Moreಇವರ ದಾರಿಯೇ ಡಿಫರೆಂಟುಏಕಾಂಗಿ ಸಂಚಾರಿಬೆರಗಿನ ಪಯಣಿಗರುಮೋಟಾರ್ ಸೈಕಲ್ ಡೈರಿವಿಂಗಡಿಸದ

ಬೈಕ್ ನಲ್ಲಿ ದೇಶ-ವಿದೇಶಗಳನ್ನು ಸುತ್ತುವ ಹುಬ್ಬಳ್ಳಿ ಹುಡುಗಿ ಕ್ಯಾಂಡಿಡಾ ಲೂಯಿಸ್

“ ಜೀವನ ಒಂದು ರೈಡ್ ನಂತೆ. ಇದು ತನ್ನದೇ ಆದ ಏರಿಳಿತಗಳು, ಸ್ಕಿಡ್ ಗಳು, ಜಾರುವಿಕೆಗಳು, ತೊಂದರೆ ಹಾಗೂ ರೋಮಾಂಚಕ ಸಾಹಸಗಳನ್ನು ಒಳಗೊಂಡಿದೆ. ಇದು ಕೆಲವೊಮ್ಮೆ ಕಲ್ಲಿನ ಕಿರಿದಾದ ಮಾರ್ಗದಲ್ಲಿ ನಡೆಸಿದರೆ ಇನ್ನೊಮ್ಮೆ ಸುಗಮ ದಾರಿಯಲ್ಲಿ ಕರೆದೊಯ್ಯುತ್ತದೆ” ಎಂಬುದು ಬೈಕರ್ (Female Biker) ಕ್ಯಾಂಡಿಡಾ ಲೂಯಿಸ್ (Candida Louis) ಅವರ ಮಾತು.

ಇಂದು ಪ್ರಪಂಚದಾದ್ಯಂತ ಮಹಿಳೆಯರು ತಮಗೆ ಹಾಕಿಕೊಂಡ ಗೋಡೆಗಳನ್ನು ಒಡೆದು, ಪುರುಷರಂತೆ ಮಹಿಳೆಯರೂ ಅನೇಕ ಸಾಧನೆಗಳನ್ನು ಮುಂದಾಗಿದ್ದಾರೆ.

ಅಂತೆಯೇ ಹುಬ್ಬಳ್ಳಿಯ ಈ ಯುವತಿ ತನ್ನ ತಂದೆಯೊಂದಿಗೆ ಪಿಲಿಯನ್ ರೈಡರ್ (Pillion rider) ಆಗಿ ಬೈಕ್ ಪ್ರಯಾಣದ (Bike Tour) ಅನುಭವವನ್ನು ಪಡೆಯಲು ಆರಂಭಿಸಿದರು.

ನಂತರ ತನ್ನ ಜನ್ಮದಿನದಂದು ಬೈಕ್ ಅನ್ನು ತಂದೆಯಿಂದ ಉಡುಗೊರೆಯಾಗಿ ಪಡೆದ ನಂತರ ಲೂಯಿಸ್ ತನ್ನದೇ ಸ್ವಂತ ಬೈಕ್ ಪ್ರಯಾಣವನ್ನು ಆರಂಭಿಸಿದರು. ಅವರು ತಮ್ಮ ಸ್ವತಂತ್ರ ಬೈಕ್ ಪ್ರಯಾಣದ ಅನುಭವಗಳನ್ನು ಮಾಧ್ಯಮದೊಂದಿಗೆ ಹಲವು ಕಡೆ ಹಂಚಿಕೊಂಡಿದ್ದಾರೆ.

ಅಲೆದಾಡುವ ಮನೋಭಾವ ಮತ್ತು ಸಾಹಸದ ಹಂಬಲ ಹುಟ್ಟಿನಿಂದ ಇರುವ ಇವರು, ತಂದೆಯೊಂದಿಗೆ ಬೈಕ್ ನಲ್ಲಿ ಗೋವಾಗೆ ತೆರಳಿದ್ದರು.

