುಮಲ್ಲೇಶ್ವರ ದೇವಸ್ಥಾನ(Kadumaleshwara Temple)

ರಾಜಧಾನಿಯ ಮತ್ತೊಂದು ಪುರಾತನ ದೇಗುಲ ಇದು. 17ನೇ ಶತಮಾನದ ಸುಮಾರಿಗೆ ನಿರ್ಮಾಣವಾದ ಈ ಶಿವ ದೇವಾಲಯ ತನ್ನದೇ ಆದ ಹಿರಿಮೆ ಗರಿಮೆಯ ಇತಿಹಾಸವನ್ನು ಹೊಂದಿದೆ. ಶಿವರಾತ್ರಿಯನ್ನು ಈ ದೇವಾಲಯದಲ್ಲಿ ಸಂಭ್ರಮದಿಂದ ಆಚರಿಸಲಾಗುತ್ತದೆ. ಕ್ರಿ.ಶ.1668ರಲ್ಲಿ ಷಹಜಿಯ ಮಗ ಏಕೋಜಿಯು ಈ ದೇವಾಲಯಕ್ಕೆ ನೀಡಿದ್ದ ದಾನವನ್ನು ತಿಳಿಸುವ ಕನ್ನಡದ ಶಾಸನ ಕೂಡಾ ಇಲ್ಲಿದೆ. ಮಲ್ಲೇಶ್ವರದ ಸಂಪಿಗೆ ರಸ್ತೆಯಲ್ಲಿ ಈ ದೇಗುಲವನ್ನು ನೋಡಬಹುದು. ಇಲ್ಲಿನ ಶಿವಲಿಂಗ ಕೂಡಾ ಸ್ವಯಂಭು ಎಂಬ ನಂಬಿಕೆ ಇದೆ. ಇದಲ್ಲದೆ, ಪುರಾಣ ಕಾಲದಲ್ಲಿ ಗೌತಮ ಋಷಿಗೆ ಶಿವ ದರ್ಶನ ನೀಡಿದ ಸ್ಥಳ ಇದೆಂದು ಹೇಳಲಾಗುತ್ತದೆ.

ಕೋಟೆ ಜಲಕಂಠೇಶ್ವರ ದೇವಾಲಯ(Kote Jalakanteshwara Temple)

ಕಲ್ಯಾಸಿಪಾಳ್ಯ ಬಸ್ ನಿಲ್ದಾಣದ ಬಳಿ ಕೋಟೆ ಜಲಕಂಠೇಶ್ವರ ದೇವಾಲಯ ಇದೆ. ಚೋಳರ ಕಾಲದಲ್ಲಿ ನಿರ್ಮಾಣವಾದ ಶಿವ ದೇಗುಲವಿದು. ನೂರಾರು ವರ್ಷಗಳ ಇತಿಹಾಸ ಇರುವ ಈ ದೇಗುಲವನ್ನು ಕೆಂಪೇಗೌಡ I ನವೀಕರಿಸಿದರು ಎಂಬ ಉಲ್ಲೇಖ ಸಿಗುತ್ತದೆ. ಶಿವ ಪಾರ್ವತಿಯ ಆರಾಧನೆ ಇಲ್ಲಿ ನಡೆಯುತ್ತದೆ. ಜಲಕಂಠೇಶ್ವರ, ಪಾರ್ವತಿ ಮತ್ತು ಕೈಲಾಸನಾಥ ದೇವರ ಮೂರು ಗರ್ಭಗುಡಿಯನ್ನು ಇಲ್ಲಿ ನೋಡಬಹುದು.

ನಾಗನಾಥೆಶ್ವರ ದೇವಸ್ಥಾನ ,ಬೇಗೂರು(Naganatheshwara Temple,Beguru)

ಹೊಸೂರು ರಸ್ತೆಯ ಬೇಗೂರಿನಲ್ಲಿದೆ ಗಂಗರು ಮತ್ತು ಚೋಳರ ಕಾಲದಲ್ಲಿ ನಿರ್ಮಾಣವಾದ ದೇಗುಲ. ಅದೇ ನಾಗನಾಥೇಶ್ವರ ದೇವಸ್ಥಾನ. ಇದನ್ನು ನಾಗೇಶ್ವರ ದೇವಸ್ಥಾನ ಎಂದೂ ಕರೆಯಲಾಗುತ್ತದೆ. ಈ ದೇಗುಲಕ್ಕೆ ಸುಮಾರು 1300 ವರ್ಷಕ್ಕೂ ಅಧಿಕ ಇತಿಹಾಸವಿದೆ. ಇಲ್ಲಿ ಪಂಚಲಿಂಗಗಳನ್ನು ನೋಡಬಹುದು. ಹೀಗಾಗಿ, ನಾಗನಾಥೇಶ್ವರ ದೇವಾಲಯವನ್ನು ಪಂಚಲಿಂಗೇಶ್ವರ ದೇವಾಲಯ ಎಂದೂ ಕರೆಯಲಾಗುತ್ತದೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button