ಮಾ. 06 ರಂದು ದೇಶದ ಮೊದಲ ನೀರಿನಾಳದ ಮೆಟ್ರೋ ಉದ್ಘಾಟಿಸಲಿದ್ದಾರೆ ಪ್ರಧಾನಿ
ದೇಶದ ಮೊದಲ ಆಂಡರ್ ವಾಟರ್ ಮೆಟ್ರೋ (Under Water Metro )ಕೋಲ್ಕತ್ತಾದಲ್ಲಿ(Calcutta )ಉದ್ಘಾಟನೆಗೆ ಸಿದ್ದವಾಗಿದೆ. ಪ್ರಧಾನಿ ನರೇಂದ್ರ ಮೋದಿ (PM Narendra Modi)ಮಾರ್ಚ್ 06 ರಂದು ಲೋಕಾರ್ಪಣೆ ಮಾಡಲಿದ್ದಾರೆ. ಪಶ್ಚಿಮ ಬಂಗಾಳದ(West Bengal)ಅತೀ ದೊಡ್ಡ ನದಿ ಹೂಗ್ಲಿ ನದಿಯ(Hooghly River)ಅಡಿಯಿಂದ ಸಾಗಲಿದೆ ಈ ಮೆಟ್ರೋ.
ಮೆಟ್ರೋ ರೈಲು 45 ಸೆಕೆಂಡ್ ಹೂಗ್ಲಿ ನದಿ ನೀರಿನ ಅಡಿಯಲ್ಲಿನ ಸುರಂಗದಲ್ಲಿ ಸಾಗಲಿದೆ. ಪೂರ್ವ ಮತ್ತು ಪಶ್ಚಿಮವನ್ನು ಸಂಪರ್ಕಿಸುವ ಈ ಮೆಟ್ರೋ ರೈಲು ಪಶ್ಚಿಮ ಬಂಗಾಳದ ಸಾರಿಗೆ ಸಂಪರ್ಕದಲ್ಲಿ ಮಹತ್ತರ ಬದಲಾವಣೆ ತರಲಿದೆ. ಇದು ಭಾರತದ ಮೊದಲ ಅಂಡರ್ ವಾಟರ್ ಮೆಟ್ರೋ ರೈಲು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.
ಕೋಲ್ಕತಾ ಹಾಗೂ ಹೌರಾ ನಗರವನ್ನು ಸಂಪರ್ಕಿಸುವ ಈ ಮೆಟ್ರೋ ರೈಲು ಪಶ್ಚಿಮ ಬಂಗಾಳದ ಜನರ ಸಾರಿಗೆ ಸಂಪರ್ಕಕ್ಕೆ ಬಹುದೊಡ್ಡ ಸಾರಥಿ ಆಗಲಿದೆ.. ಈ ಎರಡು ಅವಳಿ ನಗರಕ್ಕೆ ಸಂಪರ್ಕ ಕಲ್ಪಿಸಲಿದೆ .
ಈ ರೈಲು ಮಾರ್ಗದಲ್ಲಿ ಒಟ್ಟು 6 ನಿಲ್ದಾಣಗಳನ್ನು ಹೊಂದಿದೆ. ಒಟ್ಟು 16.6 ಕಿಲೋಮೀಟರ್ ಉದ್ದದ ಈ ರೈಲು ಮಾರ್ಗವನ್ನು ಮೋದಿ ಉದ್ಘಾಟಿಸಲಿದ್ದಾರೆ. ಈ ಪೈಕಿ 4. 8 ಕಿಲೋಮೀಟರ್ ಹೂಗ್ಲಿ ನದಿಯ ಆಳದಿಂದ ಸಾಗಲಿದೆ.ಈ ರೈಲು ಕೋಲ್ಕತಾ ಮೆಟ್ರೋ ಲೈನ್-2ರ ಭಾಗವಾಗಿರಲಿದೆ. ಈಸ್ಟ್ -ವೆಸ್ಟ್ ಮೆಟ್ರೋ(East West Metro) ಎಂದು ಕರೆಸಿಕೊಳ್ಳುವ ಈ ರೈಲು ಮೊದಲನೆ ಹಂತದ ಯೋಜನೆಯಲ್ಲಿ ಸಾಲ್ಟ್ ಲೇಕ್ ಸೆಕ್ಟರ್ ನಿಂದ ಸಾಲ್ಟ್ ಲೇಕ್ ಸ್ಟೇಡಿಯಂ ವರೆಗೆ , ಎರಡನೇ ಹಂತ ಸಾಲ್ಟ್ ಲೇಕ್ ಸೆಕ್ಟರ್ ನಿಂದ ಹೌರಾ(Howrah) ಮೈದಾನದ ವರೆಗೆ ಇರಲಿದೆ.
ಈ ರೈಲು ಗಂಟೆಗೆ 80 ಕಿ.ಮಿ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ. ನೀರಿನೊಳಗೆ ನಿರ್ಮಿಸಲಾಗುತ್ತಿರುವ ಸುರಂಗ 520 ಮೀಟರ್ ಉದ್ದ ಹಾಗೂ 30 ಮೀಟರ್ ಆಳ ಇರಲಿದೆ. 2017ರ ಎಪ್ರಿಲ್ ಅಂತ್ಯಕ್ಕೆ ಆರಂಭವಾಗಿರುವ ಈ ರೈಲು ಯೋಜನೆ ಇದೀಗ ಮಾರ್ಚ್ 6ರಂದು ಉದ್ಘಾಟನೆಗೊಳ್ಳುತ್ತಿದೆ.ನದಿಯ 16 ಮೀಟರ್ ಆಳದಲ್ಲಿ ಪ್ರಯಾಣಿಕರು ಮೆಟ್ರೋ ಮೂಲಕ ಸಾಗಲಿದ್ದಾರೆ, ಇದು ಅದ್ಭುತ ಅನುಭವ ಎಂದು ಹೇಳಲಾಗುತ್ತಿದೆ.
ಕೋಲ್ಕೊತಾ ಮೆಟ್ರೋ ದೇಶದ ಮೊದಲ ಮೆಟ್ರೋ ಸಿಸ್ಟಂ ಎನಿಸಿದೆ. ಅಷ್ಟೇ ಅಲ್ಲ, ಏಷ್ಯಾದಲ್ಲೇ ಐದನೇ ಮೆಟ್ರೋ ಎನಿಸಿದೆ. ಮೊದಲ ಬಾರಿಗೆ 1984ರ ಅಕ್ಟೋಬರ್ 24ರಂದು ಕೋಲ್ಕೊತಾದಲ್ಲಿ ಮೊದಲ ಬಾರಿಗೆ ಮೆಟ್ರೋ ಸೇವೆ ಆರಂಭಿಸಲಾಯಿತು.
ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.
ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.