14 ವರ್ಷಗಳಿಂದ ಇವರು ಬೈಕ್ ಸವಾರಿ (Bike Riding) ಮಾಡುತ್ತಿದ್ದು, ಇದು ನಂಬಲಾಗದ ರೋಮಾಂಚಕ ಅನುಭವಗಳನ್ನು ನೀಡುತ್ತದೆ ಎನ್ನುತ್ತಾರೆ ಲೂಯಿಸ್.

ಇವರು ಪ್ರತೀ ವರ್ಷವೂ ಒಂದು ಸಾಂಪ್ರದಾಯಿಕ ಪ್ರಯಾಣವನ್ನು ಬೈಕ್ ನಲ್ಲಿ ಮಾಡುತ್ತಾರೆ. 2015 ರಲ್ಲಿ ಇವರು ಮೂರು ತಿಂಗಳ ರಜೆ ಪಡೆದು ಉತ್ತರ ಮತ್ತು ದಕ್ಷಿಣ ಭಾರತದ ಮೂಲಕ 22 ರಾಜ್ಯಗಳಲ್ಲಿ 30,000 ಕಿಮೀ ಕ್ರಮಿಸಿದ್ದಾರೆ.

ಆ ಸಮಯದಲ್ಲಿ ಬೈಕ್ ಪ್ರಯಾಣ ಅನುಭವದಿಂದಾಗಿ ಅವರು ಪಡೆದ ಸ್ವಾತಂತ್ರ್ಯ, ಆತ್ಮವಿಶ್ವಾಸವು ಅವರು ಮತ್ತೆ ನಾಲ್ಕು ಗೋಡೆಯ ಕೆಲಸಕ್ಕೆ ಮರಳದಂತೆ ಪ್ರೇರೇಪಿಸಿತು.

ಅವರ MNC ಕಂಪನಿಯ ಕೆಲಸಕ್ಕೆ ರಾಜಿನಾಮೆ ನೀಡಿ, ನೋಟೀಸ್ ಪಿರಿಯಡ್ ಕೆಲಸಗಳನ್ನು ಮುಗಿಸಿ ಮತ್ತೆ ನಾಲ್ಕು ತಿಂಗಳು ರೋಡ್ ಟ್ರಿಪ್ ಗೆ ಮರಳಿದರು.

2018 ರಲ್ಲಿ ಭಾರತದಿಂದ (India) ಆಸ್ಟ್ರೇಲಿಯಾಗೆ (Australia) ಒಂದು ದೊಡ್ಡ ಬೈಕ್ ರೈಡ್ (Bike Ride) ಅನ್ನು ಹಮ್ಮಿಕೊಂಡರು. 10 ದೇಶಗಳ ಮುಖಾಂತರ ಆಸ್ಟ್ರೇಲಿಯವನ್ನು ತಲುಪಿದರು.

ಆಸ್ಟ್ರೇಲಿಯವನ್ನು ತಲುಪಲು ಅವರು ಎಂಟು ತಿಂಗಳುಗಳ ಕಾಲ 29,200 ಕಿಮೀಗಳನ್ನು ಕ್ರಮಿಸಿದರು. 2023 ರ ಹೊತ್ತಿಗೆ ಲೂಯಿಸ್ ತನ್ನ ಬಜಾಜ್ ಡೊಮಿನಾರ್‌ನಲ್ಲಿ ಯುರೋಪ್‌ನ (Europe) 25 ದೇಶಗಳಿಗೆ ಏಕವ್ಯಕ್ತಿ ಪ್ರಯಾಣವನ್ನು (Solo Ride) ಪೂರ್ಣಗೊಳಿಸಿದರು.

ಯಾವುದೇ ಪ್ರಯಾಣವು ಹಲವಾರು ಸವಾಲುಗಳನ್ನು ಹೊಂದಿರುತ್ತದೆ. ಆದರೆ ಮೋಟಾರ್ ಸೈಕಲ್ ಮತ್ತು ಪ್ರಯಾಣದ ಅನುಭವ ನಮಗೆ ತಾಳ್ಮೆ ಮತ್ತು ಆತ್ಮವಿಶ್ವಾಸವನ್ನು ನೀಡುತ್ತದೆ.

ಕೆಲವು ಬಾರಿ ಉಳಿಯುವ ಸ್ಥಳಗಳು ಮತ್ತು ಶೌಚಾಲಯಗಳ ವ್ಯವಸ್ಥೆಯ ಕುರಿತಾಗಿ ಸವಾಲುಗಳನ್ನು ಎದುರಿಸಿದ್ದೇನೆ. ಇನ್ನು ನಾನು ಭೇಟಿ ನೀಡಿದ ಎಲ್ಲಾ ಜನರು ನನ್ನೊಂದಿಗೆ ಉತ್ತಮವಾಗಿ ವ್ಯವಹರಿಸಿದ್ದಾರೆ.

ಪ್ರತೀ ಸಂದರ್ಭದಲ್ಲೂ ನನ್ನ ಪೋಷಕರು ಮತ್ತು ಕುಟುಂಬದೊಂದಿಗೆ ತಾನು ಹೋಗುವ ಮಾರ್ಗಗಳ ಕುರಿತು ಸಮಯದ ಕುರಿತು ಹಂಚಿಕೊಳ್ಳುತ್ತಲೇ ಇರುತ್ತೇನೆ ಎಂದು ತಮ್ಮ ಪ್ರಯಾಣದ ಸಮಯದ ಸವಾಲಿನ ಕುರಿತು ಲೂಯಿಸ್ ಹಂಚಿಕೊಂಡಿದ್ದಾರೆ.

ಮಹಿಳಾ ಬೈಕರ್‌ಗಳಿಗೆ (Female Bikers) ಬೈಕಿಂಗ್ ಸಮುದಾಯವು (Biking Community) ತುಂಬಾ ಬೆಂಬಲ ನೀಡುತ್ತದೆ.

ಆದರೆ ಮಹಿಳೆಯರಿಗೆ ಮುಖ್ಯವಾಗಿ ಅಗತ್ಯ ಇರುವುದು ಕುಟುಂಬ ಸದಸ್ಯರ ಬೆಂಬಲ ಮತ್ತು ಮಹಿಳಾ ಸುರಕ್ಷತೆಯ ಬಗ್ಗೆ ಜನರಿಗೆ ಶಿಕ್ಷಣ ನೀಡುವುದು ಅತ್ಯಗತ್ಯ ಎಂದು ಅವರು ಹೇಳಿದ್ದಾರೆ.

ನಾವೂ ಇನ್ ಸ್ಟಾಗ್ರಾಮ್ ನಲ್ಲೂ ಇದ್ದೀವಿ! ನಮ್ಮ ಗ್ರೂಪ್ ಜಾಯಿನ್ ಆಗಿ.

ನೀವು ಪ್ರವಾಸ ಹೋಗುವ ತಾಣದ ಮಾಹಿತಿ, ಕನ್ನಡ.ಟ್ರಾವೆಲ್ (Kannada.Travel) ಜಾಲತಾಣದಲ್ಲಿ ಪ್ರಕಟವಾಗುವ ಬರಹಗಳ ವಿವರ, ಅಪರೂಪದ ಟ್ರಾವೆಲರ್ ಗಳ ಪರಿಚಯ, ಪ್ರವಾಸಿ ತಾಣಗಳ ಕುತೂಹಲಕರ ಚಿತ್ರ ಬರಹ ಎಲ್ಲವೂ ಇಲ್ಲಿ ನಿಮಗೆ ಸಿಗುತ್ತದೆ. ಬನ್ನಿ ಜೊತೆಯಾಗಿ.

Related Articles

Leave a Reply

Your email address will not be published. Required fields are marked *

Back to top button